ಲಕ್ಷ್ಮಿ ದೇವಿ ಮುಂದೆ ಒಂದು ಹಿಡಿ ಅರಿಶಿನ ಇಟ್ಟು ಈ ಮಂತ್ರ ಹೇಳಿದ್ರೆ ನಿಮಗೆ ಅದೃಷ್ಟ ಇವತ್ತಿನಿಂದಲೇ ಶುರು ಆಗುತ್ತೆ

184

ನಮಸ್ಕಾರಗಳು ಪ್ರಿಯ ಓದುಗರೇ ಲಕ್ಷ್ಮೀ ದೇವಿಯ ಕೃಪೆ ಪಡೆಯಲು ನೀವು ಹೀಗೆ ಮಾಡಿ ಖಂಡಿತವಾಗಿಯೂ ತಾಯಿಯ ಅನುಗ್ರಹದಿಂದಾಗಿ ಜೀವನದಲ್ಲಿ ಅತ್ಯುತ್ತಮರಾಗಿ ಬದುಕಲು ಸಾಧ್ಯವಾಗುತ್ತದೆ ಜೀವನದಲ್ಲಿ ಲಕ್ಷ್ಮೀ ದೇವಿಯ ಅನುಗ್ರಹ ಇಲ್ಲದೆ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ ತಾಯಿಯ ಅನುಗ್ರಹ ಕೇವಲ ಧನ ಪ್ರಾಪ್ತಿಗಾಗಿ ಮಾತ್ರ ಜೀವನದಲ್ಲಿ ಯಶಸ್ಸು ಕಾಣಬೇಕು ಅಂದರೆ ಆ ತಾಯಿಯ ಅನುಗ್ರಹ ಇರಲೇ ಬೇಕಾಗುತ್ತದೆ ಹಾಗಾಗಿ ಎಲ್ಲರೂ ಕೂಡ ಲಕ್ಷ್ಮೀದೇವಿಯ ಆರಾಧನೆ ಮಾಡ್ತಾರೆ ಎಲ್ಲರ ಕೂಡ ಲಕ್ಷ್ಮೀದೇವಿ ಉಳಿಸಿಕೊಳ್ಳಲು ಪ್ರಯತ್ನ ಪಡುತ್ತಾರೆ ಆದರೆ ಎಲ್ಲರಿಗೂ ಕೂಡ ಅಷ್ಟು ಸುಲಭವಾಗಿ ಲಕ್ಷ್ಮಿ ಒಲಿಯುವುದಿಲ್ಲ.

ಹೌದು ತಾಯಿ ಲಕ್ಷ್ಮೀದೇವಿ ಚಂಚಲ ಸ್ವಭಾವದವಳು ಆಕೆ ಎಲ್ಲರ ಬಳಿ ಒಂದೇ ಸಮ ಇರುವುದಿಲ್ಲ ಇಂದು ನಮ್ಮ ಬಳಿ ಇದ್ದರೆ ನಾಳೆ ದಿನ ಮತ್ತೊಬ್ಬರ ಬಳಿ ಇರುತ್ತಾಳೆ ಆದರೆ ಲಕ್ಷ್ಮೀದೇವಿಯ ಸ್ಥಿರವಾದ ಅನುಗ್ರಹ ನಿಮಗೂ ಕೂಡ ಆಗಬೇಕೆಂದಲ್ಲಿ, ನೀವು ಸಹ ಈ ಪರಿಹಾರವನ್ನು ಪಾಲಿಸಿ. ಈ ಕೆಲವೊಂದು ಪರಿಹಾರಗಳನ್ನು ಪಾಲಿಸುವ ಮೂಲಕ ಆಕೆಯ ಅನುಗ್ರಹವನ್ನು ಪಡೆದು ಜೀವನದಲ್ಲಿ ಉತ್ತಮರಾಗಿರಲು ಸಾಧ್ಯವಾಗುತ್ತದೆ ಹಾಗಾದರೆ ಆ ಪರಿಹಾರ ಏನು ಗೊತ್ತಾ?

