ಅದೆಷ್ಟೋ ರೋಗಗಳನ್ನ ನಿವಾರಣೆ ಮಾಡಬಹುದಾದ ಅದ್ಬುತ ಶಕ್ತಿಯನ್ನ ಹೊಂದಿದೆ ಈ ಗಿಡ .. !

398

ನಮಸ್ಕಾರ ಪ್ರಿಯ ವೀಕ್ಷಕರೆ ಇಂದಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಬಂದು ಹಿತ್ತಲ ಗಿಡ ಎಷ್ಟೆಲ್ಲಾ ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರ ಎಂದು ಹೌದು ನೀವು ಸಾಮಾನ್ಯವಾಗಿ ಮನೆಯ ಅಕ್ಕಪಕ್ಕ ಬೆಳೆದಂತಹ ಅನೇಕ ಗಿಡಗಳನ್ನು ಕಿತ್ತು ಬಿಸಾಡುತ್ತೇವೆ ಈ ಕಳೆಯಂತೆ ಬಿಸಾಡುವ ಎಷ್ಟೊ ಗಿಡಗಳು ಉತ್ತಮವಾದ ಔಷಧೀಯ ಗುಣವನ್ನು ಹೊಂದಿದೆ.ಇಂದಿನ ಮಾಹಿತಿಯಲ್ಲಿಯೂ ಕೂಡಾ ನಿಮಗೆ ಅಂಥದ್ದೇ ಒಂದು ವಿಶೇಷವಾದ ಮರದ ಬಗೆಗಿನ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಇದನ್ನು ನೀವು ಕೂಡ ಸಂಪೂರ್ಣವಾಗಿ ತಿಳಿಯಿರಿ ಹಾಗೆ ಈ ಮರದ ಬಗೆಗಿನ ಮಾಹಿತಿ ತಿಳಿದ ನಂತರ ನೀವು ಕೂಡಾ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಹಾಗೆ ಬೇರೆಯವರಿಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡಿ.

ಹೌದು ಆ ಮರದ ಹೆಸರು ಬಿಲ್ವಾ ಮರ ಇದನ್ನು ಸಾಮಾನ್ಯವಾಗಿ ನೀವು ದೇವಸ್ಥಾನಗಳ ಬಳಿ ನೋಡಿರ್ತೀರಾ. ಯಾಕೆಂದರೆ ಈ ಮರದ ವಿಶೇಷತೆ ಬಹಳಾನೇ ಇದ್ದು ಇದರ ಔಷಧೀಯ ಗುಣ ಕೂಡ ಅಷ್ಟೇ ಅಪಾರವಾದದ್ದು ಆದಕಾರಣವೇ ಇದಕ್ಕೆ 1ವಿಶೇಷತೆಯನ್ನು ನೀಡಬೇಕೆಂದು ನಮ್ಮ ಹಿರಿಯರು ಇಂತಹ ಮರಗಳನ್ನು ದೇವಸ್ಥಾನಗಳ ಬಳಿ ಬೆಳೆಸುತ್ತಿದ್ದರು. ಈ ಬಿಲ್ವ ಮರದ ಬಗ್ಗೆ ಹೇಳುವುದಾದರೆ ಕೆಲವರು ಪಾಲಿಸುವ ಪದ್ದತಿಯಲ್ಲಿ ಸತ್ತ ವ್ಯಕ್ತಿಗಳನ್ನು ಮಣ್ಣುಮಾಡುವಾಗ ಅವರೊಂದಿಗೆ ವಿಭೂತಿ ಮತ್ತು ಬಿಲ್ವದ ಎಲೆಗಳನ್ನು ಹಾಕುವ ಪದ್ಧತಿ ಇದೆ ಇದನ್ನು ನೀವು ಕೂಡ ಕೇಳಿರಬಹುದು.

ಈಶ್ವರನಿಗೆ ಪ್ರಿಯವಾದದ್ದು ಈ ಬಿಲ್ವ ಎಲೆಗಳು ನಾವು ಮನಸ್ಪೂರ್ತಿಯಾಗಿ ಒಂದೆರಡು ಎಲೆಗಳನ್ನು ಶಿವನಿಗೆ ಅರ್ಪಿಸಿದರು ಶಿವನು ಪ್ರಸನ್ನರಾಗಿ ನಮ್ಮ ಇಷ್ಟಾರ್ಥಗಳನ್ನು ನೆರವೇರಿಸುತ್ತಾರೆ ಅನ್ನುವ ಒಂದು ನಂಬಿಕೆ ಕೂಡ ಇದೆ. ಇನ್ನು ಈ ಬಿಲ್ವ ಮರದ ಎಲೆಗಳು ಆಯುರ್ವೇದದಲ್ಲಿ ಮಹತ್ತರ ಸ್ಥಾನವನ್ನು ಪಡೆದುಕೊಂಡಿದೆ. ಇದನ್ನು ಶಾಸ್ತ್ರೀಯವಾಗಿ ಏಗಲ್ಮರ್ಮಲಸ್ ಅಂತ ಕರಿತಾರೆ. ಇನ್ನೂ ಕೆಲವರು ಸ್ಟೋನ್ ಆ್ಯಪಲ್ ಬೆಂಗಾಲ್ ಕ್ವೀನ್ ಜಪಾನೀಸ್ ಬಿಟ್ಟರ್ ಅಂತ ಕರಿತಾರೆ. ಇದರ ಒಂದು ಪ್ರಕೃತಿ ಹೇಗೆ ಎಂದರೆ, ವಾತದ ಗುಣವನ್ನು ಕಡಿಮೆ ಮಾಡುವ ಅಂಶ ಈ ಬಿಲ್ವಾ ಎಲೆಯಲ್ಲಿ ಬಹಳಷ್ಟು ಇದ್ದು. ಈ ಬಿಲ್ವ ಮರದ ಕಾಯಿ ಕೂಡ ಹೆಚ್ಚು ಔಷಧೀಯ ಗುಣವನ್ನು ಹೊಂದಿದೆ.

ಕಣ್ಣಿಗೆ ಸಂಬಂಧಪಟ್ಟ ಸೋಂಕು ಕಣ್ಣು ಕೆಂಪಾಗುವುದು ಕಣ್ಣು ಉರಿ ಆಗುವುದು ಇಂತಹ ಎಲ್ಲ ಸಮಸ್ಯೆಗಳಿಂದ ನೀವು ಬಳಲುತ್ತಾ ಇದ್ದರೆ ಈ ಬಿಲ್ವ ಮರದ ಕಾಯಿಯನ್ನು ಸ್ವಲ್ಪ ಬಿಸಿ ಮಾಡಿ ಅದನ್ನು ಬಟ್ಟೆಗೆ ಕಟ್ಟಿ ಅದರಿಂದ ಶಾಖಾ ಪಡೆದುಕೊಳ್ಳಬೇಕು ಇದರಿಂದ ಕಣ್ಣಿಗೆ ಸಂಬಂಧಪಟ್ಟ ಸೋಂಕುಗಳು ನಿವಾರಣೆಯಾಗುತ್ತದೆ ಅಷ್ಟೇ ಅಲ್ಲ ಅಜೀರ್ಣತೆ ಯನ್ನು ಕೂಡ ಪರಿಹಾರ ಮಾಡುತ್ತದೆ ಈ ಬಿಲ್ವದ ಎಲೆಯ ರಸವನ್ನು 2ಚಮಚ ತೆಗೆದುಕೊಂಡು ಅದಕ್ಕೆ 2ಚಮಚ ಜೇನು ತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಅಜೀರ್ಣ ದೂರವಾಗುತ್ತದೆ. ನೆಗಡಿ ಆದಾಗಲು ಕೂಡ ಎಲೆಯ ಕಷಾಯವನ್ನು ಸೇವಿಸಬಹುದು, ಇದರಿಂದ ಸಮಸ್ಯೆ ಬೇಗ ಪರಿಹಾರ ಆಗುತ್ತದೆ.

ಗ್ಯಾಂಗ್ರಿನ್ ಅಂತಹ ಸಮಸ್ಯೆ ಆದಾಗ ಈ ಬಿಲ್ವದ ಎಲೆಗಳನ್ನು ತೆಗೆದುಕೊಂಡು ಪೇಸ್ಟ್ ಮಾಡಬೇಕು ನಂತರ ಗ್ಯಾಂಗ್ರಿನ್ ಆದ ಭಾಗದಲ್ಲಿ ಲೇಪನ ಮಾಡಿ ಪಟ್ಟಿಕಟ್ಟಬೇಕು ಈ ರೀತಿ ಪ್ರತಿದಿನ ಮಾಡುತ್ತ ಬರುವುದರಿಂದ ಸಮಸ್ಯೆ ಬೇಗ ಪರಿಹಾರ ಆಗುತ್ತದೆ ಅಷ್ಟೆ ಅಲ್ಲದೆ ಸುಟ್ಟ ಗಾಯದ ಮೇಲೆ ಕೂಡ ಈ ಎಲೆಯ ಪೇಸ್ಟ್ ಹಚ್ಚುವುದರಿಂದ ಕಲೆ ಮತ್ತು ನೋವು ಬೇಗ ಪರಿಹಾರ ಆಗುತ್ತದೆ ಎನ್ನುವ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಪರಿಹರಿಸುತ್ತದೆ ರಕ್ತದ ಒತ್ತಡ ತೆಯನ್ನು ಕೂಡ ನಿಯಂತ್ರಣದಲ್ಲಿಡುತ್ತದೆ ಈ ಹೇಗೆಂದರೆ ಈ ಕಾಯಿಯ ಚೂರ್ಣವನ್ನು ನಾವು ಮಿತಿಯಾಗಿ ಬಳಸುತ್ತಾ ಬರುವುದರಿಂದ ಇಂತಹ ಸಮಸ್ಯೆಗಳಿಂದ ದೂರವಿರಬಹುದು.

ಬಸ್ತಾರ್ ಜನಾಂಗದವರು ತಮಗೆ ಶೀತ ಕೆಮ್ಮು ಕಫ ಅಥವಾ ಜ್ವರದ ಸಮಸ್ಯೆ ಎದುರಾದಾಗ ಅವರು ಈ ಬಿಲ್ವದ ಎಲೆಯ ಕಷಾಯವನ್ನು ಸೇವಿಸುತ್ತಾರೆ. ಈ ಬಸ್ತಾರ್ ಜನಾಂಗದವರು ಕಷಾಯವನ್ನು ಮಿತಿಯಾಗಿ ಕುಡಿಯುವುದರಿಂದ ಕೂಡ ಅವರಿಗೆ ಉತ್ತಮ ಆರೋಗ್ಯ ಲಭಿಸಿದೆ ಎಂದು ಕೆಲವೊಂದು ಸಂಶೋಧನೆಗಳು ತಿಳಿಸುತ್ತವೆ. ಹಾಗಾದರೆ ನೀವು ಕೂಡ ಈ ಒಂದು ಬಿಲ್ವಮರದ ಪ್ರಯೋಜನವನ್ನು ಪಡೆದುಕೊಳ್ಳುವುದಗಿಂತ ಮೊದಲು ಆಯುರ್ವೇದ ಪಂಡಿತರ ಸಲಹೆಯನ್ನು ಪಡೆಯಿರಿ ಧನ್ಯವಾದ.