WhatsApp Logo

ತನ್ನ ಹತ್ತಿರ ಇರೋ ಕೇವಲ ಅರ್ಧ ಎಕರೆ ಒಣ ಜಮೀನಿನಲ್ಲಿ ಕೊತಂಬರಿ ಸೊಪ್ಪು ಬೆಳೆದು ಈತ ಸಂಪಾದನೆ ಮಾಡ್ತಿರೋದು ಎಷ್ಟು ಗೊತ್ತ .. ಮೈ ಜುಮ್ ಅನ್ನುತ್ತದೆ…ರೈತ ಹೀಗೆ ಆಲೋಚನೆ ಮಾಡಿದ್ರೆ ಏನ್ ಬೇಕಾದ್ರು ಮಾಡಬಹುದು ಅನ್ನೋದಕ್ಕೆ ಇವರೇ ಸಾಕ್ಸಿ ..

By Sanjay Kumar

Updated on:

ಇವತ್ತಿನ ದಿವಸ ಗಳಲ್ಲಿ ತರಕಾರಿ ಬೆಲೆ ಈಗ ಅದೆಷ್ಟೋ ಹೆಚ್ಚಾಗಿದೆ ಎಂಬುದನ್ನು ನೀವು ಕೂಡ ಗಮನಿಸುತ್ತಾ ಅದೇ ರೀತಿ ಮಸಾಲೆ ಪದಾರ್ಥಗಳ ಜೊತೆ ಬಳಸುವ ಕೊತ್ತಂಬರಿ ಬೆಲೆ ಕೂಡ ಬಹಳ ಹೆಚ್ಚಾಗಿದೆ ಕಟ್ಟಿಗೆ ಹತ್ತು ರೂ ಗಳನ್ನು ನೀಡಿ ಜನರು ಕೊತ್ತಂಬರಿ ಕೊಂಡುಕೊಳ್ಳುತ್ತಿದ್ದರೋ ಏನೋ ಅಲ್ಪವಧಿಯಲ್ಲಿ ಕೊತ್ತಂಬರಿ ಬೆಳೆದು ಹೆಚ್ಚು ಹಣ ಗಳಿಸಿದ ಈ ರೈತರ ಕತೆ ಕೇಳಿ ನೀವು ಕೂಡ ಅಚ್ಚರಿ ಪಡ್ತೀರಾ. ಹೌದು ಹಲವು ಮಂದಿ ಈ ಕೃಷಿ ಬಗ್ಗೆ ತಪ್ಪಾಗಿ ತಿಳಿದುಕೊಂಡಿರುತ್ತಾರೆ ಇನ್ನೂ ಕೆಲವರು ಅಲ್ಪಾವಧಿಯ ಕೃಷಿಯಲ್ಲಿ ಲಾಭ ಬರುವುದಿಲ್ಲ ಎಂದು ಹೇಳುತ್ತಾರೆ. ಆದರೆ ಇಲ್ಲಿನ ಕೃಷಿಕರೊಬ್ಬರು 32 ದಿವಸಗಳಲ್ಲಿ ಕೊತ್ತಂಬರಿ ಸೊಪ್ಪು ಬೆಳೆದು, 13 ಸಾವಿರ ಲಾಭಗಳಿಸಿ ತೋರಿಸಿದ್ದಾರೆ. ಇವರು ನೆಲಮಂಗಲ ತಾಲ್ಲೂಕಿನ ಕುಲುವನಹಳ್ಳಿ ಎಂಬ ಗ್ರಾಮ ವ್ಯಾಪ್ತಿಯ ಬಳಿ ಇರುವ ಬಿಲ್ಲಿನಕೋಟೆ ಎಂಬ ಗ್ರಾಮದ ರೈತರಾಗಿರುವ ರಂಗಸ್ವಾಮಿ ತಮ್ಮ 2ಗುಂಟೆ ಜಮೀನಿ ನಲ್ಲಿ, ಕಳೆದ ಇಪ್ಪತ್ತು ದಿನಗಳ ಹಿಂದೆ ಎರಡು ಸಾವಿರ ಕೊತ್ತಂಬರಿ ಬೀಜ ಚೆಲ್ಲಿ ಲಾಭ ಗಳಿಸಿದ್ದಾರೆ.

ಈ ವ್ಯವಸಾಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ರಂಗಸ್ವಾಮಿಯವರು ತಾವು ಹೊಂದಿರುವ ಕೇವಲ 2ಎಕರೆ 30ಗುಂಟೆ ಜಮೀನಿನಲ್ಲಿ 2ಗುಂಟೆ ಜಮೀನಿನಲ್ಲಿ ಮಾತ್ರ ಕೊತ್ತಂಬರಿ ಬೀಜವನ್ನು ಚೆಲ್ಲಿದ್ದರು. 3ಸಾವಿರ ರೂ ಬಂಡವಾಳವನ್ನು ಹಾಕಿ ಸುಮಾರು 16ಸಾವಿರ ರೂಪಾಯಿಯ ಕೊತ್ತಂಬರಿ ಸೊಪ್ಪನ್ನು ಬೆಳೆದು ತೋರಿರುವ ರಂಗನಾಥಸ್ವಾಮಿಯವರ, ಇವರ ಈ ಶ್ರಮಕ್ಕೆ ಇವರ ಗೋವಿಂದ ರಾಜು ಹತ್ಯೆಗೆ ಆಗಿರುವ ತಾಯಮ್ಮ ಮತ್ತು ರಂಗನಾಥ ಸ್ವಾಮಿ ಅವರ ಪತ್ನಿ ಶಾರದಮ್ಮ ಅವರು ಸಹಕಾರವನ್ನು ನೀಡಿದ್ದಾರೆ ಇನ್ನೂ ಸಮಗ್ರ ಕೃಷಿ ಪದ್ಧತಿಯನ್ನು ನಂಬಿರುವ ಇವರು ತಮ್ಮ ಉಳಿದ ಜಮೀನಿನಲ್ಲಿ ಕೋಸು ಮೆಣಸಿನಕಾಯಿ ಜೋಳ ಬೆಳೆದಿದ್ದಾರೆ.

ಸಂಬಾರ ಸೊಪ್ಪಿನ ಹೊಸ ತಳಿಯ ಬೀಜವನ್ನು ತಂದು ಉಳುಮೆ ಮಾಡಿ ಬಿತ್ತನೆ ಮಾಡಲಾಗಿದ್ದು ಕಡಿಮೆ ಬೇಸಾಯ ಕ್ರಮಗಳಿಂದ ಅಧಿಕ ಇಳುವರಿ ಸಾಧಿಸಿದ್ದಾರೆ ರಂಗನಾಥ ಸ್ವಾಮಿ ಅವರು ಹಾಗೆ ಜತೆಗೆ ರಾಸಾಯನಿಕ ಗೊಬ್ಬರವನ್ನು ಹಾಕದೆ ದನದ ಗೊಬ್ಬರ ಅಂದರೆ ಸಗಣಿ ಗೊಬ್ಬರವನ್ನು ಹಾಕಿ ಹೆಚ್ಚು ಲಾಭವನ್ನು ಪಡೆದುಕೊಂಡಿದ್ದಾರೆ. ರಂಗನಾಥ ಸ್ವಾಮಿ ಯವರು ಕೊತ್ತಂಬರಿ ಸೊಪ್ಪಿನ ಬೆಳೆಯನ್ನು ಸಂಪೂರ್ಣ ಸಾವಯವ ಕೃಷಿಯಿಂದಲೇ ಬೆಳೆದಿರುವುದು ಇನ್ನೂ ವಿಶೇಷ ಹಾಗೆ ರೈತ ರಂಗನಾಥ ಸ್ವಾಮಿ ಅವರು 400ಅಡಿ ನೀರಿನ ಕೊಳವೆಬಾವಿ ಅನ್ನು ಹೊಂದಿದ್ದು ಕಡಿಮೆ ಅಂತರ್ಜಲ ಮಟ್ಟದಲ್ಲಿ 3ಇಂಚು ನೀರು ದೊರೆತಿರುವುದು ಕೃಷಿಗೆ ಅನುಕೂಲವಾಗಿದೆ.

ಈ ಕುರಿತು ಮಾತನಾಡಿರುವ ರಂಗನಾಥಸ್ವಾಮಿಯವರ ಕೊತ್ತಂಬರಿ ಸೊಪ್ಪು ಬೆಳೆದಿದ್ದಾರೆ ಆದರೆ ಇದೇನು ದೊಡ್ಡ ಸಾಧನೆ ಅಲ್ಲ ಕಡಿಮೆ ಅವಧಿಯಲ್ಲಿ ಲಾಭ ಗಳಿಸಲು ಈ ಬೆಳೆ ಸಹಕಾರಿಯಾಗಿದ್ದು ಕೊತ್ತಂಬರಿಯ ಹೊಸ ತಳಿಯ ಬೀಜವನ್ನು ತಂದು ಉಳುಮೆಯನ್ನು ಮಾಡಿದ್ದೇ ಬಿತ್ತನೆ ಮಾಡಿದ್ದೆ. ಕಡಿಮೆ ಬೇಸಾಯ ಕ್ರಮಗಳಿಂದ ಅಧಿಕ ಇಳುವರಿ ಮಾಡಿದ್ದೇವೆ, ಜೊತೆಗೆ ರಾಸಾಯನಿಕ ಗೊಬ್ಬರ ಹಾಕದೆ ದನದ ಕೊಟ್ಟಿಗೆ ಗೊಬ್ಬರ ಹಾಕಿ ಸಂಪೂರ್ಣ ಸಾವಯವ ಮಾಡಿದ್ದೇವೆ ಎಂದು ರಂಗಸ್ವಾಮಿ ತಿಳಿಸಿದರು. ತಿಂಗಳು ಬೆಳೆಗಳಿಂದ ಅದರಲ್ಲೂ ಕೊತ್ತಂಬರಿ ಈ ರೀತಿ ಸೊಪ್ಪಿನ ಬೆಳೆಗಳು ರೈತರಿಗೆ ಅನುಕೂಲಕರ. ಮತ್ತೊಂದು ಬೆಳೆಗೆ ಬಂಡವಾಳ ಹಾಕಲು ಈ ರೀತಿ ಬೆಳೆ ಸಹಕಾರಿ .

ಆಗುತ್ತದೆಯಾದರೂ ರಂಗನಾಥ ಸ್ವಾಮಿ ಅವರು ಹೇಳಿಕೊಂಡಿದ್ದಾರೆ. ಕೃಷಿ ಅಧಿಕಾರಿಗಳ ಸಲಹೆ ತೆಗೆದುಕೊಂಡು ಇನ್ನೂ ಕೃಷಿಯಲ್ಲಿ ಹೊಸ ಬೆಳೆ ಪ್ರಯತ್ನ ಮಾಡಲಿದ್ದೇನೆ ಎನ್ನುತ್ತಾರೆ. ಕೊತ್ತಂಬರಿ ಬೆಳೆದ ರೈತ ರಂಗಸ್ವಾಮಿ ಅವರು. ರೈತ ರಂಗಸ್ವಾಮಿ ಸಮಗ್ರ ಕೃಷಿ ಜತೆ, ತಿಂಗಳು ಸೊಪ್ಪಿನ ಬೆಳೆಗಳನ್ನು ಬೆಳೆದು ಸಾಧನೆ ಮಾಡಿರುವುದು ಶ್ಲಾಘನಾರ್ಹ. ಸೋಂಪುರ ರೈತ ಸಂಪರ್ಕ ಕೇಂದ್ರದ ಅಡಿಯಲ್ಲಿ ಈ ರೈತ ಬರುವುದರಿಂದ ಇಲಾಖೆಯಿಂದ ಸಲಹೆ ಮತ್ತು ಮಾರ್ಗದರ್ಶನ ನೀಡಿ. ಇನ್ನು ನೀವು ಸಹ ರೈತಾಪಿ ಕುಟುಂಬದವರಾಗಿದ್ದರೆ ಇದೇ ರೀತಿಯ ಬೆಳೆಯನ್ನು ಬೆಳೆಯುವ ಆಸಕ್ತಿ ನಿಮಗೂ ಸಹ ಇದ್ದರೆ ನೀವು ಸಹ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬೆಳೆಗಳ ಬಗ್ಗೆ ಹೆಚ್ಚು ತಿಳಿದುಕೊಂಡು ನಂತರ ಅಂತಹ ಬೆಳೆ ಬೆಳೆಯಲು ಮುಂದಾಗಿ ಧನ್ಯವಾದ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment