Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಮಾವಿನ ಎಲೆಯ ಟೀ ದಿನನಿತ್ಯ ಕುಡಿದರೆ ಏನೆಲ್ಲಾ ಆರೋಗ್ಯ ಲಾಭವನ್ನು ಪಡೆಯಬಹುದು!

ನಮ್ಮ ಪರಿಸರದಲ್ಲಿ ಹಲವಾರು ಮರಗಳನ್ನು ಹಾಗೂ ಹಲವಾರು ಸಸ್ಯ ಪ್ರಭೇದಗಳನ್ನು ನಾವು ದಿನನಿತ್ಯ ನೋಡುತ್ತಲೇ ಇರುತ್ತೇವೆ, ನಾವು ನೀವು ಯಾವಾಗಲೂ ಕೂಡ ಅವುಗಳಲ್ಲಿ ಇರುವಂತಹ ಒಂದು ಔಷಧಿ ಗುಣಗಳ ಬಗ್ಗೆ ತಿಳಿದುಕೊಳ್ಳಲು ಯಾವುದೇ ಕಾರಣಕ್ಕೂ ಪ್ರಯತ್ನವನ್ನು ಮಾಡಿರುವುದಿಲ್ಲ,

ಆದರೆ ನೀವೇನಾದರೂ ಅವುಗಳಿಂದ ಯಾವುದಾದರೂ ಒಂದು ಔಷಧಿ ಗುಣ ಇದೆ ಎಂದು ಅಂದುಕೊಂಡು ಅದನ್ನು ಬಳಕೆ ಮಾಡಿ ನೋಡಿದರೆ ನಿಮಗೆ ಅಚ್ಚರಿಯಾಗಬಹುದು ಗುಣಗಳು ಕಾಣಬಹುದು.

ಹೌದು ನಮ್ಮ ಪರಿಸರದಲ್ಲಿ ಇರುವಂತಹ ಒಂದೊಂದು ಸಸ್ಯಗಳು ಹಾಗೂ ಒಂದೊಂದು ಮರದಲ್ಲಿ ಕೂಡ ಒಂದು ಔಷಧಿ ಗುಣ ಇದ್ದೇ ಇರುತ್ತದೆ ಆದರೆ ಅದು ಯಾವ ರೋಗಕ್ಕೆ ಹಾಗೂ ಯಾವ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ ಎನ್ನುವುದನ್ನು ಕಂಡುಹಿಡಿಯುವುದು ಒಂದು ಕಷ್ಟಕರವಾದ ಕೆಲಸ.

ಹಾಗಾದರೆ ಬನ್ನಿ ಇವತ್ತು ನಾವು ನಮ್ಮ ಪರಿಸರದಲ್ಲಿ ಯಥೇಚ್ಛವಾಗಿ ಕಾಣುವಂತಹ ಮಾವಿನ ಮರದ ಎಲೆಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ, ನೀವೇನಾದರೂ ಮಾವಿನ ಎಲೆಯ ಟೀ  ಯನ್ನು ಪ್ರತಿನಿತ್ಯ ಕುಡಿದರೆ ನಿಮ್ಮ ಆರೋಗ್ಯದಲ್ಲಿ ತುಂಬಾ ಬದಲಾವಣೆ ಆಗುತ್ತದೆ ಎಂದು ಹಾಗಾದರೆ ಬನ್ನಿ ಯಾವ ರೀತಿಯಾಗಿ ನಮ್ಮ ದೇಹಕ್ಕೆ ಲಾಭವನ್ನು ತಂದು ಕೊಡುತ್ತದೆ ಮಾವಿನ ಎಲೆಯ ಟೀ ಅನ್ನೋದನ್ನ ತಿಳಿದುಕೊಳ್ಳೋಣ.

ಮಾವಿನ ಎಲೆಯನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ಮಧುಮೇಹದ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಣೆ ಮಾಡಬಹುದು, ನೀವು ಮಾವಿನ ಎಲೆಗಳನ್ನು ಸ್ವಲ್ಪ ತೆಗೆದುಕೊಂಡು ಬಂದು ಅವುಗಳನ್ನು ನೀರಿನಲ್ಲಿ ಹಾಕಿ ಕುದಿಸಬೇಕು, ಅದಾದ ನಂತರ ಇಡೀ ರಾತ್ರಿಯ ಎಲೆಗಳನ್ನು ನೀರಿನಲ್ಲಿ ಇಡಬೇಕು,

ಬೆಳಗ್ಗೆ ಎದ್ದ ನಂತರ ನೀವು ಇಟ್ಟಂತಹ ಆ ಮಾವಿನ ಎಲೆಗಳ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ತುಂಬಾ ಒಳ್ಳೆಯದು. ಅದಲ್ಲದೆ ಮಾವಿನ ಎಲೆಗಳನ್ನು ಬಿಸಿಲಿಗೆ ಇಟ್ಟು ಅವನು ಪುಡಿಮಾಡಿಕೊಂಡು ದಿನನಿತ್ಯ ಸ್ವಲ್ಪ ದೇಹಕ್ಕೆ ಹಾಕಿಕೊಳ್ಳುವುದರಿಂದ ಮಧುಮೇಹ ಸಂಪೂರ್ಣವಾಗಿ ನಿವಾರಣೆ ಆಗುತ್ತದೆ ಎನ್ನುತ್ತಾರೆ ಕೆಲವೊಂದು ಆರೋಗ್ಯ ತಜ್ಞರು.

ಹಾಗೆ ಮಾವಿನ ಎಲೆಗಳಿಂದ ನೀವೇನಾದ್ರೂ ಟೀ ಮಾಡಿಕೊಂಡು ಕುಡಿದರೆ ನಿಮ್ಮ ದೇಹದಲ್ಲಿ ಆಗುವಂತಹ ರಕ್ತ ಸಂಚಾರ ತುಂಬಾ ಚೆನ್ನಾಗಿ ಆಗುತ್ತದೆ. ಜ್ವರ ಹಾಗೂ ಆಸ್ತಮ ಅನ್ನುವಂತಹ ರೋಗಗಳಿಂದಲೂ ಕೂಡ ನಾವು ದೂರ ಇರಬಹುದು. ಕೆಲವೊಬ್ಬರಿಗೆ ನಿದ್ರೆ ಸಮಸ್ಯೆ ತುಂಬಾ ಇರುತ್ತದೆ ಆ ಸಮಸ್ಯೆಗಳನ್ನು ಕೂಡ ದೂರವಾಗಬಹುದು.

ಮಾವಿನ ಎಲೆಗಳನ್ನು ಟೀ ಮಾಡಿ ಕುಡಿಯುವುದರಿಂದ ರಕ್ತದ ಒತ್ತಡದ ಸಮಸ್ಯೆಯನ್ನು ಕೂಡ ಸಂಪೂರ್ಣವಾಗಿ ಕಡಿಮೆ ಮಾಡಿಕೊಳ್ಳಬಹುದು ಹಾಗೂ ರಕ್ತನಾಳಗಳನ್ನು ಕೂಡ ಬಲಪಡಿಸಿ ಕೊಳ್ಳಬಹುದು.

ಮಾವಿನ ಗಿಡಗಳಲ್ಲಿ ಸಿಕ್ಕಾ ಪಟ್ಟೆ ರೋಗ ನಿರೋಧಕ ಶಕ್ತಿ ಎಂದು ಹಾಗೂ ಔಷಧಿ ಗುಣಗಳು ಇದು ನಮ್ಮ ದೇಹದಲ್ಲಿ ಇರುವಂತಹ ಚರ್ಮವನ್ನು ತುಂಬಾ ಚೆನ್ನಾಗಿ ಇಟ್ಟುಕೊಳ್ಳಲು ತುಂಬಾ ಸಹಕಾರಿಯಾಗುತ್ತದೆ, ಮಾವಿನ ಎಲೆಗಳಲ್ಲಿ ಹೆಚ್ಚಾಗಿ ವಿಶೇಷ ವಾಸನೆ ಹೊರಗಡೆ ಬರುವುದರಿಂದ ನಾವು ಯಾವುದಾದರೂ ಒಂದು ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಮನೆಯಲ್ಲಿ ತೋರಣವಾಗಿ ಇದನ್ನು ಬಳಕೆ ಮಾಡುತ್ತೇವೆ ಈ ಎಳೆಗಳ ವಾಸನೆ ಸಹ ನಮಗೆ ತುಂಬಾ ಒಳ್ಳೆಯದು.

ಈ ಲೇಖನ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಶೇರ್ ಮಾಡುವುದಾಗಲಿ ಲೈಕ್ ಮಾಡುವುದಾಗಲಿ ಮರೆಯಬೇಡಿ. ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

kannada inspiration story and Kannada Health Tips

mango leaf tea health benifits