ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಯ ರೋಚಕ ಸತ್ಯಗಳು ಹುಟ್ಟಿದ ಮನೆ ಹುಟ್ಟಿದ ಮನೆಯಲ್ಲಿ ಹಲವು ವಿಶೇಷತೆ…

315
Exciting truths of Shri Siddeshwar Swamiji, the walking god The House of Birth There are many special features in the house of birth..
Exciting truths of Shri Siddeshwar Swamiji, the walking god The House of Birth There are many special features in the house of birth..

ನಮಸ್ಕಾರ ನನ್ನ ಪ್ರೀತಿಯ ವೀಕ್ಷಕರೇ ವೀಕ್ಷಕರೇ ಸ್ವಾಮೀಜಿಗಳು ಅಂತ ಹೇಳಿದರೆ ಅವರಿಗೆ ಅವರದ್ದೇ ಆದ ರೀತಿ ನೀತಿಗಳು ಇರುತ್ತೆ ಕವಿ ಅಂತ ಹೇಳಿದರೆ ಅದಕ್ಕೆ ಅದರದ್ದೇ ಆದ ಬೆಲೆ ಇದೆ ಇತ್ತೀಚಿನ ದಿನಗಳಲ್ಲಿ ಈ ಸ್ವಾಮೀಜಿಗಳು ಅಥವಾ ಖಾವಿ ಧರಿಸಿರೋ ಒಬ್ಬರು ಅಥವಾ ಪ್ರವಚನ ಮಾಡುವಂತವರನ್ನ ಇಂತವರನ್ನ ನೋಡಿದ್ರೆ ಇವರ ಬಗ್ಗೆ ಕೇಳಿದರೆ ಮೂಗು ಮುರಿಯುವವರೇ ಹೆಚ್ಚಾಗಿದ್ದಾರೆ ಅದರಲ್ಲೂ ಕೂಡ ಅದು ಯಾವಾಗ ಮುರುಘಾ ಮಠದ ಸ್ವಾಮೀಜಿ ಹಗರಣಗಳು ಒಂದೊಂದಾಗಿ ಬೆಳಕಿಗೆ ಬಂದವು ಮಾಡಬಾರದ ಕೃತ್ಯಗಳನ್ನ ಮಾಡಿ ಆತ ಜೈಲು ಸೇರಿದ್ನೋ ಅದಾದ ಬಳಿಕ ಸ್ವಾಮೀಜಿಗಳು ,

ಅಂತ ಹೇಳಿದ್ರೆ ಜನರು ಅವರನ್ನ ಅನುಮಾನದ ದೃಷ್ಟಿಯಿಂದ ನೋಡುವಂತಹ ಪರಿಸ್ಥಿತಿ ಬಂದಿದೆ ಹೀಗಾಗಿ ಇತ್ತೀಚಿನ ದಿನಗಳಲ್ಲಿ ಸ್ವಾಮೀಜಿಗಳು ಅಂತ ಕರೆಸಿಕೊಳ್ಳುವವರು ಯಾರ್ ಯಾರು ಇದ್ದಾರೆ ಅವರನ್ನು ಒಂದು ರೀತಿ ಅನುಮಾನದ ದೃಷ್ಟಿಯಿಂದ ನೋಡೋದೇ ಹೆಚ್ಚಾಗಿದೆ ಆದರೆ ಇಂಥವರ ನಡುವೆಯು ಕೂಡ ಅದೆಷ್ಟೋ ನಡೆದಾಡುವ ದೇವರು ನಮ್ಮ ನಡುವೆ ಇದ್ದಾರೆ ಅನ್ನುವಂತದ್ದು ವಾಸ್ತವದ ಸಂಗತಿ ಅದೇ ರೀತಿ ಅದೆಷ್ಟೋ ಸ್ವಾಮೀಜಿಗಳು ಜಗತ್ತನ್ನೇ ಬದಲಾಯಿಸಿದಂತಹ ಪವಾಡ ಪುರುಷರು ಕೂಡ ನಮ್ಮ ನಡುವೆ ಇದ್ದಾರೆ ಅನ್ನುವಂತದ್ದು ಸಂಗತಿ ಅದೆಷ್ಟೋ ಸ್ವಾಮೀಜಿಗಳು ಕಾವಿಗೆ ಮತ್ತಷ್ಟು ಗೌರವವನ್ನ ತುಂಬಿಕೊಟ್ಟಿದ್ದಾರೆ ,

ಇವತ್ತು ಸ್ವಾಮೀಜಿ ಅಂತ ಹೇಳಿದ್ರೆ ಈ ಘಟನೆಗಳು ನಡೆಯುವುದಕ್ಕಿಂತ ಮುಂಚೆ ಒಂದು ಗೌರವ ಇತ್ತಲ್ವಾ ಒಂದು ನಂಬಿಕೆ ಇತ್ತಲ್ವಾ ಆ ಒಂದು ಶ್ರದ್ದೆ ಇತ್ತಲ್ವಾ ಅಂದ್ರೆ ದೇವರ ಪ್ರತಿರೂಪ ಅಂತ ಹೇಳಿಬಿಟ್ಟು ಭಕ್ತಿ ಭಾವನೆಯಿಂದ ಪೂಜಿಸಲ್ಪಡುತ್ತಿದ್ದರಲ್ವಾ ಅದಕ್ಕೆ ಸರಿಯಾಗಿ ನಡೆದುಕೊಳ್ಳುವ ಎಷ್ಟೋ ಸ್ವಾಮೀಜಿಗಳು ನಮ್ಮ ಸಮಾಜದಲ್ಲಿ ಇದ್ದರು ಅನ್ನುವಂತದ್ದು ನೂರಕ್ಕೆ ನೂರು ಸತ್ಯ ಅದಕ್ಕೆ ಪೂರಕವಾಗಿ ಸಾಕಷ್ಟು ಸ್ವಾಮೀಜಿಗಳು ನಮ್ಮ ನಡುವೆ ಇದ್ದಾರೆ ಆ ಸಾಕಷ್ಟು ಇವತ್ತಿಗೂ ಕೂಡ ಕಿಂಚಿತ್ತೂ ಕೂಡ ತಮ್ಮ ಜೀವಮಾನದಲ್ಲಿ ಕಿಂಚಿತ್ತೂ ಕೂಡ ಆ ರೀತಿಯಾದಂತಹ ಕಪ್ಪು ಚುಕ್ಕೆಯನ್ನ ಪಡೆಯದೇ ತಮ್ಮ ಜೀವನವನ್ನ ಸಾಗಿಸುತ್ತಿದ್ದಾರೆ ಅದು ಕೂಡ ಸಮೃದ್ಧವಾದ ಜೀವನವನ್ನ ಸಾಗಿಸುತ್ತಿದ್ದಾರೆ.

