ಈ ರೈತ ಒಂದು ಚಿಕ್ಕ ವಿಜ್ಞಾನಿಕ ವಿಧಾನವನ್ನ ಅಳವಡಿಸಿಕೊಂಡು ಮೀನು ಸಾಕಾಣಿಕೆ ಮಾಡಿ ವರ್ಷಕ್ಕೆ ಲಕ್ಷ ಲಕ್ಷ ಆದಾಯ ಪಡೆಯುತ್ತಿದ್ದಾನೆ…

66

ನಮಸ್ಕಾರಗಳು, ಇವತ್ತಿನ ಮಾಹಿತಿಯಲ್ಲಿ ಯಾವ ಸಾಫ್ಟ್ವೇರ್ ಸಾಫ್ಟ್ ವೇರ್ ಕೆಲಸ ಮಾಡದೆ ಲಕ್ಷ ಲಕ್ಷ ಸಂಪಾದನೆ ಮಾಡುತ್ತಾ ಇರುವಂತಹ ಒಬ್ಬ ರೈತರ ಬಗ್ಗೆ ನಿಮಗೆ ತಿಳಿಸಲಿದ್ದೇವೆ ಹೌದು ತಮಗಿರುವ ತುಂಡು ಭೂಮಿಯಲ್ಲಿಯೇ ಮೀನು ಸಾಕಾಣಿಕೆ ಮಾಡುವ ಮೂಲಕ ಲಕ್ಷ ಲಕ್ಷ ಹಣ ಸಂಪಾದನೆ ಮಾಡುತ್ತಾ ಇರುವ ಈ ಗೌಡರು ಮೂಲತಃ ಮಂಡ್ಯ ಜಿಲ್ಲೆಯವರು ಆಗಿದ್ದು, ಇವರು ಮೂಲತಃ ರೈತರು ಆಗಿದ್ದರೂ, ಮೀನು ಸಾಕಾಣಿಕೆ ಮಾಡುವ ಮೂಲಕ ಲಕ್ಷ ಲಕ್ಷ ಆದಾಯ ಗಳಿಸುತ್ತ ಇದ್ದಾರೆ. ಹೌದು ಎಷ್ಟೋ ಜನರು ಮೀನು ಸಾಗಾಣಿಕೆ ಮಾಡುವುದನ್ನು ಕೇವಲ ಅಂತ ಹೇಳ್ತಾರೆ, ಆದರೆ ಎಷ್ಟೋ ಜನರಿಗೆ ತಿಳಿದಿಲ್ಲಾ ಮೀನು ಸಾಕಾಣಿಕೆ ಮಾಡುವುದರಿಂದ ಸಹ ಲಕ್ಷ ಹಣ ಗಳಿಸ ಬಹುದು ಎಂದು.

ಹೌದು ಸ್ನೇಹಿತರೆ ಮೀನು ಸಾಕಾಣಿಕೆ ಮಾಡುತ್ತಾ ವರ್ಷಕ್ಕೆ ಲಕ್ಷ ಹಣ ಗಳಿಸುತ್ತಾ ಇರುವ ಇವರು ತಮ್ಮ ಕೃಷಿ ಜಮೀನಿನಲ್ಲಿ ಸ್ವಲ್ಪ ಜಾಗದಲ್ಲಿ ಹೊಂಡವನ್ನು ಮಾಡುವ ಮೂಲಕ ಅಲ್ಲಿ ಮೀನು ಸಾಕಾಣಿಕೆ ಮಾಡುತ್ತಿದ್ದಾರೆ. ಹೌದು ಇವರು ಮೊದಲು ಭದ್ರಾವತಿ ತಾಲ್ಲೂಕಿನ ಬಿ.ಆರ್. ಪಿ ಅಲ್ಲಿ ಇರುವಂತಹ ಫಿಷರ್ ಡಿಪಾರ್ಟ್ ಮೆಂಟಿಗೆ ಹೋಗಿ ಅಲ್ಲಿ ಮರಿಗಳನ್ನ ತೆಗೆದುಕೊಂಡು ಬಂದು ತಮ್ಮ ಹೊಂಡದಲ್ಲಿ ಬಿಟ್ಟು ಮೀನುಗಳನ್ನು ಸಾಕುತ್ತಾರೆ ಈ ಮೀನುಗಳು ಸ್ವಲ್ಪ ಸ್ವಲ್ಪ ದೊಡ್ಡದಾದ ಮರಿಗಳು ಆದ ಬಳಿಕ ಇದನ್ನು ಮಾರಾಟ ಮಾಡುತ್ತಾರೆ.

ಹೌದು ಮೀನು ಸಾಕಾಣಿಕೆ ಮಾಡುವುದು ಕಷ್ಟವೇನೂ ಅಲ್ಲ ಮೊದಮೊದಲು ಸ್ವಲ್ಪ ಕಷ್ಟ ಅನಿಸಬಹುದು ಆದರೆ ನಂತರದ ದಿನಗಳಲ್ಲಿ ಈ ಮೀನು ಸಾಕಾಣಿಕೆ ಮಾಡುವುದು ಬಹಳ ಸುಲಭ ಅನ್ನಿಸುತ್ತದೆ ಇದಕ್ಕಾಗಿ ಸ್ವಲ್ಪವಾದರೂ ಅಗಲವಾದ ಜಾಗವಿರಬೇಕು. ಇಲ್ಲಿ ಮೀನು ಮರಿಗಳನ್ನು ಬಿಡಬೇಕು. ಹೌದು ಈ ಗೌಡರು ಮೊದಲು ಹತ್ತು ಲಕ್ಷ ಮೀನಿನ ಮರಿಗಳನ್ನು ತಂದು ಹೊಂಡದಲ್ಲಿ ಬಿಡುತ್ತಾರೆ, ನಂತರ ಈ ಮರಿಗಳಿಗೆ ಬೇಕಾಗಿರುವ ಆಹಾರವನ್ನು ಪ್ರತಿ ದಿನ ನೀಡುವ ಮೂಲಕ ಮೀನುಗಳ ತೂಕ ಹೆಚ್ಚುತ್ತದೆ ಆನಂತರ ತೂಕ ಹೆಚ್ಚಿದ ಮೇಲೆ ಮೀನುಗಳು ಸ್ವಲ್ಪ ದೊಡ್ಡದಾದ ನಂತರ ಅದನ್ನು ಮಾರಾಟ ಮಾಡ್ತಾರೆ.

ಮೀನು ಸಾಕಾಣಿಕೆ ಅನ್ನೂ ರೈತರು ಮಾತ್ರ ಮಾಡಬೇಕು ಅಂತ ಏನೂ ಇಲ್ಲ ಈ ಮೀನು ಸಾಕಾಣಿಕೆ ಮಾಡುವುದಕ್ಕೆ ನಿಮ್ಮ ಬಳಿ ಸ್ವಲ್ಪ ಜಾಗವಿದ್ದರೂ ಸಹ ಮೀನು ಸಾಕಾಣಿಕೆ ಅನ್ನೋ ಮಾಡಬಹುದಾಗಿದೆ. ಹೌದು ಮೊದಲು ಈ ಮೀನು ಸಾಕಾಣಿಕೆ ಮಾಡುವವರಿಗೆ ಸರ್ಕಾರದಿಂದ ಯಾವ ಸಹಾಯಧನ ನೀಡುತ್ತಾ ಇರಲಿಲ್ಲ ಆದರೆ ಇದೀಗ ಸರ್ಕಾರವೇ ಸಹಾಯಧನವನ್ನ ನೀಡುತ್ತಾ ಇದೆ ಮೀನು ಸಾಕಾಣಿಕೆ ಮಾಡುವವರಿಗೆ ಹೌದು ಹೊಂಡ ತೋಡಿಸುವುದಕ್ಕಾಗಿ ಸಹಾಯಧನವನ್ನು ಇದೀಗ ಸರಕಾರ ನೀಡುತ್ತಾ ಇದ್ದು ನೀವು ಸಹ ನಿಮ್ಮ ಬಳಿ ಜಾಗವಿದ್ದರೆ ಈ ಮೀನು ಸಾಕಾಣಿಕೆ ಅನ್ನೋ ಮಾಡಬಹುದು. ಇನ್ನೂ ಮೀನಿನ ಬಗ್ಗೆ ಹೇಳುವುದೇ ಬೇಡ ಜನರು ವಾರಕ್ಕೊಮ್ಮೆ ನೀರನ್ನು ಸೇವಿಸಲು ಇಷ್ಟಪಡುತ್ತಾರೆ ಆದ್ದರಿಂದ ಈ ಮೀನು ಸಾಕಾಣಿಕೆ ಮಾಡುವುದರಿಂದ ಯಾರಿಗೂ ಸಹ ನಷ್ಟ ಇಲ್ಲ ಮೀನುಗಳ ಮಾರಾಟ ಉತ್ತಮವಾಗಿಯೇ ನಡೆಯುತ್ತಿರುವ ಕಾರಣ ಈ ಮೀನು ಸಾಕಾಣಿಕೆ ಮಾಡುವುದರಿಂದ ಖಂಡಿತವಾಗಿಯೂ ಲಾಭ ಮಾಡಬಹುದು ಎಂದು ಮೀನು ಸಾಕಾಣಿಕೆ ಮಾಡುವವರು ಹೇಳುತ್ತಾರೆ.

ಜೂನ್ ತಿಂಗಳಿನಲ್ಲಿ ಮರಿಗಳನ್ನು ತಂದು ಹೊಂಡಕ್ಕೆ ಬಿಡಲಾಗುತ್ತದೆ ನಂತರ ಇದಕ್ಕೆ ಹಿಂಡಿ ಇನ್ನಿತರ ಆಹಾರ ಪದಾರ್ಥಗಳನ್ನು ನೀಡುವ ಮೂಲಕ ಮೀನಿನ ಮರಿಯ ತೂಕ ಹೆಚ್ಚುತ್ತದೆ. ನೀವು ಸಹ ಈ ಮೀನು ಸಾಕಾಣಿಕೆ ಮಾಡಬೇಕು ಅಂತ ಇದ್ದರೆ ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಜಿಲ್ಲೆಯಲ್ಲಿ ಇರುವ ಫಿಶರಿ ಡಿಪಾರ್ಟ್ ಮೆಂಟ್ ಗೆ ಭೇಟಿ ನೀಡಬಹುದು ಅಥವಾ ಕೃಷಿ ಇಲಾಖೆ ಅಲ್ಲಿಯೂ ಸಹ ನಿಮಗೆ ಇದರ ಕುರಿತು ಹೆಚ್ಚಿನ ಮಾಹಿತಿ ನೀಡುತ್ತಾರೆ ಇನ್ನು ನೀವು ಕೃಷಿ ಭೂಮಿ ಹೊಂದಿದ್ದ ಮೀನು ಸಾಕಣೆ ಮಾಡುವುದು ಬಹಳ ಸುಲಭ ಹಾಗೆ ಮೀನು ಸಾಕಣೆ ಮಾಡುವುದಕ್ಕೆ ಬೋರ್ ನೀರು ಸಿಹಿನೀರು 2ಅವಶ್ಯಕವಾಗಿದ್ದು ಗ್ರಾಮ ಪಂಚಾಯಿತಿಯಿಂದ ನಿಮಗೆ ಮೀನು ಸಾಕಾಣಿಕೆ ಮಾಡಲು ಸಹಾಯ ಧನವನ್ನು ಸಹ ನೀಡಲಾಗುತ್ತದೆ.