Sunday, April 11, 2021
Homeಎಲ್ಲ ನ್ಯೂಸ್ಈ ದೇವಸ್ಥಾನಕ್ಕೆ ಪೂಜಾರಿ ಹಾವು ಅಂತೆ ...ಸತತ 5 ಗಂಟೆಗಳ ಕಾಲ ಪೂಜೆ ಮಾಡುತ್ತದೆ ಈ...

ಈ ದೇವಸ್ಥಾನಕ್ಕೆ ಪೂಜಾರಿ ಹಾವು ಅಂತೆ …ಸತತ 5 ಗಂಟೆಗಳ ಕಾಲ ಪೂಜೆ ಮಾಡುತ್ತದೆ ಈ ಹಾವು …

ಕಳೆದ ಇಪ್ಪತ್ತು ವರ್ಷಗಳಿಂದಲೂ ಇಲ್ಲಿಯ ದೇವಾಲಯಕ್ಕೆ ಹಾವು ಬಂದು ಪೂಜೆ ಮಾಡಿ ಹೋಗುತ್ತದೆ ಅಂತೆ, ಈ ಒಂದು ಅಚ್ಚರಿ ನಡೆಯುತ್ತಿರುವುದು ಎಲ್ಲಿ ಅಂದರೆ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯಲ್ಲಿರುವ ಸಲೀಮಾ ಬಾದ್ ಎಂಬ ಊರಿನಲ್ಲಿರುವ ಶಿವನ ದೇವಾಲಯದಲ್ಲಿ.ನಮ್ಮ ಭಾರತ ದೇಶವು ಹಿಂದೂ ಧರ್ಮದ ನೆಲೆಯಾಗಿದ್ದು ಇಲ್ಲಿ ಅನೇಕ ವಿಸ್ಮಯಗಳನ್ನು ಅಚ್ಚರಿಗಳನ್ನು ನಾವು ನೋಡುತ್ತಿರಬಹುದು ಅದೇ ತರಹದಲ್ಲಿ ಈ ಒಂದು ದೇವಾಲಯದಲ್ಲಿಯೂ ಕೂಡ ಅನೇಕ ವರುಷಗಳಿಂದ ಆ ಒಂದು ವಿಸ್ಮಯ ನಡೆಯುತ್ತಲೇ ಇದೆ.

ಈ ಉತ್ತರ ಪ್ರದೇಶದಲ್ಲಿ ಇರುವಂತಹ ಈ ಒಂದು ದೇವಾಲಯಕ್ಕೆ ಅನೇಕ ವರುಷಗಳ ಇತಿಹಾಸವಿದ್ದರೂ ಕೂಡ ಈ ಹಾವು ಇಲ್ಲಿಗೆ ಬಂದು ಪೂಜೆ ಮಾಡುತ್ತಾ ಇರುವ ಬಗ್ಗೆ ಎಲ್ಲರಿಗೂ ತಿಳಿದಿದ್ದು ಮಾತ್ರ ಇಪ್ಪತ್ತು ವರುಷಗಳ ಹಿಂದೆ ಯಿಂದ. ಅಲ್ಲಿಯವರೆಗೂ ಈ ದೇವಾಲಯಕ್ಕೆ ಯಾರೂ ಕೂಡ ಭಕ್ತಾದಿಗಳು ಬರುತ್ತಿರಲಿಲ್ಲ.ಯಾವಾಗ ಈ ದೇವಾಲಯದಲ್ಲಿ ಈ ಒಂದು ಅಚ್ಚರಿ ನಡೆಯುತ್ತದೆ ಎಂದು ತಿಳಿಯಿತು ಅಂದಿನಿಂದಲೂ ಈ ಹಾವು ಮಾಡುವಂತಹ ಪವಾಡವನ್ನು ನೋಡಲು ಭಕ್ತಾದಿಗಳು ಸಾಲು ಸಾಲಾಗಿ ಬಂದು ದೇವರ ದರ್ಶನವನ್ನು ಪಡೆದುಕೊಂಡು ಹೋಗುತ್ತಿದ್ದಾರೆ.

ಈ ಹಾಗೂ ದೇವಾಲಯಕ್ಕೆ ಸುಮಾರು ಹತ್ತು ಗಂಟೆಗೆ ಬರುತ್ತದೆ ಐದು ಗಂಟೆಗಳ ಕಾಲ ಪೂಜೆಯನ್ನು ಮಾಡಿ ಸರಿಯಾಗಿ ಮೂರು ಗಂಟೆಗೆ ವಾಪಸ್ ಹೋಗುತ್ತದೆಯಂತೆ. ಇಲ್ಲಿ ನಡೆಯುತ್ತಿರುವಂತಹ ಅಚ್ಚರಿಯೇನು ಅಂದರೆ ಹಾವು ತನ್ನ ಪಾಡಿಗೆ ಬರುತ್ತದೆ ಈಶ್ವರನ ಆರಾಧ್ಯವನ್ನು ಮಾಡಿ ಮತ್ತೆ ಅಲ್ಲಿ ನೆರೆದಿರುವ ಭಕ್ತಾದಿಗಳಿಗೆ ಯಾವ ತೊಂದರೆಯೂ ಮಾಡದೆ ಮತ್ತೆ ತನ್ನಷ್ಟಕ್ಕೆ ತಾನು ವಾಪಸ್ಸು ಹೋಗುತ್ತದೆ.ಪ್ರತಿದಿನ ಹತ್ತು ಗಂಟೆಗೆ ಸರಿಯಾಗಿ ಬರುವ ಹಾಗೂ ಪೂಜೆ ಮಾಡಲೆಂದು ಹೋದಾಗ ಭಕ್ತಾದಿಗಳು ಯಾರಿಗೂ ಪ್ರವೇಶವು ಇರುವುದಿಲ್ಲ ಕೇವಲ ದೇವಸ್ಥಾನದ ಪೂಜಾರಿಗೆ ಮಾತ್ರ ಗರ್ಭಗುಡಿಗೆ ಪ್ರವೇಶವಿದ್ದು ಈ ಇಪ್ಪತ್ತು ವರ್ಷಗಳ ಹಿಂದೆ ಹೀಗೊಂದು ದೇವಾಲಯಕ್ಕೆ ಯಾವ ಪೂಜಾರಿಗಳು ಕೂಡಾ ಇರಲಿಲ್ಲ.

ಆದರೆ ಇದೀಗ ಹಾಗೂ ಪೂಜೆ ಮಾಡುವಾಗ ಅದನ್ನು ದೇವರ ಪೂಜೆ ಮಾಡುವಂತಹ ಪುರೋಹಿತರು ಮಾತ್ರ ನೋಡಬಹುದಾಗಿದ್ದು ಭಕ್ತಾದಿಗಳಿಗೆ ಗರ್ಭ ಗುಡಿಯ ಒಳಗೆ ಪ್ರವೇಶವು ಇರುವುದಿಲ್ಲ.ಹಾವು ತನ್ನಷ್ಟಕ್ಕೆ ತಾನು ದೇವರ ಪೂಜೆ ಮಾಡಿ ಸರಿಯಾಗಿ ಮೂರು ಗಂಟೆಗೆ ಹೋಗುತ್ತದೆ ಆ ನಂತರ ಭಕ್ತಾದಿಗಳಿಗೆ ಶಿವನ ದರುಶನವನ್ನು ನೀಡಲಾಗುತ್ತದೆ. ಈ ಊರಿನ ಜನ ಇಲ್ಲಿ ನಡೆಯುವ ವಿಸ್ಮಯವನ್ನು ಏನೆಂದು ತಿಳಿದಿದ್ದಾರೆ ಅಂದರೆ ಶಿವನ ಕತ್ತಿನಲ್ಲಿರುವ ಆ ಹಾವೇ ಪ್ರತಿದಿನ ಬಂದು ಶಿವನ ಪೂಜೆ ಅನ್ನು ಮಾಡಿ ಹೋಗುತ್ತದೆ .

ಎಂದು ಅರಿತು ಇವತ್ತಿಗೂ ಕೂಡ ಈ ಪವಾಡವನ್ನು ಮೆಚ್ಚಿ ಈ ಮನೋಹರವಾದ ದೃಶ್ಯವನ್ನು ನೋಡಲು ಭಕ್ತಾದಿಗಳು ಸಾಗರದಂತೆ ಬಂದು ಹಾವು ಮತ್ತು ಶಿವನ ದರ್ಶನವನ್ನು ಪಡೆದು ಹೋಗುತ್ತಿದ್ದಾರೆ.ಇನ್ನು ಈ ಮಾಹಿತಿ ನಿಮಗೂ ಕೂಡ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ ನೀವು ಕೂಡ ಶಿವನ ಭಕ್ತರಾಗಿದ್ದಾರೆ ಕಮೆಂಟ್ ಬಾಕ್ಸ್ ನಲ್ಲಿ ಓಂ ಎಂದು ಕಾಮೆಂಟ್ ಮಾಡಿ. ಇನ್ನು ಅನೇಕ ಇಂಟ್ರೆಸ್ಟಿಂಗ್ ಮಾಹಿತಿಗಳಿಗಾಗಿ ಉಪಯುಕ್ತ ವಿಚಾರಗಳಿಗಾಗಿ ನಮ್ಮ ಈ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವುದನ್ನು ಮರೆಯದಿರಿ. ಈ ಮಾಹಿತಿ ಅನ್ನು ಕುರಿತು ನಿಮ್ಮ ಅನಿಸಿಕೆಯನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ಎಲ್ಲರಿಗೂ ಶುಭವಾಗಲಿ ಧನ್ಯವಾದ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments