ತಂಗಿಗೆ ದೇವಸ್ಥಾನ ಕಟ್ಟಿದ ಈ ಅಣ್ಣ ಆ ತಂಗಿಗೆ ಏನಾಗಿತ್ತು ಗೊತ್ತ ಕಣ್ಣಲ್ಲಿ ನೀರು ಬರುತ್ತೆ ಕಣ್ರೀ ..!!!

75

ಇಲ್ಲಿಯವರೆಗೂ ನಾವು ಸಾಕಷ್ಟು ಬಾರಿ ಪ್ರೀತಿಯ ಬಗ್ಗೆ ಮಾತನಾಡುವಾಗ ಪ್ರೀತಿಗಾಗಿ ಮುಮ್ತಾಜ್ಗಾಗಿ ಶಹಜಹಾನ್ ತಾಜ್ಮಹಲ್ ಅನ್ನು ಕಟ್ಟಿದ್ದಾರೆ ಅಂತ ಮಾತನಾಡಿಕೊಳ್ಳುತ್ತಿರುತ್ತಾರೆ, ಆದರೆ ಇಂದಿನಿಂದ ಆ ಒಂದು ಡೈಲಾಗ್ ನ ಚೇಂಜ್ ಮಾಡಿಬಿಡಿ ಯಾಕೆಂದರೆ ಹೆಂಡತಿ ಮೇಲಿನ ಪ್ರೀತಿಗಾಗಿ ಶಹಜಹಾನ್ ತಾಜ್ ಮಹಲನ್ನು ಕಟ್ಟಿದರೆ, ಈ ಒಬ್ಬ ಅಣ್ಣ ತನ್ನ ತಂಗಿಯ ಮೇಲಿನ ಪ್ರೀತಿಯಿಂದಾಗಿ ಒಂದು ದೇವಸ್ಥಾನವನ್ನೇ ಕಟ್ಟಿದ್ದಾರೆ.

ಗೊತ್ತಾ ಫ್ರೆಂಡ್ಸ್ ಈ ಮಾಹಿತಿ ಏನು ಎಂಬುದನ್ನು ತಿಳಿಸುತ್ತೇನೆ ತಪ್ಪದೆ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೂ ನೀವು ಕೂಡ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಈ ಅಣ್ಣನ ಪ್ರೀತಿ ಅನ್ನು ಮಾಹಿತಿಯನ್ನ ಶೇರ್ ಮಾಡುವ ಮುಖಾಂತರ ತಿಳಿಸಿಕೊಡಿ.ಹೌದು ಫ್ರೆಂಡ್ಸ್ ನಾನು ಹೇಳ್ತಾ ಇರುವುದು ಸತ್ಯ ಆಂಧ್ರ ಪ್ರದೇಶದಲ್ಲಿ ನಡೆದಿರುವ ಈ ಒಂದು ಘಟನೆ ಆಂಧ್ರ ಪ್ರದೇಶಕ್ಕೆ ಸೇರಿರುವ ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ ಈ ಅಣ್ಣನ ಹೆಸರು ಶಿವಪ್ರಸಾದ್ ಎಂದು ಮತ್ತು ತಂಗಿಯ ಹೆಸರು ಸುಬ್ಬಲಕ್ಷ್ಮಿ ಎಂದು. ಈ ಅಣ್ಣ ತಂಗಿಯ ಪ್ರೀತಿ ಹೇಗಿತ್ತು ಅಂದರೆ ತಂಗಿಯನ್ನು ಬಹಳ ಜೋಪಾನ ಮಾಡಿಕೊಳ್ಳುತ್ತಿದ್ದ ಅಣ್ಣ. ಈಕೆ ತನ್ನ ವಿದ್ಯಾಭ್ಯಾಸವನ್ನು ಕೂಡ ಮುಗಿಸಿ ಬಿ.ಎ ಡಿಗ್ರಿಯನ್ನು ಕಂಪ್ಲೀಟ್ ಮಾಡಿ ಅರಣ್ಯ ಇಲಾಖೆಗೆ ಕೆಲಸಕ್ಕೂ ಕೂಡ ಹೋಗುತ್ತಿದ್ದರು.

ಹೀಗೆ ಪ್ರತಿದಿನ ಕೆಲಸಕ್ಕಾಗಿ ರೈಲಿನಲ್ಲಿ ಓಡಾಡುತ್ತಿದ್ದ ಸುಬ್ಬಲಕ್ಷ್ಮಿ ಅವರನ್ನು ಒಂದು ದಿನ ಅಣ್ಣನೇ ಬೈಕ್ ನಲ್ಲಿ ಡ್ರಾಪ್ ಮಾಡುತ್ತೇನೆ ಅಂತ ಹೇಳಿದರು, ಹೀಗೆ ಅಣ್ಣ ತಂಗಿ ಬೈಕ್ ನಲ್ಲಿ ಹೋಗುವಾಗ ಅಲ್ಲೊಂದು ಅಪಘಾತ ಜರಗುತ್ತದೆ ಅದೇನೆಂದರೆ ಆ್ಯಕ್ಸಿಡೆಂಟ್ನಲ್ಲಿ ಸುಬ್ಬಲಕ್ಷ್ಮಿ ಅವರು ಸಾವನ್ನಪ್ಪುತ್ತಾರೆ ಈ ಒಂದು ಘಟನೆಯಿಂದಾಗಿ ಜೀವನದಲ್ಲಿ ಶಿವಪ್ರಸಾದ್ ಬಹಳಾನೇ ಕುಗ್ಗುತ್ತಾರೆ ತನ್ನ ತಂಗಿಯನ್ನು ಕಳೆದುಕೊಂಡ ದುಃಖ ಎಷ್ಟು ದಿನಗಳು ಕಳೆದರೂ ಕಡಿಮೆನೇ ಆಗುವುದಿಲ್ಲ.

ತನ್ನ ತಂಗಿಯ ಮೇಲಿನ ಪ್ರೀತಿಗಾಗಿ ಶಿವಪ್ರಸಾದ್ ಒಂದು ದೇವಸ್ಥಾನವನ್ನು ಕಟ್ಟಲು ನಿರ್ಧರಿಸುತ್ತಾನೆ ತನ್ನ ಕಷ್ಟದಲ್ಲಿಯೂ ಹೇಗೋ ದುಡ್ಡು ಕೂಡಿಸಿ ತನ್ನ ತಂಗಿಯ ವಿಗ್ರಹವನ್ನು ಮಾಡಿಸಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಕೂಡ ಮಾಡಿ ಆ ದೇವಸ್ಥಾನದಲ್ಲಿ ಇರುವ ವಿಗ್ರಹವನ್ನು ಪ್ರತಿದಿನ ನೋಡುತ್ತಾ ಜೀವನವನ್ನು ಕಳೆಯುತ್ತಿದ್ದಾರಂತೆ ಶಿವಪ್ರಸಾದ್ ಅವರು. ನಿಜಕ್ಕೂ ಈ ಅಣ್ಣನ ಪ್ರೀತಿಯನ್ನು ಕಂಡರೆ ಹಾಗೂ ಈ ಒಂದು ಜೀವನದ ಕಥೆಯನ್ನು ಕೇಳಿದರೆ ಯಾರಿಗಾದರೂ ಮನ ನೋಯುತ್ತದೆ.

ದೇವರು ಕೊಟ್ಟು ನೋಡುತ್ತಾನೆ ಕಿತ್ತುಕೊಂಡು ನೋಡುತ್ತಾನೆ ಅಂತ ಇದಕ್ಕೇ ಅಲ್ವಾ ಫ್ರೆಂಡ್ಸ್ ಹೇಳೋದು, ಅಣ್ಣನ ಪ್ರೀತಿ ಎಂಬುದು ತಂದೆ ಪ್ರೀತಿ ಅಷ್ಟೇ ಶ್ರೇಷ್ಠವಾದದ್ದು ಹೇಗೆ ಭೂಮಿ ಮೇಲೆ ಅಮ್ಮ ಮಗುವಿನ ನಡುವೆ ಇರುವ ಪ್ರೀತಿ ತಂದೆ ಮಗುವಿನ ನಡುವೆ ಇರುವ ಪ್ರೀತಿ ಶ್ರೇಷ್ಠ ಅದೇ ರೀತಿಯಲ್ಲಿ ಈ ಅಣ್ಣ ತಂಗಿ ನಡುವೆ ಇರುವ ಪ್ರೀತಿಯೂ ಕೂಡ ಅಷ್ಟೇ ಪವಿತ್ರವಾದದ್ದು ಮತ್ತು ಈ ಒಂದು ಪ್ರೀತಿ ಹೇಗೆ ತಂದೆಯ ಹೃದಯದಲ್ಲಿ,ಮನೆ ಮಾಡಿರುತ್ತದೆಯೋ ಅಷ್ಟೇ ಪ್ರೀತಿ ಅಣ್ಣನ ಹೃದಯದಲ್ಲಿಯೂ ತಂಗಿಯ ಮೇಲೆ ಪ್ರೀತಿ ಮೂಡಿರುತ್ತದೆ. ಈ ಸಮಾಜಕ್ಕೆ ಇಂತಹ ಅಣ್ಣ ತಂಗಿಯ ಪ್ರೀತಿ ಮಾದರಿಯಾಗಬೇಕು ಯಾಕೆ ಅಂದರೆ ಇಂದಿನ ಒತ್ತಡದ ಜೀವನದಲ್ಲಿ ಜನರಿಗೆ ಸಂಬಂಧಗಳ ಬೆಲೆಯೂ ಮರೆತೇ ಹೋಗುತ್ತಿದೆ. ಹಾಗಾದರೆ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ ಹಾಗೂ ಪ್ರತಿಯೊಬ್ಬರಿಗೂ ಇದನ್ನು ಶೇರ್ ಮಾಡಿ ಧನ್ಯವಾದ.