WhatsApp Logo

ಇಲ್ಲಿರುವ ಟ್ಯಾಕ್ಸಿ ಡ್ರೈವರ್ ಮತ್ತು ಹುಡುಗಿಯ ಕಥೆ ಎಲ್ಲೆಡೆ ವೈರಲ್ ಆಗುತ್ತಿದೆ ಯಾಕೆ ಅದರ ಅಸಲೀ ಕಾರಣ ಗೊತ್ತ …!!!

By Sanjay Kumar

Updated on:

ಪ್ರತಿಯೊಂದು ಮನುಷ್ಯನಿಗೂ ಕೂಡ ಮಾನವೀಯತೆ ಎಂಬುದು ಅತಿ ಅವಶ್ಯಕ ಈಗಿನ ಕಾಲದಲ್ಲಿ ಮಾನವ ಯಾವ ಪರಿಸ್ಥಿತಿಗೆ ಬಂದಿದ್ದಾನೆ ಎಂದರೆ ಪಕ್ಕದಲ್ಲಿ ಒಬ್ಬರು ಸತ್ತಿದ್ದರು ಕೂಡ ಅವರ ಕಡೆ ತಿರುಗಿ ನೋಡುವುದಿಲ್ಲ ಆ ರೀತಿಯಾದಂತಹ ಪರಿಸ್ಥಿತಿಗೆ ನಮ್ಮ ದೇಶ ಬಂದಿದೆ.ಅದರ ಜೊತೆಗೆ ಕಷ್ಟ ಎಂದರೆ ಸಹಾಯ ಮಾಡುವ ಮನಸ್ಥಿತಿ ಕೂಡ ಯಾರಿಗೂ ಕೂಡ ಇರುವುದಿಲ್ಲ .

ಯಾರಾದರೂ ವಯಸ್ಸಾದವರು ಅಥವಾ ಮಕ್ಕಳು ರಸ್ತೆ ಬದಿಯಲ್ಲಿ ಹಣವನ್ನು ಅಥವಾ ಭಿಕ್ಷೆಯನ್ನು ಬೇಡುತ್ತಾ ಇದ್ದರೆ ಅವರಿಗೆ ಕನಿಷ್ಠ ಒಂದು ರುಪಾಯಿ ಹಾಕಲು ಕೂಡ ಜನ ಹಿಂದೆ ಮುಂದೆ ನೋಡುವಂತಹ ಕಾಲ ಇದು ಆದರೆ ಈಗ ನಾನು ನಿಮಗೆ ಒಂದು ಘಟನೆಯನ್ನು ಹೇಳುತ್ತೇನೆ ಈ ಘಟನೆಯಲ್ಲಿ ಒಬ್ಬ ವ್ಯಕ್ತಿ ಯಾವ ರೀತಿಯಲ್ಲಿ ಮಾನವೀಯತೆಯನ್ನು ಮೆರೆದಿದ್ದಾನೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡುತ್ತೇನೆ.

ಯಾವುದೇ ವ್ಯಕ್ತಿಯಾದರೂ ಕೂಡ ಅತಿ ಹೆಚ್ಚು ಬೆಲೆಯನ್ನು ಕೊಡಬೇಕಾದದ್ದು ಜೀವಕ್ಕೆ ಆಹಾರ ದುಡ್ಡು ಉದ್ಯೋಗ ಎಲ್ಲದಕ್ಕೂ ಮುಖ್ಯವಾಗಿ ಮನುಷ್ಯನಿಗೆ ಅವಶ್ಯಕತೆ ಇರುವುದು ಮನುಷ್ಯತ್ವ ಮತ್ತು ಮಾನವೀಯತೆ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ಸಹಾಯ ಮಾಡಿದರೆ ಆ ವ್ಯಕ್ತಿಗಳು ಅವರ ಸಹಾಯವನ್ನು ನೆನೆಯುತ್ತಾರೆ ಆದರೆ ಈಗಿನ ಪರಿಸ್ಥಿತಿ ಹೇಗೆ ಬಂದಿದೆ.

ಎಂದರೆ ಮೊದಲೇ ಹೇಳಿದ ಹಾಗೆ ಸಾಯುವ ಪರಿಸ್ಥಿತಿಯಲ್ಲಿದ್ದರೂ ಕೂಡ ಜನರು ಮತ್ತೊಬ್ಬರಿಗೆ ಸಹಾಯ ಮಾಡುವುದಿಲ್ಲ ಅದಕ್ಕೆ ಹಲವಾರು ಕಾರಣಗಳಿವೆ ನಾವೇನಾದರೂ ಸಹಾಯ ಮಾಡಿದರೆ ಮುಂದೆ ಅದರಿಂದ ನಮಗೇನಾದರೂ ತೊಂದರೆಯಾಗಬಹುದು ಎಂಬ ಮನಸ್ಥಿತಿ ಕೂಡ ಅನೇಕ ಜನರಿಗಿರುವುದನ್ನು ಗಮನಿಸಬಹುದು ಆದರೆ ಆ ಮನಸ್ಥಿತಿಯಿಂದ ಹೊರಗೆ ಬಂದು ಈ ವ್ಯಕ್ತಿ ಮಾಡಿರುವ ಸಹಾಯವನ್ನು ನೆನೆಯಬೇಕು .

ಇದೊಂದು ಪ್ರಮುಖವಾದಂತಹ ಘಟನೆಯಾಗಿದೆ ಈ ಘಟನೆಯಲ್ಲಿ ಬರುವ ವ್ಯಕ್ತಿ ರಾಜ್ವೀರ್ ಈ ವ್ಯಕ್ತಿ ಅಂದರೆ ಈ ರಾಜ್ವೀರ್ ಅವರು ಮಾಡಿದ ಸಾಹಸ ಅಥವಾ ಸಹಾಯವನ್ನು ನೆನೆದರೆ ತುಂಬಾ ಆನಂದವಾಗುತ್ತದೆ ಅದೇನೆಂದರೆ ರಾಜ್ವೀರ್ ಅವರು ಟ್ಯಾಕ್ಸಿ ಚಾಲಕರಾಗಿದ್ದು ಅವರು ಒಂದು ಬಾರಿ ಟ್ಯಾಕ್ಸಿ ಚಾಲನೆಯ ಕೆಲಸವನ್ನು ಮುಗಿಸಿ ನಂತರ ಮನೆಗೆ ಹೋಗುತ್ತಿರುತ್ತಾರೆ ಮನೆಗೆ ಹೋಗುವಂತಹ ಸಂದರ್ಭದಲ್ಲಿ ದಾರಿಯಲ್ಲಿ ಒಂದು ಯುವತಿ ಅಪಘಾತಕ್ಕೊಳಗಾಗಿ ಚಿಕಿತ್ಸೆ ಅವಶ್ಯಕತೆ ಇದೆಬಎಂಬ ರೀತಿಯಲ್ಲಿ ಇರುತ್ತಾಳೆ .

ಆ ಸಂದರ್ಭದಲ್ಲಿ ಯಾರೂ ಕೂಡ ಆಕೆಯನ್ನು ಅಪಘಾತವಾದ ಸ್ಥಳದಿಂದ ಆಸ್ಪತ್ರೆಗೆ ಸೇರಿಸಿರುವುದಿಲ್ಲ ಆದರೆ ರಾಜವೀರ್ ಅವರು ಅದೇ ರಸ್ತೆಯಲ್ಲಿ ಬರುವಾಗ ಆಕೆಯನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸುತ್ತಾರೆ ಆದರೆ ಆಕೆಯ ಕಡೆಯವರು ಯಾರೂ ಕೂಡ ರಾಜ್ಬೀರ್ ಗೆ ತಿಳಿದಿರುವುದಿಲ್ಲ ಆ ಸಂದರ್ಭದಲ್ಲಿ ಡಾಕ್ಟರ್ ಅವರಿಗೆ ತುರ್ತಾಗಿ ಆಪರೇಷನ್ ಮಾಡಬೇಕು ಎಂದು ಹೇಳುತ್ತಾರೆ ರಾಜ್ವೀರ್ ಬಳಿ ಹಣವಿರುವುದಿಲ್ಲ ಆಗ ಅವರು ಅವರ ಟ್ಯಾಕ್ಸಿಯನ್ನು ಮಾರಿ ಆಕೆಗೆ ಹಣವನ್ನು ನೀಡಿ ಆಪರೇಷನ್ ಮಾಡಿಸುತ್ತಾರೆ.

ಅದಾದ ನಂತರ ಆಕೆ ಚೇತರಿಸಿಕೊಂಡ ನಂತರ ನಡೆದ ಅಷ್ಟು ಘಟನೆ ಯುವತಿಗೆ ತಿಳಿಯುತ್ತದೆ ಅದಾದ ಮೇಲೆ ಆಕೆಯ ಮನೆಯವರಿಗೆ ಹೇಳಿ ರಾಜ್ವೀರ್ ಅವರಿಗೆ ಸಹಾಯ ಮಾಡುತ್ತಾಳೆ ರಾಜವೀರ್ ಅವರು ನೀಡಿದ ಎರಡು ಲಕ್ಷದ ಬದಲಾಗಿ ಆಕೆ ಅವರಿಗೆ ಹತ್ತು ಲಕ್ಷವನ್ನು ನೀಡುತ್ತಾಳೆ ಮತ್ತು ಇಲ್ಲಿ ಮಾನವೀಯತೆ ಎಷ್ಟು ಮುಖ್ಯ ಎಂಬುದನ್ನು ನಾವು ಗಮನಿಸಬಹುದು ಒಬ್ಬರು ಒಬ್ಬರಿಗೆ ಸಹಾಯ ಮಾಡಿದರೆ ಅವರ ಕಷ್ಟದಲ್ಲಿ ಮತ್ತೊಬ್ಬರು ಸಹಾಯಕ್ಕೆ ಬರುತ್ತಾರೆ ಎಂಬ ಮಾತು ಯಾವಾಗಲೂ ಸತ್ಯ ಸಾಧ್ಯವಾದಷ್ಟು ಬೇರೆಯವರಿಗೆ ನಮ್ಮ ಕೈಲಾದಷ್ಟು ಸಹಾಯವನ್ನು ಮಾಡೋಣ ಧನ್ಯವಾದಗಳು .

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment