ಆಂಜನೇಯಸ್ವಾಮಿ ಅನ್ನು ಚಿರಂಜೀವಿ ಅಂತ ಕರೆಯುತ್ತಾರೆ ಹೌದು ಚಿರಂಜೀವಿ ಆಗಿರುವ ಆಂಜನೇಯಸ್ವಾಮಿ ಇವತ್ತಿಗೂ ಕೂಡ ತನ್ನ ಭಕ್ತರು ಕಷ್ಟ ಅಂದಾಗ ತನ್ನ ನಾಮಸ್ಮರಣೆಯನ್ನು ಯಾರು ಮಾಡುತ್ತಾ ಇರುತ್ತಾರೆ ಅಂತಹವರ ಕಷ್ಟಕ್ಕೆ ನೆರವಾಗುತ್ತಾನೆ ಆಂಜನೇಯಸ್ವಾಮಿ ಅಂತ ಹೇಳುವುದುಂಟು, ಹಾಗೂ ಅವನ ಭಕ್ತಾದಿಗಳಿಗೆ ಹಲವು ರೂಪಗಳಲ್ಲಿ ಸಹಾಯ ಮಾಡಿರುವ,
ನಿದರ್ಶನಗಳು ಕೂಡ ಸಾಕಷ್ಟು ಇವೆ. ಹೌದು ಬಲಾಢ್ಯನಾಗಿರುವ ಆಂಜನೇಯ ಸ್ವಾಮಿಯ ಮುಂದೆ ಯಾವ ನಕಾರಾತ್ಮಕ ಶಕ್ತಿಗಳು ಕೂಡ ನಿಲ್ಲಲು ಸಾಧ್ಯವಿಲ್ಲ, ಹಾಗೂ ದೇವಾನುದೇವತೆಗಳಲ್ಲಿಯೆ ಅಪಾರ ಶಕ್ತಿಯನ್ನು ಹೊಂದಿರುವ ಆಂಜನೇಯಸ್ವಾಮಿಗೆ, ಇಷ್ಟೊಂದು ಶಕ್ತಿ ಎಲ್ಲಿಂದ ಬಂತು ಎಂಬುದನ್ನು ತಿಳಿಯೋಣ ಇವತ್ತಿನ ಲೇಖನದಲ್ಲಿ.
ಹೌದು ಕೆಸರಿ ನಂದ ಭಜರಂಗಿ ವಾಯುಪುತ್ರನಿಗೆ ಇಷ್ಟೊಂದು ಶಕ್ತಿ ಎಲ್ಲಿಂದ ಬಂತು ಹಾಗೂ ದೇವಾನುದೇವತೆಗಳಲ್ಲಿಯೆ ಅತ್ಯಂತ ಶಕ್ತಿವಂತನಾಗುವ ಆಂಜನೇಯ ಸ್ವಾಮಿಯ ಬಗ್ಗೆ ಈ ವಿಚಾರವನ್ನು ನೀವು ತಿಳಿಯಲೇಬೇಕು. ಹೌದು ಆಂಜನೇಯನ ತಾಯಿ ಆಗಿರುವ ಅಂಜನ ದೇವಿಯು ಮೊದಲು ಸ್ವರ್ಗದಲ್ಲಿ ಇರುತ್ತಾಳೆ. ಆ ನಂತರ ಬ್ರಹ್ಮನಿಂದ ಶಾಪವನ್ನು ಪಡೆದ ಅಂಜನಾ ದೇವಿಯು ತನ್ನ ತಪ್ಪಿನ ಅರಿವಾಗಿ ಬ್ರಹ್ಮನಲ್ಲಿ ಕ್ಷಮೆಯನ್ನು ಯಾಚಿಸುತ್ತಾಳೆ .
ಆದರೆ ಬ್ರಹ್ಮ ತಾನು ನೀಡಿದ ಶಿಕ್ಷೆ ಅನ್ನು ಹಿಂದಕ್ಕೆ ಪಡೆಯದೆ ಮತ್ತೊಂದು ವಿಶೇಷವಾದ ಶಕ್ತಿಯನ್ನು ಅಂಜನಾದೇವಿಗೆ ನೀಡುತ್ತಾರೆ ಬ್ರಹ್ಮದೇವ. ಹೌದು ನೀನು ಭೂಲೋಕದಲ್ಲಿ ವಾನರನೊಬ್ಬನನ್ನ ಮದುವೆ ಆಗುತ್ತೀಯಾ, ಹಾಗೆ ನಿಮಗೆ ಜನಿಸುವ ಪುತ್ರ ಇಡೀ ಜಗತ್ತಿನಲ್ಲಿ ಖ್ಯಾತಿ ಪಡೆದುಕೊಳ್ಳುತ್ತಾನೆ ಎಂಬ ವರವನ್ನು ನೀಡುತ್ತಾರೆ ಬ್ರಹ್ಮದೇವ.
ಅದರಂತೆ ಅಂಜನಾದೇವಿಗೆ ಹನುಮ ದೇವ ಜನಿಸುತ್ತಾರೆ. ಒಮ್ಮೆ ಆಂಜನೇಯ ಆಟ ಆಡುವಾಗ ಆ ಸೂರ್ಯನನ್ನೆ ಹಣ್ಣು ಎಂದು ತಿಳಿದು, ತಿನ್ನಲು ಹೋಗಿದ್ದ ಆಂಜನೇಯನಿಗೆ ಇಂದ್ರದೇವನು ಬಾಲ ಆಂಜನೇಯನ ಮೇಲೆ ಗದಪ್ರಹಾರ ಮಾಡುತ್ತಾರೆ. ಆ ಸಮಯದಲ್ಲಿ ಬಾಲಕ ಆಂಜನೇಯ ಪ್ರಜ್ಞೆ ತಪ್ಪಿ ಭೂಮಿ ಮೇಲೆ ಬೀಳುತ್ತಾರೆ. ಇನ್ನು ತನ್ನ ಮಗನ ಈ ಅವಸ್ಥೆ ಅನ್ನೋ ಕಂಡು ವಾಯುದೇವನು ಕೋಪಗೊಳ್ಳುತ್ತಾರೆ ಹಾಗೂ ಬೀಸುವ ಗಾಳಿ ಬೀಸುವುದಿಲ್ಲ ತಾಪಮಾನದಿಂದ ದೇವಾನುದೇವತೆಗಳು ಸಂಕಷ್ಟಕ್ಕೆ ಒಳಗಾಗುತ್ತಾರೆ.
ಇದೇ ವೇಳೆ ದೇವರು ದೇವತೆಗಳು ಏನಾಯಿತೋ ಎಂದು ತಿಳಿದಾಗ ವಾಯುದೇವನು ಕೋಪಗೊಂಡಿರುವ ವಿಚಾರ ತಿಳಿಯುತ್ತದೆ. ಆ ಸಮಯದಲ್ಲಿ ದೇವಾನುದೇವತೆಗಳು ಬಾಲಕನಾದ ಆಂಜನೇಯನನ್ನು ರಕ್ಷಿಸಲು ಅವರ ಶಕ್ತಿ ಅಲ್ಲಲ್ಲ ಆಂಜನೇಯರಿಗೆ ನೀಡುತ್ತಾರೆ ಹಾಗೂ ಆಂಜನೇಯನಿಗೆ ಅಗ್ನಿದೇವಾ ಹಾಗೂ ಜಲದೇವನ ರಕ್ಷಣೆ ಕೂಡ ಸಿಗುತ್ತದೆ ಮತ್ತು ದೇವಾನುದೇವತೆಗಳಿಂದ ವಿಶೇಷ ಶಕ್ತಿಯೂ ಕೂಡ ಲಭಿಸುತ್ತದೆ ಬಾಲ ಆಂಜನೇಯನಿಗೆ. ಈ ರೀತಿಯಾಗಿ ಆಂಜನೇಯಸ್ವಾಮಿಗೆ ಅಪಾರ ಶಕ್ತಿ ಲಭಿಸುತ್ತದೆ.
ವಾಯು ಪುತ್ರನಾಗಿರುವ ಆಂಜನೇಯನನ್ನು ಪವನಪುತ್ರ ಅಂತ ಕೂಡ ಕರೆಯುತ್ತಾರೆ. ಚಿರಂಜೀವಿಯಾಗಿರುವ ಆಂಜನೇಯಸ್ವಾಮಿಯು ಬಲಾಢ್ಯನಾಗುತ್ತಾನೆ. ಈ ರೀತಿ ಆಂಜನೇಯಸ್ವಾಮಿಗೆ ಅಪಾರ ಶಕ್ತಿ ಲಭಿಸುತ್ತದೆ ಹಾಗೂ ಯಾರೂ ಹನುಮಾನ್ ಚಾಲೀಸವನ್ನು ಪ್ರತಿದಿನ ಪಠಿಸುತ್ತಾರೆ ಅಂಥವರಿಗೆ ಆಂಜನೇಯನ ಕೃಪಾಕಟಾಕ್ಷ ಸದಾ ಕಾಲ ಇರುತ್ತದೆ ಎಂಬ ನಂಬಿಕೆಯೂ ಸಹ ನಮ್ಮಲ್ಲಿ ಇದೆ.