ಶಿವನ ಪಂಚಾಕ್ಷರಿ ಮಂತ್ರವನ್ನು ಪಠನೆ ಮಾಡುವುದರಿಂದ ಆಗುವ ಲಾಭಗಳನ್ನು ಕುರಿತು ಇಂದಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ. ಹೌದು ಲಾಭಗಳು ಅಂತ ಹೇಳುವುದಕ್ಕಿಂತ ಈ ಪಂಚಾಕ್ಷರಿ ಮಂತ್ರವನ್ನು ಪಟನೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಅಷ್ಟೆ ಅಲ್ಲದೆ ನಮ್ಮಲ್ಲಿ ಒಂದು ರೀತಿಯ ಧನಾತ್ಮಕ ಭಾವನೆಯೂ ಸೃಷ್ಟಿಯಾಗುತ್ತದೆ.
ಹಾಗಾದರೆ ಬನ್ನಿ ಈ ಪಂಚಾಕ್ಷರಿ ಮಂತ್ರದ ಬಗೆಗಿನ ಇನ್ನಷ್ಟು ವಿಶೇಷ ಮಾಹಿತಿಯನ್ನು ತಿಳಿದುಕೊಳ್ಳೋಣ, ಈ ಮಾಹಿತಿಯಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿದು, ನೀವು ಕೂಡ ಇನ್ನು ಮುಂದಿನ ದಿನಗಳಲ್ಲಿ ಈ ಒಂದು ಶಿವ ಪಂಚಾಕ್ಷರಿ ಮಂತ್ರವನ್ನು ಪಠಿಸಿ ಶಿವನ ಕೃಪೆಗೆ ಪಾತ್ರರಾಗಿ.
ಶಿವನ ಪಂಚಾಕ್ಷರಿ ಮಂತ್ರದ ಬಗ್ಗೆ ಹೇಳಬೇಕೆಂದರೆ, ಶಿವನ ಪಂಚ ಮುಖವನ್ನು ಪಂಚಕೋಶ ಪಂಚದೇಶ ಪಂಚದೇವತಾ ಪಂಚಲೋಕ ಅಂತೆಲ್ಲಾ ಕರೆಯುತ್ತಾರೆ, ಮನುಷ್ಯನ ಮನುಷ್ಯನ ಮನುಷ್ಯನ ಮನುಷ್ಯನ ಮನುಷ್ಯನ ಮನುಷ್ಯನ ಲಕ್ಷಣಗಳೇನು ಮನುಷ್ಯನ ಮನುಷ್ಯನ ಕಾಮ ಕ್ರೋಧ ಮದ ಮತ್ಸರಗಳನ್ನು ನಿಯಂತ್ರಣದಲ್ಲಿ ಇಟ್ಟು ಕೊಳ್ಳುವುದಕ್ಕಾಗಿ ಶಿವನ ಪಂಚಾಕ್ಷರಿ ಮಂತ್ರವನ್ನು ಪಠಿಸಬೇಕು ಇದರಿಂದ ನಮ್ಮ ಇಂದ್ರಿಯಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಒಂದು ಸಾಮರ್ಥ್ಯವನ್ನು ನಾವು ಪಡೆದುಕೊಳ್ಳಬಹುದು.
ಶಿವನ ಪಂಚಾಕ್ಷರಿ ಮಂತ್ರವೂ ಹೀಗಿದೆ “ಓಂ ನಮಃ ಶಿವಾಯ” ಎಂದು ಈ ಒಂದು ಪಂಚಾಕ್ಷರಿ ಮಂತ್ರದಲ್ಲಿ ನ ಎಂಬ ಪದವು ಪೃಥ್ವಿ ತತ್ತ್ವವನ್ನು ತಿಳಿಸುತ್ತದೆ ಮ ಎಂಬ ಪದವು ಜಲತತ್ವವನ್ನು ತಿಳಿಸಿದರೆ ಶಿ ಅಗ್ನಿ ತತ್ವವನ್ನು ತಿಳಿಸುತ್ತದೆ ವ ವಾಯು ತತ್ವವನ್ನು ತಿಳಿಸಿದರೆ ಯ ಆಕಾಶ ತತ್ವವನ್ನು ತಿಳಿಸುತ್ತದೆ.
ಪಂಚಾಕ್ಷರಿ ಮಂತ್ರ ಅಂದರೆ ಪರಮಾತ್ಮನ ಸರ್ವಜ್ಞತ್ವ ಸರ್ವವ್ಯಾಪಕತ್ವ ಸರ್ವಾಂತರ್ಯಾಮಿ ಎಂಬ ತತ್ವವನ್ನು ಎಳೆಎಳೆಯಾಗಿ ಪ್ರತಿಪಾದಿಸುವ ಭಾಗವೇ ರುದ್ರಾಧ್ಯಾಯ. ಜ್ಞಾನದಿಂದ ಪ್ರಪಂಚಕ್ಕೆ ಬೆಳಕನ್ನು ನೀಡುವುದೇ ಪಂಚಾಕ್ಷರಿ ಮಂತ್ರ.
