WhatsApp Logo

ಗೊತ್ತೇ ಆಗದಷ್ಟು ಬದಲಾದ ಕರ್ಪೂರದ ಗೊಂಬೆ ಸಿನಿಮಾದಲ್ಲಿ ಶ್ರುತಿ ತಂಗಿಯಾಗಿದ್ದ ನಟಿ ಶ್ವೇತಾ…ನೋಡಿ ಹೇಗಿದ್ದಾರೆ ಈಗ

By Sanjay Kumar

Updated on:

ಸ್ಯಾಂಡಲ್ ವುಡ್ ನಲ್ಲಿ ಕೆಲ ನಟರು ತಮ್ಮದೇ ಆದ ಅಭಿನಯದ ಮೂಲಕ ತಮ್ಮ ಛಾಪನ್ನು ಮೂಡಿಸಿದ್ದಾರೆ ಹೌದು ಸ್ಯಾಂಡಲ್ ವುಡ್ ನಲ್ಲಿ ಹಲವು ನಟರು ತಮ್ಮ ತಮ್ಮ ವಿಭಿನ್ನ ನಟನೆಗೆ ಹೆಸರುವಾಸಿ ಆಗಿದ್ದು, ಸಹೋದರಿಯರ ಅನ್ಯೋನ್ಯತೆಯ ಸ್ವಾರ್ಥವಿಲ್ಲದ ಸಂಭಂದದ ಕುರಿತು ಹಾಗೂ ಪ್ರೀತಿ ತ್ಯಾಗದ ಬಗ್ಗೆ ಮತ್ತು ಮಹತ್ವದ ಬಗ್ಗೆ ತಿಳಿಸುವಂತಹ ಕನ್ನಡ ಚಿತ್ರರಂಗದ ಎವರ್ ಗ್ರೀನ್ ನಟ ರಮೇಶ್ ಅರವಿಂದ್, ಶೃತಿ ಹಾಗೂ ಶ್ವೇತಾ ಅವರ ಮನೋಜ್ಞ ಅಭಿನಯದ ಸಿನಿಮಾ ಎಂದರೆ ಅದು ಕರ್ಪೂರದ ಗೊಂಬೆ. ಸ್ಯಾಂಡಲ್ ವುಡ್ ನಲ್ಲಿ ಈ ಚಲನಚಿತ್ರ ನಟಿ ಶ್ವೇತಾ ಅವರು ಶ್ರುತಿ ಅವರ ಪ್ರೀತಿಯ ತಂಗಿಯಾಗಿ ಅಭಿನಯ ಮಾಡಿದ್ದಾರೆ. ಇತ್ತ ಕನ್ನಡ ಚಿತ್ರರಂಗಕ್ಕೆ ಸೆಂಟಿಮೆಂಟ್ ಎಂದರೇ ಏನು ಎಂದು ತೋರಿಸಿಕೊಟ್ಟ ನಿರ್ದೇಶಕ ಎಸ್ ಮಹೆಂದರ್ ಅವರು ಕರ್ಪೂರದ ಗೊಂಬೆ ಚಿತ್ರವನ್ನು ನಿರ್ದೇಶನ ಮಾಡಿದ್ದರು.

ಹೌದು 1996 ರಲ್ಲಿ ತೆರೆಕಂಡ ಕರ್ಪೂರದ ಗೊಂಬೆ ಚಲನಚಿತ್ರದಲ್ಲಿ ನಟ ರಮೇಶ್ ಅರವಿಂದ್ ಹಾಗೂ ನಟಿ ಶೃತಿ ಅವರ ಜೊತೆ ಸೆಂಟಿಮೆಂಟ್ ದೃಶ್ಯಗಳಲ್ಲಿ ನಟಿ ಶ್ವೇತಾ ಅವರು ಕಾಣಿಸಿಕೊಂಡಿದ್ದು, ತಮ್ಮ ಅಮೋಘ ಅಭಿನಯದಿಂದ ಎಲ್ಲರ ಗಮನ ಸೆಳೆದಿದ್ದರು. ಇನ್ನು ನಟಿ ಶ್ವೇತಾ ಅವರ ಮತ್ತೊಂದು ಹೆಸರು ವಿನೋದಿನಿ ಎಂಬುದಾಗಿದ್ದು ಬಾಲ ನಟಿಯಾಗಿ ಅಭಿನಯ ಮಾಡುತ್ತ ಇದ್ದ ಇವರು 1992 ರಲ್ಲಿ ಮೊದಲ ಬಾರಿಗೆ ತಮಿಳು ಚಿತ್ರದ ಮೂಲಕ ಪ್ರಮುಖ ನಾಯಕಿಯಾಗಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು.

ಇನ್ನು ಸ್ಯಾಂಡಲ್ ವುಡ್ ನಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ನಟ ರಘುವೀರ್ ಅವರ ಜೊತೆ ಚೈತ್ರದ ಪ್ರೇಮಾಂಜಲಿ ಎಂಬ ಚಲನಚಿತ್ರದಲ್ಲಿ ನಾಯಕಿನಟಿಯಾಗಿ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಾರೆ ನಟಿ ಶ್ವೇತಾ ಹೌದು ಇವರ ಮೊದಲ ಸಿನಿಮಾ ಚೈತ್ರದ ಪ್ರೇಮಾಂಜಲಿ. ಇವರ ಮೊದಲ ಸಿನಿಮಾದಲ್ಲಿಯೆ, ಎಲ್ಲರಿಂದ ಪ್ರಶಂಸೆ ಗಿಟ್ಟಿಸಿಕೊಂಡರು ನಟಿ ಶ್ವೇತಾ. ಇನ್ನು ಚೈತ್ರದ ಪ್ರೇಮಾಂಜಲಿ ಸಿನಿಮಾ ಕನ್ನಡ ಚಿತ್ರರಂಗದ ಕಲಸಾಮ್ರಾಟ ಎಸ್ ನಾರಯಣ್ ರವರ ಮೊದಲ ಸಿನಿಮಾ ಆಗಿದ್ದು, ಈ ಸಿನಿಮಾ ಎಸ್ ನಾರಯಣ್ ಸೇರಿದಂತೆ ನಟ ರಘುವೀರ್ ಹಾಗೂ ನಟಿ ಶ್ವೇತಾ ಅವರಿಗೆ ದೊಡ್ಡ ಬ್ರೇಕ್ ನೀಡಿದೆ.

ಇನ್ನು ಚೈತ್ರದ ಪ್ರೇಮಾಂಜಲಿ ಸಿನಿಮಾ ನಂತರ ನಟಿ ಶ್ವೇತಾ ಅವರಿಗೆ ಕನ್ನಡದಲ್ಲಿ ಅವಕಾಶಗಳು ಹುಡುಕಿ ಕೊಂಡು ಬಂದಿದ್ದು, ರಾಮ್ ಕುಮಾರ್ ಅವರ ಜೊತೆ ಗೆಜ್ಜೆ ನಾದ, ನಟ ಶಶಿಕುಮಾರ್ ರವರ ಜೊತೆ ಲಕ್ಷ್ಮಿ ಮಹಾಲಕ್ಷ್ಮಿ ಸಿನಿಮಾಗಳಲ್ಲಿ ನಟಿ ಶ್ವೇತಾ ಉತ್ತಮ ಅಭಿನಯ ತೋರಿದ್ದಾರೆ. ಮುದ್ದಿನ ಅಳಿಯ, ಮಾವನ ಮಗಳು, ಪಂಜಾಬಿ ಹೌಸ್ ಕುಟುಂಬ ಸೇರಿದಂತೆ ಇನ್ನು ಮುಂತಾದ ಹಲವು ಕನ್ನಡ ಚಲನಚಿತ್ರಗಳಲ್ಲಿ ನಟಿ ಶ್ವೇತಾ ಅವರು ಅಭಿನಯಿಸಿದ್ದಾರೆ.

ಇನ್ನು 2002 ರ ನಂತರ ಚಲನ ಚಿತ್ರರಂಗದಿಂದ ದೂರ ಉಳಿದ ನಟಿ ಶ್ವೇತಾ ಯಾವ ಸಿನಿಮಾಗಳಲ್ಲಿಯೂ ಕೂಡ ಅಭಿನಯಿಸಲಿಲ್ಲಾ, ಹಾಗೂ ನಟಿ ಶ್ವೇತಾ ಅವರಿಗೆ ಅವಕಾಶಗಳು ಕೂಡ ಕಡಿಮೆ ಆದವು. ನಂತರ ತಮಿಳು ಕಿರುತೆರೆ ಅನ್ನು ಪ್ರವೇಶಿಸಿದ ನಟಿ ಶ್ವೇತಾ ಹಲವಾರು ಧಾರಾವಾಹಿಗಳಲ್ಲಿ ಅಭಿನಯ ಮಾಡಿದ್ದಾರೆ. ಒಂದು ಕಾಲದಲ್ಲಿ ಕನ್ನಡ ಸಿನಿ ರಸಿಕರ ಕಣ್ಣಲ್ಲಿ ನೀರು ತರಿಸುತ್ತ ಇದ್ದ ನಟಿ ಶ್ವೇತಾ ಅವರು ಸದ್ಯ ಇದೀಗ ಗುರುತೇ ಸಿಗದ ಹಾಗೆ ಬದಲಾಗಿ ಬಿಟ್ಟಿದ್ದಾರೆ. ಹೌದು ನಟಿ ಶ್ವೇತಾ ಅವರು ಗುರುತೇ ಸಿಗದಷ್ಟು ಬದಲಾಗಿದ್ದಾರೆ ಇನ್ನೂ ಕೂಡ ತಮಿಳು ಕಿರುತೆರೆ ಅಲ್ಲೇ ಅಭಿನಯ ಮಾಡುತ್ತಾ ಇದ್ದಾರೆ ಹಾಗೆ ಚೈತ್ರದ ಪ್ರೇಮಾಂಜಲಿ ಸಿನಿಮಾವನ್ನು ನೀವು ಕೂಡ ನೋಡಿದ್ದಲ್ಲಿ ನಟಿ ಶ್ವೇತಾ ಅವರ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಇನ್ನೂ ನಟಿ ಶ್ವೇತಾ ಅವರ ಹಾಗೆ ಹಲವು ನಟಿಯರು ಕನ್ನಡ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ ಆದರೆ ಇನ್ನೂ ಕೆಲವರು ಕಿರುತೆರೆಯಲ್ಲಿ ಭಾರಿ ಯಶಸ್ಸು ಪಡೆದುಕೊಂಡಿದ್ದಾರೆ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment