ಈ ದೇಸ್ಥಾನಕ್ಕೆ ಜಸ್ಟ್ ಹೋದ್ರೆ ಸಾಕು ನೀವು ಮನೆ ಕಟ್ಟಿಸಬೇಕು ಅಂದುಕೊಂಡಿದ್ರೆ ಅದು ಬಹು ಬೇಗ ಪವಾಡದ ರೂಪದಲ್ಲಿ ಜರುಗುತ್ತದೆ…ಅಷ್ಟೊಂದು ಶಕ್ತಿಶಾಲಿ ದೇವಸ್ಥಾನ ಎಲ್ಲಿದೆ ಗೊತ್ತ ..

815

ವಿಷ್ಣುದೇವನ ಹಲವು ರೂಪದಲ್ಲಿ ಮೂರನೆ ರೂಪವಾಗಿರುವ ವರಹ ಸ್ವಾಮಿಯ ದೇವಾಲಯವನ್ನು ಸಾಮಾನ್ಯವಾಗಿ ನಾವು ಎಲ್ಲಿಯೂ ಕಾಣಲು ಸಾಧ್ಯವಿಲ್ಲಾ. ಆದರೆ ಮೈಸೂರಿನಿಂದ ಸುಮಾರು ೫೦ ಕಿ.ಮೀಟರ್ ದೂರದಲ್ಲಿರುವ ಕಲ್ಲಹಳ್ಳಿ ಎಂಬ ಗ್ರಾಮದಲ್ಲಿ ವರಾಹ ಸ್ವಾಮಿಯ ದೇವಾಲಯವಿದೆ ಈ ದೇವಾಲಯಕ್ಕೆ ಭೂವರಾಹನಾಥ ಸ್ವಾಮಿ ದೇವಾಲಯ ಎಂದು ಕರೆಯಲಾಗುತ್ತದೆ ಹಾಗಾದರೆ ಬನ್ನಿ ಈ ದೇವಾಲಯದ ಕುರಿತು ಇನ್ನಷ್ಟು ಮಾಹಿತಿ ನೀಡ್ತೇವೆ ಇಂದಿನ ಲೇಖನದಲ್ಲಿ. ಭೂವರಾಹನಾಥ ಸ್ವಾಮಿ ದೇವಾಲಯವು ವಿಷ್ಣುವಿನ ಮೂರನೇ ಅವತಾರವಾದ ವರಾಹ ಸ್ವಾಮಿಯ ದೇವಾಲಯ ಆಗಿದೆ. ಈ ಭೂವರಾಹನಾಥಸ್ವಾಮಿ ದೇವಾಲಯವು ಸ್ಥಳೀಯವಾಗಿ ಅತ್ಯಂತ ಪ್ರಸಿದ್ಧಿ ಅನ್ನು ಪಡೆದುಕೊಂಡಿದ್ದು, ಈ ದೇವರಿಗೆ ನಿಗೂಢ ಶಕ್ತಿ ಇದೆ ಎಂದು ಸ್ಥಳೀಯರು ನಂಬುತ್ತಾರೆ ಹಾಗೂ ಈ ದೇವಸ್ಥಾನದ ರಚನೆ ಬಹಳ ಸರಳವಾಗಿದೆ, ದೇವಸ್ಥಾನವನ್ನೂ ದೊಡ್ಡ ದೊಡ್ಡ ಬೂದು ಬಣ್ಣದ ಕಲ್ಲುಗಳಿಂದ ನಿರ್ಮಾಣ ಮಾಡಲಾಗಿದೆ.

ಈ ದೇವಾಲಯದಲ್ಲಿ ಒಟ್ಟು ಎರಡು ಘಟಕಗಳಿವೆ ಅದು ದೇವಾಲಯದ ಗರ್ಭಗುಡಿ ಮತ್ತು ಮುಂಭಾಗದ ಸಭಾಂಗಣ. ಪ್ರವೇಶ ದ್ವಾರದಲ್ಲಿಯೆ ಎರಡು ದೊಡ್ಡ ಮರದ ಬಾಗಿಲುಗಳಿದ್ದು, ಗರ್ಭಗುಡಿಯಲ್ಲಿ ದೊಡ್ಡ ವರಾಹನಾಥ ಸ್ವಾಮಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿದೆ ಹಾಗೂ ಗರ್ಭಗುಡಿಯಲ್ಲಿ 14ಅಡಿ ಎತ್ತರದ ಏಕಶಿಲಾ ಭೂವರಾಹನಾಥಸ್ವಾಮಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು ಇಡೀ ದೇಶದಲ್ಲಿ ಬಹಳ ವಿಶೇಷ ಹಾಗೂ ಅಪರೂಪ ಹಾಗೂ ಅಪರೂಪದ ವಿಗ್ರಹ ಇದಾಗಿದೆ. ಈ ವಿಗ್ರಹವನ್ನು ಬೂದು ಕಲ್ಲಿನಿಂದ ಕೆತ್ತಲಾಗಿದೆ ಈ ಬೃಹದಾಕಾರದ ವಿಗ್ರಹದ ಎಡತೊಡೆಯ ಮೇಲೆ ಭೂದೇವಿಯು ಕುಳಿತಿದ್ದು, ಭೂದೇವಿಯ ವಿಗ್ರಹವು 3.5 ಅಡಿ ಎತ್ತರವಿದೆ ಭಗವಾನ್ ಹನುಮನ ಮೂರ್ತಿಯು ಸಹ ಇಲ್ಲಿ ಪ್ರಮುಖವಾದ ವಿಗ್ರಹವಾಗಿದೆ ಈ ವಿಗ್ರಹವು ಸಹ ಭೂವರಾಹನಾಥಸ್ವಾಮಿ ಆ ವಿಗ್ರಹದ ಅಡಿಯಲ್ಲಿ ಕೆತ್ತಲಾಗಿದೆ. ವಿಗ್ರಹದ ಮೇಲ್ಭಾಗದ ಕೈಯಲ್ಲಿ ಶಂಖ ಹಾಗೂ ಮತ್ತೊಂದು ಕೈಯಲ್ಲಿ ಸುದರ್ಶನ ಚಕ್ರವನ್ನ ಕೆತ್ತಲಾಗಿದ್ದು, ವಿಗ್ರಹದ ಕೆಳಭಾಗದ ಕೆಳಭಾಗದ ಬಲಗೈಯನ್ನು ಅಭಿಯಾನ ಮುದ್ರೆಯಲ್ಲಿ ಕಿತ್ತಿದ್ದಾರೆ.

ಪ್ರಸ್ತುತ ಇರುವ ದೇವಸ್ಥಾನವು ಸುಮಾರು 2500 ವರ್ಷಕ್ಕಿಂತ ಹೆಚ್ಚು ಹಳೆಯದು ಎಂದು ಹೇಳಲಾಗಿದ್ದು ದೇವಸ್ಥಾನದಲ್ಲೇ ಗೌತಮ ಋಷಿ ತಪಸ್ಸು ಮಾಡಿದ್ದರು ಎಂಬ ಮಾತು ಕೂಡ ಇದೆ. ಈ ದೇವಾಲಯವನ್ನು ಹೊಯ್ಸಳರ ಅರಸ ಮೂರನೇ ವೀರಬಲ್ಲಾಳ ನಿರ್ಮಿಸಿದ್ದಾನೆ ಎಂಬ ದಂತಕಥೆಯಿದೆ. ಇತ್ತೀಚಿಗೆ ಜನರ ನಂಬಿಕೆಯ ಪ್ರಕಾರ ಇಲ್ಲಿಗೆ ಬಂದು ದೇವಸ್ಥಾನದ ಬಲಭಾಗದಲ್ಲಿ ಇರುವ ಮಣ್ಣನ್ನು ಪೂಜೆ ಮಾಡಿಸಿ ಇಲ್ಲಿಂದ ಇಟ್ಟಿಗೆಯನ್ನು ತೆಗೆದುಕೊಂಡು ಹೋಗಿ ಮನೆ ಕಟ್ಟಿದರೆ ಆ ಮನೆ ಕಟ್ಟುವ ಕಾರ್ಯದಲ್ಲಿ ಯಾವ ಅಡ್ಡಿ ಉಂಟಾಗುವುದಿಲ್ಲ ಎಂದು ಜನರು ನಂಬಿದ್ದಾರೆ ಜೊತೆಗೆ ಯಾವುದೇ ತರಹದ ಭೂವ್ಯಾಜ್ಯ ಇದ್ದಲ್ಲಿ ಇಲ್ಲಿಗೆ ಬಂದು ಭೂವರಹನಾಥ ಸ್ವಾಮಿಯ ಬಳಿ ಬೇಡಿಕೊಂಡರೆ ಸಮಸ್ಯೆ ಪರಿಹಾರ ಆಗುತ್ತದೆ ಎಂಬ ನಂಬಿಕೆ ಎಲ್ಲರ ಮನಸ್ಸಿನಲ್ಲಿದೆ ಇದರಿಂದ ರಾಜ್ಯದ ಮೂಲೆಮೂಲೆಗಳಿಂದ ಪ್ರತಿನಿತ್ಯ ಜನರು ಇಲ್ಲಿಗೆ ಬರುತ್ತಾರೆ.

ಈ ದೇವಸ್ಥಾನದ ಕುರಿತಾಗಿ ಅಲ್ಲಿನ ಅರ್ಚಕರು ಏನು ಹೇಳುತ್ತಾರೆ ಅಂದರೆ ದೇವಸ್ಥಾನವು ತುಂಬಾ ಹಳೆಯದಾಗಿದ್ದು ಭೂದೇವಿ ಅನ್ನೋ ರಕ್ಷಣೆ ಮಾಡುವುದಕ್ಕೆ ವಿಷ್ಣು ವರಾಹ ಅವತಾರವನ್ನು ಎತ್ತಿ ಭೂದೇವಿಯನ್ನು ಪಾತಾಳದಿಂದ ಎತ್ತಿ ರಕ್ಷಣೆ ಮಾಡುತ್ತಾರೆ ಹಾಗಾಗಿ ಆಲಯದಲ್ಲಿ ಭೂದೇವಿಗೆ ಮಹತ್ವ ಇರುವುದರಿಂದ ಇಲ್ಲಿನ ಮಣ್ಣನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡಿಸುವುದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ಹೇಳುತ್ತಾರೆ. ಇನ್ನೂ ಭಕ್ತರು ಏನೇ ಬೇಡಿಕೊಂಡರು ಅದನ್ನು ಭಗವಂತ ಈಡೇರಿಸುತ್ತಾನೆ ಎಂದು ಹೇಳುತ್ತಾರೆ ಇಲ್ಲಿಯ ಅರ್ಚಕರು ಹಾಗೆ ಪಕ್ಕದಲ್ಲಿ ಹರಿಯುವ ಹೇಮಾವತಿ ನದಿಯ ನೀರು ದೇವಾಲಯದ ಗೋಡೆಗೆ ಬಂದು ತಾಗುತ್ತದೆ ಈ ಕಾರಣಕ್ಕಾಗಿ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ನೀರು ಕಡಿಮೆಯಾದ ನಂತರ ವಾರ್ಷಿಕೋತ್ಸವವನ್ನು ಇಲ್ಲಿ ಆಚರಣೆ ಮಾಡಲಾಗುತ್ತದೆ. ಇದೀಗ ಈ ದೇವಾಲಯದ ನಿರ್ಮಾಣ ಕಾರ್ಯವು ಜಾರಿಯಲ್ಲಿ ಇದ್ದು ದೇವಾಲಯವನ್ನ ಬೃಹದಾಕಾರದಲ್ಲಿ ಬಹಳ ಸುಂದರವಾಗಿ ನಿರ್ಮಿಸಲಾಗುತ್ತಿದೆ ಇನ್ನೂ ಮುಖ್ಯ ದೇವಾಲಯದ ಬಲಭಾಗದಲ್ಲಿ ಲಕ್ಷ್ಮಿವೆಂಕಟೇಶ್ವರ ಸ್ವಾಮಿ ದೇವಾಲಯವನ್ನು ನಿರ್ಮಿಸಲಾಗಿದ್ದು ಅಲ್ಲಿಯೂ ಸಹ ದಿನನಿತ್ಯ ಪೂಜೆ ಜರುಗುತ್ತದೆ.

ದೇವಸ್ಥಾನದ ಸಮೀಪದಲ್ಲಿ ಅನ್ನ ದಾಸೋಹ ಭವನವನ್ನು ಸಹ ನಿರ್ಮಿಸಲಾಗಿದ್ದು ಇಲ್ಲಿಗೆ ಬರುವ ಭಕ್ತಾದಿಗಳಿಗೆ ಪ್ರತಿ ದೇವನ ಅನ್ನದಾಸೋಹ ಸಹ ಇಲ್ಲಿ ಆಡಳಿತ ಮಂಡಳಿಯಿಂದ ದಾಸೋಹ ಮಾಡಲಾಗುತ್ತದೆ. ದೇವಾಲಯದ ಪಕ್ಕದಲ್ಲಿಯೇ ಹರಿಯುವ ಹೇಮಾವತಿ ನದಿಯ ದಡದಲ್ಲಿ ಅದರ ವೀಕ್ಷಣೆಗಾಗಿ ಕಲ್ಲಿನ ಮಂಟಪವನ್ನು ನಿರ್ಮಾಣ ಮಾಡಲಾಗಿದ್ದು ಸಾಮಾನ್ಯವಾಗಿ ಮಳೆಗಾಲದಲ್ಲಿ ಹೇಮಾವತಿ ನದಿಯ ಒಳಹರಿವು ಹೆಚ್ಚಾಗಿರುತ್ತದೆ ಆಗ ಅಲ್ಲಿ ಈಜುವುದಕ್ಕೆ ಅವಕಾಶ ಇರುವುದಿಲ್ಲಾ. ನೀವು ತೆಪ್ಪದಲ್ಲಿ ವಿಹರಿಸಬಹುದು, ಈ ರೀತಿಯಾಗಿ ಪ್ರಕೃತಿಯ ಮಡಿಲಿನಲ್ಲಿ ಇರುವಂತಹ ಈ ದೇವಾಲಯವು ನೋಡುವುದಕ್ಕೆ ಬಹಳ ಸುಂದರವಾಗಿದ್ದು, ಪರಿಸರ ಪ್ರೇಮಿಗಳಿಗೆ ಪರಿಸರದ ಸೌಂದರ್ಯ ಸವಿಯಲು ಇದು ಉತ್ತಮ ಜಾಗ ಎಂದು ಹೇಳಬಹುದು ಹಾಗೂ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದೇವಾಲಯ ಇದಾಗಿದ್ದು ನೀವು ಸಹ ಮೈಸೂರಿಗೆ ಭೇಟಿ ನೀಡಿದಾಗ ಭೂವರಹನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಷ್ಣುವಿನ ಅವತಾರವಾಗಿರುವ ವರಹನಾಥ ಸ್ವಾಮಿ ದರ್ಶನ ಪಡೆದುಕೊಂಡು ಬನ್ನಿ ಶುಭದಿನ ಧನ್ಯವಾದ.

WhatsApp Channel Join Now
Telegram Channel Join Now