ಪಂಚಾಕ್ಷರಿ ಮಂತ್ರವನ್ನು ಪಠಿಸುವುದರಿಂದ ಆಗುವಂತಹ ಮೊದಲನೆಯ ಲಾಭ ಅಂದರೆ ಪಂಚಾಕ್ಷರಿ ಮಂತ್ರವನ್ನು ಪಡಿಸುವುದರಿಂದ ಶಿವನ ಸಾನ್ನಿಧ್ಯವನ್ನು ಪಡೆದುಕೊಳ್ಳಬಹುದು. ಹೌದು ಶಿವನ ಈ ಒಂದು ಪಂಚಾಕ್ಷರಿ ಮಂತ್ರವನ್ನು ಪಠಿಸುತ್ತಾ ಬರುವುದರಿಂದ, ಮನಸಾರೆ ಶಿವನನ್ನು ನಾಮಸ್ಮರಣೆ ಮಾಡುತ್ತಾ ಬರುವುದರಿಂದ ಸಾಕ್ಷ ಶಿವನ ಸಾನ್ನಿಧ್ಯವನ್ನು ಪಡೆದುಕೊಳ್ಳಬಹುದು.
ಭೂಮಿ ಮೇಲೆ ಸರ್ವರು ಸಮಾನರು ಆದ ಕಾರಣ ಪಂಚಾಕ್ಷರಿ ಮಂತ್ರವನ್ನು ಇಂತಹವರೇ ಪಠಿಸಬೇಕು ಅಂತ ಏನೂ ಇಲ್ಲ ಸರ್ವರನ್ನು ಸಮಾನರ ಹಾಗೆ ಕಾಣುವ ಈಶ್ವರನಿಗೆ ಪ್ರತಿಯೊಬ್ಬರೂ ಕೂಡ ಒಂದೇ ಆಗಿರುತ್ತಾರೆ, ಅವರು ಶಿವನ ಸಾನ್ನಿಧ್ಯವನ್ನು ಪಡೆದುಕೊಳ್ಳುವುದಕ್ಕೆ ಪಂಚಾಕ್ಷರಿ ಮಂತ್ರವನ್ನು ಪಠಿಸಬೇಕು, ಇದರಿಂದ ಶಿವನ ಸಾನ್ನಿಧ್ಯ ಮಾತ್ರವಲ್ಲ ಧನಾತ್ಮಕ ಶಕ್ತಿಯನ್ನು ಕೂಡ ತನ್ನಲ್ಲಿ ವೃದ್ಧಿಸಿಕೊಳ್ಳ ತಾನೆ ಹಾಗೆ ಮೆದುಳಿನ ಕಾರ್ಯಕ್ಷಮತೆ ಕೂಡ ಈ ಪಂಚಾಕ್ಷರಿ ಮಂತ್ರದಿಂದ ಹೆಚ್ಚುತ್ತದೆ.
ಪಂಚಾಕ್ಷರಿ ಮಂತ್ರವನ್ನು ಪಠಿಸುವುದರಿಂದ ನಿಯಂತ್ರಣ ಶಕ್ತಿ ಹೆಚ್ಚುತ್ತದೆ ಜೀವನದಲ್ಲಿ ಮಾಡಿದ ಕರ್ಮಗಳು ಕಳೆದುಕೊಳ್ಳಬೇಕೆಂದರೆ ಶ್ರೀ ಸಾಕ್ಷತ್ ಶಿವನ ಪಂಚಾಕ್ಷರಿ ಮಂತ್ರವನ್ನು ಪಠಿಸಬೇಕು. ಸಂಕಲ್ಪದಂತೆ ಕಾರ್ಯ ನಿರ್ವಹಿಸಿಕೊಳ್ಳಬಹುದು.
ಶಿವನ ಪಂಚಾಕ್ಷರಿ ಮಂತ್ರವನ್ನು ಪಠಿಸುವುದರಿಂದ ಮನೆಯಲ್ಲಿ ಒಂದು ಸಕಾರಾತ್ಮಕ ಶಕ್ತಿ ಪಸರಿಸುತ್ತದೆ. ಅಷ್ಟೇ ಅಲ್ಲದೆ ಶಾರೀರಿಕ ಪುಷ್ಟಿ ಬರುವುದಲ್ಲದೆ ಸ್ಥಿರತೆ ಮತ್ತು ಪ್ರಶಾಂತತೆ ಕೂಡ ನೆಲೆಸುತ್ತದೆ ನೆಮ್ಮದಿ ದೊರೆಯುತ್ತದೆ. ಪಂಚಾಕ್ಷರಿ ಮಂತ್ರವನ್ನು ಪಠಿಸುವುದರಿಂದ ದುಷ್ಟತನ ಕೂಡ ದೂರವಾಗುತ್ತದೆ ಇಷ್ಟೆಲ್ಲ ಲಾಭಗಳಿರುವ ಈ ಒಂದು ಪಂಚಾಕ್ಷರಿ ಮಂತ್ರವನ್ನು, ನೀವು ಕೂಡ ನಿಮ್ಮ ಮನೆಯಲ್ಲಿ ಪಠಿಸಿ. ಇದರಿಂದ ನೀವು ಪ್ರತಿಯೊಂದು ಶಕ್ತಿಯನ್ನು ಕೂಡ ಪಡೆದುಕೊಳ್ಳುತ್ತೀರಿ ನಿಮ್ಮ ಮನಸ್ಸನ್ನು ನೀವು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತೀರಿ.