ಕರ್ನಾಟಕ ಸಿನಿಮಾ ಇತಿಹಾಸದಲ್ಲೇ ಕೋಟಿ ರೂ ಸಂಭಾವನೆ ಪಡೆದ ಮೊದಲ ನಟ ಇವರೇ…ನೋಡಿ

114

ಸ್ನೇಹಿತರೆ ಕನ್ನಡ ಸಿನಿಮಾ ರಂಗದಲ್ಲಿ ಕೋಟಿ ಸಂಭಾವನೆ ಪಡೆದ ಮೊದಲ ನಟ ಯಾರು ಗೊತ್ತಾ ಹೌದು ಆ ಒಬ್ಬ ನಟ ಕೋಟಿ ಸಂಭಾವನೆ ಪಡೆದವರು ಮಾತ್ರವಲ್ಲ ಕೋಟಿಗೊಬ್ಬ ಕೂಡ. ಹೌದು ಹಾಗಾದರೆ ಚಂದನವನದಲ್ಲಿ ಕೋಟಿ ಸಂಭಾವನೆ ಪಡೆದುಕೊಂಡ ಮೊದಲ ನಟ ಯಾರು ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ.

ನಮಸ್ಕಾರಗಳು ಪ್ರಿಯ ಸ್ನೇಹಿತರೇ ಕನ್ನಡ ಸಿನಿಮಾ ರಂಗದಲ್ಲಿ ದಿಗ್ಗಜರು ನಟರ ಪಟ್ಟಿ ಮಾಡುತ್ತಾ ಹೋದರೆ ನಮಗೆ ರಾಜಕುಮಾರ ಅಂಬರೀಶ್ ಶಂಕರ್ ನಾಗ್ ಅನಂತ್ ನಾಗ್ ರವಿಚಂದ್ರನ್ ಶಶಿ ಕುಮಾರ್ ಶಿವರಾಜ್ ಕುಮಾರ್ ಜಗ್ಗೇಶ್ ಹೀಗೆ ಹಲವರ ಹೆಸರು ನೆನಪಿಗೆ ಬರುತ್ತದೆ. ಇವರೆಲ್ಲರೂ ಕನ್ನಡ ಚಿತ್ರರಂಗವನ್ನ ಅದೊಂದು ಕಾಲದಲ್ಲಿ ಆಳಿದವರು ಆಕೆ ಅಪಾರ ಅಭಿಮಾನಿಗಳ ಮನ ಗೆದ್ದವರು. ಅಂದಿನ ಕಾಲದಲ್ಲೇ ಕನ್ನಡ ಸಿನೆಮಾ ರಂಗದಲ್ಲಿ ಬಹಳ ಉತ್ತಮ ಸಿನೆಮಾಗಳು ಮೂಡಿ ಬಂದವು ಜನರಿಗೆ ಒಳ್ಳೆಯ ಮನರಂಜನೆ ಕೂಡ ನೀಡಿತ್ತು.

ಅಷ್ಟೇ ಅಲ್ಲದೆ ಕನ್ನಡ ಸಿನಿಮಾ ರಂಗ ಇನ್ನೂ ಕೂಡ ಅಷ್ಟಾಗಿ ಬೆಳೆದಿರಲಿಲ್ಲ ಅದೊಂದು ಸಮಯದಲ್ಲಿ. ಆದರೆ ಕನ್ನಡ ಸಿನಿಮಾಗಳು ಮಾತ್ರ ಕನ್ನಡಿಗರಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದ್ದವು ಹಾಗೆ ಸಿನೆಮಾ ರಂಗದಲ್ಲಿ 4 ದಶಕಗಳ ಕಾಲ ಬಾಲಕಲಾವಿದರಾಗಿ ಪೂರ್ಣ ನಟರಾಗಿಯೂ ಅಭಿನಯ ಮಾಡಿದಂತಹ ಇವರು, ಬಹುತೇಕ ಎಲ್ಲ ಸಿನೆಮಾಗಳು ಹಿಟ್ ಆಗಿದ್ದಾವೆ. ಇವ್ರೂ ಕನ್ನಡ ಸಿನಿಮಾರಂಗದ ಹೆಮ್ಮೆಯ ನಟ ಮಾತ್ರವಲ್ಲ ಗಾಯಕ ಕೂಡ ಹಾಗೆ ನಿರ್ಮಾಪಕರು ಸಹ ಹಾಗಾದರೆ ನಾವು ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ನಿಮಗೆ ಗೊತ್ತೇ ಹೌದು ಕನ್ನಡ ಸಿನಿಮಾರಂಗ ವನ್ನು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಇವರು ಸಹ ಕಾರಣಕರ್ತರು ಕನ್ನಡ ಚಿತ್ರರಂಗದಲ್ಲಿ ಡಾನ್ಸಿಂಗ್ ಚಾಂಪಿಯನ್ ಆಗಿ ಮೆರೆದಂತಹ ನಮ್ಮೆಲ್ಲರ ಪ್ರೀತಿಯ ಅಪ್ಪು.

ಹೌದು ನಾವು ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಮಾತಾಡುತ್ತಿದ್ದೇವೆ ಬಾಲನಟರಾಗಿ ಸುಮಾರು ಹದಿ4ಸಿನಿಮಾಗಳನ್ನ ಮಾಡಿರುವ ಇವರು ಬಹಳಷ್ಟು ಹಾಡುಗಳನ್ನ ಚಿಕ್ಕವಯಸ್ಸಿನಲ್ಲಿಯೇ ಹಾಡಿ ನಾಯಕರೆನಿಸಿಕೊಂಡಿದ್ದಾರೆ ಮತ್ತು ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿರುವ ಅಪ್ಪು ಪೂರ್ಣ ನಟರಾಗಿ ಇಪ್ಪತೈದಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಹಾಗೆ ಕೆಲವೊಂದು ಚಿತ್ರಗಳ ನಿರ್ಮಾಣ ಕೂಡ ಮಾಡಿ ಕನ್ನಡ ಸಿನಿಮ ರಂಗಕ್ಕೆ ಹೊಸಬರನ್ನ ಪರಿಚಯಿಸುವ ಮೂಲಕ ಹೊಸಬರ ಪ್ರತಿಭೆಗೂ ಗೌರವ ನೀಡಿ ಅಪ್ಪು ಕೆಲವೊಂದು ಸಿನೆಮಾಗಳ ನಿರ್ಮಾಣ ಕೂಡಾ ಮಾಡಿರುವುದು ಸಂತಸದ ವಿಚಾರವೇ ಆಗಿದೆ.

ಅಪ್ಪು ತಮ್ಮ 6 ತಿಂಗಳಿನ ವಯಸ್ಸಿನಲ್ಲಿಯೇ ಪ್ರೇಮದ ಕಾಣಿಕೆ ಎಂಬ ಸಿನಿಮಾ ಮೂಲಕ ಅಭಿನಯ ಶುರು ಮಾಡಿದರು ವಸಂತಗೀತ ಎರಡು ನಕ್ಷತ್ರ ಸನಾದಿ ಅಪ್ಪಣ್ಣ ಹೀಗೆ ಬಹಳಷ್ಟು ಸಿನಿಮಾಗಳಲ್ಲಿ ಬಾಲ ನಟರಾಗಿ ಅಭಿನಯ ಮಾಡಿರುವಂತಹ ಅಪ್ಪು ನಟನಾಗಿ ಮಾಡಿದ ಮೊದಲ ಸಿನಿಮಾ ಅಪ್ಪು ಈ ಚಿತ್ರ ಶತದಿನ ಪೂರೈಸಿತ್ತು, ಅಪ್ಪು ಅವರ ಅಭಿನಯದ ಹತ್ತು ಸಿನಿಮಾಗಳು ಸತತವಾಗಿ ಶತದಿನಗಳನ್ನು ಬಾರಿಸಿದೆ.

ಹೇಗೆ ಬಾಲನಟರಾಗಿ ಬಹಳ ಜನಪ್ರಿಯತೆ ಕೀರ್ತಿ ಪಡೆದುಕೊಂಡಿದ್ದ ಪೋಸ್ಟ್ ಪೂರ್ಣ ನಟರಾಗಿಯೂ ಕೂಡ ಯಶಸ್ಸು ಪಡೆದುಕೊಂಡಿದ್ದರು ಹಾಗೆ ಕನ್ನಡ ಸಿನಿಮಾ ರಂಗದಲ್ಲಿ ಕೋಟಿ ಕೋಟಿ ಸಂಭಾವನೆ ಪಡೆದುಕೊಂಡ ಮೊದಲ ನಟ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ ನಮ್ಮ ಅಪ್ಪು ಹಿರಿತೆರೆಯಲ್ಲಿ ಮಾತ್ರವಲ್ಲದೇ ಕಿರುತೆರೆಯಲ್ಲಿಯೂ ಕೂಡ ಇವರ ಕಮಾಲ್ ಜೋರಾಗಿಯೇ ಇತ್ತು. ಹೌದು ಕೋಟ್ಯಧಿಪತಿ ಮತ್ತು ಫ್ಯಾಮಿಲಿ ಟೈಮ್ ಎಂಬ ರಿಯಾಲಿಟಿ ಶೋಗಳ ನಿರೂಪಕರಾಗಿ ಅಪ್ಪು ಅವರು ಕಾಣಿಸಿಕೊಂಡಿದ್ದರು. ವೀಕೆಂಡ್ ವಿತ್ ರಮೇಶ್ ಎಂಬ ಖ್ಯಾತ ಶೋ ಅಲ್ಲಿ ಮೊದಲ ಅತಿಥಿಯಾಗಿ ಅಪ್ಪು ಅವರು ಬಂದಿದ್ದು ಕೂಡ ಹೆಮ್ಮೆಯ ವಿಚಾರವಾಗಿದೆ.

LEAVE A REPLY

Please enter your comment!
Please enter your name here