ನಿಮ್ಮ ಜೀವನದ ಕೊನೆಯ ದಿನಗಳನ್ನ ಕಳಿಬೇಕು ಅಂತ ಇದ್ರೆ ಈ ದೇವಾಲಯಕ್ಕೆ ಹೋಗಿ… ಸ’ತ್ತ ಮೇಲೆ ದೇವರು ಮುಕ್ತಿ ಕೊಡ್ತಾನೆ… ಪಿಶಾಚಿ ಆಗೋದು ತಪ್ಪುತ್ತೆ..

99

ಭಾರತ ದೇಶದಲ್ಲಿ ಹಲವು ದೇವಾಲಯಗಳಿವೆ ಹಾಗೆ ಪ್ರತಿಯೊಂದು ದೇವಾಲಯಗಳು ಅದರದ್ದೇ ಆದಂತಹ ವೈಶಿಷ್ಟ್ಯತೆ ಪುರಾಣ ಕಥೆಗಳು ಕೂಡ ಇವೆ. ಅದೇ ರೀತಿ ಈ ದಿನದ ಲೇಖನದಲ್ಲಿ ಜಗತ್ಪ್ರಸಿದ್ಧಿ ಶಿವನ ಆಲಯ ದ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ ಹೌದು ಇದು ಜಗತ್ಪ್ರಸಿದ್ಧ ಶಿವನ ದೇವಾಲಯ, ಶಿವನನ್ನು ಇಲ್ಲಿ ಪ್ರಾಣಿಯ ರೂಪದಲ್ಲಿ ಪೂಜಿಸಲಾಗುತ್ತದೆ, ಜೀವನದ ಕೊನೆಯ ಕ್ಷಣದಲ್ಲಿ ಮನುಷ್ಯ ಈ ದೇವಾಲಯಕ್ಕೆ ಬಂದು ಭೇಟಿಯನ್ನು ಕೊಡುತ್ತಾರಂತೆ. ಹಾಗಾದರೆ ಈ ದೇವಸ್ಥಾನ ಯಾವುದು, ಅಷ್ಟಕ್ಕೂ ಈ ದೇವಾಲಯ ಇರುವುದೆಲ್ಲಿ ಎಲ್ಲ ಮಾಹಿತಿ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ ಹೌದು ಈ ವಿಶೇಷ ದೇವಾಲಯ ಕುರಿತು ನೀವು ಮಾಹಿತಿ ತಿಳಿಯಲೇಬೇಕು ಹಾಗೆ ಜನ ಏಕೆ ತಮ್ಮ ಕೊನೆಯ ಸಮಯದಲ್ಲಿ ಈ ದೇವಾಲಯಕ್ಕೆ ಬರಬೇಕು ಮತ್ತು ಇಲ್ಲಿನ ರಹಸ್ಯ ಏನು ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ.

ನಮ್ಮಲ್ಲಿ ಶಿವನ ಆರಾಧನೆ ಮಾಡಿ ಆತನ ಆಶೀರ್ವಾದ ಪಡೆದವರು ಜೀವನದಲ್ಲಿ ಸದಾ ನೆಮ್ಮದಿಯಾಗಿರುತ್ತಾರೆ ಎಂಬ ನಂಬಿಕೆಯಲ್ಲಿದ್ದಾರೆ ಅದೇ ರೀತಿ ಶಿವನ ಅನೇಕ ವಿಶೇಷತೆ ಇರುವ ದೇವಾಲಯಗಳನ್ನು ನಾವು ನಮ್ಮ ಭಾರತ ದೇಶದಲ್ಲಿ ಕಾಣಬಹುದು. ಪಶುಪತಿ ನಾಥ ದೇವಾಲಯವು ಸಹ ಶಿವನ ಆರಾಧ್ಯ ಮಾಡುವ ಆಲಯವಾಗಿದ್ದು ಇಲ್ಲಿ ಶಿವನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ ಇನ್ನೂ ಈ ದೇವಾಲಯವು ಭಾರತ ದೇಶದ ಉತ್ತರ ಭಾಗದಲ್ಲಿರುವ ನೇಪಾಳದ ಕಠ್ಮಂಡುವಿನಲ್ಲಿ ಇದೆ. ಹೌದು ಪೂರ್ವಭಾಗದ ಭಾಗಮತಿ ನದಿಯ ದಡದ ಮೇಲಿದೆ ಈ ಪಶುಪತಿನಾಥ ದೇವಾಲಯ. ವಿಶ್ವದ ಅತ್ಯಂತ ಮಹತ್ವ ಹಾಗೂ ಪ್ರಸಿದ್ಧ ದೇವಾಲಯವು ಯುನೆಸ್ಕೋ ವಿಶ್ವಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. 225 ಪವಿತ್ರ ದೇವಸ್ಥಾನಗಳಲ್ಲಿ ಒಂದಾದ ಈ ದೇವಾಲಯವು ವಿಶ್ವವಿಖ್ಯಾತಿಯನ್ನು ಪಡೆದುಕೊಂಡಿದ್ದು, ಪ್ರಾಚೀನ ಕಾಲದಲ್ಲಿ ಈ ದೇವಾಲಯದ ಒಳಗೆ ಪ್ರವೇಶಿಸಲು ಹಿಂದೂಗಳಿಗೆ ಮಾತ್ರ ಅವಕಾಶವಿದ್ದು, ಉಳಿದವರು ದೇವಸ್ಥಾನದ ಇನ್ನೊಂದು ಭಾಗದಲ್ಲಿ ನಿಂತು ನೋಡಬಹುದು.

ಪಶುಪತಿನಾಥನ ದೇವಾಲಯವು ಅತ್ಯಂತ ಪುರಾತನ ದೇವಾಲಯವಾಗಿದ್ದು ಈ ದೇವಾಲಯವನ್ನು ಯಾವ ಶತಮಾನದಲ್ಲಿ ಸ್ಥಾಪನೆ ಆಯಿತು ಎಂಬುದರ ಬಗ್ಗೆ ಎಲ್ಲಿಯೂ ಕೂಡ ದಾಖಲೆಯಾಗಿಲ್ಲ ಹಾಗೂ ಅಂದಾಜು ಮತ್ತು ಕುರುಹುಗಳ ಆಧಾರದ ಮೇಲೆ 4ನೂರು ವರ್ಷದಷ್ಟು ಹಳೆಯ ದೇವಾಲಯ ಇದು ಎಂದು ಹೇಳಲಾಗಿದೆ. ಈ ದೇವಾಲಯದಲ್ಲಿ ಸಮೃದ್ಧವಾದ ಅಲಂಕಾರಗಳಿಂದ ಕೂಡಿದ ಪಗೊಡ ಇರುವ ಶಿವಲಿಂಗ ಇದ್ದು, ಇಂತಹ ಒಂದು ಶಿವಲಿಂಗ ವಿಶ್ವದಲ್ಲಿ ಒಂದೇ ಇರುವುದು. ಶಕ್ತಿಪೀಠ ಮಾತೃ ದೇವಿಯ ದೇವಾಲಯವು ಪಶುಪತಿನಾಥನ ದೇವಾಲಯದ ಪ್ರಾಂಗಣದಲ್ಲಿ ಇದೆ. ಪ್ರಪಂಚದಲ್ಲಿಯೇ ಇರುವ 51ಪ್ರಮುಖ ಶಕ್ತಿ ಪೀಠಗಳಲ್ಲಿ ಈ ದೇವಾಲಯ ಪ್ರಮುಖ ಶಕ್ತಿಪೀಠವಾಗಿದ್ದು ದೇವಾಲಯದ ಸಮೀಪದಲ್ಲಿ ಬಾಗಮತಿ ನದಿ ಕೂಡ ಇದೆ. ಇನ್ನೂ ಈ ನದಿಯ ಬಳಿ ಹಲವಾರು ದೇವಸ್ಥಾನಗಳನ್ನು ಸಹ ನಾವು ಕಾಣಬಹುದು.

ಬಹಳ ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯದ ಕಟ್ಟಡಗಳನ್ನು ಗೆದ್ದಿಲುಗಳು ತಿಂದಿದ್ದವೋ ಈ ಸಮಯದಲ್ಲಿ ಅಂದರೆ 17ನೇ ಶತಮಾನದಲ್ಲಿ ರಾಜ ಭೂಪೇಂದ್ರ ಅವರು ಹೊಸ ದೇವಾಲಯವನ್ನು ನಿರ್ಮಿಸಿದ್ದು ನಂತರ ದೇವಾಲಯದ ಸಮೀಪದಲ್ಲಿಯೇ ಎರಡು ಅಂತಸ್ತಿನ ಅನೇಕ ದೇವಾಲಯಗಳನ್ನು ನಿರ್ಮಿಸಲಾಯಿತು, ೧೧ನೇ ಶತಮಾನದ ಹಸ್ತಪ್ರತಿಯಲ್ಲಿ ಉಲ್ಲೇಖಿಸಲಾದ ಪೂರ್ಣೇಶ್ವರಿ ದೇವಾಲಯ, ಈ ದೇವಾಲಯಕ್ಕೆ ಸೇರಿದ್ದೆಂದು ನಂಬಲಾಗಿದೆ ಈ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಪುರೋಹಿತರು ಕರ್ನಾಟಕದವರು. ಪ್ರಧಾನ ಅರ್ಚಕರು ನೇಪಾಳದ ರಾಜರಿಗೆ ಉಸ್ತುವಾರಿ ಕುರಿತು ಮತ್ತು ದೇವಾಲಯದ ಸಂಗತಿಗಳ ಕುರಿತು ವರದಿಗಳನ್ನು ನೀಡುತ್ತಾರೆ. ಈ ಪವಿತ್ರ ದೇವಾಲಯಕ್ಕೆ ಸಂಬಂಧಿಸಿದಂತೆ ಪುರಾಣಗಳಲ್ಲಿ ಹಲವಾರು ಕಥೆಗಳಿವೆ. ಒಮ್ಮೆ ಶಿವ ಮತ್ತು ಪಾರ್ವತಿ ಕಠ್ಮಂಡುವಿನ ಕಣಿವೆಯಲ್ಲಿ ಪ್ರಯಾಣ ಮಾಡುತ್ತಾ ಇರುವಾಗ ಭಾಗ್ ಮತಿ ಅಲ್ಲಿ ವಿಶ್ರಾಂತಿಯನ್ನ ಪಡೆದುಕೊಂಡಿದ್ದರಂತೆ ಹಾಗೆ ಅಲ್ಲಿನ ಸುಂದರ ಪ್ರದೇಶ ಮತ್ತು ಪ್ರಕೃತಿ ಸೌಂದರ್ಯವನ್ನು ಮೆಚ್ಚಿದ ಶಿವಪಾರ್ವತಿಯರು ತಮ್ಮನ್ನು ತಾವು ಜಿಂಕೆಯನ್ನಾಗಿ ಬದಲಾಯಿಸಿಕೊಂಡು ಕಾಡಿನಲ್ಲಿ ಸುತ್ತಾಡಲು ಪ್ರಾರಂಭಿಸುತ್ತಾರೆ ಶಿವನು ಜಿಂಕೆಯಾಗಿ ಕಾಲಿಟ್ಟ ಎಲ್ಲ ಸ್ಥಳಗಳನ್ನು ಇಲ್ಲಿ ಪವಿತ್ರಸ್ಥಳ ಗಳೆಂದು ಕರೆಯಲಾಗುತ್ತದೆ. ಕೆಲವು ಸಮಯದ ನಂತರ ಜನರು ಶಿವನನ್ನು ಹುಡುಕಲು ಪ್ರಾರಂಭಿಸುತ್ತಾರೆ, ಆಗ ಶಿವನು ಜಿಂಕೆಯ ರೂಪದಲ್ಲಿ ಇರುವುದು ಜನರಿಗೆ ತಿಳಿಯುತ್ತದೆ. ಇದೇ ಕಾರಣದಿಂದ ಅವರು ಶಿವನನ್ನು ಪಶುಗಳ ದೇವರು ಎಂದು ಕರೆಯುತ್ತಾರೆ.

ನೂರಾರು ಜನರು ತಮ್ಮ ಜೀವನದ ಕೊನೆಯ ದಿನಗಳನ್ನು ಇಲ್ಲಿ ಇರುವ ಮೋಕ್ಷದ ಆಶ್ರಮದಲ್ಲಿ ಕಳೆಯುತ್ತಾರೆ ನದಿಯ ದಡದಲ್ಲಿ ಅಂತ್ಯಕ್ರಿಯೆಯನ್ನು ಮಾಡುವ ಮೂಲಕ ತಮ್ಮ ಕೊನೆಯ ಪ್ರಮಾಣವನ್ನು ಪವಿತ್ರ ನದಿ ಭಾಗಮತಿ ನದಿಯೊಂದಿಗೆ ತಮ್ಮ ಅಸ್ತಿಗಳನ್ನು ಹಾಕಲು ಅವರು ಇಚ್ಛೆಪಡುತ್ತಾರೆ. ತದನಂತರ ಈ ನದಿಯು ಪವಿತ್ರ ಗಂಗಾ ನದಿಯನ್ನು ಸಂಧಿಸುತ್ತದೆ ನೇಪಾಳ ಮತ್ತು ಭಾರತದ ಪ್ರತಿಯೊಂದು ಮೂಲೆಯಿಂದ ಹಿಂದೂಗಳು ತಮ್ಮ ಪೂರ್ವಜರ ಅಂತ್ಯಕ್ರಿಯೆಯನ್ನು ನಡೆಸಲು, ಇಲ್ಲಿಗೆ ಆಗಮಿಸುತ್ತಾರೆ ಇದೇ ಕಾರಣ ಜಗತ್ತಿನಾದ್ಯಂತ ಈ ದೇವಾಲಯವನ್ನು ಸ್ಮಶಾನ ದೇವಾಲಯ ಎಂದೇ ಕರೆಯುತ್ತಾರೆ ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಲ್ಲಿ ಮರಣವನ್ನು ಹೊಂದಲು ಇಚ್ಚಿಸುತ್ತಾರೆ.

ಇಲ್ಲೊಂದು ವಿಶೇಷ ನಂಬಿಕೆ ಇದೆ ಅದೇನೆಂದರೆ ಯಾವ ವ್ಯಕ್ತಿ ಈ ದೇವಸ್ಥಾನದಲ್ಲಿ ಪ್ರಾಣಬಿಡುತ್ತಾರೆ ಅಂಥವರು ಮತ್ತೆ ಮನುಷ್ಯನಾಗಿಯೇ ಪುನರ್ಜನ್ಮ ಪಡೆಯುತ್ತಾರೆ ಎಂಬ ನಂಬಿಕೆ ಸಹ ಇದೆ ಇನ್ನೂ ಹೆಚ್ಚಿನ ಜನರು ತಮ್ಮ ಕೊನೆಯ ದಿನಗಳನ್ನು ಇಲ್ಲಿ ಕಳೆಯಲು ಇಷ್ಟ ಪಡುತ್ತಾರಂತೆ ಹಾಗೂ ಇದೇ ಕಾರಣಕ್ಕಾಗಿ ಹಲವಾರು ಮೋಕ್ಷಧಾಮ ಗಳು ಸಹ ಇಲ್ಲಿ ಕಾಣಬಹುದು. ಇಲ್ಲಿಗೆ ಭೇಟಿಕೊಡುವ ವಯಸ್ಸಾದ ಜನರ ಸಾವಿನ ನಿಖರವಾದ ದಿನವನ್ನು ದೇವಾಲಯದ ಜ್ಯೋತಿಷ್ಯರು ಗ್ರಹಿಸುತ್ತಾರೆ ಇನ್ನೊಂದು ಈ ದೇವಾಲಯದ ವಿಪರ್ಯಾಸ ಎಂದರೆ ಇದೇ ನದಿಯ ತಟದಲ್ಲಿ ಶವಗಳನ್ನು ಸುಟ್ಟು ಬೂದಿಯನ್ನು ನದಿಯಲ್ಲಿ ಹರಡುತ್ತಾರೆ. ಈ ದೇವಾಲಯಕ್ಕೆ ಸಂಬಂಧಿಸಿದಂತೆ ಇನ್ನೊಂದು ಕತೆಯಿದೆ ಕಾಮಧೇನು ಎನ್ನುವ ಹಸು ಚಂದ್ರವನ ಪರ್ವತದಲ್ಲಿ ಆಶ್ರಯ ಪಡೆದಿತ್ತು ಆ ಹಸುವು ಪ್ರತಿದಿನ ಮಣ್ಣಿನಿಂದ ಮುಚ್ಚಿಕೊಂಡಿದ್ದ ಶಿವಲಿಂಗದ ಮೇಲೆ ಹಾಲನ್ನು ಸುರಿಸಿ ಹೋಗುತಿತ್ತು ಹಲವಾರು ವರ್ಷಗಳಿಂದಲೂ ಈ ಹಸುವು ಅಲ್ಲಿ ಬಂದು ಹಾಲನ್ನು ಸುರಿಸಿ ಹೋಗುತ್ತಿರುವುದನ್ನು ಜನರು ಗಮನಿಸುತ್ತಾರೆ ಆ ಜಾಗದಲ್ಲಿ ಏನಿರಬಹುದು ಎಂಬುದನ್ನು ತಿಳಿದುಕೊಳ್ಳಲು ಆ ಜಾಗವನ್ನು ಅಗೆಯಲು ಪ್ರಾರಂಭಿಸುತ್ತಾರೆ ಆಗ ಸಿಕ್ಕಿದ್ದು ಈ ಸುಂದರವಾದ ಹೊಳೆಯುವ ಶಿವನ ಲಿಂಗ. ನಂತರದ ದಿನಗಳಲ್ಲಿ ಪವಿತ್ರವಾದ ಶಿವಲಿಂಗವನ್ನು ನೋಡಲು ಹಾಗೂ ಜನ್ಮಜನ್ಮಾಂತರ ಗಳಿಂದ ಹೊಂದಿದ ಪಾಪವನ್ನು ತೊಳೆದುಕೊಳ್ಳಲು ಅನೇಕ ಭಕ್ತರು ಇಲ್ಲಿಗೆ ಆಗಮಿಸಲು ಪ್ರಾರಂಭಿಸುತ್ತಾರೆ ಹೀಗೆ ಶುರುವಾಯಿತು ಪಶುಪತಿನಾಥನ ದೇವಾಲಯ ಎಂದು ಪುರಾಣದಲ್ಲಿ ಹೇಳಲಾಗುತ್ತದೆ.

 

ಇದೇ ಕಾರಣ ಈ ಪವಿತ್ರ ದೇವಸ್ಥಾನಕ್ಕೆ ಸಾವಿರಾರು ಜನರು ಭೇಟಿಕೊಟ್ಟು ಶಿವನ ಆರಾಧನೆಯನ್ನು ಇಲ್ಲಿ ಮಾಡುತ್ತರೆ.ಜೀವನದಲ್ಲಿ ಮಾಡಿದ ಪಾಪ ಕರ್ಮಗಳು ಹೀಗೆ ಮಾಡಿದರೆ ತೊಳೆಯುತ್ತದೆ ಎಂಬುದು ಭಕ್ತರ ಪ್ರತೀತಿ ಇದೆ. ಪಶುಪತಿನಾಥನ ಮುಖ್ಯ ದೇವಾಲಯ ಚಾವಣಿ ಮತ್ತು ಚಿನ್ನದ ಶೈಲ ದಿಂದ ಕಟ್ಟಲಾಗಿದೆ. ಈ ದೇವಸ್ಥಾನದ ಹತ್ತಿರವಿರುವ ಭಾಗಮತಿ ಪಶ್ಚಿಮ ದಂಡೆಯು ಪಂಚ ದೇವಾಲಯಗಳ ಸಂಕೀರ್ಣ ವನ್ನು ಹೊಂದಿದೆ ಈ ದೇವಾಲಯವು ಅತ್ಯಂತ ಪವಿತ್ರವಾಗಿದ್ದು ಈಗ ನಿರ್ಗತಿಕ ಭಕ್ತರಿಗೆ ಆಶ್ರಯವನ್ನು ನೀಡುತ್ತದೆ ಪಶುಪತಿನಾಥ ದೇವಾಲಯಕ್ಕೆ ಕಠ್ಮಂಡುವಿನಿಂದ ನೇರವಾಗಿ ಬಸ್ಸುಗಳ ಸಂಪರ್ಕವಿದೆ. ಕಠ್ಮಂಡುವಿನ ಮುಖ್ಯ ಬಸ್ ನಿಲ್ದಾಣದಿಂದ ನಲವತ್ತೈದು ನಿಮಿಷದಲ್ಲಿ ನೀವು ಈ ದೇವಾಲಯವನ್ನು ತಲುಪಬಹುದು ಕಟ್ಮಂಡು ನೇಪಾಳ ದೇಶದ ರಾಜಧಾನಿ. ಜೀವನದಲ್ಲಿ ನೀವು ಕೂಡ ಒಮ್ಮೆಯಾದರೂ ಪಶುಪತಿನಾಥನ ಆಲಯಕ್ಕೆ ಭೇಟಿ ನೀಡಿ ಎನ್ನುವ ಶುದ್ಧ ಹಿಂದೂ ದೇಶವಾದ ನೇಪಾಳಕ್ಕೆ ಭೇಟಿ ನೀಡಿ ಇಲ್ಲಿ ಹಿಮಾಲಯ ಇರುವುದು ಹಾಗೂ ಕೈಲಾಸನಾಥನ ಮತ್ತು ಪಶುಪತಿನಾಥನ ಆಶೀರ್ವಾದವನ್ನು ಪಡೆದು ಬನ್ನಿ ಧನ್ಯವಾದ.