WhatsApp Logo

ಹೊರಗಡೆ ಈ ಹಣ್ಣು ಎಲ್ಲಾದರೂ ಕಂಡರೆ ಬಿಡಲೇಬೇಡಿ , ಇದನ್ನ ಸೇವನೆ ಮಾಡಿದರೆ ದೇಹಕ್ಕೆ ಸಿಗುವ ಲಾಭ ಅಷ್ಟು ಇಷ್ಟು ಅಲ್ಲ ..

By Sanjay Kumar

Updated on:

ಬೇಸಿಗೆಯಲ್ಲಿ ರಸ್ತೆ ಬದಿಯಲ್ಲಿ ಮಾರಾಟ ಮಾಡುವಂತಹ ಹಣ್ಣು ರುಚಿ ಬಾರಿ ಹೆಚ್ಚು, ಈ ಹಣ್ಣು ತಿನ್ನೋದ್ರಿಂದ ಸಿಗುತ್ತೆ ಈ ಎಲ್ಲಾ ಲಾಭ, ಇಲ್ಲಿದೆ ನೋಡಿ ಈ ಹಣ್ಣಿನ ಕುರಿತು ಹೆಚ್ಚಿನ ಮಾಹಿತಿ…ನಮಸ್ಕಾರಗಳು ಬೇಸಿಗೆಯಲ್ಲಿ ಯಥೇಚ್ಛವಾಗಿ ದೊರೆಯುವ ಈ ಹಣ್ಣು ಹಾಗೂ ಇದನ್ನು ಸೀಸನಲ್ ಹಣ್ಣು ಅಂತ ಕೂಡ ಕರೆಯುತ್ತಾರೆ, ಇದರ ಸೇವನೆಯಿಂದ ಆಗುತ್ತೆ ಅಪಾರ ಲಾಭ. ಇದು ನಿಮಗೂ ಕೂಡ ಗೊತ್ತಾದ್ರೆ ಬೇಸಗೆಯಲ್ಲಿ ವೃದ್ಧಿಯಾಗುತ್ತೆ ನಿಮ್ಮ ಆರೋಗ್ಯ.

ಯಾರಿಗೆ ಬೇಡ ಹೇಳಿ ಆರೋಗ್ಯ, ನಮ್ಮ ಭಾಗ್ಯವೇ ಈ ಆರೋಗ್ಯ ಈ ಆರೋಗ್ಯಕ್ಕಾಗಿ ಎಲ್ಲರ ಹೊಡೆದಾಟ ಬಡಿದಾಟ. ಹೌದು ಎಂದು ಪಾರ್ಕುಗಳಲ್ಲಿ ನೋಡಿದರೆ ಮರಸುತ್ತುವ ಮಂದಿ ಉತ್ತಮ ಆರೋಗ್ಯಕ್ಕಾಗಿ ಇದನ್ನ ಮಾಡ್ತಾ ಇರ್ತಾರೆ, ಇನ್ನು ಹಣ ಇರಬಹುದು ಆದರೆ ಆರೋಗ್ಯ ಇಲ್ಲ ಅದಕ್ಕೇ ಹೇಳೋದು ನಮ್ಮ ಹಿರಿಯರು ಆರೋಗ್ಯ ವೆ ಭಾಗ್ಯ ಅಂತ.ಇಂದಿನ ಈ ಸ್ಟ್ರೆಸ್ ಫುಲ್ ಯುಗದಲ್ಲಿ ಆರೋಗ್ಯ ಎಂಬುದು ಬಹಳ ಅವಶ್ಯಕ ಇಲ್ಲವಾದಲ್ಲಿ ಆಯಸ್ಸು ಕಡಿಮೆಯಾಗಿ ಅರ್ಧಕ್ಕೆ ಜೀವನದ ಪಯಣ ಮುಗಿಸಬೇಕಾಗುತ್ತೆ. ಹಾಗಾಗಿ ಸ್ನೇಹಿತರೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಏನೆಲ್ಲ ಮಾಡಬೇಕೋ ಕದನ ಮಾಡಿ ಪ್ರತಿದಿನ ಕೇವಲ ಅನ್ನ ಸಾರು ಅಥವಾ ಬೆಳಗ್ಗೆ ಮಾಡಿದ ತಿಂಡಿ ಇವುಗಳನ್ನೇ ತಿನ್ನುತ್ತಾ ಇದ್ರೆ ಆರೋಗ್ಯ ಚೆನ್ನಾಗಿ ಆಗುವುದಿಲ್ಲ ಉತ್ತಮ ಆಹಾರ ಪದ್ಧತಿಯೊಂದಿಗೆ ಉತ್ತಮ ಜೀವನಶೈಲಿ ಪಾಲಿಸುತ್ತಾ ಬೇರೆಯವರ ಮೇಲೆ ಅಸೂಯೆ ಪಡದೆ ನಗುತ್ತಾ ಬಾಳಿದರೆ ಅದೇ ಉತ್ತಮ ಜೀವನ.

ಕೊನೆಗೆ ಎಲ್ಲರಿಗೂ ಅದೇ ಬೇಕಾಗಿರುವುದು. ಇವತ್ತಿನ ಈ ಮಾಹಿತಿಯಲ್ಲಿ ಬೇಸಿಗೆಯಲ್ಲಿ ಯಥೇಚ್ಛವಾಗಿ ದೊರೆಯುವ ಈ ಹಣ್ಣಿನ ಕುರಿತು ಹೆಚ್ಚಿನ ಮಾಹಿತಿಯನ್ನು ನಿಮಗೆ ತಿಳಿಸಿಕೊಡಲಿದ್ದೇವೆ ಹೌದು ಇದು ಒಂದೊಂದು ಕಡೆ ಒಂದೊಂದು ಹೆಸರಿನಿಂದ ಕರೀತಾರೆ ಕೆಲವರು ತಾಳೆಹಣ್ಣು ಅಂತ ಕರಿತಾರೆ, ಇನ್ನೂ ಕೆಲವರು ತಾಟಿನುಂಗು ಅಂತ ಕರೀತಾರೆ.ಈ ಹಣ್ಣು ರುಚಿಯಲ್ಲಿ ಫ್ರೆಶ್ ಎಳನೀರಿನಂತೆ ಇರುತ್ತದೆ ಇದು ಆರೋಗ್ಯಕ್ಕೆ ಎಂತಹ ಲಾಭ ಕೊಡುತ್ತೆ ಅಂದರೆ ಬಿಸಿಲಿನಿಂದ ಉಂಟಾದ ತಲೆ ನೋವು ಇರಲಿ ಅಥವಾ ತಲೆಬಿಸಿ ಪಾದಗಳ ಉರಿ ಕಣ್ಣು ಉರಿ ಹೊಟ್ಟೆ ಉರಿ ಎದೆ ಉರಿ ಇಂತಹ ಸಮಸ್ಯೆಯನ್ನು ಪರಿಹಾರ ಮಾಡುತ್ತೆ.

ಹೌದು ಈ ಹಣ್ಣನ್ನು ಐಸ್ ಕೂಡ ಕರೆತಾರೆ ಹೊರಭಾಗ ಕಪ್ಪಗೆ ಇದ್ದರೂ ಒಳಭಾಗ ಐಸ್ ಗೆಡ್ಡೆಯಂತೆ ಕಾಣಸಿಗುತ್ತೆ. ಬಹಳ ಪ್ರಯೋಜನವುಳ್ಳ ಈ ಹಣ್ಣು ಉತ್ತಮ ಪೋಷಕಾಂಶಗಳನ್ನು ಹೊಂದಿದೆ ಒಳ್ಳೆಯ ವಿಟಮಿನ್ಸ್ ಖನಿಜಾಂಶವನ್ನು ಕೂಡ ಹೊಂದಿದೆ.

ಈ ಹಣ್ಣಿನ ಕುರಿತು ಹೇಳುವುದಾದರೆ ಬೇಸಿಗೆಯಲ್ಲಿ ಈ ಹಣ್ಣು ಬಹಳ ವಿಶೇಷ ಯಾಕೆಂದರೆ ವಾತಾವರಣ ಬದಲಾದ ಕಾರಣ ಬೇಸಿಗೆಯಲ್ಲಿ ಹಲವರು ಅನಾರೋಗ್ಯದಿಂದ ಬಳಲುತ್ತಾ ಇರ್ತಾರೆ ಹಾಗೆ ಇದೇ ಸಮಯದಲ್ಲಿ ಬಹಳಷ್ಟು ಅನಾರೋಗ್ಯ ಸಮಸ್ಯೆಗಳು ಕೂಡ ಉಂಟಾಗುತ್ತದೆ ಹಾಗಾಗಿ ಬೇಸಿಗೆಯ ಈ ರುಚಿಕರವಾದ ಹಣ್ಣನ್ನು ಈ ಕಾಲದಲ್ಲಿಯೇ ಆಸ್ವಾದಿಸಿ. ಇದರಿಂದ ಶರೀರ ತಂಪಾಗಿರುತ್ತೆ ಅಷ್ಟೆ ಅಲ್ಲಾ ರಕ್ತಕ್ಕೆ ಗ್ಲುಕೋಸ್ ಅಂಶ ನೀಡುವ ಇದು ರಕ್ತದಲ್ಲಿ ಇರುವ ಗ್ಲುಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಸಹಕಾರಿಯಾಗಿರುತ್ತೆ.

ಬೇಸಿಗೆಯಲ್ಲಿ ದೇಹದ ಉಷ್ಣಾಂಶ ಹೆಚ್ಚಾಗಿ ಕೆಲವರಿಗೆ ಬಾಯಿ ಹುಣ್ಣು ಆಗಿರುತ್ತದೆ, ಅಂಥವರು ಕೂಡ ಈ ಹಣ್ಣನ್ನು ತಿನ್ನಬಹುದು. ಬೇಸಿಗೆಯಲ್ಲಿ ಸಾಮಾನ್ಯವಾಗಿ ನೀವು ರಸ್ತೆ ಬದಿಯಲ್ಲಿ ಮಾರುಕಟ್ಟೆಗಳಲ್ಲಿ ಈ ಹಣ್ಣನ್ನು ಕಾಣಬಹುದು. ದೇಹಕ್ಕೆ ತಂಪು ಆರೋಗ್ಯಕ್ಕೆ ಉತ್ತಮ ಈ ತಾಟಿಲಿಂಗು ಹಣ್ಣು ಇದನ್ನು ತಿನ್ನುವುದರಿಂದ ಬೇಸಿಗೆಯಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment