ನಮಸ್ಕಾರ, ಇವತ್ತಿನ ಮಾಹಿತಿಯಲ್ಲಿ ನಾವು ನಿಮಗೆ ತಿಳಿಸಲಿರುವ ಈ ಮಾಹಿತಿ ರೈತರುಗಳಿಗಾಗಿ. ಹೌದು ರೈತರು ಕಷ್ಟ ಪಟ್ಟು ತಮ್ಮ ಜಮೀನಿನಲ್ಲಿ ಕೆಲಸ ಮಾಡಿ ದೇಶಕ್ಕಾಗಿ ಹಗಲು ಇರುಳು ಅನ್ನದೆ, ವರ್ಷವಿಡೀ ಕೆಲಸ ಮಾಡ್ತಾರೆ ಹಾಗೆ ರೈತರು ತಾವು ಬೆಳೆದ ಬೆಳೆಗೆ ಹೆಚ್ಚು ಆದಾಯ ಲಭಿಸುತ್ತಾ ಇಲ್ಲ ಈ ಕಾರಣಕ್ಕಾಗಿ ಆತ ತನ್ನ ವಾರ್ಷಿಕ ಆದಾಯ ವಾಗಲಿ ಅಥವಾ ತಿಂಗಳಿನ ಆದಾಯ ಆಗಲೇ ಹೆಚ್ಚು ಮಾಡಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ಇತ್ತ ಸರಕಾರ ಸಹ ರೈತರುಗಳ ಆದಾಯವನ್ನ ಹೆಚ್ಚು ಮಾಡಬೇಕು ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ನಿಯಂತ್ರಿಸಬೇಕು ಎಂದು ಹಲವು ಯೋಜನೆಯನ್ನು ಹಾಗೂ ರೈತರ ಕುಟುಂಬಕ್ಕೆ ಸಹಾಯ ಆಗಲಿ ಎಂದೆ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ ಆದರೆ ಎಷ್ಟೋ ಮಂದಿಗೆ ಹಾಗೂ ರೈತರುಗಳಿಗೆ ಸರ್ಕಾರದಿಂದ ರೈ ರೈತರು ಗಳಿಗಾಗಿ ನೀಡುತ್ತಾ ಇರುವ ಹಲವು ಯೋಜನೆಗಳ ಬಗ್ಗೆ ಮಾಹಿತಿಯೇ ತಿಳಿಯುತ್ತಾ ಇಲ್ಲಾ. ಆದ ಕಾರಣ ಇಂದಿನ ಲೇಖನಿಯಲ್ಲಿ ಸರ್ಕಾರದ ವತಿಯಿಂದ ರೈತರುಗಳಿಗೆ ನೀಡುವ ಸೌಲಭ್ಯದ ಕುರಿತು ಮಾಹಿತಿ ತಿಳಿಸಲಿದ್ದೇವೆ.
ಹೌದು ನೀವು ಸಹ ರೈತಾಪಿ ಕುಟುಂಬದವರಾಗಿದ್ದರೆ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ರೈತಾಪಿ ಕುಟುಂಬದವರು ನಾವಲ್ಲ ನಮಗ್ಯಾಕೆ ಈ ಮಾಹಿತಿ ಅಂತ ಸುಮ್ಮನಿರಬೇಡಿ ಮಾಹಿತಿ ತಿಳಿದ ಮೇಲೆ ಈ ವಿಚಾರದ ಬಗ್ಗೆ ರೈತರುಗಳಿಗೆ ತಿಳಿಸುವ ಪ್ರಯತ್ನ ಮಾಡಿ ಯಾಕೆ ಅಂದರೆ ನಮ್ಮ ಭಾರತ ದೇಶದಲ್ಲಿ ಹಲವು ಕುಟುಂಬಗಳು ಈ ವ್ಯವಸಾಯವನ್ನೇ ನಂಬಿ ಬದುಕುತ್ತಿದ್ದಾರೆ ಆದಕಾರಣ ಅವರ ಆದಾಯ ಹೆಚ್ಚು ಮಾಡುವುದಕ್ಕಾಗಿ ಆಗಲಿ ಅಥವಾ ಅವರಿಗೆ ಸಹಾಯವಾಗಲೆಂದು ಸರಕಾರ ಸಹ ಹಲವು ಯೋಜನೆಗಳನ್ನ ನೀಡುತ್ತಾ ಇದ್ದು ಇದೀಗ ರೈತರುಗಳು ತಮ್ಮ ಜಮೀನಿಗಾಗಿ ಮತ್ತು ಕೃಷಿ ಮಾಡುವುದಕ್ಕಾಗಿ ಕೆಲವೊಂದು ಉಪಕರಣಗಳನ್ನು ಸಬ್ಸಿಡಿ ಸಹಿತವಾಗಿ ರೈತರಿಗೆ ನೀಡುತ್ತದೆ ಹಾಗಾದರೆ ಈ ಯೋಜನೆ ಬಗ್ಗೆ ತಿಳಿಯೋಣ ಬನ್ನಿ ಮತ್ತು ರೈತರುಗಳಿಗೆ ಯಾವ ಉಪಕರಣಗಳೂ ಎಷ್ಟು ಬೆಲೆಯಲ್ಲಿ ಸಿಗುತ್ತಾ ಇದೆ ಹಾಗೂ ಸಬ್ಸಿಡಿ ಎಷ್ಟು ದೊರೆತಾಗ ಇದನ್ನೆಲ್ಲ ತಿಳಿಸುತ್ತೇವೆ ಈ ಕೆಳಗಿನ ಮಾಹಿತಿಯಲ್ಲಿ.
ಹೌದು ಮೊದಲನೆಯದಾಗಿ ರೀಪರ್ ಇದರ ಬೆಲೆ ಸುಮಾರು ಒಂದೂವರೆ ಲಕ್ಷ ಇದಕ್ಕೆ ಸರಕಾರ ನೀಡುತ್ತಾ ಇರುವ ಸಬ್ಸಿಡಿ 50ಸಾವಿರ ಹಾಗೆ ರೈತ ಈ ಉಪಕರಣವನ್ನು ಕೊಂಡುಕೊಳ್ಳುವುದಕ್ಕಾಗಿ ನೀಡಬೇಕಾಗಿರುವ ಹಣ 65ಸಾವಿರ. ಎರಡನೆಯದಾಗಿ ಫ್ಲೂ ಇದರ ಬೆಲೆ 41ಸಾವಿರ ಹಾಗೂ ಇದಕ್ಕೆ ಸಿಗುತ್ತಿರುವ ಸಬ್ಸಿಡಿ 18ಸಾವಿರ ಎನ್ನುವ ರೈತ ನೀಡಬೇಕಾಗಿರುವ ಹಣ 23ಸಾವಿರ₹. ಮೂರನೆಯದಾಗಿ 2 ಎಚ್ ಪಿ ಚಾಫ್ ಕಟರ್, ಇದರ ಬೆಲೆ 25ಸಾವಿರ ರೂಪಾಯಿಗಳು ಇನ್ನೂ ಇದಕ್ಕೆ ದೊರೆಯುತ್ತಿರುವ ಸಬ್ಸಿಡಿ 11ಸಾವಿರ ಹಾಗೆಯೇ ರೈತ ನೀಡಬೇಕಾಗಿರುವ ಹಣ 14ಸಾವಿರ…
ಇನ್ನೂ 2ಎಚ್ ಪಿ ಕಟ್ಟರ್ ವಿಟ್ ಫ್ಲೋರ್ ಮಿಲ್ ಇದರ ಬೆಲೆ ಮಾರುಕಟ್ಟೆಯಲ್ಲಿ ಸುಮಾರು 46ಸಾವಿರ ರೂಪಾಯಿಗಳು ಆಗಿದ್ದು ಸರ್ಕಾರ ನೀಡುವ ಸಬ್ಸಿಡಿ 26ಸಾವಿರ ರೂಪಾಯಿಗಳು ಇನ್ನೂ ಇದಕ್ಕೆ ರೈತ ನೀಡಬೇಕಾಗಿರುವ ಹಣ 20ಸಾವಿರ ರೂಪಾಯಿಗಳು ಮಾತ್ರ. ಪವರ್ ವೀಡರ್ 6 ಹೆಚ್ ಪಿ ಇದಕ್ಕೆ ರೈತರಿಗೆ ಬೇಕಾಗಿರುವ ಮತ್ತು ಸಬ್ಸಿಡಿ ನಂತರ ಕೊಡಬೇಕಾಗಿರುವ ದುಡ್ಡು 35 ಸಾವಿರ ರೂಪಾಯಿ ಮಾತ್ರ. ನಂತರ ಪವರ್ ವೀಡರ್ 9ಹೆಚ್ಚು ಸಬ್ಸಿಡಿ ನಂತರ ರೈತ ಈ ಉಪಕರಣಕ್ಕಾಗಿ ನೀಡಬೇಕಾಗಿರುವ ಹಣ 65ಸಾವಿರ ರೂಪಾಯಿಗಳು.
ಫುಡ್ ಕಲ್ಟಿವೇಟರ್ ಸಬ್ಸಿಡಿಯ ನಂತರ ರೈತ ನೀಡಬೇಕಾಗಿರುವ ಹಣ 18ಸಾವಿರ ರೂಪಾಯಿಗಳು. 9ಟಯರ್ ಕಲ್ಟಿವೇಟರ್ ಇದರ ಬೆಲೆ ಅಂದರೆ ರೈತ ನೀಡಬೇಕಾಗಿರುವ ಪಾಲು 17 ಸಾವಿರ ರೂಪಾಯಿಗಳು. ಪವರ್ ಟಿಲ್ಲರ್ ಈ ಉಪಕರಣವನ್ನು ಕೊಂಡುಕೊಳ್ಳುವುದಕ್ಕಾಗಿ ರೈತ ನೀಡಬೇಕಾಗಿರುವ ಹಣ 123000 ರೂಪಾಯಿಗಳು ಮಾತ್ರ ಈ ರೀತಿ ಸಬ್ಸಿಡಿ ಅನಂತರ ರೈತರುಗಳು ಇಷ್ಟು ಹಣವನ್ನು ನೀಡಿ ತಮ್ಮ ಕೃಷಿಗೆ ಬೇಕಾಗುವ ಉಪಕರಣಗಳನ್ನು ಕೊಂಡುಕೊಳ್ಳಬಹುದಾಗಿದೆ. ಈ ಮಾಹಿತಿ ಬಗ್ಗೆ ಯಾರೆಲ್ಲ ರೈತರುಗಳು ಇದ್ದಾರೆ ಅಂಥವರಿಗೆ ತಪ್ಪದೆ ತಿಳಿಸಿಕೊಡಿ ಧನ್ಯವಾದ.