ನಿಮ್ಮ ತಮ್ಮ ಅಪ್ಪು ಜೊತೆ ಯಾವಾಗಾದ್ರೂ ಜಗಳ ಆಡಿದ್ದೀರಾ ಎಂದಿದ್ದಕ್ಕೆ ಶಿವಣ್ಣ ಕೊಟ್ಟ ಉತ್ತರವೇ ಬೇರೆ …ಅದು ಏನು ನೋಡಿ

201

ತಮ್ಮನ ಜೊತೆ ಎಂದಾದರೂ ಜಗಳವಾಡಿದ್ದೀರಿ ಎಂದು ಮೀಡಿಯಾದವರು ಶಿವಣ್ಣ ಅವರನ್ನ ಕೇಳಿದಾಗ ಶಿವಣ್ಣ ಕೊಟ್ಟ ಉತ್ತರವೇನು ಗೊತ್ತಾ? ದೊಡ್ಮನೆ ಜನ ಅಂತ ಇವರನ್ನು ಸುಮ್ಮನೆ ಅಂತಾರ ನೋಡಿ ಅಪ್ಪು ಮತ್ತು ಶಿವಣ್ಣ ಅವರ ನಡುವಿನ ಬಾಂಧವ್ಯ ಹೇಗಿತ್ತು ತಿಳಿಯೋಣ ಬನ್ನಿ…

ಹೌದು ತಮ್ಮ ಚಿಕ್ಕ ವಯಸ್ಸಿಗೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅಪ್ಪು ಅಪಾರ ಮನಸ್ಸುಗಳನ್ನೂ ಗೆದ್ದರೂ, ಹೌದು ತಮ್ಮ ಚಿಕ್ಕ ವಯಸ್ಸಿನಲ್ಲೇ ನಟನೆ ಮಾಡುವ ಮೂಲಕ ಚಂದನವನದ ದಿಗ್ಗಜರುಗಳ ಮನ ಗೆದ್ದಿರುವ ಅಪ್ಪು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಸಂಪಾದಿಸಲು ನಿಂತರು ಸಂಪಾದನೆ ಮಾಡುವ ವಯಸ್ಸಿನಲ್ಲಿ ದಾನಧರ್ಮಾದಿಗಳನ್ನೂ ಮಾಡಿದರೂ ನಮ್ಮ ಅಪ್ಪು.

ಸ್ನೇಹಿತರೆ ಅಪ್ಪು ಅವರ ಬಗ್ಗೆ ಹೇಳುವುದೇ ಬೇಡ ನೋಡಿ ತಮ್ಮ ಅಣ್ಣಂದಿರನ್ನು ಬಹಳ ಪ್ರೀತಿಸುವ ಅಪ್ಪು, ಮೀಡಿಯಾದವರು ಶಿವಣ್ಣ ಅವರಿಗೆ ನಿಮ್ಮ ತಮ್ಮನ ಜೊತೆ ಎಂದಾದರೂ ಜಗಳ ಆಡಿದ್ದೀನಿ ಎಂದು ಕೇಳಿದ ಪ್ರಶ್ನೆಗೆ ಶಿವಣ್ಣ ಕೊಟ್ಟ ಉತ್ತರ ಖಂಡಿತಾ ನಿಮಗೆ ಕಣ್ಣಲ್ಲಿ ನೀರು ತರಿಸುತ್ತೆ. ಹೌದು ಹಿರಿಯರು ಚಿಕ್ಕವರು ಎಂದು ಬಹಳ ಗೌರವ ಕೊಡುತ್ತಿದ್ದ ದೊಡ್ಮನೆ ಜನ ಅಭಿಮಾನಿಗಳನ್ನು ದೇವರು ಎನ್ನುತ್ತಾ ಅಭಿಮಾನಿಗಳು ದೇವರ ರೂಪದಲ್ಲಿ ಕಾಣುತ್ತಿದ್ದರು. ತಂದೆ ಹಾಕಿಕೊಟ್ಟ ಹಾದಿಯಲ್ಲಿಯೇ ಬೆಳೆದುಬಂದ ದೊಡ್ಮನೆಯ ಮೂವರು ಮುತ್ತುಗಳು ಎಲ್ಲರಿಗೂ ಆದರ್ಶ ವ್ಯಕ್ತಿಗಳಾಗಿದ್ದಾರೆ ಏನೋ ಅಣ್ಣ ತಮ್ಮಂದೀರ ಬಾಂಧವ್ಯ ನೋಡಿದಾಗ ಯಾರಿಗಾದರೂ ಇಂತಹ ಮಕ್ಕಳಿರಬೇಕು ಅನಿಸುತ್ತಿತ್ತು.

ಅಂದು ಶಿವಣ್ಣ ಅವರಿಗೆ ತಮ್ಮ ಭಜರಂಗಿ 2 ಸಿನಿಮಾ ತೆರೆಕಾಣುವ ಸಂತಸವಿತ್ತು ಹಾಗೆ ಅಪ್ಪು ಅವರು ಕೂಡ ಅಣ್ಣನ ಸಿನೆಮಾಕ್ಕೆ ಬೆಳಿಗ್ಗೆ ಟ್ವೀಟ್ ಮಾಡುವ ಮೂಲಕ ಶುಭಾಶಯಗಳನ್ನು ಕೂಡ ತಿಳಿಸಿದ್ದರು. ಆದರೆ ಅಂದು ಅಣ್ಣನಿಗೆ ವಿಶ್ ಮಾಡಿದ ಅಪ್ಪು ಇದ್ದಕಿದ್ದಹಾಗೆ ಆಸ್ಪತ್ರೆಗೆ ದಾಖಲಾದರು ಮುಂದೆ ಆದದ್ದು ಏನು ಎಂದು ಗೊತ್ತೇ ಇದೆ ಅಲ್ವಾ ಹೌದು ಹೃದಯಾಘಾತದಿಂದ ಅಪ್ಪು ನಮ್ಮನ್ನೆಲ್ಲಾ ಅಗಲಿದರು. ಈ ನೋವು ನಮಗೆ ಇಷ್ಟೊಂದು ಚಿಕ್ಕಂದಿನಿಂದಲೂ ತಮ್ಮ ಸಹೋದರನನ್ನು ಮಗುವಂತೆ ನೋಡಿಕೊಂಡು ಅವರ ಜೊತೆ ಆಟವಾಡಿಕೊಂಡು ಬೆಳೆದು ಬಂದಂತಹ ಶಿವಣ್ಣ ಅವರಿಗೆ ಹೇಗಾಗಿರಬೇಡ ನಿಜಕ್ಕೂ ಇದು ಜೀವನಪರ್ಯಂತ ಮರೆಯಲಾಗದ ನೋವಾಗಿದೆ.

ಅಪೂರ್ವ ಅಗಲಿಕೆಯ ಬಳಿಕ ಸುಮಾರು ದಿನದ ನಂತರ ಶಿವಣ್ಣ ಅವರು ಮೈಸೂರಿಗೆ ಭೇಟಿ ನೀಡಿದಾಗ ಅಲ್ಲಿ ಶಕ್ತಿಧಾಮಕ್ಕೆ ಹೋಗಿ ಮಕ್ಕಳ ಜೊತೆ ತಾವೂ ಕೂಡ ಮಕ್ಕಳಾಗುವ ಮೂಲಕ ಶಿವಣ್ಣ ಅಲ್ಲಿಯ ಮಕ್ಕಳ ಯೋಗ ಕ್ಷೇಮ ಸಮಾಚಾರವನ್ನ ತಿಳಿದುಕೊಂಡು ಬಂದಿದ್ದರು. ಜೊತೆಗೆ ಭಜರಂಗಿ 2 ಸಿನಿಮಾ ಅವನ ಅಭಿಮಾನಿಗಳ ಒಟ್ಟಿಗೆ ಶಿವಣ್ಣ ಅವರು ಮೈಸೂರಿನಲ್ಲಿ ವೀಕ್ಷಿಸಿದ್ದು ಸಿನಿಮಾ ನೋಡಿ ಹೊರಬಂದ ಶಿವಣ್ಣವರು ಮೀಡಿಯಾ ದವರ ಮುಂದೆ ಮಾತನಾಡಿದ್ದರು ಹೌದು ಅಪ್ಪು ಅವರ ಕುರಿತು ಮಾತನಾಡುವಾಗ ಅವನಿಲ್ಲ ಎನ್ನುವ ನೋವು ಎಂದಿಗೂ ಮರೆಯಲು ಸಾಧ್ಯವಿಲ್ಲ ಅಪ್ಪು ನಮ್ಮ ಜೊತೆಯೇ ಇದ್ದಾರೆ ಎಂದು ಅಂದುಕೊಂಡೆ ನಾವು ಜೀವನ ನಡೆಸಬೇಕು ಹೊರೆತು ಈ ನೋವಿನ ಜೊತೆಗೆ ನಮ್ಮ ಜೀವನ ಸಾಗಬೇಕಿದೆ.

ಅಪ್ಪು ಇದ್ದಾನೆ ಎಂದರೆ ಇದ್ದಾನೆ ಇಲ್ಲ ಅಂದರೆ ಇಲ್ಲ ನಾವು ಅಪ್ಪು ಇದ್ದಾನೆ ಅಂತಾನೆ ಅಂದುಕೊಂಡು ಜೀವನ ನಡೆಸಬೇಕು ಎಂದ ಶಿವಣ್ಣ, ನಿಮ್ಮ ತಮ್ಮ ಅಪ್ಪು ಅವರ ಜೊತೆ ಎಂದಾದರೂ ಜಗಳವಾಡಿ ದ್ದೀರಾ ಎಂದು ಮೀಡಿಯಾದವರು ಕೇಳಿದ ಪ್ರಶ್ನೆಗೆ ಶಿವಣ್ಣ ನಮ್ಮ ತಾಯಾಣೆ ನನ್ನ ತಮ್ಮನ ಜೊತೆ ನಾನು ಎಂದಿಗೂ ಜಗಳವಾಡಿಲ್ಲ ಅಣ್ಣತಮ್ಮಂದಿರು ಅಂದಮೇಲೆ ಸಾಮಾನ್ಯವಾಗಿ ಒಂದು ಮಾತು ಬರುತ್ತದೆ ಹೋಗುತ್ತದೆ, ಅದು ನಮ್ಮ ನಡುವೆಯೂ ಆದರೆ ಅಪ್ಪು ನನಗಿಂತ ಹದಿ3ವರ್ಷ ಚಿಕ್ಕವನು ನಾನು ಅವನನ್ನು ಯಾವತ್ತಿಗೂ ತಮ್ಮ ಅಂತ ನಾನು ಅಂದುಕೊಂಡಿಲ್ಲ ನನ್ನ ಮಗ ಅಂತ ಅಂದುಕೊಂಡಿದ್ದೇನೆ ಹಾಗಾಗಿ ನಾವು ಎಂದಿಗೂ ಜಗಳವಾಡಿಲ್ಲ ಎಂದು ಪುನೀತ್ ತಮ್ಮ ಪ್ರೀತಿಯ ತಮ್ಮನ ಬಗ್ಗೆ ಶಿವಣ್ಣ ಅವರು ಮೀಡಿಯಾದವರ ಮುಂದೆ ಮಾತನಾಡಿದ್ದಾರೆ.