ಈಗೇನು ಶೀತ ಕೆಮ್ಮು ಜ್ವರ ಇವೆಲ್ಲವೂ ಮಳೆಗಾಲ ಚಳಿಗಾಲಕ್ಕೆ ಬರುತ್ತದೆ ಅಂತ ಹೇಳುವುದಕ್ಕೆ ಆಗುವುದಿಲ್ಲ ಈ ಶೀತ ಕೆಮ್ಮು ಜ್ವರ ಯಾವಾಗಲಾದರೂ ಬರಬಹುದು, ಇಂತಹ ಚಿಕ್ಕಪುಟ್ಟ ಸಮಸ್ಯೆಗಳು ಹೆಚ್ಚಾಗಿ ಚಿಕ್ಕ ಮಕ್ಕಳಲ್ಲಿ ಮತ್ತು ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ,
ಅಂತಹ ಸಮಯದಲ್ಲಿ ಏನು ಮಾಡಬೇಕೆಂದು ತಿಳಿಯದೆ ಕೆಲವರು ಮಾತ್ರೆಗಳನ್ನು ತಂದು ಮಕ್ಕಳಿಗೆ ಆಗಲಿ ದೊಡ್ಡವರಿಗೆ ಆಗಲಿ ಕೊಡುತ್ತಾರೆ ಆ ಸಮಯಕ್ಕೆ ಆ ಶೀತ ಜ್ವರ ಕೆಮ್ಮು ಅಥವಾ ಯಾವುದೇ ಸಮಸ್ಯೆಗಳು ನಿವಾರಣೆ ಆದರೂ, ಇದು ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತೆ ಬರುತ್ತದೆ.
ನಮ್ಮ ದೇಹದಲ್ಲಿ ಇರುವಂತಹ ರೋಗ ನಿರೋಧಕ ಶಕ್ತಿಯನ್ನು ನಾವೇ ಈ ಮಾತ್ರೆಗಳನ್ನು ಸೇವಿಸುತ್ತಾ ಹಾಲು ಮಾಡಿಕೊಳ್ಳುತ್ತಾ ಇದ್ದೇವೆ ಆ್ಯಂಟಿಬಯಾಟಿಕ್ಗಳು ಪೇನ್ ಕಿಲ್ಲರ್ಗಳು ಸ್ಟಿರಾಯ್ಡ್ ಮಾತ್ರೆಗಳು ಆರೋಗ್ಯಕ್ಕೆ ಮಾರಕವೆ ಹೊರತು, ಇದು ಆರೋಗ್ಯಕ್ಕೆ ಯಾವುದೇ ಲಾಭಗಳನ್ನು ತಂದು ಕೊಡುವುದಿಲ್ಲ,
ಆದರೆ ಮನೆಯಲ್ಲಿಯೇ ದೊರೆಯುವಂತಹ ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿ, ನಮ್ಮ ಚಿಕ್ಕಪುಟ್ಟ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದರಿಂದ, ರೋಗನಿರೋಧಕ ಶಕ್ತಿಯೂ ವೃದ್ಧಿಯಾಗುತ್ತದೆ ನಮ್ಮ ಸಮಸ್ಯೆಗಳಿಗೂ ಪರಿಹಾರ ದೊರೆತಂತೆ ಆಗುತ್ತದೆ.
ಇನ್ನು ನಮ್ಮ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಕುರಿತು ಹೇಳುವುದಾದರೆ ನಾವು ಇಂದಿನ ಮಾಹಿತಿಯಲ್ಲಿ ಒಂದು ಕಷಾಯವನ್ನು ತಿಳಿಸಿ ಕೊಳ್ಳುತ್ತಿದ್ದೇವೆ ಇದನ್ನು ನೀವು ಮಕ್ಕಳಿಗೂ ನೀಡಬಹುದು ವಯಸ್ಸಾದವರಿಗೂ ನೀಡಬಹುದು ಇದರಿಂದ ನಿಮ್ಮ ಚಿಕ್ಕಪುಟ್ಟ ಅನಾರೋಗ್ಯ ಸಮಸ್ಯೆಗಳು ಒಂದೇ ದಿನದಲ್ಲಿ ಪರಿಹಾರ ಆಗುತ್ತದೆ, ಹಾಗೆ ಶೀತಾ ಕೆಮ್ಮಿನಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಈ ಒಂದು ಕಷಾಯ ನಿಮಗೆ ಉತ್ತಮವಾದ ಫಲವನ್ನು ನೀಡುತ್ತದೆ.
ಈ ಕಷಾಯವನ್ನು ಮಾಡುವ ವಿಧಾನವೂ ಹೀಗಿದೆ, ಮೊದಲಿಗೆ ಒಂದು ಹಾಲು ಕಾಯಿಸುವ ಪಾತ್ರೆಯಲ್ಲಿ, ಒಂದು ಲೋಟ ನೀರನ್ನು ತೆಗೆದುಕೊಳ್ಳಿ, ಇದಕ್ಕೆ ಎಂಟು ಕರಿಮೆಣಸಿನ ಕಾಳನ್ನು ಹಾಕಿ, ನೀರನ್ನು ಕುದಿಸಿ ನಂತರ ಇದಕ್ಕೆ ಎರಡು ಏಲಕ್ಕಿ ಕಾಯಿ ಮತ್ತು ಮೂರು ರಿಂದ ನಾಲ್ಕು ಲವಂಗವನ್ನು ಬೆರೆಸಿ ಮತ್ತೊಮ್ಮೆ ನೀರನ್ನು ಕುದಿಸಿ. ನಂತರ ಇದಕ್ಕೆ ಅರ್ಧ ಚಮಚ ಓಮಿನ ಕಾಳನ್ನು ಹಾಕಿ, ಅರ್ಧ ಚಮಚ ಒಣ ಶುಂಠಿಯ ಪುಡಿಯನ್ನು ಬೆರೆಸಬೇಕು, ಕೊನೆಯಲ್ಲಿ ಸ್ವಲ್ಪ ಬೆಲ್ಲವನ್ನು ಇದಕ್ಕೆ ಹಾಕಿ ನೀರನ್ನು ಚೆನ್ನಾಗಿ ಕುದಿಸಬೇಕು.
ಇದೀಗ ಈ ಕಷಾಯವು ತಯಾರಾಗಿದೆ ಇದನ್ನು ನೀವು ದಿನಕ್ಕೆ ಒಂದು ಬಾರಿ ತೆಗೆದುಕೊಂಡರೆ ಸಾಕು ಹಾಗೆ ಇದನ್ನು ಚಿಕ್ಕಮಕ್ಕಳಿಗೂ ನೀಡಿ ಆದರೆ ಸ್ವಲ್ಪ ಪ್ರಮಾಣದಲ್ಲಿ ನೀಡಿದರೆ ಸಾಕು. ಒಂದು ಕಷಾಯ ಆರೋಗ್ಯಕ್ಕೆ ಯಾವುದೇ ಹಾನಿಯನ್ನು ಉಂಟು ಮಾಡುವುದಿಲ್ಲ ಅದನ್ನು ಹೊರತು ಪಡಿಸಿ ನಿಮ್ಮ ಆರೋಗ್ಯವನ್ನು ವೃದ್ಧಿ ಮಾಡುತ್ತದೆ ರೋಗ ನಿರೋಧಕ ಶಕ್ತಿ ಅನ್ನು ಕೂಡ ಹೆಚ್ಚು ಮಾಡುತ್ತದೆ ಮತ್ತು ನಿಮಗೆ ಕಾಡುತ್ತಿರುವಂತಹ ಸಮಸ್ಯೆಯನ್ನು ಕೂಡ ನಿವಾರಿಸಲು ಸಹಕರಿಸುತ್ತದೆ.
ಹಾಗಾದರೆ ಈ ದಿನ ತಿಳಿಸಿದಂತಹ ಮಾಹಿತಿ ನಿಮಗೆ ಉಪಯುಕ್ತವಾಗಿ ಇದ್ದರೆ ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಈ ಒಂದು ಮಾಹಿತಿ ಅನ್ನು ತಪ್ಪದೇ ಪ್ರತಿಯೊಬ್ಬರಿಗೂ ಕೂಡ ಶೇರ್ ಮಾಡಿ ಜೊತೆಗೆ ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ ಮತ್ತು ಆಚಾರ ವಿಚಾರ ವ್ಯವಹಾರಗಳಿಗೆ ಸಂಬಂಧಪಟ್ಟ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡುವುದನ್ನು ಮರೆಯದಿರಿ, ಶುಭ ದಿನ ಎಲ್ಲರಿಗೂ ಒಳ್ಳೆಯದಾಗಲಿ ಧನ್ಯವಾದ.