Categories
ಭಕ್ತಿ ಮಾಹಿತಿ

ಯಾವುದೇ ದುಷ್ಟಶಕ್ತಿಯ ಕಾಟವಿದ್ದರೂ ಈ ದೇವಸ್ಥಾನದಲ್ಲಿ ಕಟ್ಟುವಂತಹ ತಾಯತ ಸಾಕು ….!

ಕೆಲವೊಂದು ಬಾರಿ ನಮ್ಮ ಮನೆಯಲ್ಲಿ ಚಿಕ್ಕ ಮಕ್ಕಳು ಅಳುತ್ತಾ ಇರುತ್ತವೆ ಏನು ಔಷಧಿ ಮಾಡಿದರೂ ಕೂಡ ಅವುಗಳನ್ನು ಸಮಾಧಾನ ಮಾಡಲು ನಮ್ಮ ಹತ್ತಿರ ಆಗುವುದಿಲ್ಲ.

ಇನ್ನೊಂದು ವಿಚಾರ ಏನಪ್ಪಾ ಅಂದ್ರೆ ಕೆಲವೊಂದು ಮನೆಯಲ್ಲಿ ಸಂಪೂರ್ಣವಾಗಿ ಅನಾರೋಗ್ಯದಿಂದ ತುಂಬಾ ಜನ ಬಳಲುತ್ತಿರುತ್ತಾರೆ ಇದಕ್ಕೆ ಕಾರಣ ಅವರಿಗೆ ಇರುವಂತಹ ಕೆಲವೊಂದು ದೋಷಗಳು.

ಇವುಗಳನ್ನು ನೀವೇನಾದರೂ ಪರಿಹಾರವನ್ನು ಮಾಡಿಕೊಳ್ಳಬೇಕು ಅಂತ ಇದ್ದರೆ ನೀವು ಕೆಲವೊಂದು ವಿಧಿವಿಧಾನಗಳನ್ನು ಮಾಡಬೇಕಾಗುತ್ತದೆ ಎಷ್ಟೇ ದೊಡ್ಡ ದೊಡ್ಡ ಡಾಕ್ಟರ್ ಬಳಿ ಹೋದರು ಸರಿ ಹೋಗೋದಿಲ್ಲ ಎನ್ನುವಾಗ ನೀವು  ಅದಕ್ಕಾಗಿ ಕೊನೆಗೆ ದೈವದ ಸಹಾಯ ಕೂಡ ಪಡೆಯಬೇಕಾಗುತ್ತದೆ.

ಹಾಗಾದರೆ ನಿಮ್ಮ ಮೇಲೆ ದುಷ್ಟ ಶಕ್ತಿಕಾಟ ಏನಾದರೂ ಇದ್ದಲ್ಲಿ ಅವುಗಳಿಂದ ದೂರವಿರಲು ಏನು ಮಾಡಬೇಕು ಅದು ಒಂದು ಯಕ್ಷ ಪ್ರಶ್ನೆ. ತಲೆ ಕೆಡಿಸ್ಕೋಬೇಡಿ ಇದಕ್ಕೆ ಒಂದು ಪರಿಹಾರವಿದೆ. ಅದು ಏನಪ್ಪ ಅಂದ್ರೆ ಇಲ್ಲಿರುವಂತಹ ದೇವಸ್ಥಾನದಲ್ಲಿ ಕೊಡುವ ಅಂತಹ ಒಂದು ತಾಯತ ನಿಮ್ಮ ಜೀವನವನ್ನೇ ಸಂಪೂರ್ಣವಾಗಿ ಬದಲಾಯಿಸುವ ಅಂತಹ ಶಕ್ತಿ ಅದಕ್ಕೆ ಇದೆಯಂತೆ.

ಹಾಗಾದರೆ ಆ ತಾಯತ ಎಲ್ಲಿ ಸಿಗುತ್ತದೆ ಹಾಗೂ ಆ ದೇವಸ್ಥಾನ ಇರೋದಾದ್ರೂ ಎಲ್ಲಿ ಇರೋದು ರ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಈ ದೇವಸ್ಥಾನ ಇರುವುದು ಬ್ಯಾಟರಾಯನಪುರ ಮೈಸೂರು ರಸ್ತೆಯಲ್ಲಿ ಇರುವಂತಹ ಗಾಳಿ ಆಂಜನೇಯ ದೇವಸ್ಥಾನ. ಈ ದೇವಸ್ಥಾನ ಸರಿ ಸುಮಾರು 1400  ವರ್ಷಗಳ ಹಿಂದಿನ ದೇವಸ್ಥಾನ.  ವ್ಯಾಸರರಾಯರ ಸಹಾಯದಿಂದ ಈ ದೇವಸ್ಥಾನವನ್ನು ಕಟ್ಟಿಸಲಾಗಿದೆ. ಈ ದೇವಸ್ಥಾನದಲ್ಲಿ ಇರುವಂತಹ ದೇವರು ಯಾವುದು ಅದರ ಪ್ರಶ್ನೆಯ ಉತ್ತರ ಆಂಜನೇಯ ದೇವಸ್ಥಾನ.

ಈ ದೇವಸ್ಥಾನದಲ್ಲಿ ಇರುವಂತಹ ಆಂಜನೇಯ ಪ್ರತಿಮೆಯನ್ನು ಉಡುಪಿಯ ಸಾಲಿಗ್ರಾಮದಲ್ಲಿ ನಿರ್ಮಿಸಲು. ಇಲ್ಲಿರುವಂತಹ ಈ ದೇವರಿಗೆ ಸಿಕ್ಕಾಪಟ್ಟೆ ಶಕ್ತಿ ಇದೆಯಂತೆ ಹಾಗೂ ನೀವು ಕಂಡಂತಹ ಕಷ್ಟಗಳು ಹಾಗೂ ಪರಿಹಾರಗಳು ಈ ದೇವಸ್ಥಾನದಲ್ಲಿ ತುಂಬಾ ಫಾಸ್ಟ್ ಹಾಗೆ ಆಗುತ್ತದೆ.

ಈ ದೇವಸ್ಥಾನದಲ್ಲಿ ಇನ್ನೊಂದು ವಿಶೇಷವಾದ ಆಕರ್ಷಣೆ ಏನಪ್ಪಾ ಅಂದರೆ ಈ ದೇವಸ್ಥಾನದಲ್ಲಿರುವ ಹನುಮಂತನ ದೇವರಿಗೆ ಮೀಸೆ ಇದೆಯಂತೆ. ಅದಲ್ಲದೆ ಈ ದೇವಸ್ಥಾನದ ಇರುವಂತಹ ಹನುಮಂತ ನ ಮೂರ್ತಿಯಲ್ಲಿ ಇರುವಂತಹ ಕಣ್ಣುಗಳು ನೇರವಾಗಿ ಭಕ್ತರ ನೋಡುವ ಹಾಗೆ ಕೆತ್ತನೆ ಮಾಡಲಾಗಿದೆ. ಈ ಗಾಳಿ ಆಂಜನೇಯ ದೇವಸ್ಥಾನದಲ್ಲಿ ಇರುವಂತಹ ಆಂಜನೇಯ ಮೂರ್ತಿಗೆ ಹಾಗೂ ಅದರ ಬಾಲಕ್ಕೆ ಒಂದು ಗಂಟೆಯನ್ನು ಕೂಡ ಕಟ್ಟಲಾಗಿದೆ ಅದು ವ್ಯಾಸರಾಜರ ಒಂದು ಸೂಚನೆ ಇಂದ.

ಈ ಗಾಳಿ ಆಂಜನೇಯ ದೇವಸ್ಥಾನಕ್ಕೆ ದಿನದಿಂದ ದಿನಕ್ಕೆ ಸಾವಿರಾರು ಜನರು ಇಲ್ಲಿಗೆ ಬಂದು ಹೋಗುತ್ತಾರೆ ಅದಲ್ಲದೆ ಎಲೆಕ್ಷನ್ ಹತ್ತಿರ ಬಂತು ಅಂದರೆ ಇಲ್ಲಿ ತುಂಬಾ ಜನ ರಾಜಕೀಯ ವ್ಯಕ್ತಿಗಳು ಕೂಡ ಇಲ್ಲಿ ಒಂದು ವಿಶೇಷವಾದ ಪೂಜೆಯನ್ನು ಮಾಡಿಕೊಂಡು ಹೋಗುತ್ತಾರೆ. ಅದಲ್ಲದೆ ಚಿಕ್ಕ ಮಕ್ಕಳಿಗೆ ಏನಾದರೂ ಪ್ರಾಬ್ಲಮ್ ಇದ್ದರೆ ಇಲ್ಲಿ ದೊರಕುವಂತಹ ತಾಯತವನ್ನು ಮಕ್ಕಳಿಗೆ ಕಟ್ಟುತ್ತಾರೆ. ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಮರೆಯಬೇಡಿ.

kannada inspiration story and Kannada Health Tips

Gali anjaneya temple banglore