Categories
ನ್ಯೂಸ್

ಸಿನಿಮಾದಲ್ಲಿ ಬಳಸುವ ಬಟ್ಟೆಗಳನ್ನು ಸಿನಿಮಾ ಮುಗಿದ ಮೇಲೆ ಏನು ಮಾಡ್ತಾರೆ ಅನ್ನೋದರ ಬಗ್ಗೆ ನಿಮಗೆ ಗೊತ್ತ …

ಸಿನಿಮಾಗಳಲ್ಲಿ ನಟ ನಟಿಯರು ಹಾಕಿ ಕೊಂಡಂತಹ ಬಟ್ಟೆಗಳು ಸಿನಿಮಾ ಮುಗಿದ ನಂತರ ಏನು ಮಾಡುತ್ತಾರೆ ಅನ್ನೋ ಒಂದು ಪ್ರಶ್ನೆ ಎಲ್ಲರಲ್ಲಿಯೂ ಕೂಡ ಕಾಡಿರುತ್ತದೆ , ಸ್ನೇಹಿತರ ಇದೊಂದು ಕಾಡುವಂತಹ ಪ್ರಶ್ನೆಯೇ ಹೌದು ಹಾಗಾದರೆ ಈ ದಿನ ನಿಮ್ಮ ಸಂಶಯದ ಈ ಪ್ರಶ್ನೆಗೆ ನಾನು ಇಂದು ನಿಮಗೆ ಉತ್ತರವನ್ನು ಕೊಡುತ್ತೇನೆ .

ತಪ್ಪದೇ ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ ಮತ್ತು ಮಾಹಿತಿ ಇಷ್ಟವಾದಲ್ಲಿ ಉಪಯುಕ್ತ ಎನ್ನಿಸಿದಲ್ಲಿ ನಿಮ್ಮ ಗೆಳೆಯರಿಗೂ ಕೂಡಾ ಶೇರ್ ಮಾಡಿ ಮತ್ತು ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ತಪ್ಪದೇ ನಮ್ಮ ಪೇಜನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ .

ಒಂದು ಸಿನಿಮಾ ಆಗಬೇಕು ಅಂದರೆ ಆ ಒಂದು ಸಿನಿಮಾದಲ್ಲಿ ಕಥೆಯಿಂದ ಹಿಡಿದು ನಟ ನಟಿಯರು ಬಳಸುವಂತಹ ಆ ಕಾಸ್ಟ್ಯೂಂ ನಿಂದ ಹಿಡಿದು ಪ್ರತಿಯೊಂದಕ್ಕೂ ಕೂಡ ಗಮನ ಕೊಡಬೇಕಾಗುತ್ತದೆ .

ಒಂದು ಸಿನಿಮಾ ನಿರ್ಮಾಣ ಮಾಡಬೇಕು ಅಂದರೆ ಆ ಸಿನಿಮಾಕ್ಕಾಗಿ ಸಿನಿಮಾದಲ್ಲಿ ನಟನೆ ಮಾಡುವವರಿಗಾಗಿ ಲಕ್ಷಾಂತರ ರೂಪಾಯಿ ಬಟ್ಟೆಗಳನ್ನು ಕೊಂಡುಕೊಂಡು ಬರಲಾಗುತ್ತದೆ ಆದರೆ ಸಿನಿಮಾ ಮುಗಿದ ನಂತರ ಈ ಬಟ್ಟೆಗಳನ್ನು ಏನು ಮಾಡುತ್ತಾರೆ ಅನ್ನೋದು ಯಾರಿಗಾದರೂ ತಿಳಿದಿದೆಯಾ .

ಹೌದು ಸ್ನೇಹಿತರೆ ಸಿನಿಮಾ ನಿರ್ಮಾಣ ಮಾಡುವಾಗ ಲಕ್ಷಾಂತರ ರೂಪಾಯಿ ದುಡ್ಡನ್ನು ಬಟ್ಟೆಯಿಂದ ಖರ್ಚು ಮಾಡುತ್ತಾರೆ ಆದರೆ ಸಿನಿಮಾ ಮುಗಿದ ನಂತರ ಅದನ್ನು ಏನು ಮಾಡುತ್ತಾರೆ.

ಅಂತ ತಿಳಿದರೆ ನಿಜಕ್ಕೂ ನಿಮಗೆ ಅಚ್ಚರಿಯಾಗುತ್ತದೆ , ಅದೇನೆಂದರೆ ಸಿನಿಮಾ ಮುಗಿದ ನಂತರ ಆ ಸಿನಿಮಾದ ನಿರ್ಮಾಪಕರು ಬಟ್ಟೆಗಳನ್ನು ಗೋಡೋನಲ್ಲಿ ಹಿಡಿಸುತ್ತಾರೆ.

ನಂತರ ಅದನ್ನು ಸೆಕೆಂಡ್ಸ್ ನಲ್ಲಿ ಮಾರಲಾಗುತ್ತದೆ ಅಥವಾ ಇನ್ನು ಕೆಲ ನಿರ್ಮಾಪಕರು ಸಿನಿಮಾಗಳಲ್ಲಿ ಬಳಸಿದಂತಹ ಬಟ್ಟೆಗಳನ್ನು ಒಂದು ಮಾರುಕಟ್ಟೆ ಇದೆ ಆ ಮಾರುಕಟ್ಟೆಯಲ್ಲಿ ತೆಗೆದುಕೊಂಡು ಹೋಗಿ ಸೇಲ್ ಮಾಡಿ ಬರಲಾಗುತ್ತದೆ . ಆ ಮಾರ್ಕೆಟ್ ಇರುವುದು ನಮ್ಮ ಭಾರತ ದೇಶದಲ್ಲಿಯೇ ಮುಂಬೈನಲ್ಲಿ ಸಿನಿಮಾದ ಬಟ್ಟೆಗಳನ್ನು ತೆಗೆದುಕೊಳ್ಳುವುದಕ್ಕಾಗಿ ಒಂದು ಮಾರುಕಟ್ಟೆ ಇದೆ ಅಲ್ಲಿ ಈ ಬಟ್ಟೆಗಳನ್ನು ಸೆಲ್ ಮಾಡಲಾಗುತ್ತದೆ .

ಸಿನಿಮಾಗೋಸ್ಕರ ಆ ನಿರ್ಮಾಪಕರು ಲಕ್ಷಾಂತರ ರೂಪಾಯಿಗಳನ್ನು ಕೊಟ್ಟು ಬಟ್ಟೆಗಳನ್ನು ಕೊಂಡುಕೊಂಡು ಬಂದರೆ ಅದನ್ನು ಮಾರುವುದು ಮಾತ್ರ ತುಂಬಾ ಕಡಿಮೆ ಬೆಲೆಗೆ ಉದಾಹರಣೆಗೆ ಸಿನಿಮಾಕ್ಕೆಂದು ನಿರ್ಮಾಪಕರು ಹತ್ತು ಲಕ್ಷ ರೂಪಾಯಿಗಳನ್ನು ಕೊಟ್ಟು ಬ್ರಾಂಡೆಡ್ ಬಟ್ಟೆಗಳನ್ನು ಕೊಂಡುಕೊಂಡು ಬಂದರೆ ಅದನ್ನು ಮಾರುವಾಗ ಒಂದು ಲಕ್ಷ ರೂಪಾಯಿಗಳಿಗೆ ಮಾತ್ರ ಆ ಬಟ್ಟೆಗೆ ಬೆಲೆ ಕೊಡಲಾಗುತ್ತದೆ .

ಇನ್ನು ಕೆಲ ಸೂಪರ್ ಸ್ಟಾರ್ ನಟ ನಟಿಯರ ಬಟ್ಟೆಗಳನ್ನು ಹರಾಜು ಮಾಡಲಾಗುತ್ತದೆ ಈ ಹರಾಜಿನಲ್ಲಿ ಅವರ ಬಟ್ಟೆ ಕೆಲವೊಮ್ಮೆ ಲಕ್ಷಾಂತರ ರೂಪಾಯಿಗಳಿಗೆ ಕೂಡ ಮಾರಾಟವಾಗುತ್ತದೆ , ಈ ಹಿಂದೆ ಒಮ್ಮೆ ಶಾರುಖ್ ಖಾನ್ ಐಶ್ವರ್ಯ ರೈ ಅಮಿತಾಬ್ ಬಚ್ಚನ್ ಸನ್ನಿ ಲಿಯೋನ್ ಅವರ ಬಟ್ಟೆಗಳು ಲಕ್ಷಾಂತರ ರೂಪಾಯಿಗಳಿಗೆ ಹರಾಜಾಗಿದ್ದ ವಿಚಾರ ಸಾಕಷ್ಟು ವೈರಲ್ ಆಗಿತ್ತು .

ಈ ರೀತಿಯಾಗಿ ಸಿನಿಮಾದಲ್ಲಿ ಬಳಸಿದಂತಹ ಬಟ್ಟೆಗಳನ್ನು ಮಾರಾಟ ಮಾಡಲಾಗುತ್ತದೆ ಅಥವಾ ಹರಾಜು ಮಾಡಲಾಗುತ್ತದೆ ಇನ್ನು ಕೆಲವರು ಆ ಬಟ್ಟೆಗಳನ್ನು ಕೊಂಡುಕೊಂಡು ಹೋಗಿ ತಮಗೆ ಇಷ್ಟ ಬಂದ ಬೆಲೆಗೆ ಸೆಕೆಂಡ್ಸ್ ನಲ್ಲಿ ಮಾರಾಟ ಮಾಡುತ್ತಾರೆ .
ಕೆಲ ನಿರ್ಮಾಪಕರು ಸಿನಿಮಾದಲ್ಲಿ ಬಳಸಿದಂತಹ ಬಟ್ಟೆಗಳನ್ನು ಗೋಡನ್ನಲ್ಲಿ ಸ್ಟಾಕ್ ಮಾಡಿ ಇಡುತ್ತಾರೆ ನಂತರ ಆ ಬಟ್ಟೆಗಳನ್ನು ಅಥವಾ ಶೂಸ್ಗಳನ್ನು ಸಹ ನಟರಿಗೆ ಬಾಡಿಗೆ ದರದಲ್ಲಿಯೂ ಕೂಡ ಬಟ್ಟೆಗಳನ್ನು ಕೊಡಲಾಗುತ್ತದೆ .

ಧಾರಾವಾಹಿಯ ವಿಚಾರಕ್ಕೆ ಬಂದರೆ ಧಾರಾವಾಹಿಯಲ್ಲಿ ನಟಿಸುವಂತ ನಟರು , ನಿರ್ಮಾಪಕರು ಮಾರನೇ ದಿವಸಕ್ಕೆ ಯಾವ ಕಾಸ್ಟ್ಯೂಮ್ ಅನ್ನು ಹೇಳುತ್ತಾರೋ ಅದನ್ನು ಆ ಧಾರಾವಾಹಿ ನಟರೇ ಹಾಕಿಕೊಂಡು ಬರಬೇಕಾಗುತ್ತದೆ ಆದ್ದರಿಂದ ಧಾರಾವಾಹಿಯಲ್ಲಿ ಯಾವುದೇ ರೀತಿಯ ಕಾಸ್ಟ್ಯೂಮ್ ತಲೆಬಿಸಿ ನಿರ್ಮಾಪಕರಿಗೆ ಇರುವುದಿಲ್ಲ .

Leave a Reply

Your email address will not be published. Required fields are marked *