ತನ್ನ 38 ನೇ ವಯಸ್ಸಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಕತ್ರಿನಾ ಕೈಫ್…ನೋಡಿ ಹುಡುಗ ಎಷ್ಟು ಚೆಂದ ಇದಾನೆ ..

Sanjay Kumar
3 Min Read

ಬಾಲಿವುಡ್ ಚಿತ್ರರಂಗದಲ್ಲಿ ಇದೀಗ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತಾ ಇದೆ ಆದರೆ ಇವತ್ತಿಗೂ ಬಾಲಿವುಡ್ ನಲ್ಲಿ ಹೆಸರಾಂತ ನಟಿಯಾಗಿರುವ ತಮ್ಮ ಬ್ಯೂಟಿ ಮೂಲಕ ಆಕ್ಟಿಂಗ್ ಮೂಲಕ ಇವತ್ತಿಗೂ ಅಷ್ಟೇ ಹವಾ ಗಳಿಸಿರುವ ನಟಿ ಕತ್ರಿನಾ ಕೈಫ್ ಯಾರಿಗೆ ಗೊತ್ತಿಲ್ಲ ಹೇಳಿ ಹೌದು ಇವರ ಹೆಸರು ಭಾರತಾದ್ಯಂತ ಸಕತ್ ಫೇಮಸ್ ಎಷ್ಟು ಜನಪ್ರಿಯತೆ ಗಳಿಸಿರುವ ನಟಿ ನಮಗೆಲ್ಲರಿಗೂ ಇವರ ಪರಿಚಯ ಇದ್ದೇ ಇದೆ. ನಟಿ ಕತ್ರಿನಾ ಕೈಫ್ ಹೌದು ದಶಕಗಳ ಕಾಲ ಟಾಪ್ ನಟಿಯಾಗಿ ಮಿಂಚಿದ್ದ ನಟಿ ಕತ್ರಿನಾ ಬಹುತೇಕ ಬಾಲಿವುಡ್ ನ ಸ್ಟಾರ್ ನಟರ ಜೊತೆ ಅಭಿನಯಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.  ಅದೆಷ್ಟೊ ಪ್ರೇಕ್ಷಕರ ಮನಗೆದ್ದಿರುವ ನಟಿ ಕತ್ರಿನಾ ಅವರು ಅಂದರೆ ಇವತ್ತಿಗೂ ಹಲವು ಹುಡುಗರಿಗೆ ಕ್ರಶ್ ಈ ನಟನ ಸಿನಿ ಅಭಿಮಾನಿಗಳ ಫೇವರಿಟ್ ಸಹ ಹೌದು ಇದೆಲ್ಲದರ ಜೊತೆಗೆ ವೈಯಕ್ತಿಕ ಈ ನಟಿ ಸಿನಿ ಸಹ ಸದಾ ಸುದ್ದಿಯಲ್ಲಿರುವ ಕತ್ರಿನಾ ಕೈಫ್ ಆಗಾಗ ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುತ್ತಾರೆ.

ಇನ್ನೂ ಸ್ವಲ್ಪ ತಿಂಗಳುಗಳಿಂದ ವೈರಲ್ ಆಗುತ್ತಿರುವ ಸುದ್ದಿ ಅಂದರೆ ಇನ್ನೇನು ಸ್ವಲ್ಪ ದಿವಸಗಳಲ್ಲಿಯೇ ಕತ್ರಿನಾ ಕೈಫ್ ಅವರು ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಜೋರಾಗಿ ಸದ್ದು ಮಾಡುತ್ತಾ ಇರುವ ಈ ವಿಚಾರ ಬಾಲಿವುಡ್ ಬ್ಯೂಟಿಯನ್ನು ಮದುವೆಯಾಗುತ್ತಿರುವ ಆ ಅದೃಷ್ಟವಂತ ವರ ಯಾರು ಅಂತ ಕೆಲವರು ಪ್ರಶ್ನಿಸಿಕೊಳ್ಳುತ್ತಿದ್ದಾರೆ ಇನ್ನೂ ಕೆಲವರಿಗೆ ಕತ್ರಿನಾ ಕೈಫ್ ಅವರನ್ನು ಮದುವೆಯಾಗುತ್ತಿರುವ ಆ ಹುಡುಗ ಯಾರು ಎಂಬ ವಿಚಾರ ತಿಳಿದುಕೊಳ್ಳುವ ಕುತೂಹಲ ಕೂಡ ಇದೆ. ಹೌದು ಕತ್ರಿನಾ ಕೈಫ್ ರವರು ಬಾಲಿವುಡ್ ಖ್ಯಾತ ನಟ ಉರಿ ಸಿನಿಮಾ ದ ಖ್ಯಾತಿಯಾ ನಟ ವಿಕ್ಕಿ ಕೌಶಲ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಅಧಿಕೃತವಾಗಿ ತಿಳಿದು ಬಂದಿದ್ದು ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತ ಇರುವ ಈ ಜೋಡಿ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ.

ಇದೀಗ ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಇತ್ತೀಚಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿ ಬರುತ್ತಿದ್ದು, ಇಬ್ಬರ ಎಂಗೇಜ್ ಮೆಂಟ್ ಸುದ್ದಿ ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ. ಹೌದು ಸದ್ದಿಲ್ಲದೇ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡು, ಸೈಲೆಂಟ್ ಆಗಿಯೇ ಹಸೆಮಣೆ ಏರುವ ನಡೆಸಿದ್ದಾರೆ ಎಂದು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಾ ಇತ್ತು ಇದರ ಬೆನ್ನಲ್ಲೇ ಇವರಿಬ್ಬರು ಆಗಾಗ ಒಟ್ಟಿಗೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಳ್ಳುತ್ತಾ ಇರುತ್ತಾರೆ ಈ ಜೋಡಿಗಳು.

ಅಲ್ಲದೆ ಇಬ್ಬರ ಪ್ರೀತಿ ಪ್ರೇಮದ ವಿಚಾರ ಕೂಡ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದು, ಕತ್ರಿನಾ ಆಗಲಿ ಅಥವಾ ವಿಕ್ಕಿ ಕೌಶಲ್ ಆಗಲಿ ಈ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಮಾತನಾಡಿಲ್ಲ ಮತ್ತು ಇವರಿಬ್ಬರ ಪ್ರೀತಿಯ ವಿಚಾರವನ್ನು ಇಬ್ಬರು ಸಹ ಯಾವ ಮೀಡಿಯಾ ಮುಂದೆಯೂ ಒಪ್ಪಿಕೊಂಡಿಲ್ಲಾ. ಹೌದು ಎಂಗೇಜ್ ಮೆಂಟ್ ವಿಚಾರ ಕೊಂಚ ಸುದ್ದಿಯಾಗುತ್ತಿದ್ದಂತೆ ನಟಿ ಕತ್ರಿನಾ ಕೈಫ್ ಆಪ್ತ ಮೂಲಗಳು ಇದನ್ನು ತಳ್ಳಿ ಹಾಕಿದ್ದು ಮೂಲಗಳ ಪ್ರಕಾರ ಇದು ಕೇವಲ ವದಂತಿ ಅಷ್ಟೆ ಎನ್ನಲಾಗುತ್ತಿದೆ. ಹೌದು ಇಬ್ಬರೂ ಕೂಡ ಇನ್ನೂ ನಿಶ್ಚಿತಾರ್ಥ ಮಾಡಿಕೊಂಡಿಲ್ಲ ಎಂದು ಕತ್ರಿನಾ ಕೈಫ್ರವರ ಆಪ್ತ ಮೂಲಗಲು ಮಾಹಿತಿ ನೀಡಿದ್ದು ಆದರೆ ಇಬ್ಬರ ನಿಶ್ಚಿತಾರ್ಥದ ಸುದ್ದಿ ಮಾತ್ರ ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹೌದು ಈ ಸುದ್ದಿ ಹರಿದಾಡುತ್ತ ಇದ್ದಂತೆ ನೆಟ್ಟಿಗರು ಕಾಮೆಂಟ್ ಮಾಡುವ ಮೂಲಕ ನಟಿ ಕತ್ರಿನಾ ಕೈಫ್ ಅವರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ ಇನ್ನೂ ಹಲವರು ಸಲ್ಮಾನ್ ಖಾನ್ ಮೇಲೆ ವಿಷಾದ ವ್ಯಕ್ತಪಡಿಸುತ್ತಾ ಇದ್ದಾರೆ ಹಾಗೂ ಕ್ಷಮಿಸಿ ಸಲ್ಮಾನ್ ಎಂದು ಸಹ ಹೇಳುತ್ತಿದ್ದಾರೆ. ಇನ್ನು ಇತ್ತೀಚಿಗಷ್ಟೆ ಕತ್ರಿನಾ ಕೈಫ್ ರವರ ಹುಟ್ಟುಹಬ್ಬದ ಕೂಡ ನೆರವೇರಿದ್ದು ಇದಕ್ಕೆ ಸಲ್ಮಾನ್ ಖಾನ್ ಡಿಸೈನರ್ ಆಶ್ಲೇ ರೆಬೆಲ್ ಅವರು ಕತ್ರಿನಾ ವಿವಾಹದ ಸುಳಿವು ನೀಡಿದ್ದಾರೆ ಮತ್ತು ಮದುಮಗಳ ಹಾಗೆ ಡ್ರೆಸ್ ಮಾಡಿಕೊಂಡಿದ್ದ ಕತ್ರಿನ ಕೈಫ್ ಅವರ ಫೋಟೊ ಶೇರ್ ಮಾಡಿಕೊಂಡಿದ್ದಾರೆ.

ಅಲ್ಲದೇ ಸಂದರ್ಶನವೊಂದರಲ್ಲಿ ಬಾಲಿವುಡ್ ನ ಖ್ಯಾತ ನಟ ಅನಿಲ್ ಕಪೂರ್ ರವರ ಪುತ್ರ ಹರ್ಷವರ್ಧನ್ ಕಪೂರ್ ರವರು ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಪ್ರೀತಿಯ ವಿಚಾರವನ್ನು ಬಹಿರಂಗ ಪಡಿಸುವ ಮೂಲಕ ಇಬ್ಬರ ಸಂಬಂಧವನ್ನು ಖಚಿತ ಪಡಿಸಿದ್ದಾರೆ. ಆದರೆ ಈ ಬಗ್ಗೆ ನಟಿ ಕತ್ರಿನಾ ಕೈಫ್ ಮಾತ್ರ ಫುಲ್ ಗರಂ ಆಗಿದ್ದರು. ಆಂಗ್ಲ ವೆಬ್ ಪೋರ್ಟ್ ನಲ್ಲಿ ಈ ವಿಚಾರ ಬಹಿರಂಗ ಪಡಿಸಿದ್ದು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಒಟ್ಟಿರುವುದು ನಿಜ, ಬಹುಶಃ ನನ್ನ ಹೇಳಿಕೆ ಅವರಿಗೆ ತೊಂದರೆ ಉಂಟು ಮಾಡಬಹುದು ಎಂದಿದ್ದರು. ಇನ್ನು ಹರ್ಷವರ್ಧನ್ ಈ ಹೇಳಕೆ ಕತ್ರಿನಾ ಕೋಪಕ್ಕೆ ಕಾರಣವಾಗಿತ್ತು. ಇದನ್ನೆಲ್ಲ ಗಮನಿಸಿದರೆ ಇವರಿಬ್ಬರ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ ಅಥವಾ ಇದು ಕೇವಲ ವದಂತಿಯೋ ತಿಳಿಯುತ್ತಿಲ್ಲಾ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.