ಅದಕ್ಕೆ ಒಂದು ಉದಾಹರಣೆ ಅಂತ ಹೇಳಿದರೆ ನಮ್ಮ ವಿಜಯಪುರದ ಸಿದ್ದೇಶ್ವರ ಸ್ವಾಮೀಜಿಯವರು ನಡೆದಾಡುವ ದೇವರು ಅಂತಾನೆ ಅವರನ್ನು ಕರೆಯಲಾಗುತ್ತೆ ತುಮಕೂರಿನ ಸಿದ್ದಗಂಗಾ ಮಠದ ಸ್ವಾಮೀಜಿ ಅವರನ್ನು ಬಿಟ್ಟರೆ ಮತ್ತೊಬ್ಬ ನಡೆದಾಡುವ ದೇವರು ಅಂತ ಅನ್ನಿಸಿಕೊಂಡಂತವರು ನಮ್ಮ ಸಿದ್ದೇಶ್ವರ ಸ್ವಾಮೀಜಿಯವರು ಅಪರೂಪದಲ್ಲಿ ಅಪರೂಪದ ಮಹಾತ್ಮರು ಅಂದರೆ ತಪ್ಪ ಹಾಗಾದ್ರೆ ಇವರ ಹಿನ್ನಲೆ ಏನು ಇವರ ಸ್ವಾಮೀಜಿ ಆಗಿದ್ದು ಹೇಗೆ ಜೊತೆಗೆ ಇವರು ಮಾಡುವಂತಹ ಪ್ರವಚನಗಳು ಉಪನ್ಯಾಸಗಳು ಕೃತಿಗಳು ಅದೆಷ್ಟೋ ಜನರ ಬದುಕನ್ನ ಬದಲಾಯಿಸಿದೆ ಜೊತೆಗೆ ಇವರನ್ನ ಪ್ರತಿಯೊಬ್ಬರೂ ಕೂಡ ಇಷ್ಟು ಭಕ್ತಿ ಭಾವದಿಂದ ಗೌರವದಿಂದ ನೋಡೋದಕ್ಕೆ ಕಾರಣ ಏನಾಗಿರಬಹುದು ಇವೆಲ್ಲದರ ಬಗ್ಗೆ ಸಂಕ್ಷಿಪ್ತವಾಗಿ ನಿಮ್ಮ ಮುಂದೆ ನಾನು ಒಂದು ಸ್ಟೋರಿ ಮುಖಾಂತರವಾಗಿ ಹೇಳ್ತಿನಿ .

ಕೇಳಿ ವೀಕ್ಷಕರೇ ಸಾಕಷ್ಟು ಜನರಿಗೆ ವಿಜಯಪುರದ ಸಿದ್ದೇಶ್ವರ ಸ್ವಾಮೀಜಿಗಳ ಬಗ್ಗೆ ಗೊತ್ತಿಲ್ಲ ಒಂದಷ್ಟು ಜನರಿಗೆ ಗೊತ್ತಿದ್ರು ಕೂಡ ಸಾಕಷ್ಟು ವಿಚಾರಗಳು ಅವರ ಬಗ್ಗೆ ಗೊತ್ತಿಲ್ಲ ಈ ಸಮೂಹ ಏನಿದೆ ಇದರಲ್ಲಿ ಸಾಕಷ್ಟು ಜನ ಸ್ವಾಮೀಜಿಗಳು ತಮ್ಮ ನುಡಿಯಿಂದಲೇ ಜನರನ್ನ ಅಂದ್ರೆ ಭಕ್ತರನ್ನ ಸೆಳೆಯುತ್ತಾರೆ ಆದರೆ ತಮ್ಮ ಮಾತುಗಳ ಮೂಲಕ ತಮ್ಮ ಪ್ರವಚನಗಳ ಮೂಲಕ ಸೆಳೆಯುವವರಿದ್ದಾರೆ ಅದರಲ್ಲಿ ಪರಿಣಾಮಕಾರಿಯಾಗಿ ಕೇಳುಗನ ಆಳಕ್ಕೆ ಇಳಿಯುವುದು ಅಂದರೆ ಅವರು ಹೇಳುವಂತಹ ಎಲ್ಲಾ ಮಾತುಗಳು ಮನಸ್ಸಿನೊಳಗೆ ಅಥವಾ ನಮ್ಮ ಹೃದಯದೊಳಗೆ ಹೋಗುವಂತಹ ಮಾತುಗಳು ಅವರಿಂದ ಬರಬೇಕು ಆದರೆ ಅಂತಹ ಮಾತುಗಳು ತುಂಬಾನೇ ಕಡಿಮೆ ಅಂತ ಹೇಳಬಹುದು .

ಆದರೆ ಉತ್ತಮ ಮಾರ್ಗದಲ್ಲಿ ನಡೆದು ಅದನ್ನೇ ಹೃದಯದಲ್ಲಿ ತುಂಬಿಕೊಂಡ ನಂತರ ಹೃದಯದಲ್ಲಿ ಮೂಡಿದ ಸದ್ಭಾವದ ಪಾಕವನ್ನ ಮಾತಿನ ಮೂಲಕ ಬೇರೆಯವರ ಹೃದಯವನ್ನ ತಲುಪಿಸೋದೇ ಮಹಾತ್ಮರ ಹಾದಿಯಾಗಿರುತ್ತೆ ಇಂದಿನ ಯುಗದ ಅತ್ಯಂತ ಮಹಾತ್ಮರು ಅಂತ ಹೇಳಿದ್ರೆ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಅವರ ಉಪನ್ಯಾಸಗಳಾಗಿರಬಹುದು ಅಂಕಣಗಳು ಕೃತಿಗಳು ಅಸಂಖ್ಯಾತ ಜನರಿಗೆ ಆ ಮೂಲಕ ಸಾಂತ್ವನವನ್ನ ನೀಡುತ್ತಾ ಸಾಗಿದವರು ಅವರ ಇಂತಹ ಬರಹಗಳೇ ಅವರ ಚಿಂತನೆಗಳೇ ಸಾಕಷ್ಟು ಜನರ ದಿಕ್ಕನ್ನೇ ಬದಲಿಸಿದೆ ಇನ್ನು ಸಾಮಾಜಿಕ ಪರಿವರ್ತನೆಗಾಗಿ ದುಡಿಯುತ್ತಿರುವಂತಹ ಸಂಸ್ಥೆಗಳ ಲಿಸ್ಟ್ ಅನ್ನ ತೆಗೆದರೆ ವಿಜಯಪುರದ ಯೋಗಾಶ್ರಮ ಕೂಡ ಅದರಲ್ಲಿ ಸೇರುತ್ತೆ.

ಐತಿಹಾಸಿಕ ಗುಮ್ಮಟ ನಗರಿ ವಿಜಯಪುರದಲ್ಲಿ ಧಾರ್ಮಿಕ ಪುಣ್ಯಕ್ಷೇತ್ರವು ಕೂಡ ಹೌದು ಇಲ್ಲಿನ ಜ್ಞಾನ ಯೋಗಾಶ್ರಮ ನಾಡಿನ ಪ್ರಸಿದ್ಧ ಆಧ್ಯಾತ್ಮಿಕ ಸಾಮಾಜಿಕ ಶೈಕ್ಷಣಿಕ ತಾಣಗಳಲ್ಲಿ ಒಂದು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಜ್ಞಾನ ಯೋಗಾಶ್ರಮವನ್ನ ತಮ್ಮ ಅಧ್ಯಕ್ಷತೆಯಲ್ಲಿ ಮುನ್ನಡೆಸಿಕೊಂಡು ಹೋಗ್ತಾಯಿದ್ರು ಪರಿಣಾಮ ನಿಸ್ವಾರ್ಥ ಸೇವೆ ಸರಳ ಜೀವನ ಅಕ್ಷರ ದಾಸೋಹ ಶ್ರೀಗಳ ಮೂಲ ಉದ್ದೇಶವಾಗಿತ್ತು ಹಾಗೇನೇ ಆಸೆಯ ದುಃಖಕ್ಕೆ ಮೂಲ ಕಾರಣ ಅಂತ ಅರಿತಿರುವಂತ ಸ್ವಾಮೀಜಿ ಇವರು ಸರಳ ಸುಂದರ ಅಧ್ಯಾತ್ಮಿಕ ಜೀವನವನ್ನ ನಡೆಸಿದಂತವರು ಹಣ ಹಾಗೆ ವಸ್ತುಗಳ ಮೇಲೆ ಆಸೆ ಹುಟ್ಟಬಾರದು ಜೊತೆಗೆ ತಾವು ಕೂಡ ತಾವು ಆದರ್ಶವನ್ನ ಹೇಳೋರು ಹೇಗೆ ಆದರ್ಶ ಪುರುಷರಾಗಿರಬೇಕು .

ಅನ್ನೋದಕ್ಕೆ ತಾನು ಧರಿಸುವಂತಹ ಬಡ್ಡಿಯಲ್ಲಿ ಜೇಬು ಕೂಡ ಇಟ್ಟುಕೊಂಡಿರಲಿಲ್ಲ ಒಂದೇ ಒಂದು ರೂಪಾಯಿ ಅವರು ಎಲ್ಲೂ ಕೂಡ ಹೋಗುವಾಗ ಹಿಡಿದುಕೊಂಡು ಹೋಗುತ್ತಿರಲಿಲ್ಲ ಆ ಬಗ್ಗೆ ಕೇಳಿದಾಗಲೂ ಕೂಡ ಅದೇಕೋ ದೇವರು ನಡೆದುಕೊಂಡು ಹೋಗುತ್ತಾನೆ ಬಿಡಿ ಅಂತ ಹೇಳಿ ಅವರು ಹೇಳುತ್ತಾ ಇದ್ದರು ಆಧ್ಯಾತ್ಮ ಅನ್ನುವುದು ಅವರ ಲೆಕ್ಕದಲ್ಲಿ ಬೋಧನೆ ವಸ್ತು ಸರಳ ಮತ್ತು ಸಹಜ ಬದುಕಿನ ದೈನಂದಿನ ನಡೆ ಅಂತ ಅವರು ಹೇಳ್ತ ಇದ್ರೂ ಇಂತವರ ಜೀವನ ಚರಿತ್ರೆಯನ್ನ ನೋಡಿದ್ರೆ ಅದು ಎಲ್ಲರಿಗು ಸ್ಫೂರ್ತಿ ಆಗುವಂತದ್ದು .

ಎಲ್ಲರು ಆದರ್ಶವಾಗಿ ಇಟ್ಟುಕೊಳ್ಳಬೇಕಾದಂತದ್ದು ಅಷ್ಟಕ್ಕು ಸಿದ್ದೇಶ್ವರ ಸ್ವಾಮೀಜಿಯವರು ವಿಜಯಪುರ ಜಿಲ್ಲೆಯ ತ್ರಿಕೋಟ ತಾಲೂಕಿನ ಬಿಜ್ಜರಗಿ ಗ್ರಾಮದ ಸಾಮಾನ್ಯವಾದ ಕೃಷಿ ಕುಟುಂಬದಲ್ಲಿ ಸಾವಿರದ ಒಂಬೈನೂರ ನಲವತ್ತೊಂದರ ಅಕ್ಟೋಬರ್ ಇಪ್ಪತ್ತನಾಲ್ಕರಂದು ಜನಿಸಿದರು ಇನ್ನು ಇವರ ಬಾಲ್ಯದ ಹೆಸರು ಸಿದ್ದಗೊಂಡಪ್ಪ ಅಂತ ಹೇಳಿ ತಮ್ಮ ಗ್ರಾಮದ ಶಾಲೆಯೊಂದರಲ್ಲಿ ನಾಲ್ಕನೇ ತರಗತಿಯವರೆಗೆ ಗುಂಡಪ್ಪ ಅವರು ಓದಿದ್ರು ಜ್ಞಾನ ಯೋಗಾಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಗಳ ಬಳಿ ಆಗ ಅವರು ಬರ್ತಾಯಿದ್ದರಂತೆ ಒಂದು ದಿನ ನಾಲ್ಕನೇ ತರಗತಿ ಇರುವಾಗ ಅವರು ಸ್ವಾಮೀಜಿಗಳ ಬಳಿ ಬರ್ತಾರೆ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಗಳು ಪ್ರವಚನದ ಮೂಲಕ ಜನರಲ್ಲಿ ಜ್ಞಾನದ ಜ್ಯೋತಿಯನ್ನ ಬೆಳಗಿಸ್ತಾ ಇದ್ದರು ಸ್ವಾಮೀಜಿಗಳು ಕರ್ನಾಟಕದ ಮತ್ತು ಮಹಾರಾಷ್ಟ್ರದಲ್ಲಿ ತಿಂಗಳುಗಳ ಕಾಲ ತಿಂಗಳುಗಟ್ಟಲೆ ಪ್ರವಚನವನ್ನ ನೀಡ್ತಾ ಇದ್ದರು.

ಇವರ ಗಾಢ ಪ್ರಭಾವ ಸುತ್ತಮುತ್ತಲ ಜನರ ಮೇಲೆ ಕ್ರಮೇಣವಾಗಿ ಹೆಚ್ಚುತ್ತಾ ಹೋಯಿತು ಗ್ರಾಮೀಣ ಪ್ರದೇಶದ ಮಕ್ಕಳು ಕಷ್ಟ ಪಡ್ತಿರೋದನ್ನ ಗಮನಿಸಿದಂತ ಅವರು ವಿದ್ಯಾಸಂಸ್ಥೆಯನ್ನ ಪ್ರಾರಂಭಿಸಿ ಅವರಿಗೆ ಊಟ ವಸತಿ ವ್ಯವಸ್ಥೆಯನ್ನ ಮಾಡ್ತಾರೆ ಇದರಿಂದಾಗಿ ಸಾವಿರಾರು ಮಕ್ಕಳು ವಿದ್ಯಾವಂತರಾಗ್ತಾರೆ ಹಾಗೇನೇ ವಿದ್ಯೆ ಕಲಿಯಲು ಬಂದಂತಹ ಸಾವಿರಾರು ಮಕ್ಕಳಲ್ಲಿ ಈ ಸಿದ್ದಗುಂಡಪ್ಪ ಕೂಡ ಒಬ್ಬರು ಮಲ್ಲಿಕಾರ್ಜುನ ಶ್ರೀಗಳು ಮಾಡುವ ಪುರಾಣ ಪ್ರವಚನ ಆದ್ಯಾತ್ಮಿಕ ಹಾಗೆ ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಇವರು ಚುರುಕಾಗಿದ್ರು ಅಂತ ಹೇಳಬಿಟ್ಟು ಆಸಕ್ತರಾಗಿದ್ದಂತಹ ಸಿದ್ದಗುಂಡಪ್ಪ ಅವರನ್ನ ಜೊತೆಗೆ ಕರ್ಕೊಂಡು ಹೋಗ್ತಾಯಿದ್ರು.

ಇದರಿಂದಾಗಿ ಪ್ರಭಾವಿತರಾದಂತ ಸಿದ್ದೇಶ್ವರರು ಧರ್ಮಗಳ ಗ್ರಂಥ ಅಧ್ಯಯನ ಮಾಡಿ ಅಧ್ಯಾತ್ಮದ ಬಗ್ಗೆ ಸಮಗ್ರವಾಗಿ ಓದಿ ತಿಳಿದುಕೊಳ್ಳುತ್ತಾರೆ ಅಲ್ಲದೆ ಬಾಲ್ಯದಿಂದಲೇ ಚುರುಕಾಗಿದ್ದಂತಹ ಅವರು ವಿದ್ಯಾಭ್ಯಾಸದಲ್ಲೂ ಕೂಡ ಅತ್ಯಂತ ಪ್ರತಿಭಾನ್ವಿತರಾಗಿದ್ದರು ಜೊತೆಗೆ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಪದವಿ ಶಿಕ್ಷಣವನ್ನು ಮುಗಿಸಿ ಕೊಲ್ಲಾಪುರದ ವಿಶ್ವವಿದ್ಯಾಲಯದಲ್ಲಿ ತತ್ವ ಶಾಸ್ತ್ರದ ವಿಷಯದಲ್ಲಿ MA ಪದವಿಯನ್ನು ಕೂಡ ಪಡೆಯುತ್ತಾರೆ MA ಪದವಿಯ ಅಭ್ಯಾಸದ ಸಂದರ್ಭದಲ್ಲಿ ಶ್ರೀ ಸಿದ್ದೇಶ್ವರರು ಕೊಲ್ಲಾಪುರದಲ್ಲಿ ಶ್ರೀ ವಿಜಯ್ ಪಾಟೀಲ್ ರವರ ಮನೆಯಲ್ಲಿ ಇಲ್ಲಿಂದ ಅವರ ಬದುಕು ಕೂಡ ಬದಲಾಗುತ್ತಾ ಹೋಗುತ್ತೆ ಈ ಒಂದು ಅವಧಿಯಲ್ಲಿ ತಮ್ಮ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಗಳು ಮಾಡಿದಂತಹ ಪ್ರವಚನಗಳು ಏನಿರುತ್ತೆ ಅದೆಲ್ಲವನ್ನು ಸ್ವಾಮೀಜಿಗಳು ಅರ್ಥ ಮಾಡಿಕೊಳ್ಳುತ್ತಾರೆ.

ಸಿದ್ದೇಶ್ವರರು ಅದೆಲ್ಲವನ್ನು ಒಟ್ಟು ಮಾಡಿ ಸಿದ್ದಂತ ಶಿಖಾಮಣಿ ಅನ್ನುವಂತಹ ಪುಸ್ತಕವನ್ನು ಬರೆದು ಗುರುಗಳ ಹೆಸರಿನಲ್ಲಿ ಪ್ರಕಟಿಸುತ್ತಾರೆ ಆಗ ಅವರಿಗೆ ಕೇವಲ ಹತ್ತೊಂಬತ್ತು ವರ್ಷ ವಯಸ್ಸು ಆ ಸಂದರ್ಭದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಹಿಂದಿರುಗಿದಂತಹ ಸಿದ್ದೇಶ್ವರರಿಗೆ ಭಗವದ್ಗೀತೆಯ ಬಗ್ಗೆ ಉಪನಿಷತ್ತುಗಳ ಬಗ್ಗೆ ಮಲ್ಲಿಕಾರ್ಜುನ ಸ್ವಾಮೀಜಿಗಳು ವ್ಯಾಖ್ಯಾನ ನೀಡಿ ಅವರ ಜ್ಞಾನದ ದಿಗಂತವನ್ನ ಇನ್ನಷ್ಟು ಹೆಚ್ಚಿಸುತ್ತಾರೆ ಸಿದ್ದೇಶ್ವರರು ಉಪನಿಷತ್ತು ಭಗವದ್ಗೀತಾ ಯೋಗಸೂತ್ರ ವಚನ ಶಾಸ್ತ್ರ ಈ ಎಲ್ಲ ವಿಷಯಗಳ ಬಗೆಗೆ ತಾವು ಗುರುವಿನೊಂದಿಗೆ ಕಲಿತ ಜ್ಞಾನವನ್ನ ಬಳಸಿಕೊಂಡು ಗುರು ತತ್ವದ ವಚನವನ್ನ ನೀಡುತ್ತಾರೆ.

ಬಹಳನೇ ಗಾಹನವಾದ ವೇದಾಂತವನ್ನ ಜೊತೆಗೆ ತತ್ವಗಳನ್ನ ಅತ್ಯಂತ ಸರಳವಾಗಿ ವಿವರಿಸೋದನ್ನ ಅವರು ಕಲಿಯುತ್ತಾರೆ ಜನಮಾನಸದಲ್ಲಿ ಉಳಿಯುವಂತೆ ಯಾವ ರೀತಿ ವಿವರಿಸಬೇಕು ಯಾವ ರೀತಿ ವೈಶಿಷ್ಟ್ಯವಾಗಿ ಅದನ್ನ ಹೇಳಬೇಕು ಇವೆಲ್ಲ ಸಿದ್ದೇಶ್ವರರು ಕಲಿತ ಹೋಗ್ತಾರೆ ಇದರ ಜೊತೆಗೆ ಸಿದ್ದೇಶ್ವರರ ಉಪನ್ಯಾಸ ಸರಣಿಯ ನಾವು ಹೇಗೆ ಬದುಕಬೇಕು ಬದುಕಿನ ದಾರಿ ಹೇಗೆ ಮಾಡಿಕೊಳ್ಳಬೇಕು .

ಅನ್ನುವಂತದ್ದು ಸಾಕಷ್ಟು ಜನರ ಗಮನವನ್ನ ಸೆಳೆದಿದೆ ಜೊತೆಗೆ ಸಿದ್ದೇಶ್ವರ ಸ್ವಾಮೀಜಿಯವರು ಅಲ್ಲಮಪ್ರಭುಗಳ ವಚನದ ಮೇಲೆ ಮಹತ್ವದ ಬೆಳಕನ್ನ ಚೆಲ್ಲುತ್ತಾ ಬಂದಿದ್ದಾರೆ ಪ್ರಪಂಚದಾದ್ಯಂತ ಆದ್ಯಾತ್ಮಿಕ ಪ್ರವಚನಗಳನ್ನ ನೀಡ್ತಾ ಬಂದಿದ್ದಾರೆ ಭಾರತದ ಸಂತರ ಕುರಿತಾಗಿ ಅಮೂಲ್ಯವಾದ ಗ್ರಂಥಗಳನ್ನ ರಚಿಸಿದ್ದಾರೆ ವೇದಾಂತ ಗೀತೆ ವಚನಗಳು ಯೋಗಸೂತ್ರಗಳನ್ನ ಕುರಿತಾಗಿ ಶ್ರೀ ಸ್ವಾಮೀಜಿಯವರ ಉಪನ್ಯಾಸಗಳಲ್ಲಿ ನವ್ಯತೆ ಚಿಂತನೆ ಮತ್ತೆ ಅಭಿವ್ಯಕ್ತಿಗಳಿಂದ ಹೆಸರುವಾಸಿಯಾಗಿದ್ದಾರೆ.

ಇನ್ನೊಂದು ವಿಶೇಷ ಅಂದ್ರೆ ಸ್ವಾಮೀಜಿಯವರು ಪತಂಜಲಿ ಯೋಗಶಾಸ್ತ್ರವನ್ನು ಕೂಡ ಕಲಿತಿದ್ದಾರೆ. ಸಿದ್ದೇಶ್ವರ ಶ್ರೀಗಳು ಕನ್ನಡ ಸಂಸ್ಕೃತ ಹಿಂದಿ, ಇಂಗ್ಲಿಷ್ ಮರಾಠಿ ಹೀಗೆ ಪಂಚ ಭಾಷೆಗಳಲ್ಲಿ ನಿರರ್ಗಳವಾಗಿ ಸಿದ್ದೇಶ್ವರರು ಪ್ರವಚನವನ್ನ ಮಾಡುತ್ತಾರೆ. ಅವರ ಪ್ರವಚನ ಕಾರ್ಯಕ್ರಮ ಎಲ್ಲಿ ಏರ್ಪಡಿಸಿದರೂ ಕೂಡ ಸಾವಿರಾರು ಸಂಖ್ಯೆಯಲ್ಲಿ ಅಲ್ಲಿ ಜನ ಸೇರುತ್ತಾರೆ. ಅದರಲ್ಲೂ ಕೂಡ ಇದೇ ಆಶ್ರಮದಲ್ಲಿ ನಡೆಸಿಕೊಂಡು ಬರುವಂತಹ ಕೆಲವೊಂದು ಚಟುವಟಿಕೆಗಳು ಏನಿದೆ ಅಲ್ಲೂ ಕೂಡ ಸಾಕಷ್ಟು ಜನ ಸೇರ್ತಾರೆ ಅದರಲ್ಲೂ ಶ್ರಾವಣ ಮಾಸದಲ್ಲಿ ಇದೆ ಮಠದಲ್ಲಿ ನಡೆಯುವಂತಹ ಪ್ರವಚನಕ್ಕೆ.

ಕೋಟ್ಯಂತರ ಭಕ್ತರು ಕಾಯ್ತಾ ಇರ್ತಾರೆ ಇನ್ನು ಸಿದ್ದೇಶ್ವರರು ಯೋಗಾಶ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ನಂತರ ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಆಶ್ರಮದ ಚಟುವಟಿಕೆಗಳನ್ನ ಮುಂದುವರಿಸಿಕೊಂಡು ಬಂದಿದ್ದಾರೆ ನಮ್ಮ ಗುರುಗಳು ಸ್ಥಾಪಿಸಿದ ನೂರಾರು ವಿದ್ಯಾಸಂಸ್ಥೆಗಳನ್ನ ಸಿದ್ದೇಶ್ವರರು ನಡೆಸಿಕೊಂಡು ಹೋಗ್ತಾಯಿದ್ರು ಯಾವ ಸಂಸ್ಥೆಗಳಿಗೂ ಕೂಡ ಆಶ್ರಮದ ಹೆಸರಾಗಲಿ ಅವರ ಹೆಸರಾಗಲಿ ಇರುವುದಿಲ್ಲ ಅನ್ನೋದೇ ಆಶ್ಚರ್ಯದ ಸಂಗತಿ ಕೆರೆ ನೀರನ್ನ ಕೆರೆಗೆ ಚೆಲ್ಲಿ ಅನ್ನುವಂತಹ ದಾಸವಾಣಿಯಂತೆ ನನ್ನದೇನಿದೆ ಎಲ್ಲದು ಭಗವಂತನದ್ದು ಪ್ರತಿಯೊಬ್ಬ ಮನುಷ್ಯನು ಕೂಡ ದೇವರು ಎಲ್ಲರನ್ನು ನಾವು ದೇವರಂತೆ ಕಾಣಬೇಕು.

ನಾನು ನನ್ನದು ಎನ್ನುವಂತಹ ಅಹಂಕಾರ ಸಲ್ಲದು ಎಲ್ಲರು ಕೂಡ ಒಂದೇ ಅಂತ ಸಾರುತ್ತ ಅದರಂತೆ ನಡೆಯುತ್ತಿರುವ ಅಪರೂಪದ ಯೋಗಿಗಳು ನಮ್ಮ ಸಿದ್ದೇಶ್ವರ ಸ್ವಾಮೀಜಿಗಳು ಸಿದ್ದೇಶ್ವರರ ಕುರಿತಾಗಿ ಮತ್ತೊಂದು ವಿಶೇಷತೆ ಏನು ಅಂತ ಹೇಳಿದರೆ ಎಲ್ಲೂ ಕೂಡ ತಾವು ಒಂದೇ ಒಂದು ಪ್ರಶಸ್ತಿಯನ್ನು ಸ್ವೀಕರಿಸಿಲ್ಲ ಇನ್ನು ಸಿದ್ದೇಶ್ವರ ಶ್ರೀಗಳ ಪರಿಸರ ಕಾಳಜಿ ಇಷ್ಟೊಂದು ಮಹತ್ವಪೂರ್ಣದ್ದು ಅನ್ನೋದಕ್ಕೆ ಅವರ ಪ್ರವಚನಗಳಲ್ಲೂ ಕೂಡ ಅದು ಪ್ರಾಮುಖ್ಯತೆಯನ್ನ ಪಡೆದುಕೊಂಡಿತ್ತು ಸಾಕಷ್ಟು ಪರಿಸರ ಕಾಳಜಿಯುಕ್ತ ಕೆಲಸಗಳನ್ನ ಮಾಡಿದ್ದಾರೆ .

ಜೊತೆಗೆ ಈ ಭೂಮಿ ಮೇಲೆ ಮನುಷ್ಯ ಒಬ್ಬನೇ ಒಬ್ಬ ಬುದ್ಧಿಜೀವಿ ಸಂಘಜೀವಿ ಅದರಿಂದ ಮನುಷ್ಯ ಸಮಾಜದಲ್ಲಿ ಹೃದಯವಂತಿಕೆಯಿಂದ ಬಾಳಿ ಬದುಕಬೇಕು ಅಲ್ಲದೆ ಉಳಿದವರಿಗೂ ಕೂಡ ಅಂದ್ರೆ ಉಳಿದ ಇತರರಿಗೂ ಕೂಡ ಕೇಡನ್ನ ಬಯಸಬಾರದು ಅದು ಚಿಕ್ಕ ಪ್ರಾಣಿಯಾಗಲಿ ಪಕ್ಷಿಯಾಗಲಿ ಯಾವುದೇ ಆಗಿರಲಿ ಯಾವುದಕ್ಕೂ ಕೂಡ ಕೇಡನ್ನ ಬಯಸದೆ ಸಂತೋಷವನ್ನ ನೀಡುವಂತ ಗುಣವನ್ನ ಬೆಳೆಸಿಕೊಳ್ಳುತ್ತಾ ಹೋಗಬೇಕು ಇದು ಸ್ವಾಮೀಜಿಯವರ ಪ್ರವಚನದ ಮೂಲ ಉದ್ದೇಶ ಆಗಿತ್ತು ಇದು ಸ್ವಾಮೀಜಿಗಳಿಗೆ ಎಲ್ಲಾ ಕಾರ್ಯಗಳನ್ನ ಅವರು ಮಾಡುತ್ತಿದ್ದಂತಹ ಎಲ್ಲಾ ಕೆಲಸಗಳನ್ನ ಗೌರವಿಸಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನ ಘೋಷಿಸಿದರು ಮತ್ತೊಂದು ಕಡೆ ಕರ್ನಾಟಕ ವಿಶ್ವವಿದ್ಯಾಲಯ ಕೊಡುವಂತಹ ಗೌರವ ಡಾಕ್ಟರೇಟ್ ಅನ್ನು ಕೂಡ ಅವರಿಗೆ ನೀಡುವುದಕ್ಕೆ ಮುಂದಾಯಿತು.

ಆದರೆ ಇಂತಹ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಸಿದ್ದೇಶ್ವರ ಶ್ರೀಗಳು ವಿನಮ್ರವಾಗಿ ತಿರಸ್ಕರಿಸಿದ್ದಾರೆ ಇದರಲ್ಲೇ ಗೊತ್ತಾಗುತ್ತೆ ಅವರು ಇಂತಹ ವಿಶೇಷವಾದ ಇರಬಹುದು ಅಂತ ಹೇಳಿ ಈಶ್ವರರು ಹೇಳ್ತಾ ಇದ್ದಿದ್ದು ಇಷ್ಟೇ ನಾನೋಬ್ಬ ಸರಳ ವ್ಯಕ್ತಿ ಆತ್ಮ ಆಧ್ಯಾತ್ಮಿಕ ಬೋಧನೆಯ ಮೂಲಕ ಸಾಮಾನ್ಯ ಜನರ ಜೀವನವನ್ನ ಉದಾತಗೊಳಿಸುವುದು ನನ್ನ ಮೂಲ ಉದ್ದೇಶ ಅಂತ ಹೇಳಿ ಅವರು ಗೌರವಪೂರ್ಣವಾಗಿ ಈ ಎಲ್ಲ ಪ್ರಶಸ್ತಿ ಪುರಸ್ಕಾರಗಳನ್ನ ತಿರಸ್ಕರಿಸುತ್ತಾ ಬಂದಿದ್ದಾರೆ .

ಪ್ರಶಸ್ತಿಗಳ ಅವಶ್ಯಕತೆ ನನಗಿಲ್ಲ ಆಧ್ಯಾತ್ಮ ಆದರ್ಶ ನೈತಿಕತೆ ಕೇವಲ ಬೋಧನೆ ಮಾಡುವುದು ಅಷ್ಟೇ ಅಲ್ಲ ಅವುಗಳು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುವುದು ನನ್ನ ಧರ್ಮ ಅಂತ ಹೇಳಿ ಗೌರವಪೂರ್ವಕ ಭಾವನೆಯಿಂದ ಅವುಗಳನ್ನ ತಿರಸ್ಕರಿಸುತ್ತಾ ಬಂದಿದ್ದಾರೆ ಪದವಿ ಪ್ರಶಸ್ತಿ ಸ್ಥಾನಮಾನ ಅಧಿಕಾರ ಇವೆಲ್ಲದಕ್ಕೂ ಕೂಡ ಪರಿತಪಿಸುವಂತ ಈ ಲೋಕದಲ್ಲಿ ಅದರಲ್ಲೂ ಕೂಡ ಇದೆ ಕಾವ್ಯವನ್ನ ಧರಿಸಿಕೊಂಡು ಇದೆ ಸ್ವಾಮೀಜಿ ಅಂತ ಹೇಳಿ ಕರೆಸಿಕೊಂಡು ಏನೇನೋ ಕೆಲಸಗಳನ್ನ ಮಾಡಿ ಇವತ್ತು ಜೈಲು ಸೇರುವಂತಹ ಇಂತಹ ಸಂದರ್ಭದಲ್ಲಿ ನನ್ನ ಅಂತರಾತ್ಮದ ಆನಂದದಲ್ಲಿಯೇ ಎಲ್ಲವೂ ಇದೆ ಅಂತ ಹೇಳಿ ಹೇಳುವಂತಹ ಇಂತಹ ಸಿದ್ದೇಶ್ವರ ಸ್ವಾಮೀಜಿಗಳು ನಡೆದಾಡುವ ದೇವರು ಅಂತ ಹೇಳಿದರೆ ಮತ್ತೆ ಏನು ಹೇಳಬೇಕು .

ಹೇಳಿ ಎಲ್ಲವನ್ನು ಕೂಡ ವಿನಮ್ರವಾಗಿ ನಿರಂತರ ಹಗಲಿರುಳು ಕಾಯಕದಲ್ಲಿಯೇ ನಿರತರಾಗಿ ಜೊತೆಗೆ ನಮ್ಮ ಕಣ್ಣ ಮುಂದೆಯೇ ದೇವರಂತೆ ಇದ್ದಂತವರು ಸಿದ್ದೇಶ್ವರರು ಮಹಾತ್ಮರಲ್ಲಿ ಮಹಾತ್ಮರಂತೆ ಬದುಕಿದವರು ಸಿದ್ದೇಶ್ವರರು ಇನ್ನು ಸ್ವಾಮೀಜಿಗಳು ನೀಡುವಂತಹ ಪ್ರವಚನವನ್ನ ನೀವೇನಾದರೂ ಕೇಳಿದರೆ ನಿಜಕ್ಕೂ ಮಂತ್ರಮುಕ್ತರಾಗುತ್ತೀರಾ ಅದರಲ್ಲಿ ಯಾವುದೇ ಅನುಮಾನ ಇಲ್ಲ ಜೊತೆಗೆ ಕೇವಲ ನುಡಿಯಲ್ಲಿ ಮಾತ್ರ ಅಲ್ಲ ನಡೆಯಲ್ಲೂ ಕೂಡ ಅದೇ ಒಂದು ಸದ್ಗತಿಯ ಜೊತೆಗೆ ಅದೇ ರೀತಿಯಾದಂತಹ ನುಡಿ ನಡೆಯನ್ನ ಇಟ್ಟುಕೊಂಡು ತನ್ನ ಜೀವನದಲ್ಲೂ ಕೂಡ ಅದೇ ರೀತಿ ನಡೆದುಕೊಂಡು ಸಾಗುತ್ತಿರುವಂತವರು ಆಗಿದ್ದರು.

ಹೀಗಾಗಿ ಸಿದ್ದೇಶ್ವರ ಸ್ವಾಮೀಜಿಗಳು ನಿಜಕ್ಕೂ ವಿಶೇಷವಾದ ವ್ಯಕ್ತಿ ಜೊತೆಗೆ ಸ್ವಾಮೀಜಿ ಪರಂಪರೆಯಲ್ಲಿ ಇಂತವರ ಕೊಡುಗೆ ಎಷ್ಟಿದೆ ಎಷ್ಟು ಪ್ರಾಮುಖ್ಯತೆಯನ್ನ ಪಡೆದುಕೊಂಡಿದೆ ಇಡೀ ಸಮಾಜವನ್ನು ಪರಿವರ್ತನೆ ಮಾಡುವುದರಲ್ಲಿ ಸಮಾಜವನ್ನು ಉದ್ಧಾರ ಮಾಡುವುದರಲ್ಲಿ ಇಂಥವರ ಕಾರ್ಯ ಎಷ್ಟು ಪ್ರಮುಖವಾದದ್ದು ಅನ್ನುವುದಕ್ಕೆ ಸಿದ್ದೇಶ್ವರ ಸ್ವಾಮೀಜಿಗಳ ನಿಜವಾದ ಜೀವನ ನಿಜವಾದ ಮಾರ್ಗವೇ ಸಾಕ್ಷಿ ಅನ್ನುವುದರಲ್ಲಿ,

ಯಾವುದೇ ಅನುಮಾನ ಇಲ್ಲ ಹಾಗಾದರೆ ವೀಕ್ಷಕರೇ ಸಿದ್ದೇಶ್ವರ ಸ್ವಾಮೀಜಿಗಳ ಪ್ರವಚನವನ್ನು ನೀವು ಕೇಳಿದ್ದೀರಾ ಸಿದ್ದೇಶ್ವರ ಸ್ವಾಮೀಜಿ ನೀವು ಯಾವತ್ತಾದರೂ ಭೇಟಿ ಮಾಡಿದ್ದೀರಾ? ಹಾಗಾದರೆ ಆ ಅನುಭವ ಹೇಗಿತ್ತು? ಸಿದ್ದೇಶ್ವರ ಸ್ವಾಮೀಜಿಯವರು ಈ ಸಮಾಜಕ್ಕೆ ಹೇಗೆ ಒಬ್ಬ ಸಿದ್ದಿ ಪುರುಷನಾಗಿ, ಯಾವ ರೀತಿ ನಿಮಗೆ ಒಂದು ಅವರ ಬಗ್ಗೆ ಅಭಿಪ್ರಾಯ ಇದೆ.

ತಪ್ಪದೆ comment ಮೂಲಕ ತಿಳಿಸಿ. ಜೊತೆಗೆ ವೀಕ್ಷಕರೇ ಈ ಹಿಂದೆಯೂ ಕೂಡ ನಾವು ಸಾಕಷ್ಟು storyಗಳನ್ನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದಂತಹ ಬಹಳ ಒಳ್ಳೆಯ ವಿಚಾರಗಳನ್ನ ಹಂಚಿಕೊಂಡಿದ್ದೇವೆ. ಅದರ ಜೊತೆ ಜೊತೆಗೆ ಸಮಾಜದ ಆಗುಹೋಗುಗಳು ನಿರಂತರ ಸುದ್ದಿಗಳು, ಪೌರಾಣಿಕ ಕಥೆಗಳನ್ನು ವೀಡಿಯೋ ಮುಖಾಂತರವಾಗಿ ನಿಮ್ಮ ಮುಂದೆ ಇಟ್ಟ ಅದೆಲ್ಲವನ್ನು ನೋಡಿ ನಿಮ್ಮ ಅಭಿಪ್ರಾಯವನ್ನ ತಿಳಿಸಿ ಹಾಗೆ ಈ ಒಂದು story ನಿಮಗೆ ಇಷ್ಟ ಆಗಿದ್ರೆ ತಪ್ಪದೆ channelಗೆ subscribe ಮಾಡಿಕೊಂಡು bell icon ಒತ್ತಿ notification on ಮಾಡಿಕೊಳ್ಳಿ ಧನ್ಯವಾದಗಳು ವೀಕ್ಷಕರೇ