ಮನುಷ್ಯನಿಗೆ ಛಲ ಇದ್ದರೆ ಜೀವನದಲ್ಲಿ ಎಂತ ಕಷ್ಟವನ್ನು ಸಹ ಮೆಟ್ಟಿ ನಿಲ್ಲಬಹುದು ಎಂದು ತೋರಿಸಿಕೊಟ್ಟಿದ್ದಾರೆ ಈ ಖ್ಯಾತ ನಟಿ ಈ ನಟಿಗೆ ಒಂದು ಕಾಲಿಲ್ಲ ಆದರೆ ಭರತನಾಟ್ಯ ಮಾಡುತ್ತಾರೆ ಭಾರತದ ಎಲ್ಲ ಭಾಷೆಗಳಲ್ಲಿ ಹಾಗು ಎಲ್ಲ ಟಾಪ್ ನಟರ ಜೊತೆ ನಟಿಸಿ ಅವರಿಗಿಂತ ಚೆನ್ನಾಗಿ ಡಾನ್ಸ್ ಮಾಡಿ ಸೈ ಎನಿಸಿಕೊಂಡಿದ್ದಾರೆ ಅದು ಹೇಗೆ ಸಾಧ್ಯವಾಯಿತು ಗೊತ್ತಾ ಹೆಚ್ಚು ಜನಕ್ಕೆ ಈ ನಟಿಗೆ ಒಂದು ಕಾಲು ಇಲ್ಲ ಅನ್ನೋದೇ ಗೊತ್ತಿಲ್ಲ ಅಷ್ಟು ಚೆನ್ನಾಗಿ ನಡೆಯಬಲ್ಲರು ಈ ನಟಿ ಅಷ್ಟಕ್ಕು ಅವರು ಯಾರು ಗೊತ್ತಾ ಕನ್ನಡದ ಒಲವಿನ ಸರಿ ಬಿಸಿಲು ತಿಂಗಳು ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ ಸುಧಾ ಚಂದ್ರನ್ ಕಲಾ ಲೋಕದಲ್ಲಿ ಹತ್ತಾರು ಕನಸುಗಳನ್ನು ಹೊತ್ತ ಸುಧಾಚಂದ್ರನ್,
ಅವರು ಅದ್ಭುತವಾಗಿ ಭರತನಾಟ್ಯವನ್ನು ಚಿಕ್ಕಂದಿನಲ್ಲಿ ಕಲಿತು ದೊಡ್ಡ ದೊಡ್ಡ ಸ್ಟೇಜ್ ಮೇಲೆ ಪ್ರದರ್ಶನ ಕೊಡುತ್ತಿದ್ದರು ಕೇವಲ ಹದಿನಾರು ವರ್ಷಕ್ಕೆ ಪ್ರಸಿದ್ದಿಯನ್ನು ತನ್ನ ಕೈವಶ ಮಾಡಿಕೊಂಡ ಸುಧಾಚಂದ್ರನ್ ಅವರನ್ನು ನೋಡಿ ವಿಧಿಗೆ ಸಾಯಿಸಲು ಆಗಲಿಲ್ಲ ಹದಿನಾರು ವರ್ಷದ ಸುಧಾ ಚಂದ್ರನ್ ಸಾವಿರದ ಒಂಬೈನೂರ ಎಂಬತ್ತ ಒಂದರಲ್ಲಿ ಕಾರಿನಲ್ಲಿ ಹೋಗುತ್ತಿದ್ದಾಗ ಒಂದು ಭೀಕರ ಅಪಘಾತಕ್ಕೆ ಒಳಗಾ ಆಗ ಕಾಲಿಗೆ ಪೆಟ್ಟು ಬಿದ್ದಿತ್ತು ಕೆಲವು ದಿನ ಚಿಕಿತ್ಸೆ ಕೊಟ್ಟ ಡಾಕ್ಟರ್ಸ್ ಸುಧಾಚಂದ್ರನ್ ಅವರ ಬಲಗಾಲನ್ನು ತೆಗೆಯಬೇಕು ಎಂದು ಹೇಳಿದರು ಹಾಗೆ ಬೇರೆ ವಿಧಿಯಿಲ್ಲದೆ ತಮ್ಮ ಬಲಗಾಲನ್ನು ಕಳೆದುಕೊಂಡರು ಸುಧಾ ಚಂದ್ರನ್ ವಿಧಿಯ ಶಾಪ ಹೇಗಿತ್ತು ನೋಡಿ ತಮ್ಮ ಡಾನ್ಸ್ ಮೂಲಕ ಸ್ಟೇಜ್ ಅನ್ನು ಶೇಕ್ ಮಾಡುತ್ತಿದ್ದ ಹದಿನಾರು ವರ್ಷದ ಹುಡುಗಿ ಮತ್ತೆ ಇಂದು ಜೀವನದಲ್ಲಿ ಡ್ಯಾನ್ಸ್ ಮಾಡಲು ಆಗದ ಸ್ಥಿತಿಗೆ ತಲುಪಿದರು ಆದರೆ ಹೇಗಾದರು ಮಾಡಿ ನಾನು ಮತ್ತೆ ಡ್ಯಾನ್ಸ್ ಮಾಡಲೇಬೇಕು ಎಂದು ನಿರ್ಧರಿಸಿದ ,
ಸುಧಾಚಂದ್ರನ್ ಜೈಪುರ್ ಫುಡ್ ಅನ್ನು ತಮ್ಮ ಕಾಲಿಗೆ ಜೋಡಿಸಿಕೊಂಡು ಅದರ ಹಿಡಿತ ಸಾಧಿಸಿ ಸಾಮಾನ್ಯರಂತೆ ನಡೆಯಲು ಸತತ ಪ್ರಯತ್ನ ಮಾಡಿದರು ಸುಧಾ ಚಂದ್ರನ್ ಅವರ ಛಲದ ಮುಂದೆ ವಿಧಿಯ ವಕ್ರ ದೃಷ್ಟಿ ಕೆಲಸ ಮಾಡಲಿಲ್ಲ ಜೈಪುರ್ ಫುಡ್ ಹಾಕಿಕೊಂಡೆ ಮತ್ತೆ ಭರತನಾಟ್ಯ ಶುರು ಮಾಡಿದರು ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಗೂ ಅರವತ್ತಕ್ಕೂ ಹೆಚ್ಚು ಸೀರಿಯಲ್ ಗಳಲ್ಲಿ ನಟಿಸಿದರು ವಾವ್ ಇದನ್ನು ಕೇಳೋಕೆ ಎಷ್ಟು ಸಂತೋಷ ಆಗುತ್ತೆ ಅಲ್ಲವೇ ಒಂದು ಕಾಲನ್ನು ಕಳೆದುಕೊಂಡ ಮೇಲು ಟಾಪ್ ನಟಿಯಾಗಿ ಮಿಂಚಿದ ,
ಈ ನಟಿಯ ಧೈರ್ಯಕ್ಕೆ ಮೆಚ್ಚಲೇಬೇಕು ಐವತ್ತು ನಾಲ್ಕು ವರ್ಷದ ಈ ನಟಿ ಈಗಲೂ ನಟಿಸುತ್ತಿದ್ದಾರೆ ಅಲ್ವಾ ಸ್ಟೇಜ್ ಮೇಲೆ ಭರತನಾಟ್ಯ ಮಾಡುತ್ತಾರೆ ಸುಧಾಚಂದ್ರನ್ ಅವರನ್ನು ಸ್ಕ್ರೀನ್ ಮೇಲೆ ನೋಡಿದ ಹೆಚ್ಚು ಜನಕ್ಕೆ ಅವರಿಗೆ ಒಂದು ಕಾಲು ಇಲ್ಲ ಅನ್ನೋದೇ ಗೊತ್ತಿಲ್ಲ ಅಷ್ಟು ಸ್ವಾಭಾವಿಕವಾಗಿ ನಡೆಯುತ್ತಾರೆ ಈ ನಟಿ ಒಂದು ಕಾಲನ್ನು ಕಳೆದುಕೊಂಡ ಮೇಲು ಜೀವನಕ್ಕೆ ಸವಾಲು ಎಸೆದ ಸುಧಾಚಂದ್ರನ್ ಅವರ ಛಲ ಹಾಗೂ ಈ ವೀಡಿಯೋ ನಿಮಗೆ ಇಷ್ಟ ಆಗಿದ್ದರೆ ಒಂದು ಲೈಕ್ ಕೊಡಿ ಹಾಗೆ ನೀವಿನ್ನು ಚಂದನವನಕ್ಕೆ ಸಬ್ಸ್ಕ್ರೈಬ್ ಆಗಿಲ್ಲ ಅಂದರೆ ಈ ಕೂಡಲೇ ಸಬ್ಸ್ಕ್ರೈಬ್ ಆಗುವುದನ್ನು ಮರೆಯಬೇಡಿ ಫ್ರೆಂಡ್ಸ್