ನಮಸ್ತೆ ಪ್ರಿಯ ಸ್ನೇಹಿತರೆ ತಂತ್ರಜ್ಞಾನ ಅದೆಷ್ಟು ಮುಂದುವರಿಯುತ್ತಾ ಇದೆ ಹೌದು ದಿನದಿನಕ್ಕೂ ಅದೆಂತಹ ಬದಲಾವಣೆ ಅನ್ನು ನಾವು ಇಂದಿನ ಸಮಾಜದಲ್ಲಿ ಕಾಣುತ್ತಾ ಇದ್ದೇವೆ ಅದರಂತೆಯೇ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೂಡ ನಾವು ಹೊಸತನವನ್ನ ನಿರೀಕ್ಷೆ ಮಾಡ್ತೇವೆ ಅದೇ ರೀತಿ ಪ್ರತಿ ಕ್ಷಣ ಹೊಸ ಹೊಸ ರೀತಿಯ ವಿಧಾನಗಳ ಅನ್ವೇಷಣೆಯಿಂದ ಹೊಸ ಹೊಸ ತಂತ್ರಜ್ಞಾನಗಳ ಪರಿಚಯದಿಂದ ಬಳಕೆದಾರರಿಗೆ ಖುಷಿ ನೀಡುತ್ತಾ ಬಂದಿವೆ ಸಾಕಷ್ಟು ತಂತ್ರಜ್ಞಾನಗಳು ಅದೇ ರೀತಿಯಾಗಿ ನಾವು ಈ ದಿನದ ಲೇಖನದಲ್ಲಿ ಹೊಸ ಕಟ್ಟಡ ನಿರ್ಮಾಣ ಕುರಿತು ಒಂದಿಷ್ಟು ಮಾಹಿತಿಯನ್ನು ನೀಡಲಿದ್ದೇವೆ ಇದರ ಬಗ್ಗೆ ನೀವು ತಿಳಿದರೆ ನೀವು ಖಂಡಿತವಾಗಿಯೂ ಅಚ್ಚರಿ ಪಡ್ತೀರಾ. ಅದೇ ಇಪಿಎಸ್ ತಂತ್ರಜ್ಞಾನ. ಈ ಇಪಿಎಸ್ ತಂತ್ರಜ್ಞಾನ ಅಂದರೆ ಎಷ್ಟೋ ಜನರಿಗೆ ತಿಳಿದಿಲ್ಲ ಅದೇನೆಂದರೆ ಎಕ್ಸ್ಪಾಂಡೆಡ್ ಫಾಲೀಸ್ಟರ್ ಶೀಟ್ಸ್ ಇವುಗಳನ್ನು ಬಳಸಿ ಮನೆಯನ್ನು ಕಟ್ಟುವುದಕ್ಕೆ ಇಪಿಎಸ್ ತಂತ್ರಜ್ಞಾನ ಎಂದು ಹೇಳುತ್ತಾರೆ.
ಈ ತಂತ್ರಜ್ಞಾನ ಎಲ್ಲಿಂದ ಪ್ರಾರಂಭವಾಯಿತು ನಮ್ಮ ದೇಶದಲ್ಲಿ ಎಲ್ಲೆಲ್ಲಿ ಇದರ ಬಳಕೆಯನ್ನು ನಾವು ಕಾಣಬಹುದು ಮತ್ತು ಈ ತಂತ್ರಜ್ಞಾನವನ್ನು ಬಳಸಿಕೊಂಡು ಕಟ್ಟಡವನ್ನು ಕಟ್ಟುವುದರಿಂದ ನಮಗೆ ಯಾವ ರೀತಿಯ ಲಾಭವಿದೆ ಎಂದು ತಿಳಿಯೋಣ ಇಂದಿನ ಮಾಹಿತಿಯಲ್ಲಿ. ಇಪಿಎಸ್ ತಂತ್ರಜ್ಞಾನ ಇದು ಮೂಲತಹ ಇಟಲಿ ದೇಶದ ತಂತ್ರಜ್ಞಾನ ಆಗಿದೆ. ಇದೀಗ ಈ ತಂತ್ರಜ್ಞಾನವನ್ನು ಕರ್ನಾಟಕದಲ್ಲಿಯೂ ಕೂಡ ಪ್ರಾರಂಭ ಮಾಡಲಾಗಿದ್ದು ಪರಿಸರ ಸ್ನೇಹಿ ತಂತ್ರಜ್ಞಾನ ಎಂದು ಇದಕ್ಕೆ ಹೇಳಬಹುದು ಮತ್ತು ಈ ತಂತ್ರಜ್ಞಾನದ ಮೂಲಕ ಮನೆಗಳನ್ನು ನಿರ್ಮಾಣ ಮಾಡಿದಾಗ ನಿಮಗೆ ಶೇಕಡಾ ಇಪ್ಪತ್ತರಿಂದ ಐವತ್ತರವರೆಗೆ ಉಳಿತಾಯ ಆಗುತ್ತದೆ ಮತ್ತು ಈ ತಂತ್ರಜ್ಞಾನವನ್ನು ಬಳಸಿ ಮನೆಯನ್ನು ಕಟ್ಟುವುದರಿಂದ ಬೇಗ ಮನೆ ಕಟ್ಟಿ ಮುಗಿಸಬಹುದು.
ಒಂದು ಮನೆಯನ್ನು ನಿರ್ಮಾಣ ಮಾಡುವುದಕ್ಕೆ ಸುಮಾರು 1ವರ್ಷ ತೆಗೆದುಕೊಂಡರೆ ಈ ತಂತ್ರಜ್ಞಾನದ ಮೂಲಕ ಕೇವಲ 6ತಿಂಗಳಿನಲ್ಲಿಯೇ ಈ ಮನೆ ನಿರ್ಮಾಣ ಮಾಡಬಹುದು. ಆರು ತಿಂಗಳಲ್ಲಿ ಕಟ್ಟುವಂತಹ ಮನೆಗಳನ್ನು ಮೂರು ತಿಂಗಳಲ್ಲಿ ಕಟ್ಟಿ ಮುಗಿಸಬಹುದು, ಅಷ್ಟು ವೇಗವಾಗಿ ಈ ವಿಧಾನದ ಮೂಲಕ ಮನೆಗಳನ್ನು ನಿರ್ಮಾಣ ಮಾಡಬಹುದು. ಇಪಿಎಸ್ ತಂತ್ರಜ್ಞಾನವನ್ನು ಬಳಸುವುದರಿಂದ ಯಾಕೆ ಕೆಲಸ ಬೇಗ ಬೇಗ ಮುಗಿಯುತ್ತದೆ ಅಂತ ನೀವು ಅಂದುಕೊಳ್ಳಬಹುದು ಇಲ್ಲಿದೆ ನೋಡಿ ಮಾಹಿತಿ. ಯಾವುದೇ ರೀತಿಯ ಕಲ್ಲುಗಳಾಗಲಿ ಇಟ್ಟಿಗೆಯಾಗಲಿ ಬಳಸುವುದಿಲ್ಲ. ಇವು ಪ್ಯಾನಲ್ ಗಳಾಗಿರುತ್ತವೆ ಜೊತೆಗೆ ತುಂಬಾ ಹಗುರವಾಗಿರುತ್ತದೆ ಒಂದು ಸ್ಕ್ವೇರ್ ಮೀಟರ್ ನಿಮಗೆ ಕೇವಲ ಹದಿನೈದು ಕೆಜಿ ತೂಕ ಇರುತ್ತದೆ ಅಂದರೆ ಒಂದು ಕಲ್ಲಿಗಿಂತ ಒಂದು ಸ್ಕ್ವಾರ್ ಮೀಟರ್ ಪ್ಯಾನಲ್ ಕಡಿಮೆ ತೂಗುತ್ತದೆ. ಇಷ್ಟು ಹಗುರವಾಗಿರುವ ಪ್ಯಾನಲ್ ಗಳು ಗಟ್ಟಿಯಾಗಿ ಬಾಳಿಕೆ ಬರುತ್ತವೆ ಎಂದು ಕೇಳುವುದಾದರೆ, ಈಗಾಗಲೇ ಬಹು ಅಂತಸ್ತಿನ ಕಟ್ಟಡಗಳನ್ನು ಇದನ್ನು ಬಳಸಿ ಕಟ್ಟಿದ್ದಾರೆ. ಹಾಗಾದರೆ ಈ ತಂತ್ರಜ್ಞಾನದಿಂದ ಹೇಗೆ ಲಾಭ ಎಂದು ನೀವು ಕೇಳುವುದಾದರೆ.
ಈ ತಂತ್ರಜ್ಞಾನದಿಂದ ಮನೆಯಾಕೆ ನಿರ್ಮಾಣ ಮಾಡಬೇಕು ಅಂದರೆ ಇದು ವೆದರ್ ಪ್ರೂಫ್ ಆಗಿರುತ್ತದೆ ಇನ್ನು ಕರಾವಳಿ ಭಾಗದಲ್ಲಿ ಬಹಳ ಹಿಟ್ ಇರುವುದರಿಂದ ಅಲ್ಲಿ ಜಿಪಿಎಸ್ ತಂತ್ರಜ್ಞಾನ ಬಳಸಿ ಮನೆ ಕಟ್ಟಿದಾಗ ಹಿಟ್ ಅನ್ನೂ ತನ್ನ ಒಳಗೆ ಬಿಟ್ಟುಕೊಳ್ಳುವುದಿಲ್ಲ. ತುಂಬಾ ಮಳೆ ಬರುವಂತಹ ಪ್ರದೇಶದಲ್ಲಿ ಚಳಿ ಇರುವಂತಹ ಜಗದಲ್ಲಿ ಇದನ್ನು ಬಳಸಿದರೆ ಚಳಿಯನ್ನು ಒಳಗೆ ತೆಗೆದುಕೊಳ್ಳುವುದಿಲ್ಲ ಅಲ್ಲದೆ ಇದು ಎರಡು ಗಂಟೆಗಳ ಫೈಯರ್ ಫ್ರೂಪ್ ಆಗಿದೆ. ಅಷ್ಟೇ ಅಲ್ಲದೆ ಇದು ಬುಲೆಟ್ ಪ್ರೂಫ್ ಕೂಡ ಆಗಿದೆ. ಉಪ್ಪುನೀರಿನ ವಾತಾವರಣದಲ್ಲು ಈ ಟೆಕ್ನಾಲಜಿ ಮೂಲಕ ಮನೆ ಕಟ್ಟಿಸಬಹುದು. ಹಾಗಾದರೆ ಈ ರೀತಿಯ ಮನೆ ನಿರ್ಮಾಣವನ್ನು ಯಾರು ಮಾಡಿಕೊಡುತ್ತಾರೆ?
ಭಾರತದಲ್ಲಿ ಈಗ ಎಲ್ಲ ಕಡೆ ಇದು ಜನಪ್ರಿಯತೆ ಗಳಿಸುತ್ತಿದೆ ಎಲ್ಲ ಕಡೆಗಳಲ್ಲಿಯೂ ಕಂಡುಬರುತ್ತಿದೆ. ನಮ್ಮ ಕರ್ನಾಟಕದಲ್ಲಿಯೂ ಕೂಡ ಅನೇಕ ಕಡೆಗಳಲ್ಲಿ ಇದು ಲಭ್ಯವಿದೆ. ಆದರೆ ಕರ್ನಾಟಕದಲ್ಲಿ ಉಡುಪಿಯಲ್ಲಿರುವ ಸೃಷ್ಟಿ ವೆಂಚರ್ಸ್ ಅವರು ಈ ತಂತ್ರಜ್ಞಾನವನ್ನು ಪರಿಚಯಿಸುತ್ತಿದ್ದಾರೆ ಇವರು ನೇರವಾಗಿ ಇಟಲಿಯಿಂದ ಇದನ್ನ ಖರೀದಿಸುತ್ತಾರೆ. ಅವರು ತಮ್ಮ ಇಡೀ ಕಂಪನಿಯನ್ನು ಇಪಿಎಸ್ ತಂತ್ರಜ್ಞಾನದ ಮೂಲಕ ನಿರ್ಮಿಸಿದ್ದಾರೆ. ಈ ಪ್ಯಾನೆಲ್ ಗಳನ್ನು ಯಾವ ರೀತಿಯಾಗಿ ತಯಾರಿಸಲಾಗುತ್ತದೆ ಎಂಬುದನ್ನು ನೋಡುವುದಾದರೆ ಇಲ್ಲಿ ಎಕ್ಸ್ಪಾಂಡೆಬಲ್ ಪೋಲಿಮಸ್ ಹಾಗೂ ಹೊರಗಡೆ ರಿಎನ್ ಫೋರ್ ಸಿಬಲ್ ಸ್ಟೀಲ್ ಬಳಕೆ ಮಾಡಿರುತ್ತಾರೆ. ಯಾಕೆ ಈ ಸ್ಟೀಲಿನ ಬಳಕೆ ಮಾಡುತ್ತಾರೆ.
ಎಂದರೆ ಇದರಿಂದ ಯಾವುದೇ ಕೆರೋಸಿನ್ ಬರುವುದಿಲ್ಲ ರಸ್ಟ್ ಬರುವುದಿಲ್ಲಾ ಹಾಗೂ ಇದರ ಮೇಲೆ ಎರಡು ಬದಿಗಳಲ್ಲಿ ಕಾಂಕ್ರಿಟ್ ಕೋಟಿಂಗನ್ನ ಮಾಡಲಾಗಿರುತ್ತದೆ. ಅದರ ಮೇಲೆ ಗಾರೆಯನ್ನು ಮಾಡಿ ಪುಟ್ಟಿಯನ್ನು ಮಾಡಿ ಅದಕ್ಕೆ ಬಣ್ಣವನ್ನು ಹಚ್ಚಲಾಗುತ್ತದೆ. ಇದರ ಜೊತೆಗೆ ಸ್ಯಾಂಡ್ವಿಚ್ ನ ತರಹ ಮಧ್ಯದಲ್ಲಿ ಕಾಂಕ್ರೀಟ್ ಲೆಯರ್ ಅನ್ನು ತುಂಬಲಾಗುತ್ತದೆ. ಫೌಂಡೇಶನ್ ಹಾಕುವುದಕ್ಕು ಕೂಡ ಇಪಿಎಸ್ ತಂತ್ರಜ್ಞಾನವನ್ನು ಬಳಸಬಹುದು. ಫೌಂಡೇಶನನ್ನು ಹಾಕುವುದಕ್ಕೆ ಇವರು ಸ್ಯಾಂಡ್ವಿಚ್ ಪ್ಯಾನಲ್ ನನ್ನ ಬಳಕೆ ಮಾಡುತ್ತಾರೆ. ಇಪಿಎಸ್ ತಂತ್ರಜ್ಞಾನದಲ್ಲಿ ರೆಡಿಮೇಡ್ ಸ್ಟೇರ್ ಕೇಸ್ ಸಿಗುತ್ತದೆ. ಹಾಗಾಗಿ ಇಲ್ಲಿ ಎಲ್ಲವನ್ನ ತಂದು ತಂದು ಜೋಡಿಸುವುದರಿಂದ ನಿರ್ಮಾಣಕಾರ್ಯ ಬೇಗ ಮುಗಿಯುತ್ತದೆ ಹಾಗೂ ಖರ್ಚು ಕೂಡ ಕಡಿಮೆಯಾಗುತ್ತದೆ.
ಈ ತಂತ್ರಜ್ಞಾನದ ಮೂಲಕ ಕಟ್ಟಿದಂಥ ಅಮ್ಮ ಆನೆಗಳು ಎಷ್ಟುದಿನ ಬಾಳಿಕೆ ಬರುತ್ತವೆ ಎಂಬ ಮಾಹಿತಿ ಬಗ್ಗೆ ಹೇಳುವುದಾದರೆ ಇಂತಹ ಮನೆಗಳು ಸುಮಾರು ನೂರು ವರ್ಷಗಳ ಕಾಲ ಬಾಳಿಕೆ ಬರುತ್ತದೆ. ಹಾಗಾದರೆ ಎಷ್ಟು ಎತ್ತರದವರೆಗೆ ಈ ತಂತ್ರಜ್ಞಾನದಲ್ಲಿ ಮನೆ ಕಟ್ಟಬಹುದು ಎಂದರೆ ಇದರಲ್ಲಿ ಎರಡು ರೀತಿ ಟೆಕ್ನಾಲಜಿ ಇದ್ದು, ಒಂದು ಸಿಂಗಲ್ ಪ್ಯಾನಲ್ ಇನ್ನೊಂದು ಸ್ಯಾಂಡ್ವಿಚ್ ಪ್ಯಾನಲ್. ಸಿಂಗಲ್ ಪ್ಯಾನಲ್ ಬಳಸಿ ಮೂರು ಮಹಡಿಯ ವರೆಗೆ ಮನೆಯನ್ನು ಕಟ್ಟಬಹುದು. ಸ್ಯಾಂಡ್ವಿಚ್ ಪ್ಯಾನಲ್ ಬಳಸಿ ನೀವು ಹದಿನೈದರಿಂದ ಇಪ್ಪತ್ತು ಮಹಡಿಯ ವರೆಗೆ ಕಟ್ಟಡವನ್ನು ಕಟ್ಟಬಹುದು.
ಉಡುಪಿಯ ಸೃಷ್ಟಿ ವೆಂಚರ್ಸ್ ಎಂಬ ಕಂಪನಿ ಅವರು ಈಗಾಗಲೇ ಬಹು ಮಹಡಿಯ ಕಟ್ಟಡವನ್ನು ಕಟ್ಟಿ ಅದರಲ್ಲಿ ಕೆಲವನ್ನು ಪ್ರಾಜೆಕ್ಟ್ ಮಾಡ್ತಾ ಇದ್ದರೆ ಹಾಗೂ ಇವರು ಬೆಂಗಳೂರಿನಲ್ಲಿ ದೇವಿದಾಸ್ ಎಂಬ ಕಮರ್ಷಿಯಲ್ ಕಾಂಪ್ಲೆಕ್ಸ್ ಅನ್ನು ಸಹ ಈ ತಂತ್ರಜ್ಞಾನದ ಮೂಲಕ ಕನ್ ಸ್ಟ್ರಕ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕಾರ್ಕಳದ ಒಬ್ಬ ಎಂಎಲ್ಎ ಅವರ ಆಫೀಸ್ ನಲ್ಲಿ ಇಪಿಎಸ್ ತಂತ್ರಜ್ಞಾನವನ್ನು ಬಳಸಿ ಕಚೇರಿಯನ್ನು ಕಟ್ಟಿ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. ಈ ರೀತಿಯಾಗಿ ಪರಿಸರ ಸ್ನೇಹಿ ಆಗಿರುವಂತಹ ತಂತ್ರಜ್ಞಾನವನ್ನು ಬಳಸಿಕೊಂಡು ನೀವು ಮನೆಯನ್ನು ಕಟ್ಟಿಕೊಳ್ಳುವುದು ಉತ್ತಮ ಎಂದು ಹೇಳಬಹುದು. ಇದರಿಂದ ನಿಮಗೆ ಉಳಿತಾಯವಾಗುತ್ತದೆ. ಕೇವಲ ಉಡುಪಿಯಲ್ಲಿ ಮಾತ್ರವಲ್ಲದೇ ಬೆಂಗಳೂರಿನಲ್ಲಿ ಮುಂತಾದ ಕಡೆಗಳಲ್ಲಿ ಹೊರರಾಜ್ಯಗಳಲ್ಲಿಯೂ ಇದು ಸಿಗುತ್ತದೆ. ನೀವು ಕೂಡ ಹೊಸದಾಗಿ ಮನೆ ಅಥವಾ ಆಫೀಸನ್ನು ಕಟ್ಟದಿದ್ದರೆ ಇಪಿಎಸ್ ತಂತ್ರಜ್ಞಾನದ ಮೂಲಕ ಬಹಳ ಕಡಿಮೆ ಖರ್ಚಿನಲ್ಲಿ ವೇಗವಾಗಿ ಕಟ್ಟಡವನ್ನು ಕಟ್ಟಿಕೊಳ್ಳಬಹುದು.