Categories
ಭಕ್ತಿ ಮಾಹಿತಿ ಸಂಗ್ರಹ

ವಿಶ್ವದ ಏಕೈಕ ಆಮೆ ಆಕಾರದ ದೇವಸ್ಥಾನ ಇರುವ ಸ್ಥಳ ನಿಮಗೇನಾದರೂ ಗೊತ್ತಾ … ? ಆ ಸ್ಥಳಕ್ಕೆ ಹೋದರೆ ನಿಮಗೆ ಇರುವಂತಹ ಕಷ್ಟಗಳು ಹಾಗೂ ಸಂಕಷ್ಟಗಳು ನಿವಾರಣೆಯಾಗುತ್ತವೆ …. ಶ್ರೀ ಲಕ್ಷ್ಮಿ ಗವಿ ರಂಗನಾಥ ಸ್ವಾಮಿ ಇರುವಂತಹ ಸ್ಥಳ ಇದು ..

ಕೆಲವೊಂದು ಪುಣ್ಯಕ್ಷೇತ್ರಗಳಲ್ಲಿ ಅದರದ್ದೇ ಆದಂತಹ ಒಂದು ಪವಾಡವನ್ನು ಮಾಡುವಂತಹ ಒಂದು ವಿಶೇಷವಾದ ಶಕ್ತಿಯನ್ನು ಹೊಂದಿರುತ್ತವೆ, ಹೀಗೆ ಆ ಶಕ್ತಿಯನ್ನು ಹೊಂದಿರುವಂತಹ ಪುಣ್ಯಕ್ಷೇತ್ರದಲ್ಲಿ ನೀವೇನಾದರೂ ಹೋಗಿ ನಿಮ್ಮ ಕಷ್ಟಗಳನ್ನು ಹಾಗೂ ನಿಮ್ಮ ಕಾರ್ಪಣ್ಯಗಳನ್ನು ನೀವೇನಾದರೂ ಬೇಡಿಕೊಂಡರೆ,

ಅವುಗಳು ಪವಾಡದ ರೂಪದಲ್ಲಿ ಸಂಪೂರ್ಣವಾಗಿ ನಿಮ್ಮ ಕಷ್ಟಗಳು ಹಾಗೂ ನಿಮಗೆ ಇರುವಂತಹ ಕೆಟ್ಟ ದೃಷ್ಟಿಯು ಸಂಪೂರ್ಣವಾಗಿ ಕಳೆದುಹೋಗುತ್ತವೆ.

ಹಾಗಾದ್ರೆ ಬನ್ನಿ ಈ ರೀತಿಯಾಗಿ ಭಕ್ತರ ಕಷ್ಟವನ್ನು ಸಂಪೂರ್ಣವಾಗಿ ನಿವಾರಣೆ ಮಾಡಬಲ್ಲ ಅಂತಹ ಒಂದು ಕ್ಷೇತ್ರದ ಬಗ್ಗೆ ಸಂಪೂರ್ಣವಾದ ವಿವರಗಳನ್ನು ತಿಳಿದುಕೊಳ್ಳೋಣ.

ಇಡೀ ಜೀವರಾಶಿಗಳ ಸೃಷ್ಟಿಕರ್ತ ಯಾರು ಅಂದaರೆ ಪ್ರತಿಯೊಬ್ಬ ಮನುಷ್ಯನ ಹೇಳುತ್ತಾನೆ ಅದು ಬ್ರಹ್ಮ ಅಂತ, ಇಡೀ ಬ್ರಹ್ಮಾಂಡಕ್ಕೆ ನಾಯಕನಾರು ಅಂತ ಹೇಳಿದರೆ ಅದನ್ನು ಹೇಳುತ್ತಾರೆ ಅದು ವಿಷ್ಣು ಅಂತ. ಹೀಗೆ ಜನರ ಮಹಾನ್ ರಕ್ಷಕ ಆಗಿರುವಂತಹ ವಿಷ್ಣುವು ಆಮೆಯ ಆಕಾರದಲ್ಲಿ  ನಡೆಸಿರುವಂತಹ ಈ ಪುಣ್ಯ ಕ್ಷೇತ್ರವೇ ಗವಿ ರಂಗನಾಥಪುರದ ಈ ವಿಷ್ಣು ಸ್ವಾಮಿ.

ಇಲ್ಲಿರುವಂತಹ ವಿಷ್ಣು ಸ್ವಾಮಿ ಕಲ್ಲಿನ ಅದೊಂದು ದೊಡ್ಡ ಗೋಪುರ ದ್ವಾರ ನಡುವೆ ನೀವು ನೋಡಬಹುದಾಗಿದೆ. ಹಾಗೆಯೇ ಈ ದೇವಸ್ಥಾನವನ್ನು ವಿಚಿತ್ರವಾಗಿ ಕಟ್ಟಲಾಗಿದೆ ಅದನ್ನು ಹೇಗೆ ಕಟ್ಟಲಾಗಿದೆ ಎನ್ನುವುದಕ್ಕೆ ನಿಜವಾಗಲೂ ನಮಗೆ ಬಣ್ಣಿಸಲು ಕೂಡ ನಮ್ಮ ಮಾತುಗಳಲ್ಲಿ ಮಾತುಗಳೇ ಬರುವುದಿಲ್ಲ.

ಇದರ ಹಿನ್ನೆಲೆಯನ್ನು ನಾವೇನಾದರೂ ಸ್ವಲ್ಪ ಮೆಲುಕು ಹಾಕಿದರೆ ಹಲವಾರು ವರ್ಷಗಳ ಹಿಂದೆ ಇಲ್ಲಿ ಗಿರಿ-ಶಿಖರ ಎನ್ನುವಂತಹ ಒಂದು ಪ್ರದೇಶ ಇತ್ತಂತೆ. ಇಲ್ಲಿ ಒಬ್ಬ ದನ ಕಾಯುವವನು ತನ್ನ ಹಸುಗಳನ್ನು ಈ ಪ್ರದೇಶಕ್ಕೆ ಅಂದರೆ ಈ ಗುಹೆ ಇರುವಂತಹ ಸುತ್ತಮುತ್ತಲಿನ ಪ್ರದೇಶಕ್ಕೆ ದಿನನಿತ್ಯ ಕರೆದುಕೊಂಡು ಹೋಗುತ್ತಿದ್ದಂತೆ, ಈ ಗೊಲ್ಲನ ಗೌಡರ ಅಡಿಯಾಳಾಗಿ ಕೆಲಸ ಮಾಡುತ್ತಿರುವ ಅಂತಹ ಒಬ್ಬ ಮನುಷ್ಯ ನಾಗಿರುತ್ತಾನೆ.

ದಿನನಿತ್ಯ ಈ ದೇವಸ್ಥಾನದ ಸುತ್ತಮುತ್ತ ಈ ಹಸುಗಳನ್ನು ಚೆನ್ನಾಗಿ ಬೇಯಿಸಿ ಅವುಗಳನ್ನು ಮತ್ತೆ ಗೌಡರ ಮನೆಗೆ ಬಿಟ್ಟು ಬಿಡುವುದು ಇವರ ದಿನನಿತ್ಯದ ಒಂದು ಕೆಲಸವಾಗಿತ್ತು. ಆದರೆ ದಿನನಿತ್ಯ ಕರೆದುಕೊಂಡು ಹೋಗುತ್ತಿರುವ ಅಂತಹ ಸಂದರ್ಭದಲ್ಲಿ ಒಂದು ಗೋವು ಈ ದೇವಸ್ಥಾನದ ಒಳಗಡೆ ಹೋಗಿ ದೇವಸ್ಥಾನದಲ್ಲಿ ಇರುವಂತಹ ಒಂದು ಹುತ್ತಕ್ಕೆ ಹಾಲನ್ನು ಕೊಡುತ್ತಿರುತ್ತದೆ.

ಹೀಗೆ ದಿನನಿತ್ಯ ಈ ರೀತಿಯಾದಂತಹ ಒಂದು ಕೆಲಸ ಈ ಗೋವು ಮಾಡುತ್ತಿರುತ್ತದೆ. ಒಂದು ದಿನ ಆ ಗೌಡರಿಗೆ ಒಂದು ಅನುಮಾನ ಬರುತ್ತದೆ ದಿನದಿಂದ ದಿನಕ್ಕೆ ಹಸುವು ಸರಿಯಾಗಿ ಹಾಲು ಬರುತ್ತಾ ಇಲ್ಲ ಎನ್ನುವಂತಹ ಒಂದು ಯೋಚನೆ ಅವನ ಮನದಲ್ಲಿ ಮೂಡುತ್ತದೆ.

