Sunday, April 11, 2021
Homeಅರೋಗ್ಯಕಾಫೀ ಪೌಡರಿನಿಂದ ಹೀಗೆ ಮಾಡಿದರೆ ಕೆಲವೇ ನಿಮಿಷಗಳಲ್ಲಿ ನಿಮ್ಮ ಕತ್ತಿನ ಭಾಗವು ಬಿಳುಪಾಗುತ್ತದೆ..!!

ಕಾಫೀ ಪೌಡರಿನಿಂದ ಹೀಗೆ ಮಾಡಿದರೆ ಕೆಲವೇ ನಿಮಿಷಗಳಲ್ಲಿ ನಿಮ್ಮ ಕತ್ತಿನ ಭಾಗವು ಬಿಳುಪಾಗುತ್ತದೆ..!!

ಪ್ರತಿಯೊಬ್ಬರು ಕೂಡ ಜೀವನದಲ್ಲಿ ತಮ್ಮ ಬಾಹ್ಯ ಸೌಂದರ್ಯಕ್ಕೆ ಹೆಚ್ಚಿನ ಬೆಲೆಯನ್ನು ಕೊಡುತ್ತಾರೆ ಅದರಲ್ಲೂ ಕೂಡ ತಮ್ಮ ಮುಖಕ್ಕೆ ಹೆಚ್ಚಿನ ಬೆಲೆಯನ್ನು ಕೊಡುತ್ತಾರೆ ಮುಖದಲ್ಲಿ ಯಾವುದೇ ರೀತಿಯ ಅಂತಹ ಒಂದು ಸಣ್ಣ ಕಲೆ ಇದ್ದರೂ ಕೂಡ ಈಗಿನ ಕಾಲದಲ್ಲಿ ಯುವಕ ಯುವತಿಯರು ಸಹಿಸಿಕೊಳ್ಳುವುದಿಲ್ಲ .

ಯುವಕ ಯುವತಿಯರನ್ನು ಬಿಟ್ಟು ಎಲ್ಲ ವಯಸ್ಸಿನವರು ಕೂಡ ಸೌಂದರ್ಯಕ್ಕೆ ಹೆಚ್ಚಿನ ಬೆಲೆಯನ್ನು ಕೊಡುತ್ತಾರೆ ಅದರಲ್ಲೂ ಕೂಡ ಮುಖಕ್ಕೆ ಏನಾದರೂ ಒಂದು ಕಲೆಯಾಯಿತು ಎಂದರೆ ಸಾಕು ಅದನ್ನು ನಿವಾರಣೆ ಮಾಡಿಕೊಳ್ಳುವಲ್ಲಿ ಎಷ್ಟೊಂದು ಪ್ರಯತ್ನವನ್ನು ಮಾಡಿದ್ದಾರೆ ಎಂಬುದು ಕೆಲವೊಂದು ಬಾರಿ ನಮ್ಮ ಕಣ್ಣ ಮುಂದೆ ನಡೆದಿರುತ್ತದೆ.

ಕೆಲವೊಂದು ಬಾರಿ ನಮಗೂ ಕೂಡ ಮುಖದಲ್ಲೂ ಅಥವಾ ಕತ್ತಿನಲ್ಲಿ ಕೆಲವೊಂದು ಕಪ್ಪು ಕಲೆಗಳಾಗಿರುವ ಸಾಧ್ಯತೆಗಳು ಇರುತ್ತವೆ ಅದರ ಜೊತೆಯಲ್ಲಿ ನಾವು ಯಾವಾಗಲಾದರೂ ಅಪಘಾತಕ್ಕೆ ಈಡಾದ ಸಂದರ್ಭದಲ್ಲಿ ಗಾಯಗಳಾಗಿರುತ್ತವೆ ಆ ಗಾಯಗಳು ಎಷ್ಟೊಂದು ಬಾರಿ ವಾಸಿಯಾಗುವುದಿಲ್ಲ ವಾಸಿಯಾದ ಗಾಯಗಳು.

ಕೆಲವೊಂದು ಬಾರಿ ಕಪ್ಪಗಿರುವ ಕಲೆಗಳನ್ನು ಉಳಿಸಿ ಬಿಟ್ಟಿರುತ್ತವೆ ಇದು ಎಷ್ಟೊಂದು ಬಾರಿ ನಾವು ಕೆಲವೊಬ್ಬರ ಕೈಗಳಲ್ಲಿ ಮತ್ತು ಕಾಲುಗಳಲ್ಲಿ ಗಮನಿಸಿರುತ್ತೇವೆ ಕೆಲವೊಬ್ಬರು ಹೋಮಿಯೋಪತಿ ಅಲೋಪತಿ ಆಯುರ್ವೇದಿಕ್ ನಿಂದ ಕೆಲವೊಂದು ಕ್ರೀಮ್ಗಳನ್ನು ತಂದು ಅವುಗಳಿಗೆ ಹಚ್ಚಿರುತ್ತಾರೆ ಆದರೆ ಈ ದಿನ ನಾವು ನಿಮಗೆ ಮನೆಯಲ್ಲಿಯೇ ಸುಲಭವಾಗಿ ಕೆಲವೇ ಕೆಲವು ಪದಾರ್ಥಗಳನ್ನು ಬಳಸಿಕೊಂಡು ಹೇಗೆ ಮುಖದ ಮೊಡವೆಯ ಕಲೆಗಳು ಕಪ್ಪು ಕಲೆಗಳು .

ಅಥವಾ ಕತ್ತಿನ ಭಾಗದಲ್ಲಿ ಆದಂತಹ ಕಪ್ಪು ಕಲೆ ಅಥವಾ ಗಾಯವಾಗಿ ಗಾಯ ವಾಸಿಯಾದ ನಂತರ ಉಳಿದಂತಹ ಕಪ್ಪು ಕಲೆ ಇವುಗಳನ್ನು ಹೇಗೆ ಹೋಗಲಾಡಿಸುವುದು ಎಂಬುದರ ಬಗ್ಗೆ ಒಂದು ಚಿಕ್ಕ ಮನೆ ಮದ್ದನ್ನು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ ಇದನ್ನು ನಿಯಮಿತವಾಗಿ ಕೆಲವು ದಿನಗಳು ಬಳಸಿದರೆ ಸಾಕು ನಾವು ಮೇಲೆ ಹೇಳಿದಂಥ ಎಲ್ಲ ಕಲೆಗಳು ಕೂಡ ಆದಷ್ಟು ಬೇಗ ಮಾಯವಾಗುತ್ತದೆ ಕಲೆ ಇತ್ತೇ ಎಂದು ನೀವೇ ಒಂದು ಬಾರಿ ಯೋಚಿಸಬೇಕು ಆ ಮಟ್ಟಿಗೆ ಕಲೆಗಳು ನಿಮ್ಮ ದೇಹದಿಂದ ದೂರವಾಗಿರುತ್ತದೆ ಮತ್ತು ಎಲ್ಲರ ರೀತಿಯಲ್ಲಿ ನಿಮ್ಮ ಮುಖವೂ ಕೂಡ ಶುಭ್ರವಾಗಿರುವು ದನ್ನು ಕಾಣಬಹುದು.

ನಾವು ಈ ಕಲೆಗಳ ನಿವಾರಣೆಗೆ ಮನೆ ಮದ್ದನ್ನು ಮಾಡಲು ಬೇಕಾಗಿರುವುದು ಕೇವಲ ಮೂರು ಸಾಮಗ್ರಿಗಳು ಒಂದು ಪ್ಯಾಕ್ ಬ್ರೂ ಅಥವಾ ಒಂದು ಚಮಚ ಬ್ರೂ ಕಾಫಿ ಪುಡಿ ಒಂದು ನಿಂಬೆ ಹಣ್ಣಿನ ಹೋಳು ಮತ್ತು ಸ್ವಲ್ಪ ರೋಸ್ ವಾಟರ್ ಈ ಮೂರು ಸಾಮಗ್ರಿಗಳಿದ್ದರೆ ಸಾಕು ಈ ಮೂರು ಸಾಮಗ್ರಿಗಳಿಂದ ಕೂಡ ನಿಮ್ಮ ಮುಖದ ಮೇಲಿರುವ ಕಪ್ಪು ಕಲೆ ಮತ್ತು ಕತ್ತಿನ ಸುತ್ತ ಇರುವ ಕಪ್ಪು ಕಲೆ ಮತ್ತು ನಿಮ್ಮ ಗಾಯದ ಕಪ್ಪು ಕಲೆ ಇವುಗಳನ್ನೆಲ್ಲ ನಿವಾರಣೆ ಮಾಡಬಹುದು.

ಮೊದಲಿಗೆ ಒಂದು ಚಮಚ ಬ್ರೂ ಕಾಫಿ ಪುಡಿಗೆ ಸ್ವಲ್ಪ ರೋಸ್ ವಾಟರನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು ಅದಾದ ನಂತರ ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಹಿಂಡಿ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ಅದಾದ ನಂತರ ಅದನ್ನು ಮುಖದಲ್ಲಿ ನಿಮಗೆ ಎಲ್ಲೆಲ್ಲಿ ಕಲೆಯಿದೆ ಅಲ್ಲೆಲ್ಲಾ ಹಚ್ಚಬೇಕು .

ಇದು ಒಣಗಿದ ನಂತರ ಯಾವುದೇ ಕಾರಣಕ್ಕೂ ಬಿಸಿ ನೀರಿಂದ ತೊಳೆಯಬಾರದು ಬದಲಾಗಿ ತಣ್ಣೀರಿನಿಂದ ಮುಖ ತೊಳೆದರೆ ನಿಯಮಿತವಾಗಿ ಇದನ್ನು ಮಾಡುತ್ತಾ ಬಂದರೆ ಮುಖದ ಮೇಲಿನ ಕಪ್ಪು ಕಲೆಗಳು ಮಾಯವಾಗುತ್ತದೆ ಈ ಮಾಹಿತಿಯನ್ನು ನೀವು ಒಮ್ಮೆ ಪ್ರಯೋಗಿಸಿ ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿ ಧನ್ಯವಾದಗಳು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments