Sunday, April 11, 2021
Homeಅರೋಗ್ಯಒಂದೇ ರಾತ್ರಿ ಯಲ್ಲಿ ನಿಮ್ಮ ಮುಖದಲ್ಲಿನ ಸುಕ್ಕು, ಕಪ್ಪು ಕಲೆ ತೊಲಗಿಸಿ... ಇಲ್ಲಿದೆ ಸುಲಭ ಪರಿಹಾರ...

ಒಂದೇ ರಾತ್ರಿ ಯಲ್ಲಿ ನಿಮ್ಮ ಮುಖದಲ್ಲಿನ ಸುಕ್ಕು, ಕಪ್ಪು ಕಲೆ ತೊಲಗಿಸಿ… ಇಲ್ಲಿದೆ ಸುಲಭ ಪರಿಹಾರ …

ಇತ್ತೀಚಿನ ದಿನಗಳಲ್ಲಿ ಅಂತೂ ಹುಡುಗರಿಗಿಂತ ಹುಡುಗರೇ ತಮ್ಮ ಮುಖದ ಬಗ್ಗೆ ಹೆಚ್ಚು ಕಾಳಜಿಯನ್ನು ಮಾಡ್ತಾರೆ ಹಾಗಂತ ಹುಡುಗಿಯರೇನೂ ಕಡಿಮೆಯಲ್ಲ ತಮ್ಮ ಸೌಂದರ್ಯದ ಬಗ್ಗೆ ಯಾವಾಗಲೂ ಕೂಡ ಚಿಂತೆ ಮಾಡುವ ಹೆಣ್ಣು ಮಕ್ಕಳಿಗಾಗಿ ಜೊತೆಗೆ ತಾವು ಚೆನ್ನಾಗಿ ಕಾಣಬೇಕು .ಅಂತ ಅಂದುಕೊಳ್ಳೋ ಗಂಡು ಮಕ್ಕಳಿಗಾಗಿ ಒಂದೊಳ್ಳೆ ಉಪಯುಕ್ತಕಾರಿಯಾದ ಮನೆ ಮದ್ದನ್ನು ತಿಳಿಸಿಕೊಡಲು ಇಚ್ಛಿಸುತ್ತೇನೆ, ಈ ಮಾಹಿತಿಯ ಮುಖಾಂತರ ನೀವು ಕೂಡ ಹೇಗೆ ಅಂದವಾಗಿ ಕಾಣುವುದು ಹೇಗೆ ನಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳುವುದು ಎಂಬುದನ್ನು ತಿಳಿದು ಬೇರೆಯವರಿಗೂ ಕೂಡ ಇದನ್ನು ಶೇರ್ ಮಾಡುವುದನ್ನು ಮರೆಯದಿರಿ.

ಸಾಮಾನ್ಯವಾಗಿ ವಯಸ್ಸಾದಂತೆ ಮುಖದ ತ್ವಚೆ ಸುಕ್ಕು ಬರುತ್ತದೆ, ಇದು ಕೂಡ ಸಹಜ. ಆದರೆ ಇತ್ತೀಚಿನ ದಿನಗಳಲ್ಲಿ ಜನ ಬಳಸುತ್ತಿರುವ ರಾಸಾಯನಿಕಯುಕ್ತ ಕ್ರೀಮುಗಳನ್ನು ಮತ್ತು ಇನ್ನೂ ಅನೇಕ ಸೌಂದರ್ಯ ವರ್ಧಕಗಳನ್ನು ಬಳಸಿ ತ್ವಚೆ ಬೇಗನೆ ಸುಕ್ಕುಗಟ್ಟುತ್ತದೆ ಇಪ್ಪತ್ತು ವಯಸ್ಸಿನಲ್ಲಿಯೇ ದೊಡ್ಡವರ ಹಾಗೆ ಕಾಣಿಸಿಕೊಳ್ಳುತ್ತಿರುತ್ತಾರೆ ಇದಕ್ಕೆಲ್ಲ ಕಾರಣ ಅಂದರೆ ನಾವು ಬಳಸುತ್ತಿರುವ ಸೌಂದರ್ಯವರ್ಧಕಗಳೆ.

ಹಾಗಾದರೆ ಈ ಮಾಹಿತಿಯ ಮುಖಾಂತರ ತಿಳಿಯೋಣ ಹೀಗೊಂದು ಸುಕ್ಕುಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಮನೆಯಲ್ಲಿಯೇ ಮಾಡಬಹುದಾದಂತಹ ಉತ್ತಮವಾದ ಮನೆ ಮದ್ದುಗಳು ಯಾವುದು ಮತ್ತು ಮುಖದ ಸುಕ್ಕುಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಮುಖದ ಕಾಂತಿಯನ್ನು ಹೆಚ್ಚು ಮಾಡಿಕೊಳ್ಳುವುದಕ್ಕಾಗಿ ಹಾಗೂ ನಲವತ್ತು ಐವತ್ತು ವಯಸ್ಸಿನಲ್ಲಿ ತ್ವಚೆ ಸುಕ್ಕುಗಟ್ಟಬಾರದು ಅನ್ನುವುದಾದರೆ, ನಾವು ಈ ದಿನ ತಿಳಿಸುವಂತಹ ಈ ಮನೆ ಮದ್ದನ್ನು ನೀವು ವಾರದಲ್ಲಿ ಎರಡು ಬಾರಿ ಬಳಸುತ್ತಾ ಬನ್ನಿ ಸಾಕು.

ಹೀಗೊಂದು ಮನೆ ಮದ್ದನ್ನು ಮಾಡುವುದು ಹೇಗೆ ಅಂದರೆ ಮೊದಲಿಗೆ ಜೀರಿಗೆಯನ್ನು ತೆಗೆದುಕೊಳ್ಳಿ ಎರಡು ಚಮಚ ಜೀರಿಗೆಯನ್ನು ತೆಗೆದುಕೊಂಡು ಪುಟಾಣಿಯ ಸಹಾಯದಿಂದ ಅಥವಾ ಮಿಕ್ಸಿಯಲ್ಲಿ ರುಬ್ಬಿಕೊಂಡು ಪುಡಿ ಮಾಡಿಕೊಳ್ಳಿ, ಇದೀಗ ಈ ಜೀರಿಗೆಯ ಪುಡಿಯನ್ನು ಯಾವ ರೀತಿ ಬಳಸಬೇಕು ಅಂದರೆ ಜೀರಿಗೆಯ ಪುಡಿಯನ್ನು ಒಂದು ಚಮಚ ತೆಗೆದುಕೊಳ್ಳಿ ಅದಕ್ಕೆ ಅರ್ಧ ಚಮಚ ಲೋಳೆ ರಸವನ್ನು ಹಾಕಿ ಅರ್ಧ ಚಮಚ ನಿಂಬೆಹಣ್ಣಿನ ರಸವನ್ನು ಹಾಕಿ ಪೇಸ್ಟ್ ಮಾಡಿಕೊಳ್ಳಿ.

ಇದೀಗ ಈ ಪೇಸ್ಟ್ ಅನ್ನು ಒಮ್ಮೆ ಮುಖವನ್ನು ತಣ್ಣೀರಿನಿಂದ ತೊಳೆದ ಮೇಲೆ ಇದನ್ನು ಮುಖದ ಮೇಲೆ ಲೇಪಿಸಿಕೊಳ್ಳಿ, ಎಲ್ಲ ಭಾಗಗಳಿಗೂ ಲೇಪಿಸಿಕೊಂಡು ನಂತರ ಇದನ್ನು ಇಪ್ಪತ್ತು ನಿಮಿಷಗಳವರೆಗೆ ಹಾಗೇ ಬಿಡಿ. ನಂತರ ಇದನ್ನು ತಣ್ಣೀರಿನಿಂದ ಸ್ವಚ್ಛ ಪಡಿಸಿಕೊಳ್ಳಿ ನಿಧಾನವಾಗಿ ಮಸಾಜ್ ಮಾಡಿಕೊಳ್ಳುತ್ತಾ ಈ ಫೇಸ್ಪ್ಯಾಕ್ ಅನ್ನು ಸ್ವಚ್ಛ ಪಡಿಸಿಕೊಳ್ಳಬೇಕು.ಮುಖವನ್ನು ತೊಳೆದ ನಂತರ ನೀವು ಪ್ರತಿ ದಿನ ಬಳಸುವಂತಹ ಮಾಸ್ಟರೈಸ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ, ಪರಿಣಾಮಕಾರಿಯಾದ ಫಲಿತಾಂಶಕ್ಕಾಗಿ ನೀವು ಈ ಫೇಸ್ ಪ್ಯಾಕ್ ಅನ್ನು ವಾರಕ್ಕೆ ಎರಡು ದಿನ ಬಳಸುತ್ತಾ ಬಂದರೆ ಸಾಕು.

ಜೀರಿಗೆಯ ಗುಣ ನಿಮಗೆಲ್ಲರಿಗೂ ತಿಳಿದಿದೆ ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣ ಇರುವುದರ ಜೊತೆಗೆ ಆ್ಯಂಟಿ ಏಜಿಂಗ್ ಪ್ರಾಪರ್ಟಿ ಕೂಡ ಇದೆ, ಆದ ಕಾರಣ ಜೀರಿಗೆಯನ್ನು ಬಳಸಿ ಈ ಒಂದು ಫೇಸ್ ಪ್ಯಾಕ್ ಮಾಡಿ ಕೊಂಡು ಮುಖಕ್ಕೆ ಲೇಪಿಸಿಕೊಳ್ಳುವುದರಿಂದ, ಇದು ಮುಖದ ಕಾಂತಿಯನ್ನು ಹೆಚ್ಚು ಮಾಡುವುದಲ್ಲದೆ ಸುಕ್ಕು ನೆರಿಗೆಗಳನ್ನು ಕೂಡ ನಿವಾರಣೆ ಮಾಡುತ್ತದೆ.ಇದೊಂದು ಸುಲಭ ಪರಿಹಾರ ನಿಮಗೆ ಉಪಯುಕ್ತವಾಗಿ ಇದ್ದಲ್ಲಿ ನೀವು ಕೂಡ ಮಾಹಿತಿಯನ್ನು ತಿಳಿದು ಬೇರೆಯವರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ, ಹಾಗೂ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಮತ್ತು ಮಾಹಿತಿಗೆ ಲೈಕ್ ಮಾಡಿ ಧನ್ಯವಾದ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments