ಆಸ್ತಿ ಹಾಗೂ ಜಮೀನಿನ ರಿಜಿಸ್ಟರ್ ನಲ್ಲಿ ಬರುವಂತಹ J Form ಅಂದರೆ ಏನು … ಇದು ಹೇಗೆಲ್ಲ ವರ್ಕ್ ಆಗುತ್ತೆ ನೋಡಿ ..

278

ಹೌದು ಖಾಲಿ ಜಾಗ ಮನೆ ಬಂಗಲೆ ಅಥವಾ ಫ್ಲ್ಯಾಟ್‌ಗಳು ಇವೆಲ್ಲವನ್ನು ಆಸ್ತಿ ಎಂದು ಪರಿಗಣಿಸಲಾಗುತ್ತದೆ ಹೌದು ಇಂತಹ ಜಾಗಗಳಿಗೆ ಸಹ ನಾವು ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ ನಿಮಗೆ ಇಷ್ಟ ಇದೆಯೋ ಇಲ್ಲವೋ ಇಂತಹ ಜಾಗ ಗಳಿಗೆ ಕಂದಾಯ ಇಲಾಖೆಯ ಅಡಿಯಲ್ಲಿ ಬರುವ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸುವುದು ಅತ್ಯಗತ್ಯವಾಗಿ ಇರುತ್ತದೆ ಈ ಮಾಹಿತಿ ಹೆಚ್ಚಿನ ಜನರಿಗೆ ತಿಳಿದಿರುತ್ತದೆ ಹಾಗೂ ಯಾವ ಜಾಗಗಳಿಗೆ ಕಂದಾಯ ಇಲಾಖೆ ಅಡಿ ನೋಂದಣಿ ಮಾಡಿಸಿರುವುದಿಲ್ಲ ಸರಕಾರಿ ದಾಖಲೆಗಳ ಪ್ರಕಾರ ಅಂತಹ ಜಾಗಗಳಲ್ಲಿ ಗೆ ಯಾರೂ ಸಹ ವಾರಸುದಾರರಾಗಿ ರುವುದಿಲ್ಲಾ.

ಹೌದು ಇನ್ನು ಈ ನೋಂದಣಿ ಪ್ರಕ್ರಿಯೆ ಎಂಬುದು ಅಷ್ಟು ಸುಲಭದ ಮಾತಲ್ಲ ಕೆಲವೊಂದು ನಿಯಮಗಳನ್ನು ಪಾಲಿಸಲೇಬೇಕಾಗುತ್ತದೆ ಮತ್ತು ನೋಂದಣಿ ಮಾಡಿಸಬೇಕೆಂದರೆ ಇದಕ್ಕಾಗಿ ಅರ್ಹ ವಕೀಲರ ಸಹಾಯ ಪಡೆಯಬೇಕಾಗಿರುತ್ತದೆ ಮತ್ತು ಅಂತಹ ಅರ್ಹ ವಕೀಲರನ್ನು ಏನೆಂದು ಕರೆಯುತ್ತಾರೆ ಅಂದರೆ ಅವರನ್ನು ರಿಜಿಸ್ಟ್ರೇಶನ್ ಅಟಾರ್ನಿ ಎಂದು ಕರೆಯಲಾಗುತ್ತದೆ. ಆದ್ದರಿಂದ ನಾವು ಇಲ್ಲಿ ಈ ವಿಚಾರ ಕುರಿತು ನಿಮಗೆ ಹೆಚ್ಚಿನ ವಿಚಾರಗಳನ್ನು ತಿಳಿಸಿಕೊಡುತ್ತದೆ ಸಂಪುಟ ಲೇಖನವನ್ನ ತಿಳಿಯಿರಿ.

ನಮ್ನ ಭಾರತ ದೇಶದಲ್ಲಿ ಈ ಆಸ್ತಿ ನೋಂದಣಿ ಪ್ರಕ್ರಿಯೆಯೆಂಬುದು ಸ್ವಲ್ಪ ಸಂಕೀರ್ಣ ಸಂಗತಿ ಆಗಿದೆ ಇದರ ಜೊತೆಗೆ ಒಂದಷ್ಟು ಪೇಪರ್ ವರ್ಕ್ ಸಹ ಮಾಡಬೇಕಾಗಿರುತ್ತದೆ. ಜಮೀನು ವರ್ಗಾವಣೆಯ ರಿಜಿಸ್ಟರ್ ಮಾಡಿದ ಮಾತ್ರಕ್ಕೆ ಆಸ್ತಿ ಹಕ್ಕು ಬದಲಾವಣೆ ಪ್ರಕ್ರಿಯೆ ಮುಗಿದಿದೆ ತಿಳಿದುಕೊಳ್ಳಬೇಡಿ. ಯಾವುದೇ ಒಂದು ಜಮೀನು ಅಥವಾ ಆಸ್ತಿಯ ಹಕ್ಕು ಬದಲಾವಣೆ ಮಾಡುವ ಸಂದರ್ಭದಲ್ಲಿ ಕೊನೆಯ ಹಂತದಲ್ಲಿ ನಡೆಯುವ ಪ್ರಕ್ರಿಯೆ ಅನ್ನು ಜೆ ಫಾರಂ ಎಂದು ಕರೆಯುತ್ತಾರೆ. ಇದರ ನಮೂನೆ 12 ಮತ್ತು ನಮೂನೆ 21ರ ಮೂಲಕ ಮಾಡಲಾಗುತ್ತದೆ.

ನಿಮ್ಮ ಜಾಗ ಅಥವಾ ಆಸ್ತಿಯ ಹಕ್ಕು ಬದಲಾವಣೆ ಮತ್ತು ವರ್ಗಾವಣೆ ಸಮಯದಲ್ಲಿ ವಿಲೇಜ್ ಅಕೌಂಟೆಂಟ್ ಅವರ ಮೂಲಕ ಆಸಕ್ತರಿಗೆ 30ದಿನಗಳ ಒಳಗೆ ನೋಟಿಸ್ ಹೊರಡಿಸಲಾಗುತ್ತದೆ. ಹಾಗೂ ಗೊತ್ತುಪಡಿಸಿದಂತಹ ದಿವಸಗಳಲ್ಲಿ ಯಾರಿಂದ ಆದರೂ ಆಕ್ಷೇಪಣೆ ಬಂದರೆ, ವಿಲೇಜ್ ಅಕೌಂಟೆಂಟ್ ಅವರು ಯಾರ ಆಕ್ಷೇಪಣೆಯೂ ಬಂದಿಲ್ಲವೆಂದು 30 ದಿನಗಳ ನಂತರ ಭೂಮಿ ಖರೀದಿದಾರರ ಮತ್ತು ಆಸ್ತಿ ಮಾಡಿದವರಿಂದ ಜೆ ಫಾರಂ ಮೇಲೆ ರುಜು ಮಾಡಿಸಿಕೊಂಡು ಹೋಗುತ್ತಾರೆ ಬಳಿಕ 15ದಿನಗಳ ನಂತರ ಹಕ್ಕು ಬದಲಾವಣೆ ಅಥವಾ ವರ್ಗಾವಣೆ ಮಾಡಲು ಆದೇಶಿಸಬಹುದು. ಈ ಎಲ್ಲ ಕೆಲಸಗಳು ಆದ ಬಳಿಕ ಅಂದರೆ 45ದಿನಗಳ ಬಳಿಕ ಜಮೀನಿನ ಪಹಣಿ ಪತ್ರಿಕೆ ಯು ಖರೀದಿದಾರನ ಹೆಸರಿನಲ್ಲಿ ಬರುತ್ತದೆ ಅಂದರೆ ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಸ್ಥಳೀಯ ಸಾರ್ವಜನಿಕವಾಗಿ ಪ್ರಚಾರ ಮಾಡಲಾಗುತ್ತದೆ. ಇದರ ಅವಧಿ 15 ದಿನಗಳಾಗಿರುತ್ತದೆ.

ಇನ್ನು ಈ ಮೊದಲೇ ತಿಳಿಸಿದಂತೆ ನಮೂನೆ 21ಅಂದರೆ ಅದು ಜಮೀನಿನ ಸಂಭಂದಪಟ್ಟ ಆಸಕ್ತರಿಗೆ ಮೂವತ್ತು ದಿನಗಳ ಬಳಿಕ ನೋಟಿಸ್ ಹೊರಡಿಸಲಾಗುತ್ತದೆ ಜಮೀನು ರಿಜಿಸ್ಟರ್ ಆಗಿದ್ದು ಜಮೀನಿಗೆ ಅಥವಾ ನಿಮ್ಮ ಜಾಗಕ್ಕೆ ಸಂಬಂಧಪಟ್ಟ ಆಸಕ್ತರು ಯಾರಾದರೂ ಮೂವತ್ತು ದಿನಗಳ ಒಳಗೆ ಆಕ್ಷೇಪಣೆಯನ್ನು ನೀಡಿದರೆ ರಿಜಿಸ್ಟರ್ ಆಗಿರುವ ಜಮೀನಿನ ವಹಿವಾಟು ವಿವಾದ ಆಸ್ಪದ ಪ್ರಕರಣಗಳ ಪಟ್ಟಿಗೆ ಇದನ್ನು ಸೇರಿಸಲಾಗುತ್ತದೆ. ಸ್ವೀಕರಿಸಿದ ಎಲ್ಲಾ ತಕರಾರುಗಳನ್ನು ಮಾನ್ಯ ತಹಶೀಲ್ದಾರರ ನೇತೃತ್ವದಲ್ಲಿ ತಹಶೀಲ್ದಾರರ ಕೋರ್ಟ್ನಲ್ಲಿ ಮುಂದಿನ 30 ದಿನಗಳ ಆದೇಶದ ಮೂಲಕ ವಿಲೇವಾರಿ ಅನ್ನು ಮಾಡಲಾಗುತ್ತದೆ ಹಾಗೂ ಆ ವೇಳೆ ತಹಶೀಲ್ದಾರರ ಕೋರ್ಟಿನಲ್ಲಿ ಸಮಸ್ಯೆ ಬಗೆಹರಿದಿಲ್ಲ ಎಂದರೆ ಅದನ್ನು ಸ್ಥಳೀಯ ನ್ಯಾಯಾಲಯಕ್ಕೆ ವರ್ಗಾಯಿಸಬಹುದಾಗಿದೆ. ಈ ರೀತಿ ಅಲ್ಲಿ ಒಂದು ಜಮೀನಿನ ಅಥವಾ ನಿಮ್ಮ ಜಾಗದ ಇನ್ನೂ ನಿಮಗೆ ಸೇರಿರುವ ಯಾವುದೇ ತೋಟ ಗದ್ದೆ ಮನೆ ಆಗಲಿ ಅದರ ವರ್ಗಾವಣೆಯ ಅಥವ ನೋಂದಣಿಯು ಈ ರೀತಿಯ ಪ್ರಕ್ರಿಯೆಗಳಲ್ಲಿ ವರ್ಗಾವಣೆಯಾಗುತ್ತದೆ ಈ ಮಾಹಿತಿ ನಿಮಗೆ ಉಪಯುಕ್ತ ಆಗಿದೆ ಎಂದು ನಾವು ಭಾವಿಸುತ್ತೇವೆ ಮಾಹಿತಿ ಕುರಿತು ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ ಎಲ್ಲಾರಿಗೂ ಧನ್ಯವಾದ.