ನಮಸ್ಕಾರ ಸ್ನೇಹಿತರೆ ಈ ಹಸಿವು ಎಂಬುದು ಮನುಷ್ಯನನ್ನು ಯಾವ ಮಟ್ಟಕ್ಕೆ ಇಳಿಸುತ್ತದೆ ಅಂದರೆ ತನ್ನಲ್ಲಿರುವ ಸ್ವಾಭಿಮಾನವನ್ನು ಬದಿಗಿಟ್ಟು ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿ ಯಾವ ಕೆಲಸ ಬೇಕಾದರೂ ಮಾಡ್ತೇವೆ ಊಟ ಕೊಡಿ ಅನ್ನುವ ಹಾಗೆ ಮಾಡಿ ಬಿಡುತ್ತದೆ ಈ ಹಸಿವು. ಅದೇ ರೀತಿ ಈ ಲೇಖನದಲ್ಲಿ ಕೂಡ ನೋಡಿ ಈ ತಾಯಿ ಮಕ್ಕಳು ಹಸಿವಿನಿಂದ ಇವರು ತೊಳಲಾಡುತ್ತಿದ್ದಾರೆ ಆದರೆ ಇವರ ಹಸಿವಿಗೆ ನೆರವಾದದ್ದು ಯಾರು ಗೊತ್ತಾ ಇಂತಹ ವ್ಯಕ್ತಿಗಳು ಸಮಾಜದಲ್ಲಿ ಇದ್ದರೆ ಖಂಡಿತವಾಗಿಯೂ ಯಾರು ಕೂಡ ಬಡತನದಿಂದ ಆಗಲಿ ಅಥವಾ ಹಸಿವಿನಿಂದ ಆಗಲಿ ತಮ್ಮ ಪ್ರಾಣ ಬಿಡುವುದಿಲ್ಲ.
ಹೌದು ಒಂದೊಂತ್ತು ಹೇಳಲೇಬೇಕು ನಮ್ಮ ಭಾರತ ದೇಶದಲ್ಲಿ ಪ್ರತಿದಿವಸ ಹಸಿವಿನಿಂದಲೇ ಅದೆಷ್ಟೋ ಮಕ್ಕಳು ಪ್ರಾಣ ಬಿಡುತ್ತಾ ಇದ್ದಾರೆ ಅದೆಷ್ಟೋ ಮಂದಿ ಹಸಿವಿನಿಂದ ಒಂದೊತ್ತು ಊಟವೂ ಇಲ್ಲದೆ ಹಸಿವಿನಿಂದ ದಿನಗಳು ಕಳೆಯುತ್ತಾ ಇದ್ದಾರೆ ಇಂಥದರ ನಡುವೆ ಹೈದರಾಬಾದಿನಲ್ಲಿ ನಡೆದಿರುವ ಈ ಘಟನೆ ಗೋವಿಂದ ಸ್ವಾಮಿ ಎಂಬುವವರು ಇದನ್ನೆಲ್ಲ ಗಮನಿಸಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ನೈಜ ಘಟನೆಯನ್ನು ಶೇರ್ ಮಾಡಿಕೊಂಡಿದ್ದಾರೆ ಈ ಸಂಪೂರ್ಣ ಮಾಹಿತಿಯನ್ನು ತಿಳಿರಿ ಸ್ನೇಹಿತರ ಯಾರು ಕೂಡ ಹಸಿವು ಅಂತ ಮನೆ ಬಾಗಿಲಿಗೆ ಬಂದವರನ್ನು ಹಾಗೆ ಕಳುಹಿಸಬೇಡಿ. ಯಾಕೆಂದರೆ ದುಡ್ಡು ಕೊಟ್ಟರೆ ಆ ಸಮಯದ ಹಸಿವು ತೀರುತ್ತದೆ ಆದರೆ ನೀವು ನಿಮ್ಮ ಬಳಿ ಇರುವ ಸ್ವಲ್ಪ ಊಟವನ್ನ ಅವರಿಗೆ ಕೊಟ್ಟರೆ ಅವರು ಹೊಟ್ಟೆ ತುಂಬ ಊಟ ಮಾಡಿ ಆ ದಿನ ವನ್ನು ಖುಷಿಯಿಂದ ಕಳೆಯುತ್ತಾರೆ ನೆಮ್ಮದಿಯಾಗಿ ಇರುತ್ತಾರೆ ಒಂದು ಹೊತ್ತಾದರೂ ಅವರು ನೆಮ್ಮದಿಯಿಂದ ಇದ್ದರೆ ಆ ಖುಷಿ ಅವರ ಹಾರೈಕೆ ನಿಮ್ಮನ್ನು ಸದಾ ಕಾಲ ಕಾಪಾಡುತ್ತದೆ.
ಹೌದು ಗೋವಿಂದ ಸ್ವಾಮಿ ಎಂಬುವವರು ಚಿಕ್ಕ ಹೋಟೆಲೊಂದಕ್ಕೆ ಹೋಗುತ್ತಾರೆ ಮತ್ತು ಅಲ್ಲಿ ತಿಂಡಿ ಕೇಳಲು ಹೋದಾಗ ಅಲ್ಲೊಬ್ಬ ಚಿಕ್ಕ ಹುಡುಗ ಹೋಟೆಲ್ ಮಾಲೀಕರ ಬಳಿ ಪಾತ್ರೆಯನ್ನು ಹಿಡಿದು ನಮ್ಮ ಅಮ್ಮ ಹೇಳಿದಳು ಹತ್ತು ಇಡ್ಲಿ ಪಾರ್ಸಲ್ ಕೊಡಬೇಕಂತೆ ಹಣವನ್ನ ನಾಳೆ ಕೊಡ್ತಾಳಂತೆ ಎಂದು ಹುಡುಗ ಹೇಳುತ್ತಾ ನಿಂತಿರುತ್ತಾನೆ ಮತ್ತು ಹೋಟೆಲ್ ಮಾಲೀಕ ಈಗಾಗಲೇ ನಿಮ್ಮಮ್ಮ ಕೊಡಬೇಕಾಗಿರುವ ಬಾಕಿ ಕೊಟ್ಟಿಲ್ಲ ಅಂತ ಹೇಳುತ್ತಾ ನಿಂತದ್ದನ್ನು ಗೋವಿಂದಸ್ವಾಮಿಯವರೂ ಗಮನಿಸುತ್ತಾರೆ.
ಆದರೆ ಇದ್ದಕ್ಕಿದ್ದ ಹಾಗೆ ಗೋವಿಂದಸ್ವಾಮಿ ಅವರ ಮುಖದಲ್ಲಿ ಗೊಂದಲ ಮೂಡುತ್ತದೆ ಹೌದು ಯಾಕೆ ಅಂದರೆ ಹೋಟೆಲ್ ಮಾಲೀಕರು ಹುಡುಗನಿಗೆ ನಿಮ್ಮದು ಬಾಕಿ ಹೆಚ್ಚು ಇದೆ ಅಂದರೂ ಕೂಡ ಪಾತ್ರೆ ತೆಗೆದುಕೊಂಡು ಹೋಗಿ ಅದಕ್ಕೆ ಸಾರು ಹಾಕಿ ಇಡ್ಲಿಯನ್ನು ಪಾರ್ಸಲ್ ಮಾಡಿ ಕೂಡ ಕೊಡುತ್ತಾರೆ. ಇದನ್ನೆಲ್ಲ ಗಮನಿಸಿದ ಗೋವಿಂದಸ್ವಾಮಿಯವರು ಏನಮ್ಮ ನೀವೆ ಕಷ್ಟದಲ್ಲಿ ಹೋಟೆಲ್ ನಡೆಸುತ್ತಾ ಇರುತ್ತೀರಾ ಈದಿನದ ಬಂಡವಾಳದಲ್ಲಿ ಮತ್ತೆ ನಾಳೆ ವ್ಯಾಪಾರ ನಡೆಸಬೇಕು ಈ ಸಮಯದಲ್ಲಿ ಇಷ್ಟೊಂದು ಸಾಲ ಇದ್ದರೂ ಕೂಡ ಅವರಿಗೆ ತಿಂಡಿ ಕೊಟ್ಟು ಕಳುಹಿಸುತ್ತೇನೆ ಇದ್ದೀರಲ್ಲ ನಿಮಗೇ ನಷ್ಟ ಆಗುವುದಿಲ್ಲವಾ ಎಂದು ಕೇಳಿದಾಗ ಹೋಟೆಲ್ ಮಾಲೀಕರು ಹೇಳಿದ್ದನ್ನು ಕೇಳಿದರೆ ನೀವು ಕೂಡ ಅಚ್ಚರಿ ಪಡ್ತೀರಾ ಇವತ್ತಿನ ದಿವಸ ಸಮಾಜದಲ್ಲಿ ಇಂತಹ ಜನ ಇರ್ತಾರ ಅಂತ ನಿಮಗೂ ಕೂಡ ಅನಿಸುತ್ತದೆ.
ಹೌದು ಆ ಮಹಿಳೆ ನನಗೆ ಹೆಚ್ಚು ಬಾಕಿ ಕೊಡಬೇಕು ಆದರೆ ಹಸಿವಿನಿಂದ ಬಳಲುತ್ತಿರುವ ಆ ಮಕ್ಕಳ ಮುಖ ನೋಡಿದರೆ ಯಾರಿಗೆ ತಾನೇ ಹಣ ಮುಖ್ಯ ಅಂತ ಅನಿಸುತ್ತದೆ ಮೊದಲು ಅವರ ಹಸಿವು ತೀರಲೇ ಆನಂತರ ಅವರು ಹಣ ಕೊಡಲು ನನಗೆ ಪರವಾಗಿಲ್ಲ ನನಗೆ ಆಗುವ ವ್ಯಾಪಾರದಿಂದ ನಾನು ವ್ಯಾಪರಂ ನಡೆಸುತ್ತೇನೆ ಆದರೆ ಅವರ ಹಸಿವು ನೀಗಿಸುವುದಕ್ಕೆ ಹಣದಿಂದ ಸಾಧ್ಯವಿಲ್ಲ ಅದಕ್ಕೆ ಊಟಾನೇ ಬೇಕೋ ಎಂದು ಆ ಹೋಟೆಲ್ ಮಾಲೀಕ ಗಳು ಹೇಳುತ್ತಾಳೆ ಆಕೆಯ ಮಾತುಗಳನ್ನ ಕೇಳಿ ಗೋವಿಂದಸ್ವಾಮಿ ಅವರಿಗೆ ಕಣ್ತುಂಬಿ ಬರುತ್ತದೆ ಮತ್ತು ಈ ವಿಚಾರವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಯಾಕೆಂದರೆ ಈ ಘಟನೆಯಿಂದ ಪ್ರತಿಯೊಬ್ಬರೂ ತಿಳಿಯಬೇಕು ಹಸಿವು ಅಂತ ಬಂದಾಗ ಅಲ್ಲಿ ಹಣ ಮುಖ್ಯವಾಗೋದಿಲ್ಲ ಹಸಿವು ನೀಗಿಸುವುದಕ್ಕೆ ಊಟ ಬೇಕೋ ಅಂತ ಈ ಮಾಹಿತಿ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ.