ಒಂದು ಸಾರಿ ಚಾರ್ಜ್ ಮಾಡಿದ್ರೆ ಸಾಕು 200 ಕಿ.ಮೀ ಚಲಿಸುವ ಸ್ಕೂಟರ್ , ಇದರ ಬೆಲೆ ಎಷ್ಟಿದೆ ನೋಡಿ…

716

ಇದೀಗ ಪ್ರತಿಯೊಬ್ಬರ ಮನೆಯಲ್ಲಿಯೂ ಸಹ ದ್ವಿಚಕ್ರ ವಾಹನಗಳನ್ನು ಬಳಕೆ ಮಾಡಲಾಗುತ್ತದೆ. ಇನ್ನು ಮತ್ತೊಂದು ವಿಚಾರ ಏನು ಅಂದರೆ ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಾಗಿರುವುದರಿಂದ ಜನರು ದ್ವಿಚಕ್ರ ವಾಹನಗಳಿಗೆ ಅಥವಾ ಕಾರುಗಳನ್ನು ಆಗಲಿ ಬಳಕೆ ಮಾಡುವುದನ್ನು ಕಡಿಮೆ ಮಾಡಿದ್ದಾರೆ ಹಾಗೂ ಹೆಚ್ಚಿನ ಮಂದಿ ಎಲೆಕ್ಟ್ರಿಕ್ ಗಾಡಿ ಬಳಕೆ ಮಾಡಲು ಮುಂದಾಗಿದ್ದಾರೆ. ಬೂಮ್ ಮೋಟಾರ್ಸ್ ಕಂಪನಿ ಅವರು ತಮ್ಮದೆ ಆದ ಹೊಸ ಮಾಡೆಲ್ ಸ್ಕೂಟರ್ ಅನ್ನೂ ಬಿಡುಗಡೆಗೊಳಿಸಿದ್ದು, ಇಸ್ಕೂಟರ್ ಕುರಿತು ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ ಹೌದು ಬೂಮ್ ಮೋಟಾರ್ಸ್ ಹೊಸ ಕಾರ್ಬೆಟ್ EV ಅನ್ನು ಬಿಡುಗಡೆ ಮಾಡಿದೆ, ಈ ಸ್ಕೂಟರ್ ಭಾರತದ ಅತ್ಯಂತ ಬಾಳಿಕೆ ಬರುವ ಸ್ಕೂಟರ್ ಎಂದು ಹೇಳಲಾಗಿದೆ. ಕಂಪನಿಯು ಈ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಬೆಲೆಯನ್ನು 89,999 ರೂಪಾಯಿಗಳಿಗೆ ನಿಗದಿಪಡಿಸಿದೆ ಮತ್ತು ಇದು ಮಾರುಕಟ್ಟೆಯಲ್ಲಿ ಇತರ ಬ್ಯಾಟರಿ ಚಾಲಿತ ಸ್ಕೂಟರ್‌ಗಳೊಂದಿಗೆ ಸ್ಪರ್ಧಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಇನ್ನು ಈ ಕಂಪೆನಿಯ ಬಗ್ಗೆ ತಿಳಿಯಬೇಕು ಅಂದರೆ ಈ ಕಂಪನಿಯು 12 ನವೆಂಬರ್ 2021 ರಿಂದ ಹೊಸ ಕಾರ್ಬೆಟ್ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಬುಕಿಂಗ್ ಪ್ರಾರಂಭಿಸಲಿದೆ. ಕಾರ್ಬೆಟ್ EV 2.3 kWh ಬ್ಯಾಟರಿಯಿಂದ ಚಾಲಿತವಾಗಿದೆ ಹಾಗೂ ಒಂದೆ ಚಾರ್ಜ್‌ನಲ್ಲಿ 200 ಕಿಮಿವರೆಗೆ ಚಲಿಸಬಹುದಾಗಿದೆ, ಬ್ಯಾಟರಿಯನ್ನು 4.6 kW ಗೆ ದ್ವಿಗುಣಗೊಳಿಸುವ ಆಯ್ಕೆಯನ್ನು ಕೂಡ ಹೊಂದಿದೆ ಈ ಸ್ಕೂಟರ್ ಮತ್ತು ಡಿಟ್ಯಾಚೆಬಲ್ ಬ್ಯಾಟರಿ ಅನ್ನು ಹೊಂದಿರುವ ಈ ಸ್ಕೂಟರ್ ಕಾರ್ಬೆಟ್ ಎಲೆಕ್ಟ್ರಿಕ್ ಸ್ಕೂಟರ್ ನೊಂದಿಗೆ ನೀಡಲಾಗಿದೆ ಹಾಗೂ ಸ್ಕೂಟರ್ ನ ಚಾರ್ಜರ್ ಅನ್ನು ಮನೆಯ ಯಾವುದೇ ಸಾಕೇತ್ ನಲ್ಲಿ ಹಾಕಿ ನೀವು ಸ್ಕೂಟರ್ ಚಾರ್ಜ್ ಮಾಡಬಹುದು. ಈ ಹೊಸ ಸ್ಕೂಟರ್ ಅನ್ನು ಗಂಟೆಗೆ 75 ಕಿಮೀ ವೇಗದಲ್ಲಿ ಓಡಿಸಬಹುದಾಗಿದೆ ಜೊತೆಗೆ ಅದರ ಮೇಲೆ 200 ಲೋಡ್‌ಗಳನ್ನು ಲೋಡ್ ಮಾಡಬಹುದು ಎಂದು ಕಂಪನಿ ತಿಳಿಸಿದೆ.

ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 5 ವರ್ಷಗಳ EMI ಜೊತೆಗೆ ಖರೀದಿಸಬಹುದಾಗಿದೆ, ಕಾರ್ಬೆಟ್ EV ಬಗ್ಗೆ ಹೇಳಲಾಗುತ್ತಿದೆ. ಕಾರ್ಬೆಟ್ EV ಅನ್ನು ತಿಂಗಳಿಗೆ ಕೇವಲ 1,699 ರೂಪಾಯಿಗಳ EMI ಯೊಂದಿಗೆ ಖರೀದಿಸಬಹುದು. ಬೂಮ್ ಮೋಟಾರ್ಸ್ ಕಂಪೆನಿ ಅವರು, ಈ ಸ್ಕೂಟರ್‌ನ ಚಾಸಿಸ್‌ಗೆ 7 ವರ್ಷಗಳ ವಾರಂಟಿ ಮತ್ತು ಬ್ಯಾಟರಿಯ ಮೇಲೆ 5 ವರ್ಷಗಳ ವಾರಂಟಿಯನ್ನು ಕೊಡುತ್ತಿದೆ. ಬೂಮ್ ಮೋಟಾರ್ಸ್ ಸಿಇಒ ಅನಿರುದ್ಧ ರವಿ ನಾರಾಯಣನ್ ಮಾತನಾಡಿ ಹವಾಮಾನ ಬದಲಾವಣೆಯು, ಈ ಸಮಯದಲ್ಲಿ ನಮ್ಮೆಲ್ಲರ ಮುಂದಿರುವ ದೊಡ್ಡ ಸವಾಲಾಗಿದೆ ಎಂದು ಕಂಪೆನಿಯವರು ತಿಳಿಸಿತು ಭಾರತದೇಶದಲ್ಲಿ ಮಾಲಿನ್ಯದ ಅತಿ ದೊಡ್ಡ ಸಮಸ್ಯೆ ಗೆ ಕಾರಣವಾದ ಈ ವಾಹನ ಮಾಲಿನ್ಯವನ್ನು ಸಂಪೂರ್ಣವಾಗಿ ಭಾರತ ದೇಶದಲ್ಲಿ ಪರಿಹಾರ ಆಗಬೇಕು ಎಂಬುದು ಈ ಕಂಪೆನಿಯ ಮೂಲ ಉದ್ದೇಶ ಆಗಿದ್ದು ಇದನ್ನೇ ಭೂ ಮೋಟಾರ್ಸ್ ಅವರು ನಮ್ಮ ಗುರಿಯು ಸಹ ಇದೆ ಆಗಿದೆ ಎಂದು ಹೇಳಿದ್ದಾರೆ.

ಬೂಮ್ ಮೋಟಾರ್ಸ್ ಕುರಿತು ಮಾತನಾಡಿದ ಇವರು ಸುಮಾರು ಕಳೆದ 2ವರ್ಷಗಳಿಂದ ಭೂ ಮೋಟಾರ್ ನ ಸಂಪೂರ್ಣ ತಂಡವು ನಿರಂತರವಾಗಿ ಬಹಳ ಉತ್ತಮವಾದ ಕೆಲಸ ಮಾಡುತ್ತಾ ಸಾಗುವ ಇದರಿಂದಾಗಿ ಈ ವಾಹನವನ್ನು ದಾಖಲೆ ಸಮಯದಲ್ಲಿ ಮಾರುಕಟ್ಟೆಗೆ ಪರಿಚಯ ಮಾಡಲಾಯಿತು ಹಾಗೂ ಅಲ್ಲದೆ ನಾವು ಕೊಯಮತ್ತೂರಿನಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪನೆ ಮಾಡಿದ್ದು, ಇದು ವಾರ್ಷಿಕವಾಗಿ 1 ಲಕ್ಷ ಬೈಕ್‌ಗಳನ್ನು ತಯಾರಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ್ದು ಈ ಘಟಕದಲ್ಲಿ ನೂರಾರು ಜನರಿಗೆ ಉದ್ಯೋಗ ಅವಕಾಶವನ್ನು ಸಹ ಕಲ್ಪಿಸಿಕೊಡಲಾಗಿತ್ತು ಇದು ಸಹ ಖುಷಿಯ ವಿಚಾರವಾಗಿದೆ ಎಂದು ಹೇಳಲಾಗಿದೆ. ಭಾರತ ದೇಶದಲ್ಲಿ ವಾಯುಮಾಲಿನ್ಯ ಹೇಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ನಮಗೆ ನಿಮಗೆಲ್ಲರಿಗೂ ತಿಳಿದಿದೆ ಇದೇ ರೀತಿ ಈ ವಾಯು ಮಾಲಿನ್ಯ ಸಮಸ್ಯೆಗೆ ಬೂಮ್ ಮೋಟರ್ಸ್ ಅವರು ಪರಿಹಾರ ತರಬೇಕೆಂದು ಪಡುತ್ತಿರುವ ಶ್ರಮಕ್ಕೆ ಯಶಸ್ಸು ಸಿಗಲಿ ಧನ್ಯವಾದ.