ಆತ್ಮೀಯ ಎಲ್ಲ ನನ್ನ ವೀಕ್ಷಕರೇ ಕನ್ನಡದಲ್ಲಿ ಕಾನೂನಿನ ಅರಿವು ಎನ್ನುವಂತ ಕಾರ್ಯಕ್ರಮಕ್ಕೆ ನಾನು ತಮಗೆ ಸ್ವಾಗತವನ್ನು ಕೋರುತ್ತಾ ಇದ್ದೇನೆ ಯಾರು ಪ್ರಥಮ ಬಾರಿಗೆ ನನ್ನ ವಿಡಿಯೋವನ್ನು ನೋಡುತ್ತಿರೋ ಅಂತವರು ದಯವಿಟ್ಟು ನನ್ನ YouTube ಚಾನೆಲನ್ನ ಸಬ್ಸ್ಕ್ರೈಬ್ ಮಾಡು ಅಂತ ಹೇಳಿ ನಾನು ಮತ್ತೊಮ್ಮೆ ತಮಗೆ ತಿಳಿಸಿಕೊಡುತ್ತಿದ್ದೇನೆ ಹೀಗಾಗಿ ಇವತ್ತಿನ ಕಾನೂನಿನ ವಿಷಯ ಬಹಳ interesting ಆಗಿರುವಂತಹ ವಿಷಯ ಅತ್ಯಂತ ಕುತೂಹಲಕಾರಿಯಾಗಿರುವಂತಹ ವಿಷಯ ಇವತ್ತು ಹೆಂಡ ನೊಂದುಕೊಂಡಿರ್ತಕಂತ ವ್ಯಕ್ತಿ ತನ್ನ ಸಮಸ್ಯೆಯನ್ನ ಹೇಳಿಕೊಂಡಿರ್ತಕಂತ ಕಾರಣಕ್ಕಾಗಿ ನಾನು ಈ ವಿಡಿಯೋವನ್ನ ಮಾಡ್ತಾಯಿದ್ದೇನೆ.
ಆ ನೊಂದುಕೊಂಡಿರ್ತಕಂತ ವ್ಯಕ್ತಿಯ ಹೆಂಡತಿ ನ್ಯಾಯಾಲಯದಲ್ಲಿ ಜೀವನಂಶವನ್ನ ಕೇಳಿ ದಾವೆಯನ್ನ ಮಾಡಿದ್ದಾಳೆ ಅದೇ ರೀತಿಯಾಗಿ ನಂತರದಲ್ಲಿ ವರದಕ್ಷಿಣೆ ಕಿರುಕುಳವನ್ನ ನೀಡ್ತಿದಾನೆ ಗಂಡ ಅಂತ ಹೇಳಿ ಮತ್ತೊಂದು ಪ್ರಕರಣವನ್ನ ದಾಖಲು ಮಾಡಿದ್ದಾಳೆ ಹೀಗಾಗಿ ಹೆಣ್ಣಿಗೆ ಎಷ್ಟೊಂದು ಗಂಡನ ಮೇಲೆ ಪ್ರಕರಣವನ್ನ ಹಾಕಲಿಕ್ಕೆ ಕಾನೂನುಗಳಿವೆ ಸರ್ ಅದಕ್ಕೆ ತಿಳಿಸಿಕೊಡಿ ಅಂತ ಹೇಳಿ ಆ ವ್ಯಕ್ತಿ ನನಗೆ ಕೇಳಿಕೊಂಡಿದ್ದಾನೆ ಹಾಗಾಗಿ ಆತನ ಒಂದು ಒಂದು ಅಪೇಕ್ಷೆಯಂತೆ ಇವತ್ತು ಈ ವಿಡಿಯೋವನ್ನ ನಾನು ಮಾಡ್ತಾ ಬಂದಿದ್ದೀನಿ ಹೀಗಾಗಿ ಗಂಡನ ಮೇಲೆ ಹೆಂಡತಿ ಯಾದಂತವಳು .
ಎಷ್ಟೊಂದು ಪ್ರಕರಣವನ್ನ ಹಾಕಲಿಕ್ಕೆ ಕಾನೂನಿನಲ್ಲಿ ಅವಕಾಶ ಇದೆ ಅನ್ನುವಂತ ವಿಷಯದ ಕುರಿತು ನಾನು ಬಹಳ ಸಮಗ್ರವಾಗಿ ತಮ್ಮ ಮುಂದೆ ಚರ್ಚೆಯನ್ನ ಮಾಡ್ತಾ ಇದ್ದೇನೆ ಇವತ್ತು ಹಿಂದಿನ ಒಂದು ಪರಂಪರೆಯಲ್ಲಿ ನಾವು ಹಿರಿಯರು ಹೇಳಿದ ಹಾಗೆ ಗಂಡ ಹೆಂಡರ ಜಗಳ ಉಂಡು ಮಲಗುವ ತನಕ ಎನ್ನುವಂತಹ ಒಂದು ಪದ್ಧತಿ ಅವತ್ತು ಇತ್ತು ಆದರೆ ಇವತ್ತು ಕಾಲಘಟ್ಟ ಬದಲಾವಣೆಯಾದ ನಂತರ ಗಂಡ ಹೆಂಡರ ಜಗಳ ಕೋರ್ಟ್ ತನಕ ಅನ್ನುವಂತಹ ಪರಿಸ್ಥಿತಿ ಇವತ್ತು ಉಂಟಾಗಿ ಸಾಕಷ್ಟು ಪ್ರಮಾಣದಲ್ಲಿ ಇವತ್ತು ನ್ಯಾಯಾಲಯಕ್ಕೆ ಬಂದಿರುವಂತದ್ದನ್ನು ತಾವು ಸಹಿತ ಗಮನಿಸಿದ್ದೀರಿ .
ಹೀಗಾಗಿಯೇ ದೇಶದಲ್ಲಿ ಪುರುಷ ಪ್ರಧಾನವಾಗಿರ್ತಕ್ಕಂತ ಒಂದು ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳಿಗೆ ಗಂಡಸರಿಂದ ಯಾವುದೇ ರೀತಿಯಿಂದ ಕಾನೂನಾತ್ಮಕವಾಗಿ ತೊಂದರೆ ಆಗಬಾರದು ಅನ್ನುವಂತ ನಿಟ್ಟಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೆಣ್ಣಿನ ಸಲುವಾಗಿ ಕಾನೂನುಗಳು ಹುಟ್ಟಿಕೊಂಡಿವೆ ಹಾಗಾಗಿ ಕೇವಲ ಕಾನೂನು ಇದೆ ಅನ್ನುವಂತಹ ದೃಷ್ಟಿಯಿಂದ ಆ ಒಂದು ಕಾನೂನುಗಳು ಹೆಣ್ಣಿನ ಪರವಾಗಿ ಸದುಪಯೋಗವಾಗಬೇಕೆ ಹೊರತು ಅವುಗಳು ದುರುಪಯೋಗ ಆಗಬಾರದು ಅನ್ನೋದು ನಮ್ಮ ನಿಮ್ಮೆಲ್ಲರ ಅನಿಸಿಕೆ ಆಗಿದೆ ಹಾಗಾಗಿ ಗಂಡ ಹೆಂಡರ ಜಗಳದಲ್ಲಿ ಒಂದು ಕಡೆ ಹೆಣ್ಣಿನ ತಪ್ಪಾಗಿರಬಹುದು.
ಗಂಡನ ತಪ್ಪಾಗಿರಬಹುದು ಅಂತಹ ಸಂದರ್ಭದಲ್ಲಿ ಈ ವಿಷಯ ಕೋರ್ಟ್ ಮೆಟ್ಟಿಲು ಹತ್ತಿದಾಗ ಗಂಡ ಹೆಂಡರು ಮಾಡಿರ್ತಕ್ಕಂತ ಸರಿ ತಪ್ಪಾ ಸರಿ ಅಥವಾ ತಪ್ಪನ್ನ ನಿರ್ಧರಿಸುವುದು ಮಾನ್ಯ ನ್ಯಾಯಾಲಯಕ್ಕೆ ಬಿಟ್ಟು ಕೊಟ್ಟಿರತಕ್ಕಂತ ವಿಷಯ ಹಾಗಾಗಿ ಗಂಡನು ಯಾವುದೇ ತಪ್ಪು ಮಾಡಲಿ ಅಥವಾ ಹೆಣ್ಣು ಯಾವುದೇ ತಪ್ಪು ಮಾಡಲಿ ಅದನ್ನ ತಮ್ಮಷ್ಟಕ್ಕೆ ತಾವು ಸರಿಪಡಿಸಿಕೊಂಡಿದ್ದೆ ಆದರೆ ಇಂಥ ಪ್ರಕರಣಗಳು ನ್ಯಾಯಾಲಯದಿಂದ ದೂರು ಉಳಿಯಲಿಕ್ಕೆ ಸಾಧ್ಯವಾಗುತ್ತದೆ ಹಾಗಾಗಿ ಗಂಡನಾದಂತವನು ವಿನಾಕಾರಣ ಹೆಂಡತಿಗೆ ತೊಂದರೆ ಕೊಟ್ಟರೆ ಅನಿವಾರ್ಯವಾಗಿ ಆತನ ಮೇಲೆ ಕಾನೂನಿನ ಕ್ರಮ ಜರುಗಿಸುವಂತಹ ಹೆಣ್ಣಿಗೆ ಎಷ್ಟೊಂದು ಕಾನೂನುಗಳಿವೆ ಎನ್ನುವಂತದ್ದು ,
ವಿಷಯಕ್ಕೆ ನಾವು ಬಂದಾಗ ಮೊದಲನೆಯದಾಗಿ ಹೇಳುವುದಾದರೆ ಗಂಡನು ಹೆಂಡತಿಯನ್ನ ಸರಿಯಾಗಿ ನೋಡಿಕೊಳ್ಳದೆ ಆತನನ್ನ ಆಯ್ಕೆಯನ್ನ ತನ್ನ ಮನೆಯಿಂದ ಹೊರ ಹಾಕಿದಾಗ ಅದಕ್ಕೆ ಸಾಕಷ್ಟು ಕಾರಣಗಳು ಇರಬಹುದು ಅಂತ ಸಂದರ್ಭದಲ್ಲಿ ಆ ಹೆಣ್ಣು ಮಗಳು ತನ್ನ ತವರು ಮನೆಯ ಆಸರೆಯನ್ನ ಪಡೆದು ನಂತರದಲ್ಲಿ ಅವಳ ಮುಂದಿನ ಭವಿಷ್ಯದ ಜೀವನಕ್ಕಾಗಿ ಗಂಡನ ಮೇಲೆ CRPC ಸೆಕ್ಷನ್ ಒಂದು ನೂರಾ ಇಪ್ಪತೈದರ ಅಡಿಯಲ್ಲಿ ಜೀವನಾಂಶವನ್ನ ಕೇಳಿ ದಾವೆ ಮಾಡಲಿಕ್ಕೆ ಆ ಹೆಣ್ಣು ಮಗಳಿಗೆ ಅವಕಾಶವಿದೆ ಅದೇ ರೀತಿಯಾಗಿ ಎರಡನೆಯದಾಗಿ ಆ ಒಂದು ದಂಪತಿಗಳಿಗೆ ಮಕ್ಕಳಿದ್ದರೆ,
ಅಂತ ಸಂದರ್ಭದಲ್ಲಿ ಗಂಡ-ಹೆಂಡರ ಮಧ್ಯೆ ಜಗಳ ಉಂಟಾಗಿ ಬೇರೆ ಬೇರೆ ರೀತಿ ಬೇರೆ ಬೇರೆಯಾಗಿ ವಾಸ ಮಾಡ್ತಕ್ಕಂತ ಸಂದರ್ಭದಲ್ಲಿ ಅವರ ಜೀವನ ಕೂಡಿ ನಡೆದೇ ಇರುವಂತಹ ಸಂದರ್ಭದಲ್ಲಿ ಅನಿವಾರ್ಯವಾಗಿ ಮಕ್ಕಳನ್ನು ಕಟ್ಟಿಕೊಂಡಿರ್ತಕ್ಕಂತ ಹೆಣ್ಣು ಮಗಳು ಹಿಂದೂ ಕಾನೂನಿನ ಅಡಿಯಲ್ಲಿ ಮಕ್ಕಳಿಂದ, ತಂದೆ ಮಾಡಿರ್ತಕ್ಕಂತ ಆಸ್ತಿಯ ಮೇಲೆ ದಾವೇ ಹೂಡುವ ಮೂಲಕ ಮಕ್ಕಳಿಗೆ ಬರ್ತಕಂತ ಆಸ್ತಿಯನ್ನ ಕೇಳಲಿಕ್ಕೆ ಇವತ್ತು ಕಾನೂನಿನಲ್ಲಿ ಅವಕಾಶ ಇದೆ ಅಂತ ಹೇಳಿ ನಾನು ತಮಗೆ ತಿಳಿಸಿ ಕೊಡ್ತಾಯಿದ್ದೀನಿ ಅದೇ ರೀತಿಯಾಗಿ ಇವತ್ತು ಗಂಡ ಹೆಂಡರ ಒಂದು ಕುಟುಂಬದ ವ್ಯವಸ್ಥೆಯಲ್ಲಿ ಅವಿಭಕ್ತ ಕುಟುಂಬವಾಗಿದ್ದರೆ ಅಲ್ಲಿ ಅತ್ತೆ ನಾದಿನಿ,
ಮೈದುನ ಮಾವ ಇತರ ಸದಸ್ಯರು ಕೂಡಿಕೊಂಡು ಆ ಹೆಣ್ಣು ಮಗಳ ಮೇಲೆ ಆ ಕುಟುಂಬದ ಸದಸ್ಯ ಏನಾದರು ತೊಂದರೆ ಮಾಡುತ್ತ ಬಂದರೆ ಅಂತಹ ಸಮಯದಲ್ಲಿ ಆ ಹೆಣ್ಣು ಮಗಳಾದಂತವಳು ತಾನು ಕಾನೂನಿಂದ ರಕ್ಷಣೆಯನ್ನು ಪಡೆದುಕೊಳ್ಳಲಿಕ್ಕೆ ಗಂಡನ ಮತ್ತು ಕುಟುಂಬದ ಸದಸ್ಯರ ಮೇಲೆ domestic violence act ಎರಡು ಸಾವಿರದ ಐದರ ಪ್ರಕಾರ ಅಂದರೆ ಕೌಟುಂಬಿಕ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಆ ಕುಟುಂಬದ ಒಟ್ಟು ಸದಸ್ಯರ ಮೇಲೆ ಆ ಹೆಣ್ಣು ಮಗಳಿಗೆ ಪ್ರಕರಣವನ್ನ ದಾಖಲು ಮಾಡಲಿಕ್ಕೆ ಇವತ್ತು ಕಾನೂನು ಅವಕಾಶ ಮಾಡಿಕೊಟ್ಟಿದೆ ಅಂತ ಹೇಳಿ ನಾನು ತಮಗೆ ತಿಳಿಸಿಕೊಡುತ್ತಿದ್ದೇನೆ .
ಅದೇ ರೀತಿಯಾಗಿ ಇವತ್ತು ಗಂಡ ಹೆಂಡರ ಒಂದು ಜೀವನದಲ್ಲಿ ಅವರು ಜೀವನ ಮಾಡತಕ್ಕಂತಹ ಸಮಯದಲ್ಲಿ ಹೆಂಡತಿಯ ತವರು ಮನೆಯವರು ಶ್ರೀಮಂತರು ಇದ್ದಾರೆ ಅನ್ನುವಂತಹ ಒಂದು ಕಾರಣದಿಂದ ಆ ತವರು ಮನೆಯ ಆಸ್ತಿಯ ಮೇಲೆ ಗಂಡನಾದಂತವನು ಕಣ್ಣು ಹಾಕುವ ಮೂಲಕ ಆ ತವರು ಮನೆಯಿಂದ ಹೆಂಡತಿಗೆ ನಿರಂತರವಾಗಿ ಆಸ್ತಿಯನ್ನ ತರುವುದಾಗಲಿ ಬಂಗಾರವನ್ನ ತರುವುದಾಗಲಿ ಇರ್ತಕಂತ ಹಣವನ್ನ ತರೋದಾಗಲಿ ಈ ರೀತಿಯಾಗಿ ನಿರಂತರವಾಗಿ ಆ ಹೆಣ್ಣು ಮಗಳ ಮೇಲೆ ಪೀಡಿಸುತ್ತಾ ಬಂದರೆ ಅಂತ ಒಂದು ಕಿರುಕುಳಕ್ಕೆ ಒಳಗಾಗಿರುವ ಹೆಣ್ಣು ಮಗಳು ಮೇಲೆ ಕಾನೂನಾತ್ಮಕವಾಗಿ ಇರ್ತಕಂತ ಕ್ರಮವನ್ನ ಕೈಗೊಳ್ಳಬೇಕಾದರೆ,
ಸಮೀಪದಲ್ಲಿ ಇರ್ತಕಂತ ಪೊಲೀಸ್ ಠಾಣೆಯಲ್ಲಿ IPC ಕಲಂ four ninety-eight A ಅನ್ನುವಂತಹ ಸೆಕ್ಷನಿನ ಅಡಿಯಲ್ಲಿ ಅಥವಾ ನ್ಯಾಯಾಲಯದಲ್ಲಿ ವರದಕ್ಷಿಣೆ ಕಿರುಕುಳ ಉಳ್ಳಂತಹ ಪ್ರಕರಣವನ್ನು ಸಹಿತ ಆ ಮಹಿಳೆ ದಾಖಲು ಮಾಡಲಿಕ್ಕೆ ಇವತ್ತು ಕಾನೂನಿನಲ್ಲಿ ಅವಕಾಶವನ್ನ ಮಾಡಿಕೊಟ್ಟಿದೆ ಹಾಗಾಗಿ ಮದುವೆ ಆಗಿರತಕ್ಕಂತ ಈ ದಂಪತಿಗಳು ಅಹ ಮಗಳು ಸುಮಾರು ಏಳು ವರ್ಷಗಳ ಕಾಲ ಗಂಡನ ಜೊತೆ ಬಾಳ್ವೆ ಮಾಡಿದ ನಂತರವೂ ಸಹಿತ ಗಂಡು ಗಂಡನಾದಂತವನು ಹೆಂಡತಿಗೆ ನಿರಂತರವಾಗಿ ವರದಕ್ಷಿಣೆ ಕಿರುಕುಳ ಕೊಡುವುದಾಗಲಿ ಅಥವಾ ಆಸ್ತಿ ತೆಗೆದುಕೊಂಡು ಬಾ ಅನ್ನುವಂಥದ್ದು ಆಗಲಿ ಮಾಡುತ್ತಾ ಬಂದರೆ ಆ ಹೆಣ್ಣು ಮಗಳು ಮದುವೆಯಾದ ಏಳು ವರ್ಷದ ಒಳಗಾಗಿ ಇಂಥ ಒಂದು ಪ್ರಕರಣವನ್ನು ದಾಖಲು ಮಾಡಬೇಕು .
ಏಳು ವರ್ಷದ ನಂತರ ಆ ಹೆಣ್ಣು ಮಗಳು ಏನಾದರೂ ಪ್ರಕರಣವನ್ನು ದಾಖಲು ಮಾಡಿದರೆ ಅದಕ್ಕೆ ಕಾ ಸ್ವಲ್ಪ ಅಡೆತಡೆ ಉಂಟಾಗುತ್ತದೆ ಎನ್ನುವಂತ ವಿಶೇಷವಾಗಿರ್ತಕಂತ ಸೂಚನೆಯನ್ನ ನಾನು ಈ ಸಂದರ್ಭದಲ್ಲಿ ತಮಗೆ ತಿಳಿಸಿ ಕೊಡ್ತಾಯಿದ್ದೀನಿ ಇವತ್ತು ಇನ್ನ ಐದನೆಯದಾಗಿ ಗಂಡ ಹೆಂಡತಿ ಜೀವಂತ ಇರುವಾಗ ಆಕೆಗೆ ವಿಚ್ಛೇದನವನ್ನ ನೀಡದೆ ಬೇರೊಂದು ಮದುವೆ ಆಗಿರ್ತಕಂತ ಪ್ರಕರಣವನ್ನ ಇವತ್ತು ನಾವು ಕಾಣಬಹುದು ಅಂತಹ ಸಂದರ್ಭದಲ್ಲಿ ಅನ್ಯಾಯಕ್ಕೆ ಒಳ ಹೆಂಡತಿ ತನಗೆ ದಿಕ್ಕು ತೋಚದೆ ಇರ್ತಕಂತ ಗಂಡನನ್ನ ಕಳೆದುಕೊಂಡ ನಂತರ ಆ ವ್ಯಕ್ತಿ ಬೇರೊಂದು ಮದುವೆ ಆಗಿದ್ದಾನೆ .
ಅನ್ನುವಂತ ವಿಷಯ ಗಮನಿಸಿದಾಗ ಆಕೆ ಆಗಿರ್ತಕಂತ ಆಯ್ಕೆ ಆಗಿರ್ತಕಂತ ನೋವನ್ನ ಸರಿಪಡಿಸಿಕೊಳ್ಳಲಿಕ್ಕೆ ಅಥವಾ ಗಂಡನ ಮೇಲೆ ಒಂದು ಸಿಟ್ಟನ್ನ ತೀರಿಸಿಕೊಳ್ಳಲಿಕ್ಕೆ ಇವತ್ತು ಐಪಿಸಿ ಕಲಂ four ninety-four ಅಡಿಯಲ್ಲಿ ಗಂಡನ ಮೇಲೆ ಒಂದು ಆಧಾರದ ಮೇಲೆ ಇವತ್ತು ಆ ಹೆಂಡತಿಯಾದಂತವಳು ಪ್ರಕರಣವನ್ನ ದಾಖಲು ಮಾಡಲಿಕ್ಕೆ ಕಾನೂನಿನಲ್ಲಿ ಅವಕಾಶ ಇದೆ ಹೀಗಾಗಿ ಇನ್ನು ಆರನೆಯದಾಗಿ ಗಂಡ ಮತ್ತು ಹೆಂಡತಿಯು ತಮ್ಮ ಜೀವನ ಸುಗಮವಾಗಿ ಸಾಗದೆ ಅಂದರೆ ಒಬ್ಬರಿಗೊಬ್ಬರು ನನಗೆ ಜೀವನವೇ ಬೇಡ ಎನ್ನುವಂತ ರೀತಿಯಲ್ಲಿ ಜಗಳ ಮಾಡಿದ್ದಾರೆ .
ಅವರು ಪರಸ್ಪರ ಒಪ್ಪಿಕೊಂಡು ವಿಚ್ಛೇದನ ಮಾಡಿಕೊಳ್ಳಲಿಕ್ಕೆ ಸಹಿತ ಇವತ್ತು ಕಾನೂನು ಅವರಿಗೆ ಅವಕಾಶವನ್ನ ಮಾಡಿಕೊಟ್ಟಿದೆ ಹೀಗಾಗಿ ಒಟ್ಟಿನಲ್ಲಿ ಹೆಂಡತಿಯಾದಂತವಳು ಗಂಡ ಏನೇನಾದರೂ ಈ ರೀತಿ ಆಗಿರತಕ್ಕಂತ ತೊಂದರೆಯನ್ನ ಕೊಟ್ಟರೆ ಸುಮಾರು ಆರಕ್ಕೂ ಹೆಚ್ಚು ಪ್ರಕರಣಗಳನ್ನು ಮೊನ್ನೆ ನ್ಯಾಯಾಲಯದಲ್ಲಿ ದಾವೆ ಮಾಡುವ ಮೂಲಕ ತನಗೆ ರಕ್ಷಣೆಯನ್ನ ಪಡೆದುಕೊಳ್ಳಲಿಕ್ಕೆ ಕಾನೂನು ಅವಕಾಶ ಮಾಡಿಕೊಟ್ಟಿದೆ ಹೀಗಾಗಿ ನಾನು ಯುವಕರಿಗೆ ಹಾಗು ಸಾರ್ವಜನಿಕರಿಗೆ ತಿಳಿಸ್ತಾಕಂತ ವಿಷಯವೆ ಏನೆಂದರೆ ತಾವು ಹೆಣ್ಣು ಮಕ್ಕಳಿಗೆ ಗೌರವ ಕೊಡುವ ನಿಟ್ಟಿನಲ್ಲಿ ಅವರನ್ನ ನಡೆದುಕೊಳ್ಳಬೇಕು .
ಇವತ್ತು ಕಾನೂನಿನ ವ್ಯಾಪ್ತಿಯಲ್ಲಿ ತಾವೇನಾದರೂ ಹೆಣ್ಣಿಗೆ ತೊಂದರೆ ಮಾಡಿದರೆ ಆ ಹೆಣ್ಣು ಮಗಳು ಇಷ್ಟೆಲ್ಲಾ ಪ್ರಕರಣವನ್ನು ದಾಖಲು ಮಾಡುವ ಮೂಲಕ ತಮಗೆ ಒಂದು ಕಡೆ ತೊಂದರೆಯಾಗಬಹುದು ಒಂದು ಕಡೆಗೆ ಅಪಮಾನ ಅವಮಾನವಾಗಬಹುದು ಹಾಗಾಗಿ ಒಟ್ಟಿನಲ್ಲಿ ಹೆಣ್ಣನ್ನ ಬಹಳ ಗೌರವದಿಂದ ಕಾಪಾಡಿದ್ದೆ ಆದರೆ ಇಂತ ಒಂದು ಪ್ರಕರಣಗಳಿಂದ ತಾವು ಮುಕ್ತರಾಗುತ್ತೀರಿ ಅನ್ನುವಂತ ಮಾತನ್ನ ಈ ಸಂದರ್ಭದಲ್ಲಿ ಹೇಳುತ್ತಾ ಈ ವಿಷಯ ಈ ವಿಷಯ ತಮಗೆ ಇಷ್ಟವಾದಲ್ಲಿ ದಯವಿಟ್ಟು ನನ್ನ YouTube ಅಣ್ಣ ಲೈಕ್ ಮಾಡುವ ಮೂಲಕ ಶೇರ್ ಮಾಡುವ ಮೂಲಕ ಪ್ರತಿಯೊಬ್ಬ ಸಾರ್ವಜನಿಕರಿಗೆ ತಿಳಿಸುವಂತ ಕೆಲಸವನ್ನ ಮಾಡ್ರಿ ,
ಅಂತ ಹೇಳುತ್ತಾ ಹಾಗಾಗಿ ತಾವು ಯಾವುದೇ ಕಾರಣಕ್ಕೂ ಕೇವಲ ಹೆಣ್ಣಿನ ಮೇಲೆ ಕಾನೂನುಗಳಿವೆ ಗಂಡಸರಿಗೆ ಯಾವುದೇ ರೀತಿಯಿಂದ ತೊಂದರೆ ಇಲ್ಲ ಅನ್ನುವಂತಹ ಮಾತನ್ನ ತಾವು ಯಾರು ಸಹಿತ ಗಮನದಲ್ಲಿ ಇಟ್ಟುಕೊಳ್ಳದೆ ಸರಿ ತಪ್ಪನ್ನ ನಿರ್ಧಾರ ಮಾಡತಕ್ಕಂತ ಕೆಲಸ ನಮ್ಮ ನಿಮ್ಮ ಕೈಯಲ್ಲಿ ಇರೋದಿಲ್ಲ ಹಾಗಾಗಿ ಸರಿ ತಪ್ಪನ್ನ ತಿದ್ದುವಂತ ಸರಿ ತಪ್ಪನ್ನ ಸರಿಪಡಿಸತಕ್ಕಂತ ಕೆಲಸ ಮಾನ್ಯ ನ್ಯಾಯಾಲಯಕ್ಕಿದೆ ಅನ್ನುವಂತ ಮಾತನ್ನ ನಾನು ಮತ್ತೊಮ್ಮೆ ತಿಳಿಸುತ್ತಾ ಇಲ್ಲಿಯವರೆಗೂ ನನ್ನ ವಿಡಿಯೋವನ್ನ ನೋಡಿರತಕಂತ ಎಲ್ಲ ನನ್ನ ವೀಕ್ಷಕರಿಗೆ ರಂಜಾನ್ ನಮಸ್ಕಾರಾ