ಒಂದು ದಿನ ಆ ಹಸುವನ್ನು ಹಿಂಬಾಲಿಸಿದ ಎಲ್ಲಿ ಹೋಗುತ್ತದೆ ಎನ್ನುವ ಒಂದು ವಿಷಯವನ್ನು ತಿಳಿಯುವುದಕ್ಕಾಗಿ, ಆ ಹಸುವನ್ನು ಹಿಂಬಾಲಿಸಿದ ಆಗ ಅವನಿಗೆ ಒಂದು ವಿಚಿತ್ರವಾದ ಅನುಭವ ಆಗುತ್ತದೆ, ಆ ವಿಚಿತ್ರವಾದ ಅನುಭವವೇ ಆ ಗುಹೆಯಲ್ಲಿ ಇರುವಂತಹ  ಸ್ವಾಮಿಗೆ ಅಂದರೆ ಆ ಹುತ್ತದಲ್ಲಿ ಇರುವಂತ ವಿಷ್ಣು ಸ್ವಾಮಿಗೆ ತನ್ನಷ್ಟಕ್ಕೆ ತಾನೇ ಹಾಲನ್ನು ಕೊಡುವಂತಹ ಒಂದು ದೃಶ್ಯವನ್ನು ನೋಡಿ ಈ ಕೂಡ ಒಂದು ಬಾರಿ ಆಶ್ಚರ್ಯ ಗೊಳ್ಳುತ್ತಾನೆ.

ಹೀಗೆ ಆಶ್ಚರ್ಯಗೊಂಡ ಅಂತಹ ಈ ಗೌಡ ಊರಿನಲ್ಲಿ ಇರುವಂತಹ ಎಲ್ಲಾ ಜನರಿಗೂ ಕೂಡ ಈ ರೀತಿಯಾದಂತಹ ಒಂದು ಅನುಭವವನ್ನು ಹೇಳಿಕೊಳ್ಳುತ್ತಾನೆ. ಅದಲ್ಲದೆ ಆ ಗೌಡ ರಾತ್ರಿ ಹೊತ್ತು ಮಲಗಿದ್ದಾಗ ಆ ಗುಹೆಯಲ್ಲಿ ಇರುವಂತಹ ಈ ಗವಿ ರಂಗನಾಥ ಇವನ ಕನಸಿನಲ್ಲಿ ಬಂದು ಹೇಳುತ್ತಾನೆ , ಅದು ನಾನು ಇರುವಂತಹ ಸ್ಥಳ ಇಲ್ಲಿ ಯಾರು ಬೇಕಾದರೂ ಬಂದು ಅವರ ಇಷ್ಟಾರ್ಥಗಳನ್ನು ಬೇಡಿಕೊಂಡರೆ ಅವರ ಇಷ್ಟಾರ್ಥಗಳನ್ನು ನಾನು ಬಗೆಹರಿಸುತ್ತೇನೆ ಎನ್ನುವಂತಹ ಮಾತು.

ಅವತ್ತು ಆ ಗೌಡ ಅಲ್ಲಿ ಇರುವಂತಹ ಸ್ಥಳವನ್ನು ಒಂದು ದೇವಸ್ಥಾನದ ರೂಪದಲ್ಲಿ ಕಟ್ಟಿಸುತ್ತಾನೆ, ಇಲ್ಲಿವರೆಗೂ ಅಲ್ಲಿಗೆ ಹೋದಂತಹ ಜನರಿಗೆ ಯಾವುದೇ ಕಷ್ಟ ಇದ್ದರೂ ಕೂಡ ಆ ದೇವರು ಕಷ್ಟವನ್ನು ನಿವಾರಣೆ ಮಾಡುವಂತಹ ಶಕ್ತಿಯನ್ನು ತುಂಬಾ ಜನರಿಗೆ ತೋರಿಸಿದ್ದಾರೆ. ಹಾಗಾದರೆ ಇನ್ನೇಕೆ ತಡ ನಿಮಗೇನಾದರೂ ಈ ದೇವಸ್ಥಾನಕ್ಕೆ ಹೋಗಬೇಕು ಎಂದರೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಶ್ರೀರಾಂಪುರ ಬಳಿ ಇರುವಂತಹ ಗವಿರನ್ಗಪುರ ದಲ್ಲಿ ಇರುವಂತಹ ಸ್ಥಳ ಇದು.

kannadaa inspiration story anda Kannada Health Tips kannada inspiration story and Kannada Health Tips

Gavigangadhara  swamy  temple