ತಮ್ಮ ಮನೆಯ ಕಿಟಕಿ ಹಾಕದೆ ಊರಿಗೆ ಹೋಗಿದ್ದ ಇವನು ಕೆಲವು ತಿಂಗಳ ನಂತರ ಬಂದವನಿಗೆ ಕಾದಿತ್ತು ಶಾಕ್.ಅಷ್ಟಕ್ಕೂ ಏನಾಗಿತ್ತು ಗೊತ್ತ ..

824

ಪ್ರಿಯ ಸ್ನೇಹಿತರೆ ಈ ಕ..ರೋನಾ ಬಂದ ನಂತರ ಜನರು ಎಷ್ಟೆಲ್ಲಾ ಪಾಠವನ್ನ ಕಲಿಯಬೇಕಾಯಿತು ಅಲ್ವಾ! ಹೌದು ಲಾಕ್ ಡೌನ್ ಎಂಬ ಪದದ ಅರ್ಥವೇ ತಿಳಿಯದೆ ಇರುವ ಜನರಿಗೂ ಸಹ ಈ ಲಾಕ್ ಡೌನ್ ಪದದ ಅರ್ಥ ಚೆನ್ನಾಗಿ ತಿಳಿದಿತ್ತು ಅಷ್ಟೇ ಅಲ್ಲ ಈ ಸಮಯದಲ್ಲಿ ಹಣದ ಬೆಲೆ ಸಂಬಂಧದ ಬೆಲೆ ಹಾಗೂ ಸಮಯದ ಬೆಲೆ ಇವೆಲ್ಲವನ್ನು ಸಹ ಜನರು ತಿಳಿದುಕೊಂಡಿದ್ದರೂ ಅಷ್ಟೇ ಅಲ್ಲ ಈ ಸಮಯದಲ್ಲಿ ಎಷ್ಟೋ ಕುಟುಂಬಗಳು ಬಹಳ ನೋವನ್ನು ಎದುರಿಸಬೇಕಾಗಿತ್ತು ಯಾಕೆಂದರೆ ಈಗ ಇದ್ದವರು ಮರುಕ್ಷಣ ಇರುವುದಿಲ್ಲ ಇಂತಹ ಸಂದರ್ಭದಲ್ಲಿ ಬದುಕು ಉಳಿದಿರುವವರ ಪುಣ್ಯವಂತರು ಎಂದು ಹೇಳಬಹುದು ಅದೊಂದು ಪರಿಸ್ಥಿತಿಯನ್ನು ಅವತ್ತಿನ ದಿವಸ ಗಳನ್ನ ನೆನಪಿಸಿಕೊಂಡರೆ ಸಾಕು ಮತ್ತೊಮ್ಮೆ ಹೃದಯ ಝಲ್ಲೆನ್ನುತ್ತದೆ. ಈ ಸಮಯದಲ್ಲಿ ದೂರದ ಊರಿನಲ್ಲಿ ಉಳಿದುಕೊಂಡಿರುವವರು ಮತ್ತೆ ತಮ್ಮ ಊರಿಗೆ ಮರಳಿ ಬರಬೇಕಾಗಿತ್ತು. ಅಷ್ಟೆಲ್ಲಾ ಹೊರರಾಜ್ಯ ಹೊರದೇಶಗಳಲ್ಲಿ ಇರುವವರು ಸಹ ಈ ಸಮಯದಲ್ಲಿ ಮತ್ತೆ ತಮ್ಮ ಊರು ಸೇರಿದರು ಇದೇ ರೀತಿ ಇಲ್ಲೊಬ್ಬ ಹುಡುಗ ಸಹ ಲಂಡನ್ ನಲ್ಲಿ ವಿದ್ಯಾಭ್ಯಾಸ ಕ್ಕಾಗಿ ಅಲ್ಲಿಯೇ ಇದ್ದು ಓದಿಕೊಳ್ಳುತ್ತಾ ಇದ್ದ ಅಪ್ಪ ಅಮ್ಮನ ಒತ್ತಾಯದ ಮೇರೆಗೆ ತನ್ನ ಊರಿಗೆ ಬಂದು ಉಳಿದುಕೊಳ್ಳುತ್ತಾನೆ ಸುಮಾರು 5ತಿಂಗಳುಗಳ ನಂತರ ಆತನಿಗೆ ತಾನು ಉಳಿದುಕೊಂಡಿದ್ದ ಫ್ಲ್ಯಾಟ್ ನಿಂದ ಶಾಕ್ ಒಂದು ತಿಳಿದು ಬರುತ್ತದೆ.

ಒಲುವಜಾರ್ಜ್ ಜಾನ್ಸನ್ ಎಂಬ 20 ವರ್ಷದ ಹುಡುಗ, ಒಂದು ಪ್ಲಾಟ್ ನಲ್ಲಿ ಉಳಿದುಕೊಂಡಿದ್ದ. ಕರೋ’ನಾ ಇದ್ದದ್ದರಿಂದ ಕಾಲೇಜ್ ಗಳು ಸಹ ಮುಚ್ಚಲಾಗಿತ್ತು ಸುಮಾರು ವರ್ಷಾನುಗಟ್ಟಲೆ ಕಾಲೇಜುಗಳು ತೆರೆದಿರಲಿಲ್ಲ ಇದೇ ಸಮಯದಲ್ಲಿ ಆ ದೂರದ ಊರಿನಲ್ಲಿ ಓದುತ್ತಿದ್ದ ಮಕ್ಕಳನ್ನು ಪೋಷಕರು ತಮ್ಮ ಮನೆಗೆ ಕರೆಸಿಕೊಂಡಿದ್ದರು. ಹೌದು ಪೋಷಕರ ಒತ್ತಾಯದ ಮೇರೆಗೆ ಜಾರ್ಜ್ ಜಾನ್ಸನ್ ಸಹ ಆತುರದಿಂದ ಊರಿಗೆ ಧಾವಿಸಿದ್ದ. ಆತುರದಲ್ಲಿ ಉಳಿದುಕೊಂಡಿದ್ದ ಪ್ಲಾಟ್ ನಲ್ಲಿ ಕೆಲವೊಂದು ವಸ್ತುಗಳನ್ನು ಮರೆತು ಅಲ್ಲಿಯೆ ಬಿಟ್ಟು ಹೋಗಿದ್ದ‌ ಜಾರ್ಜ್. ಇನ್ನೂ ಈ ಹುಡುಗ ತನ್ನ ಮನೆಗೆ ತೆರಳುವ ಸಮಯದಲ್ಲಿ ಇವನು ಮಾಡಿದ ಎಡವಟ್ಟು ಏನು ಗೊತ್ತಾ ಹೌದು ತನ್ನ ಫ್ಲ್ಯಾಟ್ ನಿಂದ ಹೊರಡುವ ಮುನ್ನ ಈತ ತನ್ನ ಫ್ಲ್ಯಾಟ್ ನ ಕಿಟಕಿ ಒಂದನ್ನು ಓಪನ್ ಮಾಡಿ ಹಾಗೆ ಬಿಟ್ಬು ಬಂದಿದ್ದ.

ಬಳಿಕ ಸುಮಾರು ತಿಂಗಳ ನಂತರ ಕಟ್ಟಡವನ್ನು ನೋಡಿಕೊಳ್ಳುತಿದ್ದ ವ್ಯಕ್ತಿ ಈತನಿಗೆ ಪ್ಲಾಟ್ ಕೆಲವೊಂದು ಪೋಟೊಗಳನ್ನು, ಇ ಮೇಲ್ ಮೂಲಕ ಕಳುಹಿಸಿದ್ದರು. ಜಾರ್ಜ್ ತನ್ನ ಇ ಮೇಲ್ ಚೆಕ್ ಮಾಡಿದಾಗ ಆತ ಮೇಲ್ ನಲ್ಲಿ ಬಂದಿದ್ದ ಫೋಟೋಗಳನ್ನ ನೋಡಿ ಶಾಕ್ ಆಗುತ್ತಾನೆ ಹೌದು ಅಷ್ಟಕ್ಕೂ ಅಲ್ಲಿ ಏನಾಗಿತ್ತು ಗೊತ್ತಾ ಈತ ಕಿಟಕಿಯೊಂದನ್ನು ತೆರೆದಿಟ್ಟು ಹೋದ ಕಾರಣ ಈ ಕಿಟಕಿಮೂಲಕ ಪಾರಿವಾಳಗಳು ಬಂದು ಆ ಮನೆಯಲ್ಲಿ ಮನೆಮಾಡಿಕೊಂಡಿರುತ್ತವೆ ಹೌದು ಪಾರಿವಾಳದ ಕುಟುಂಬ ಫ್ಲ್ಯಾಟ್ ಪೂರ್ತಿ ಆವರಿಸಿಕೊಂಡಿದ್ದವು ಮತ್ತು ಪ್ಲಾಟ್ ತುಂಬಾ ಹಿಕ್ಕೆಗಳ ದೊಡ್ಡ ಪದರವೇ ಇತ್ತು, ಫ್ಲ್ಯಾಟ್ ಸಂಪೂರ್ಣವಾಗಿ ಗಲೀಜು ಆಗಿತ್ತು.

ಇನ್ನೂ ಪಾರಿವಾಳಗಳು ಆ ಫ್ಲ್ಯಾಟ್ ನ ಅಡುಗೆ ಮನೆಯ ಸಿಂಕ್ ನಲ್ಲಿ ಮೊಟ್ಟೆಗಳನ್ನು ಇಟ್ಟು ಕೊಂಡು ವಾಸಮಾಡುತ್ತಿದ್ದವು ಹಾಗೆ ಎಲ್ಲಾ ವಸ್ತುಗಳ ಮೇಲೆ ಕಸ ಕಡ್ಡಿ ಪುಕ್ಕವನ್ನು ತುಂಬಿಕೊಂಡಿದ್ದವು. ಫ್ಲ್ಯಾಟ್ ನಿಂದ ವಿಚಿತ್ರವಾಗಿ ಶಬ್ದ ಬರುವುದನ್ನು ಕಂಡು ಆ ಮನೆಯ ನೆರೆಹೊರೆಯವರು ಕಿಚನ್ ನ ಸಿಂಕ್ ನಲ್ಲಿ ಕಂಪ್ಲೇಂಟ್ ಮಾಡಿದಾಗ ಈ ಫ್ಲ್ಯಾಟ್ ಪರಿಶೀಲನೆ ನಡೆಸಲಾಯಿತು ನಂತರ ಅಲ್ಲಿ ಕಂಡ ದೃಶ್ಯ ಕಂಡು ಅಲ್ಲಿರುವವರೆಲ್ಲಾರು ಶಾಖ್. ಇನ್ನೂ ತನ್ನ ಊರಿಗೆ ಬಂದು ಉಳಿದುಕೊಂಡಿದ್ದ ಜಾರ್ಜ್ ಫ್ಲ್ಯಾಟ್ ಕ್ಲೀನಾದ ಬಳಿಕ ತಾನು ಮತ್ತೆ ಫ್ಲ್ಯಾಟ್ ಗೆ ಹೋಗುತ್ತೇನೆ ಎಂದು ಹೇಳಿಕೊಂಡಿದ್ದಾನೆ. ನಾವು ಮಾಡಿದ ತಪ್ಪಿಗೆ ಬೇರೆಯವರನ್ನ ಯಾವತ್ತಿಗೂ ದೂರಬಾರದು. ಅದರಂತೆ ಈ ಪ್ರಾಣಿ ಪಕ್ಷಿಗಳು ಸಹ ಅವುಗಳಿಗೆ ಬುದ್ಧಿ ಇರುವುದಿಲ್ಲ ಅದರಂತೆ ಅವುಗಳಿಗೆ ಆಶ್ರಯ ಸಿಗುತ್ತದೆ ಅವುಗಳು ಅಲ್ಲೇ ವಾಸವಾಗಿಬಿಡುತ್ತದೆ. ನೋಡಿದಿರಲ್ಲ ಸ್ನೇಹಿತರ ಈ ಲಾಕ್ ಡೌನ್ ಸಮಯದಲ್ಲಿ ಏನೆಲ್ಲಾ ಪಜೀತಿಗಳು ಆಗಿರುತ್ತದೆ ಅಂತಾ.