WhatsApp Logo

ಈ ಬಳ್ಳಿ ಬಂಜೆತನ , ಬೆನ್ನು ನೋವು , ಪಾಶ್ವ ವಾಯು ಎಲ್ಲವನ್ನು ನಿವಾರಣೆ ಮಾಡುವ ಒಂದು ಅದ್ಭುತವಾದ ಶಕ್ತಿಯನ್ನ ಹೊಂದಿದೆ…

By Sanjay Kumar

Updated on:

ಜ್ಯೋತಿಷ್ಮತಿ ಗಿಡಮೂಲಿಕೆಯ ಬಗ್ಗೆ ನೀವೆಲ್ಲಾದರು ಕೇಳಿದ್ದೀರಿ…ಹೌದು ಇದು ಹೆಸರು ನಿಮಗೆ ಹೊಸದು ಅನಿಸಬಹುದು ಆದರೆ ಔಷಧಿಗಳಲ್ಲಿ ಹಳೆಯ ಗಿಡಮೂಲಿಕೆ ಇದಾಗಿದೆ ಆದರೆ ಹೆಚ್ಚಿನ ಮಂದಿಗೆ ಜ್ಯೋತಿಷ್ಮತಿ ಈ ಗಿಡಮೂಲಿಕೆಯ ಪರಿಚಯ ಇಲ್ಲ.

ಆದರೆ ಇವತ್ತಿನ ಈ ಮಾಹಿತಿಯಲ್ಲಿ ನಿಮಗೆ ಈ ಗಿಡಮೂಲಿಕೆಯ ಕುರಿತು ಹೆಚ್ಚಿನ ಮಾಹಿತಿ ತಿಳಿಸಿ ಕೊಡುತ್ತೇವೆ ಸಂಪೂರ್ಣವಾಗಿ ಈ ಲೇಖನವನ್ನು ತಿಳಿಯಿರಿ, ಇದರ ಪ್ರಯೋಜನವನ್ನು ಕೂಡ ಪಡೆದುಕೊಳ್ಳಿ, ಈ ಪ್ರಪಂಚದಲ್ಲಿ ಅದರಲ್ಲಿಯೂ ನಮ್ಮ ಈ ಪ್ರಕೃತಿಯಲ್ಲಿ ಇಷ್ಟೆಲ್ಲಾ ರಹಸ್ಯಗಳು ಅಡಗಿದೆ ನೋಡಿ ನಿಜಕ್ಕೂ ನಾವು ಅಂದುಕೊಂಡಿರುವುದಿಲ್ಲ ನಮ್ಮ ನಡುವೆಯೇ ಮಹಾಮರಿ ಕಾಯಿಲೆಗಳಿಗೂ ಔಷಧಿ ಇರುತ್ತೆ ಅಂತ ನಮಗೆ ಗೊತ್ತಿಲ್ಲ ಅಷ್ಟೆ.

ನಿಮಗಿದು ಗೊತ್ತಾ ಸಂಧಿವಾತ ಸಮಸ್ಯೆಯಿಂದ ಬಳಲುತ್ತಾ ಇರುವವರು ಬಹಳಷ್ಟು ಔಷಧಿಗಳನ್ನು ಬಳಸುತ್ತಾರೆ ಅಂತಹ ಔಷಧಿಯಲ್ಲಿ ಈ ಜ್ಯೋತಿಷ್ಮತಿ ಬಳ್ಳಿಯ ಬಳಕೆಯನ್ನ ಮಾಡಿರುತ್ತಾರೆ ಆದರೆ ಇದು ಹಲವರಿಗೆ ಗೊತ್ತೇ ಇಲ್ಲ.ಈ ಹಳ್ಳಿಯಲ್ಲಿ ಸಿಗುವ ಬೀಜಗಳನ್ನು ತಂದು ಇದನ್ನು ಕುಟ್ಟಿ ಪುಡಿ ಮಾಡಿಕೊಂಡು ಇದರಿಂದ ಬಗೆಯ ಎಣ್ಣೆಯನ್ನು ತೆಗೆಯುತ್ತಾರೆ ಈ ಎಣ್ಣೆ ಏನಕ್ಕೆಲ್ಲಾ ಪ್ರಯೋಜನ ಮಾಡುತ್ತಾರೆ ಗೊತ್ತಾ ಹೌದು ಅತ್ಯದ್ಭುತವಾದ ಆರೋಗ್ಯಕರ ಪ್ರಯೋಜನಗಳಿವೆ ಈ ಎಣ್ಣೆಯಿಂದ, ಹೇಗೆಂದರೆ ನೋವಿರುವ ಭಾಗಕ್ಕೆ ಈ ಎಣ್ಣೆಯನ್ನು ಹಾಕಿ ಮಸಾಜ್ ಮಾಡುವುದರಿಂದ ನೋವು ನಿವಾರಣೆಯಾಗುತ್ತದೆ.

ಬೆನ್ನಿನ ಭಾಗದಲ್ಲಿ ಮೂಳೆ ನೋಯುತ್ತಾ ಇದೆ ಅಂದರೆ ಈ ಎಣ್ಣೆಯನ್ನು ಬಳಸಿ ಮಸಾಜ್ ಮಾಡ್ತಾರೆ ಅತ್ಯಂತ ವೇಗವಾಗಿ ನೀವು ನೋವಿನಿಂದ ಶಮನ ಪಡೆದುಕೊಳ್ಳಬಹುದು ಹಾಗೆ ಈ ಬೀಜಗಳಿಂದ ಎಣ್ಣೆ ತೆಗೆದು ಇದು ಕೆಂಪು ಮಿಶ್ರಿತ ಹಳದಿ ಬಣ್ಣದಲ್ಲಿ ಇರುತ್ತದೆ. ಈ ಎಣ್ಣೆಯ ಉಪಯೋಗಗಳು ಹಲವಾರು.

ಕೆಲವರಿಗೆ ದೀರ್ಘಕಾಲದ ಉರಿಯೂತಗಳು ಕಾಣಿಸಿಕೊಳ್ಳುತ್ತ ಇರುತ್ತದೆ, ಅಂಥವರು ಈ ಎಣ್ಣೆಯ ಪ್ರಯೋಜನವನ್ನು ಪಡೆದುಕೊಂಡರೆ ನೋವು ಬೇಗ ನಿವಾರಣೆ ಆಗುತ್ತದೆ.ಈ ಬಳ್ಳಿಯ ಪ್ರಯೋಜನವನ್ನು ಪಡೆದುಕೊಳ್ಳುವುದರಿಂದ ಸಹ ಬಹಳಷ್ಟು ಪ್ರಯೋಜನಗಳಿವೆ ಆರೋಗ್ಯಕರ ಲಾಭಗಳಿವೆ ಹಾಗೂ ಹಲವು ಔಷಧಿ ತಯಾರಿಕೆಯಲ್ಲಿ ಈ ಬಳ್ಳಿಯ ಎಲೆಗಳನ್ನು ಬೀಜಗಳನ್ನು ಬಳಕೆ ಮಾಡುವುದರಿಂದ ಔಷಧಿ ತಯಾರಿಕೆಯಲ್ಲಿ ಇದರ ಬಳಕೆ ಪ್ರಮುಖವಾಗಿರುತ್ತೆ.

ಸಾಮಾನ್ಯವಾಗಿ ನೋವಿನಿಂದ ಪರಿಹಾರ ಪಡೆದುಕೊಳ್ಳುವುದಕ್ಕಾಗಿ ಸ್ಟೀರಾಯ್ಡ್ ಗಳ ಬಳಕೆ ಮಾಡುವುದನ್ನು ನೋಡಿದ್ದೀರಾ ಅಲ್ವಾ. ಹೌದು ಈ ಸ್ಟಿರಾಯ್ಡ್ ಗಳ ಬಳಕೆ ತಕ್ಷಣಕ್ಕೆ ನೋವಿಂದ ಶಮನ ನೀಡಿರುತ್ತದೆ, ಆದರೆ ಮುಂದಿನ ದಿನಗಳಲ್ಲಿ ಇದು ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಹಾಗಾಗಿ ಈ ಸ್ಟೀರಾಯ್ಡ್ ಗಳ ಬಳಕೆ ಕಡಿಮೆ ಮಾಡಿ ಅಂತಾ ಹೇಳ್ತಾರೆ, ಆದರೆ ಇವತ್ತಿನ ದಿನಗಳಲ್ಲಿ ಇದರ ಬಳಕೆ ದಿನದಿಂದ ದಿನಕ್ಕೆ ಹೆಚ್ಚು ಆಗುತ್ತಲೇ ಇದೆ, ಇದರಿಂದ ಆರೋಗ್ಯದ ಮೇಲೆ ಉಂಟಾಗುತ್ತಿರುವ ಅಡ್ಡಪರಿಣಾಮಗಳು ಬಹಳಷ್ಟು.

ಆದರೆ ಸ್ಟೀರಾಯ್ಡ್ ಗಳ ಬದಲು ಈ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಗೆ ಅಥವಾ ನೋವು ನಿವಾರಣೆಗೆ ಈ ಬೀಜಗಳ ಪ್ರಯೋಜನವನ್ನು ಪಡೆದುಕೊಂಡು ಬಂದರೆ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮಗಳು ಆಗದೆ ನೀವು ನಿಮ್ಮ ಆರೋಗ್ಯವನ್ನು ವೃದ್ಧಿಸಿ ಕೊಂಡು ನಿಮ್ಮ ಸಮಸ್ಯೆಗಳಿಗೆ ಶಮನ ಪಡೆದುಕೊಂಡು, ಆರೋಗ್ಯವಂತರಾಗಿರಲು ನಮ್ಮ ಈ ಪ್ರಕೃತಿಯಲ್ಲಿ ಮತ್ತು ನೈಸರ್ಗಿಕವಾಗಿ ದೊರೆಯುವ ಈ ಗಿಡಮೂಲಿಕೆ ಬಳಕೆ ಮಾಡಿ ಹಾಗೂ ಈ ಬಗ್ಗೆ ಮಾಹಿತಿ ತಿಳಿದು ಇದರ ಬಳಕೆ ಮಾಡುತ್ತಾ ಬನ್ನಿ, ಖಂಡಿತ ಹಲವು ಸಮಸ್ಯೆಗಳಿಗೆ ಯಾವುದೇ ಅಡ್ಡ ಪರಿಣಾಮಗಳು ಇಲ್ಲದೆ ಶಮನ ಸಿಗುತ್ತೆ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment