ನಮಸ್ಕಾರ ಸ್ನೇಹಿತರೆ ನಮ್ಮ ದೇಶದಲ್ಲಿ ಯಾವುದಾದರೂ ಒಂದು ಮನೆಯಲ್ಲಿ ಹೆಣ್ಣು ಮಗು ಹುಟ್ಟಿದರೆ ಅದಕ್ಕೆ ಮನೆಯಲ್ಲಿ ಲಕ್ಷ್ಮಿ ಹುಟ್ಟಿದ್ದಾಳೆ ಎನ್ನುವಂತಹ ರೀತಿಯಲ್ಲಿ ಭಾವನೆಯಿಂದ ನಾವು ನೋಡುತ್ತೇವೆ.ಈ ರೀತಿಯಾಗಿ ನಮ್ಮ ಭಾರತೀಯ ದೇಶದಲ್ಲಿ ಹಲವಾರು ವರ್ಷಗಳ ಹಿಂದೆ ಎಂದರೂ ಕೂಡ ನಾವು ಹೆಣ್ಣು ಮಕ್ಕಳಿಗೆ ಗೌರವವನ್ನು ಕೊಡುತ್ತಲೇ ಬಂದಿದ್ದೇವೆ.ಅಲ್ಲದೆ ಯಾವುದಾದರೂ ಒಬ್ಬ ಹೆಣ್ಣು ಮಗಳು ಗಂಡನ ಮನೆಗೆ ಹೋದಾಗ ಅವರ ಮನೆಯಲ್ಲಿ ಅವರನ್ನು ಸೊಸೆಯನ್ನು ಲಕ್ಷ್ಮಿ ಅಂತ ಕೂಡ ಕರೆಯುತ್ತಾರೆ.
ಹೀಗೆ ಹುಟ್ಟಿದಾಗ ಹೆಣ್ಣು ಮಗು ಬೆಳೆದಾಗ ಮಹಿಳೆ ಕೊನೆಗೆ ಮಹಿಳೆಯನ್ನ ದೇವರ ರೂಪದಲ್ಲಿ ನೋಡುವಂತಹ ಸಂಪ್ರದಾಯ ನಮ್ಮದು.ಸ್ನೇಹಿತರೆ ಮನೆಯಲ್ಲಿ ಎಷ್ಟು ಹಣ ಇದ್ದರೂ ಕೂಡ ಅದನ್ನು ಸರಿತೂಗಿಸಿಕೊಂಡು ಹೋಗುವಂತಹ ನಡುವಳಿಕೆ ಇರುವುದು ಕೇವಲ ಹೆಣ್ಣಿನಲ್ಲಿ ಮಾತ್ರವೇ ಅದಕ್ಕಾಗಿ ಯಾವುದೇ ರೀತಿಯಾದಂತಹ ಹಣದ ವಿಚಾರಗಳನ್ನು ಅವರೊಂದಿಗೆ ಹೇಳಿಕೊಳ್ಳುವುದು ಹಾಗೂ ಅವರ ಜೊತೆಗೆ ಮಾಡಿಸಿಕೊಳ್ಳುವುದರಿಂದ ಜೀವನದಲ್ಲಿ ನಾವು ಹಣದಿಂದ ಯಾವಾಗಲೂ ಇರಬಹುದು ನಮಗೆ ಯಾವುದೇ ರೀತಿಯಾದಂತಹ ಆರ್ಥಿಕ ಸಮಸ್ಯೆ ಕೂಡ ಬರುವುದಿಲ್ಲ.
ಎಲ್ಲ ಧರ್ಮಗಳು ಹೇಳುವ ಹಾಗೆ ಮನುಷ್ಯ ತಾನು ಮಾಡುವಂತಹ ಕೆಲಸದಲ್ಲಿ ಶುದ್ಧತೆಯನ್ನು ಇರುತ್ತದೆ ಅದು ದೇಹದಲ್ಲಿ ಇರುವುದಿಲ್ಲ.ಯಾವುದೇ ಒಬ್ಬ ಗಂಡಸು ಅಥವಾ ಹೆಂಗಸು ಕಾರ್ಯವನ್ನು ಸರಿಯಾಗಿ ಮಾಡಿದ್ದೆ ಆದಲ್ಲಿ ಅವರು ಪರಿಶುದ್ಧ ಅಂತ ನಾವು ಹೇಳಬಹುದು ಇಲ್ಲವಾದಲ್ಲಿ ಅವರ ಅಂಗಗಳು ಎಷ್ಟು ಚೆನ್ನಾಗಿ ತೊಳೆದುಕೊಂಡು ಇದ್ದರೂ ಕೂಡ ಅದನ್ನು ಪವಿತ್ರವೆಂದು ಭಾವಿಸಲಾಗುವ ದಿಲ್ಲ.
ಸ್ನೇಹಿತರೆ ಹಾಗಾದರೆ ನಾವು ನಿಮಗೆ ಹೆಣ್ಣುಮಕ್ಕಳನ್ನು ಲಕ್ಷ್ಮಿ ಅಂತ ಕರೆಯುವಂತಹ ಹೆಣ್ಣುಮಕ್ಕಳ ಯಾವ ಭಾಗವನ್ನು ನಾವು ಪವಿತ್ರ ಎಂದು ಪರಿಗಣಿಸುತ್ತೇವೆ ಗೊತ್ತಾ. ಹೆಣ್ಣುಮಕ್ಕಳ ಅತ್ಯಂತ ಪವಿತ್ರವಾದಂತಹ ಅಂಗ ಎಂದರೆ ಅದು ಅವರ ಎರಡು ಕೈಗಳು. ಅವರ ಎರಡು ಕೈಗಳಿಂದಸಂಸಾರದ ಎಲ್ಲಾ ಕಷ್ಟಗಳನ್ನು ಸರಿತೂಗಿಸಿಕೊಂಡು ಹೋಗುವಂತಹ ಶಕ್ತಿ ಹೆಣ್ಣು ಮಕ್ಕಳಿಗೆ ಇರುತ್ತದೆ ಇದರಿಂದಾಗಿ ಹೆಣ್ಣುಮಕ್ಕಳ ಎರಡು ಕೈಯನ್ನು ತುಂಬಾ ಪವಿತ್ರವಾದಂತಹ ಅಂಗ ಅಂತ ಕರೆಯುತ್ತಾರೆ.
ಸ್ನೇಹಿತರೆ ಒಬ್ಬ ಹೆಣ್ಣುಮಗಳು ತನ್ನ ಅದೇ ಎರಡು ಕಗಳಿಂದ ತನ್ನ ಮಗ ಅಥವಾ ಮಗಳ ದೇಹವನ್ನ ಸ್ವಚ್ಛ ಮಾಡುತ್ತಾರೆ ಹಾಗೂ ಅದೇ ಮಕ್ಕಳಿಗೆ ತಮ್ಮ ಕೈಯಾರ ಊಟವನ್ನು ಕೂಡ ಮಾಡಿಸುತ್ತಾರೆ.ಅದೇ ರೀತಿಯಾಗಿ ತಮ್ಮ ಕುಟುಂಬದಲ್ಲಿ ಇರುವಂತಹ ಎಲ್ಲ ವ್ಯಕ್ತಿಗಳಿಗೂ ಊಟವನ್ನು ಹಾಕಿ ಅವರ ಹಸಿವನ್ನು ಕೂಡ ನಿಗಿಸು ವಂತಹ ಶಕ್ತಿ ಕೇವಲ ಹೆಣ್ಣುಮಕ್ಕಳಿಗೆ ಮಾತ್ರ ಇದೆ.ಆದುದರಿಂದ ಪ್ರತಿಯೊಂದು ಧರ್ಮಗ್ರಂಥದಲ್ಲಿ ಕೂಡ ಹೆಣ್ಣು ಮಕ್ಕಳ ವಿಚಾರದಲ್ಲಿ ಹಾಗೂ ಅವರ ಕೈಗಳ ವಿಚಾರದಲ್ಲಿ ತುಂಬಾ ಪವಿತ್ರವಾದಂತಹ ಅಂಗ ಎಂದು ಕರೆಯಲಾಗಿದೆ.
ಸ್ನೇಹಿತರೆ ಯಾವುದೇ ಒಬ್ಬ ಗಂಡಸಿನ ಭವಿಷ್ಯವನ್ನು ನಿರ್ಧಾರ ಮಾಡುವುದಕ್ಕೆ ಅವನ ಹಿಂದೆ ಒಬ್ಬ ಮಹಿಳೆಯಿಂದ ಮಾತ್ರವೇ ಅದು ಸಾಧ್ಯ ಕುಟುಂಬಕ್ಕಾಗಿ ಯಾವುದೇ ರೀತಿಯಾದಂತಹ ಆಕಾಂಕ್ಷೆಯನ್ನು ಇಟ್ಟುಕೊಳ್ಳದೆ ತೆರೆಮರೆಯಲ್ಲಿ ದುಡಿಯುವಂತಹ ಎರಡು ಕೈಗಳು ತುಂಬಾ ಶ್ರೇಷ್ಠ ಅಂತ ನಾವು ಹೇಳಬಹುದು.ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹೇಳಿಕೊಳ್ಳುವುದನ್ನು ಮರೆಯಬೇಡಿ.