Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ಮೈ ಮೇಲೆ ಹಚ್ಚೆ ಇದ್ರೆ ಭಾರತೀಯ ಸೇನೆಯಲ್ಲಿ ರಿಜೆಕ್ಟ್ ಮಾಡ್ತಾರಾ ನೋಡಿ ಇಲ್ಲಿದೆ ವಿವರ….

ಭಾರತ ದೇಶದಲ್ಲಿ ಸೇನೆಯ ವಿಚಾರಕ್ಕೆ ಬಂದರೆ ನಮ್ಮಲ್ಲಿ ಒಂದು ಪೂಜ್ಯನೀಯ ಭಾವನೆ ಬರುತ್ತದೆ ಒಂದು ಗೌರವ ನಮ್ಮಲ್ಲಿ ಉದ್ಭವಿಸುತ್ತದೆ ಅದು ಸ್ನೇಹಿತರೇ ಭಾರತ ದೇಶದಲ್ಲಿ ಇರುವಂತಹ ಸೇನೆಯಲ್ಲಿ ಕೆಲಸ ಮಾಡುತ್ತಿರುವಂತಹ ಸೈನಿಕರನ್ನು ಕಂಡರೆ ನಮಗೆ ಕೈಎತ್ತಿ ಮುಗಿಯಬೇಕು ಅಂತ ಅನ್ನಿಸುತ್ತದೆ.

ಯಾಕೆ ಅಂದರೆ ನಮ್ಮ ದೇಶದಲ್ಲಿ ಇರುವಂತಹ ಜನರ ಪ್ರಾಣವನ್ನು ಕಾಡುತ್ತಿರುವಂತಹ ಸೈನಿಕರು ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧರಿರುತ್ತಾರೆ ಆದ್ದರಿಂದ ಅವರನ್ನು ಕಂಡರೆ ಅಂತಹ ಮನೋಭಾವ ನಮ್ಮಲ್ಲಿ ಬಂದುಬಿಡುತ್ತದೆ . ನಮ್ಮ ಭಾರತ ದೇಶದಲ್ಲಿ ಭಾರತೀಯ ಸೇನೆಗೆ ಸೇರಲು ಯುವಕರು ಸದಾ ಸಿದ್ಧರಾಗಿರುತ್ತಾರೆ.

ಮತ್ತು ಎಂದಿಗೂ ಕೂಡಾ ಈ ಒಂದು ಸೇನೆಗೆ ಸೇರುವುದಕ್ಕೆ ಜನರು ಹಿಂಜರಿದಿಲ್ಲ, ನಮ್ಮ ಭಾರತ ದೇಶದಲ್ಲಿ ಯಾವಾಗಲೂ ಕೂಡ ಯುವಕರಾಗಲಿ ಯುವತಿಯರಾಗಲಿ ನಮ್ಮ ಭಾರತ ದೇಶದ ಸೇವೆಯನ್ನು ಮಾಡಲು ಮುಂದಿರುತ್ತಾರೆ ಮತ್ತು ಭಾರತ ಸೇನೆಗೆ ಸೇರಲು ಅವಕಾಶವಾದರೂ ದೊರೆತರೆ ಅದನ್ನು ಎಂದಿಗೂ ಕೂಡ ನಿರಾಕರಿಸುವುದಿಲ್ಲ .

ಹಾಗಾದರೆ ನೀವು ಈ ಮಾಹಿತಿಯನ್ನು ಓದುವಾಗ ಯೋಚಿಸಬಹುದು ಯಾರು ಬೇಕಾದರೂ ಸೇನೆಗೆ ಸೇರಿಕೊಳ್ಳಬಹುದು ಅಂತ ಅದು ತಪ್ಪು ಯಾರು ಬೇಕಾದರೂ ಅವರು ಸೇನೆಗೆ ಸೇರುವಂತಿಲ್ಲ ಸೇನೆಗೆ ಸೇರಲು ಸಾಕಷ್ಟು ನಿಯಮಗಳು ಇವೆ ನಮ್ಮ ದೇಹವು ಸದೃಢವಾಗಿರಬೇಕು ಒಳ್ಳೆಯ ಮೈಕಟ್ಟನ್ನು ಹೊಂದಿರಬೇಕು ಇಷ್ಟ ಎತ್ತರವಿರಬೇಕು ಅನ್ನೋ ಒಂದು ನಿಯಮಗಳು ಕೂಡ ಇವೆ .

ಸೇನೆಗೆ ಸೇರಲು ಇಂತಹ ಸಾಕಷ್ಟು ನಿಯಮಗಳ ಜೊತೆಗೆ ಸೇನೆಗೆ ಸೇರುವ ವ್ಯಕ್ತಿಯೂ ಯಾವುದೇ ಕಾರಣಕ್ಕೂ ಟ್ಯಾಟೂ ಅಂದರೆ ಹಚ್ಚೆಯನ್ನು ಹಾಕಿಸಿಕೊಂಡಿರಬಾರದು ಅನ್ನೊ ನಿಯಮ ಇದೆ . ಈ ರೀತಿ ನಿಯಮ ಪಾಲಿಸಲು ಕಾರಣವೇನು ಅಂತ ಹೇಳೋದಾದರೆ ಸೇನೆಗೆ ಸೇರುವ ವ್ಯಕ್ತಿಗಳು ತಮ್ಮ ಬಲಗೈಯಲ್ಲಿ ಯಾವತ್ತಿಗೂ ಕೂಡ ಟ್ಯಾಟುವನ್ನು ಅಂದರೆ ಹಚ್ಚೆಯನ್ನು ಹಾಕಿಸಿಕೊಂಡಿರಬಾರದು.

ಯಾಕೆ ಅಂತ ಹೇಳೋದಾದರೆ ಸೇನೆಯಲ್ಲಿ ಮುಖ್ಯವಾದ ಪಾತ್ರವೇನು ಅಂದರೆ ಹಿರಿಯರನ್ನು ಅಂದರೆ ಹಿರಿಯ ಸೇನೆಯ ಅಧಿಕಾರಿಗಳನ್ನು ಕಂಡರೆ ಬಲಗೈಯನ್ನು ಎತ್ತಿ ಸಲ್ಯೂಟ್ ಮಾಡುವುದು ಈ ರೀತಿ ಸೆಲ್ಯೂಟ್ ಮಾಡುವ ಬಲಗೈಯಲ್ಲಿ ಟ್ಯಾಟೂ ಇದ್ದರೆ ಅದು ಅವರಿಗೆ ಅಗೌರವವನ್ನು ಸೂಚಿಸುತ್ತಿರುವ ಹಾಗೆ ಆದ್ದರಿಂದ ಸೇನೆಗೆ ಸೇರುವವರು ಬಲಗೈನಲ್ಲಿ ಟ್ಯಾಟು ಇದ್ದರೆ ಅವರು ಮೆಡಿಕಲ್ ರೌಂಡ್ ನಲ್ಲಿ ಅನ್ ಫಿಟ್ ಎಂದು ರಿಜೆಕ್ಟ್ ಆಗುತ್ತಾರೆ .

ಈ ಮೇಲೆ ತಿಳಿಸಿದಂತಹ ಕಾರಣಕ್ಕಾಗಿ ಸೇನೆಗೆ ಸೇರುವವರು ಟ್ಯಾಟುವನ್ನು ಹಾಕಿಸಬಾರದು ಅನ್ನೋ ಒಂದು ನಿಯಮ ಇದೆ ಮತ್ತು ವ್ಯಕ್ತಿ ಸೇನೆಗೆ ಸೇರಲು ಬಯಸಿದರೆ ತಮ್ಮ ಎಡಗೈಗೆ ಹಚ್ಚೆಯನ್ನು ಹಾಕಿಸಿಕೊಳ್ಳಬಹುದು ಅದರಲ್ಲಿಯೂ ಇಂತಹದ್ದೇ ಜಾಗದಲ್ಲಿ ಹಾಕಿಸಿಕೊಳ್ಳಬೇಕು ಅನ್ನೋ ನಿಯಮ ಕೂಡ ಇದೆ .

ಬುಡಕಟ್ಟು ಜನಾಂಗದವರು ಸೇನೆಗೆ ಸೇರಲು ಬಯಸಿದರೆ ಅವರುಗಳು ಬೇಕಾದರೆ ಹಚ್ಚೆಯನ್ನು ಹಾಕಿಸಿಕೊಳ್ಳಬಹುದು ಅದರಲ್ಲಿಯೂ ಅವರು ಹಚ್ಚೆಯನ್ನು ಹಾಕಿಸಿಕೊಳ್ಳುವ ಮೊದಲು ಕೆಲವೊಂದು ಅಧಿಕಾರಿಗಳ ಬಳಿ ಹೋಗಿ ಅಂದರೆ ಮ್ಯಾಜಿಸ್ಟ್ರೇಟರ್ ಬಳಿ ಹೋಗಿ ಪರ್ಮಿಷನ್ ಅನ್ನು ಪಡೆದುಕೊಂಡು ಬರಬೇಕಾಗುತ್ತದೆ .

ಈ ಕಾರಣಕ್ಕಾಗಿಯೇ ಆರ್ಮಿಗೆ ಸೇರಲು ಆಯ್ಕೆಯಾದಂತಹ ವ್ಯಕ್ತಿಗಳು ಹಚ್ಚೆಯನ್ನು ಹಾಕಿಸಿಕೊಂಡಿದ್ದರೆ ಅವರನ್ನು ಮೆಡಿಕಲ್ ರೌಂಡ್ ನಲ್ಲಿ ಅನ್ಫಿಟ್ ಎಂದು ರಿಜೆಕ್ಟ್ ಮಾಡಲಾಗುತ್ತದೆ . ಎಲ್ಲರಲ್ಲಿಯೂ ಕೂಡ ಈ ಒಂದು ಪ್ರಶ್ನೆ ಕಾಡುತ್ತಾ ಇರುತ್ತದೆ ಆದ್ದರಿಂದ ಇಂತಹವರಿಗೆ ಈ ಒಂದು ಮಾಹಿತಿ ಅವರ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದೆ ಎಂದು ನಾನು ಭಾವಿಸುತ್ತೇನೆ ಜೈ ಹಿಂದ್ ಜೈ ಕರ್ನಾಟಕ ಮಾತೆ .