ಹೌದು ಮನೆಯಲ್ಲಿಯೇ ಇರುವ ಕೆಲವೊಂದು ಪದಾರ್ಥಗಳನ್ನು ಬಳಸಿ ವಸ್ತುಗಳನ್ನು ಬಳಸಿ ಆಕೆಯ ಅನುಗ್ರಹವನ್ನು ನೀವು ಸಿದ್ಧಿಸಿಕೊಳ್ಳಬಹುದು. ಅದರಲ್ಲಿ ಮೊದಲನೆಯದಾಗಿ ಹೆಣ್ಣು ಮಕ್ಕಳು ಮಾಡುವ ಪರಿಹಾರ ಇದಾಗಿದೆ, ಆ ಪರಿಹಾರವೇನು ಅಂದರೆ ಅರಿಶಿಣ ಕೊಂಬಿನಿಂದ ಮಾಡುವ ಈ ಪರಿಹಾರ ಶುಕ್ರವಾರದ ದಿನದಂದು ಹೆಣ್ಣುಮಕ್ಕಳು ಮಾಡಬೇಕಿರುತ್ತದೆ. ಆದರೆ ಶುಕ್ರವಾರ ಬೆಳಗ್ಗೆ ಹೆಣ್ಣುಮಕ್ಕಳು ಸ್ನಾನ ಮಾಡುವ ಮುನ್ನ ಅರಿಷಣ ಕೊಂಬಿನಿಂದ ಪುಡಿಯನ್ನು ಮಾಡಿಕೊಂಡು, ಆ ಪುಡಿಯನ್ನು ತುಪ್ಪದೊಂದಿಗೆ ಮಿಶ್ರ ಮಾಡಿಕೊಳ್ಳಬೇಕು ಅಥವಾ ತುಪ್ಪದಲ್ಲಿ ಅರಿಶಿಣದ ಕೊಂಬನ್ನು ತೇಯ್ದು ಕೊಂಡು ಬಳಿಕ, ಅದನ್ನು ನೀರಿನಲ್ಲಿ ಹಾಕಿ ಅದರಿಂದ ಸ್ನಾನವನ್ನು ಮಾಡಬೇಕು. ಈ ಪರಿಹಾರವನ್ನು ನೆನಪಿನಲ್ಲಿಡಿ ಹೆಣ್ಣುಮಕ್ಕಳು ಮಾತ್ರ ಮಾಡಬೇಕು.

ಸ್ನಾನಾದಿಗಳನ್ನು ಮುಗಿಸಿದ ನಂತರ ಹೆಣ್ಣುಮಕ್ಕಳು ಲಕ್ಷ್ಮೀದೇವಿಯ ಆರಾಧನೆ ಮಾಡಬೇಕು, ತಾತಯ್ಯ ಆರಾಧನೆ ಮಾಡುವಾಗ ಅರಿಶಿಣ ಕೊಂಬನ್ನೂ ತೆಗೆದುಕೊಂಡು ತಾಯಿ ಲಕ್ಷ್ಮೀ ದೇವಿಯ ವಿಗ್ರಹ ಅಥವಾ ಫೋಟೋದ ಬಳಿ ಇರಿಸಬೇಕು. ಆರಾಧನೆ ಮುಗಿದ ಮೇಲೆ, ಹಣ ಇಡುವಂತಹ ಸ್ಥಳದಲ್ಲಿ ಅಥವಾ ಡ್ರಾನಲ್ಲಿ ಅಥವಾ ವಾರ್ಡ್ರೋಬ್ ನಲ್ಲಿ ಅಥವಾ ಬೀರುವಿನಲ್ಲಿ ಕಪಾಟಿನಲ್ಲಿ ನೀವು ಈ ಅರಿಶಿಣ ಕೊಂಬನ್ನೂ ಇರಿಸಬೇಕು. ಈ ಪರಿಹಾರವನ್ನು ಮನೆಯ ಹೆಣ್ಣು ಮಕ್ಕಳು ಮಾಡಬೇಕಿರುತ್ತದೆ ಮನೆಯ ಗೃಹಲಕ್ಷ್ಮಿ ಆಗಿರುವ ಹೆಣ್ಣು ಮಕ್ಕಳು ತಾಯಿಯ ಅನುಗ್ರಹ ಪಡೆದುಕೊಳ್ಳಲು ಈ ಪರಿಹಾರವನ್ನು ಶುಕ್ರವಾರದ ದಿನದಂದು ಪಾಲಿಸಬೇಕಿರುತ್ತದೆ.

ಇನ್ನೂ ತಾಯಿಯ ಅನುಗ್ರಹ ಪಡೆದುಕೊಳ್ಳಲು ಪುರುಷರೋ ಮಹಿಳೆಯರೋ ಇಬ್ಬರೂ ಕೂಡ ಈ ಪರಿಹಾರವನ್ನ ಭಾನುವಾರದ ದಿನದಂದು ಮಾಡಿಕೊಳ್ಳಬಹುದು. ಅದೇನೆಂದರೆ ಅರಿಶಿನ ಕೊಂಬನ್ನು ಪುಡಿ ಮಾಡಿದ ನಂತರ ಆ ಅರಿಶಿಣದ ಪುಡಿ ಅನ್ನು ಸ್ನಾನ ಮಾಡುವ ನೀರಿಗೆ ಹಾಕಿ ಬಳಿಕ ಆ ನೀರಿನಿಂದ ಸ್ನಾನಾದಿಗಳನ್ನು ಮಾಡಬೇಕು ಇದರಿಂದ ಶರೀರದ ಸುಸ್ತು ಅಷ್ಟೇ ಅಲ್ಲ ನಮ್ಮ ಮನಸ್ಸಿನಲ್ಲಿ ಕಾಡುತ್ತಿರುವಂತಹ ಹಲವು ಕೆಟ್ಟ ಆಲೋಚನೆಗಳು ಪರಿಹಾರ ಆಗುತ್ತದೆ.

ಹುಣ್ಣಿಮೆಯ ದಿನದಂದು ತಾಯಿ ಲಕ್ಷ್ಮೀದೇವಿಯ ಆರಾಧನೆ ಮಾಡುವುದಕ್ಕೆ ಬಹಳ ಒಳ್ಳೆಯ ದಿನವಾಗಿರುತ್ತದೆ ಈ ದಿನದಂದು ಸಂಜೆ ಸಮಯದಲ್ಲಿ ಅರಿಶಿಣ ಮತ್ತು ಗಂಧವನ್ನು ಹಾಕಿ ಅದಕ್ಕೆ ತುಪ್ಪವನ್ನು ಹಾಕಿ ಮಿಶ್ರಣ ಮಾಡಬೇಕು. ಇದರಿಂದ ಮನೆಯ ಮುಖ್ಯ ದ್ವಾರದ ಮೇಲ್ಭಾಗದಲ್ಲಿ 3 ಜಾಗದಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು. ಬಳಿಕ ದೇವರ ಆರಾಧನೆಯನ್ನು ಮಾಡಬೇಕು ತಾಯಿ ಲಕ್ಷ್ಮೀ ದೇವಿಯನ್ನು ಪೂಜಿಸಬೇಕು. ಈ ಪರಿಹಾರವನ್ನು ಹುಣ್ಣಿಮೆಯ ದಿನದಂದು ಮಾಡಬೇಕು ಪ್ರತಿ ಹುಣ್ಣಿಮೆಯ ದಿನದಂದು ಈ ಪರಿಹಾರವನ್ನು ಪಾಲಿಸಬೇಕು ಇದರಿಂದ ಕೂಡ ತಾಯಿ ಲಕ್ಷ್ಮೀದೇವಿ ನಿಮಗೆ ಒಲಿಯುತ್ತಾಳೆ