ಅಪ್ಪು ದ್ವಿತೀಯ ಪುತ್ರಿ ವಂದಿತರ ಎಸ್ಸೆಸ್ಸೆಲ್ಸಿ ಫಲಿತಾಂಶ ಕೇಳಿ ಇಡೀ ರಾಜ್ಯವೇ ಶಾಕ್ ಆಗಿದೆ. ಹೌದು ಹತ್ತನೇ ತರಗತಿ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ನಲ್ಲಿ ಪಾಸಾಗಿರುವ ವಂದಿತಾ ಈ ಕುರಿತು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ನೀಡಿದ ಹೇಳಿಕೆಯೇನೂ ಗೊತ್ತಾ ಇಲ್ಲಿದೆ ನೋಡಿ ಈ ಕುರಿತು ಹೆಚ್ಚಿನ ಮಾಹಿತಿ.
ಹೌದು ಅಪ್ಪು ಅವರ ಅಗಲಿಕೆ ಅವರ ಅಭಿಮಾನಿಗಳಿಗೆ ಅದೆಷ್ಟು ನೋವು ತಂದಿದೆ ಅಂದರೆ ಇವತ್ತಿಗೂ ಅಪ್ಪು ಅವರು ಇಲ್ಲವಾಗಿ 7 ತಿಂಗಳುಗಳು ಕಳೆಯುತ್ತಾ ಬಂದರೂ ಸಹ ನೋವು ಮಾತ್ರ ಅಭಿಮಾನಿಗಳಲ್ಲಿ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಇಂತಹ ಸಮಯದಲ್ಲಿಯೇ ಅಪ್ಪು ಸಹೋದರರಿಗೆ ಅಪ್ಪು ಪತ್ನಿಗೆ ಅಪ್ಪು ಅನ್ನೂ ಹತ್ತಿರದಿಂದ ನೋಡಿರುವವರಿಗೆ ಅದೆಷ್ಟೋ ನೋವಾಗಿರಬೇಡ ಅಲ್ವಾ. ಹೌದು ಸ್ನೇಹಿತರೆ ಅಪ್ಪು ಮಗು ಸ್ವಭಾವದವರು ಅವರಲ್ಲಿರುವಂತಹ ಒಳ್ಳೆಯ ಮನಸ್ಸು ಒಳ್ಳೆಯ ವ್ಯಕ್ತಿತ್ವ ಮತ್ತು ಒಳ್ಳೆಯ ಗುಣ ನಗುವಿನ ಸ್ವಭಾವ ಮತ್ತು ಯಾರಲ್ಲಿಯೂ ನಾವು ನೋಡಲು ಅಸಾಧ್ಯ ಬಿಡಿ.
ಹೌದು ಸ್ನೇಹಿತರೆ ಅಪ್ಪು ಅಂದರೆ ಅವರು ಖುಷಿ ಅವರು ಸಂತಸ ಅವರು ಪ್ರೋತ್ಸಾಹ ಅಪ್ಪ ಅಂದರೆ ನಗು ಹೌದು ಯಾರಿಗೇ ಆಗಲಿ ಅಪ್ಪು ಅವರ ನೆನಪಿಸಿಕೊಳ್ಳುತ್ತಿದ್ದ ಹಾಗೆ ಮುಖದ ಮೇಲೆ ನಗು ಮೂಡುತ್ತದೆ ಅವರು ಅಜಾತಶತ್ರು ದೇವರು ಅವರನ್ನು ಅದೆಷ್ಟು ಬೇಗ ಕರೆದುಕೊಂಡುಬಿಟ್ಟ ಅಲ್ವಾ. ಹೌದು ಭೂಮಿ ಮೇಲೆ ಅವರಿದ್ದರು ಜನರು ದೇವರನ್ನೂ ಮರೆಯುತ್ತಾರೇನೋ ಎಂಬ ಕಾರಣಕ್ಕೆ ಹೊಟ್ಟೆ ಕಿಚ್ಚಿನಿಂದ ದೇವರು ಅವರನ್ನು ಕರೆದುಕೊಂಡಿದ್ದಾರೋ ಏನೋ ಗೊತ್ತಿಲ್ಲ. ಆದರೆ ಅಪ್ಪು ಅವರು ನಮ್ಮಿಂದ ಬಾರದ ಲೋಕಕ್ಕೆ ಹೋದರೂ ಅವರ ನೆನಪು ಮಾತ್ರ ಸದಾಕಾಲ ಪ್ರತಿಯೊಬ್ಬ ಕನ್ನಡಿಗನ ಮನದಲ್ಲೂ ಉಳಿದಿರುತ್ತದೆ.
ಅಪ್ಪು ಅವರ ಬಗ್ಗೆ ಮಾತನಾಡುವಾಗ ಅಪ್ಪು ಪುತ್ರಿಯರ ಬಗ್ಗೆಯೂ ಕೂಡ ಮಾತನಾಡಲೇಬೇಕು ತಂದೆಯ ಗುಣವನ್ನೇ ರೂಪಿಸಿಕೊಂಡಿರುವ ಅಪ್ಪು ಮಕ್ಕಳು, ಧೃತಿ ಮತ್ತು ವಂದಿತಾ ಆರ್ಥಿಕವಾಗಿ ಸಶಕ್ತರಾಗಿದ್ದ ಸ್ಕಾಲರ್ ಶಿಪ್ ನಿಂದ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹೌದು ಧೃತಿ ಅಪ್ಪು ಅವರ ಮೊದಲ ಪುತ್ರಿ ಅವರು ಚೆನ್ನಾಗಿ ಓದಿ ವಿದೇಶದಲ್ಲಿ ಸ್ಕಾಲರ್ ಶಿಪ್ ಹಣದಿಂದ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ ಹಾಗೆ ಅಪ್ಪು ಅವರು ಕೂಡಾ ತಮ್ಮ ಮಕ್ಕಳನ್ನು ಒಬ್ಬ ಸೆಲೆಬ್ರಿಟಿ ಮಕ್ಕಳ ಹಾಗೆ ಬೆಳೆಸಿಲ್ಲ ಮತ್ತು ಹೆಚ್ಚು ಹಣವಿದೆ ಎನ್ನುವುದನ್ನು ತೋರಿಸಿಕೊಳ್ಳದೆ ಅಪ್ಪು ತಾವು ಓದಿದ ಶಾಲೆಯಲ್ಲಿ ತಮ್ಮ ಮಕ್ಕಳಿಗೂ ಓದಲು ಕಳುಹಿಸಿ ಮಕ್ಕಳನ್ನು ಕೂಡ ಒಳ್ಳೆಯ ವ್ಯಕ್ತಿತ್ವದಿಂದ ನಿಜಕ್ಕೂ ಸಂತಸವಾಗುತ್ತದೆ ಅಪ್ಪು ಪುತ್ರಿಯರ ಬಗ್ಗೆ ಕೇಳಿದಾಗ.
ವಿದೇಶದಲ್ಲಿ ಓದುತ್ತಿರುವ ಮಗಳು ಅಪ್ಪ ಇಲ್ಲವೆಂಬ ವಿಚಾರ ಕೇಳುತ್ತಿದ್ದ ಹಾಗೆ ಕೂಡಲೇ ದೇಶದಿಂದ ಭಾರತಕ್ಕೆ ಬಂದು ಅಪ್ಪನ ಎಲ್ಲಾ ಕಾರ್ಯಗಳನ್ನು ಮುಗಿಸಿ ಹದಿನೈದು ದಿನಗಳ ಬಳಿಕ ಮತ್ತೆ ವಿದೇಶಕ್ಕೆ ತೆರಳಿದ್ದರು ಇದೇ ವೇಳೆ ಅಪ್ಪು ಅವರ ಎರಡನೇ ಪುತ್ರಿ ಹತ್ತನೇ ತರಗತಿಯ ಪೂರ್ವಭಾವಿ ಪರೀಕ್ಷೆಗಳಿದ್ದು ಅದಕ್ಕೆ ವಂದಿತ ಹಾಜರಾಗಲೇಬೇಕಾಗಿತ್ತು. ಅಪ್ಪನ ಹನ್ನೊಂದನೇ ದಿನದ ಕಾರ್ಯವನ್ನು ಮುಗಿಸಿ ಪರೀಕ್ಷೆಗೆ ಹೋಗಿ ಬರೆದು ಉತ್ತಮವಾಗಿಯೇ ಅಂಕ ಪಡೆಯುವ ಮೂಲಕ ವಂದಿತ ಪಾಸಾಗಿದ್ದರು ಹಾಗೆ ಇದೀಗ ಹತ್ತನೇ ತರಗತಿಯ ಫೈನಲ್ ಎಕ್ಸಾಂ ರಿಸಲ್ಟ್ ಕೂಡ ಬಂದಿದ್ದು ಈಗಾಗಲೇ ಫಲಿತಾಂಶ ಏನು ಎಂಬುದು ನಿಮಗೂ ಗೊತ್ತಿದೆ ಅವರು ಉತ್ತಮವಾಗಿ ಅಂಕಗಳನ್ನು ಪಡೆಯುವ ಮೂಲಕ ವಂದಿತ ಹತ್ತನೆ ತರಗತಿ ಪಾಸಾಗಿದ್ದು ಈ ಕುರಿತು ಅಶ್ವಿನಿಯವರು ಹೇಳಿಕೊಂಡಿರುವುದೇನು ಗೊತ್ತ.
ಹೌದು ವಂದಿತಾ ಫಲಿತಾಂಶ ಕೇಳಿ ನನಗೂ ಕೂಡ ಖುಷಿಯಾಗಿದೆ ಹಾಗೆ ಅಪ್ಪು ಅವರು ಕೂಡ ಈ ಸಮಯದಲ್ಲಿ ಇದ್ದಿದ್ದರೆ ಬಹಳ ಖುಷಿ ಪಡುತ್ತಿದ್ದರು ಅಪ್ಪು ಅವರು ನಮ್ಮ ಜೊತೆ ಇದ್ದಿದ್ದರೆ ಮಗಳು ವಂದಿತ ಇನ್ನೂ ಚೆನ್ನಾಗಿ ಮಾರ್ಕ್ಸ್ ತೆಗೆದು ಕೊಳ್ಳುತ್ತಿದ್ದಳೋ ಏನೋ ಎಂದಿದ್ದಾರೆ, ಅಶ್ವಿನಿ ಪುನೀತ್ ರಾಜ್ ಕುಮಾರ್. ಏನೇ ಆಗಲಿ ನೋವು ಅನ್ನೋದು ಇದ್ದೇ ಇರುತ್ತೆ ಅಲ್ವಾ ಅಂತಹ ವ್ಯಕ್ತಿಯನ್ನು ಕಳೆದುಕೊಂಡ ಕರುನಾಡೆ ಕಣ್ಣೀರಿನಲ್ಲಿರುವಾಗ ಅಶ್ವಿನಿ ಅವರಿಗೆ ಈ ದಿನಗಳು ಅದೆಷ್ಟು ಕಷ್ಟಕರವಾಗಿರಬೇಡ.