WhatsApp Logo

ಅದ್ಭುತವಾದ ಖಳನಟನಾಗಿ ನಟನೆ ಮಾಡುತ್ತಿದ್ದ ಶೋಭರಾಜ್ ಈಗೆಲ್ಲಿದ್ದಾರೆ ಗೊತ್ತಾ…ನೋಡಿ ಏನಾಗಿದೆ

By Sanjay Kumar

Updated on:

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಇಲ್ಲಿಯ ವರೆಗೂ ಹಲವು ಪ್ರತಿಭಾವಂತ ನಟ ನಟಿ ಹಾಸ್ಯ ಕಲಾವಿದರು ಜೊತೆಗೆ ಖಳನಟರನ್ನು ಸಹ ನಾವೆಲ್ಲರೂ ಕಂಡಿದ್ದೇವೆ. ಅಂತಹ ಉತ್ತಮ ಖಳನಟರು ಗಳಲ್ಲಿ ಭಾರಿ ಹೆಸರು ಪಡೆದುಕೊಂಡ ನಟ ಅಂದರೆ ಅವರು ನಟ ಶೋಭರಾಜ್ ಹೌದು ಇವರು ಖಳನಟರಲ್ಲಿ ಪ್ರಮುಖರಾದವರು ಹಾಗೆ 90ರ ದಶಕದಲ್ಲಿ ಬಹಳ ಬೇಡಿಕೆ ಅನ್ನು ಹೊಂದಿದ ನಟರಾಗಿದ್ದರೂ ಶೋಭರಾಜ್ ಇವರ ಹೆಸರು ಕೂಡ ಅತ್ಯಂತ ಪ್ರಧಾನವಾಗಿದ್ದು ಇವರು ಮೂಲತಃ ತುಮಕೂರಿನವರಾಗಿದ್ದರೆ. ಹೌದು ತಮಕೂರಿನ ಬಾರ್ಲಿಂಗ್ ಎಂಬಲ್ಲಿ ಸಾಧಾರಣ ಕುಟುಂಬವೊಂದರಲ್ಲಿ ಜನಿಸಿದ ನಟ ಶೋಭರಾಜ್ ರವರ ಆರಂಭಿಕ ಜೀವನ ಅವರ ಹುಟ್ಟೂರಿನ ಸುತ್ತವೇ ಪ್ರಾರಂಭವಾಯಿತು. ಇನ್ನು ಶೋಭರಾಜ್ ರವರು ಐದನೇ ತರಗತಿಯವರೆಗೂ ಹುಟ್ಟೂರಿನಲ್ಲಿಯೆ ವಿದ್ಯಾಭ್ಯಾಸ ಪಡೆಯುತ್ತಾರೆ.

ಶೋಭರಾಜ್ ಅವರ ತಂದೆ ಸಣ್ಣದಾದ ವ್ಯಾಪಾರವನ್ನು ಮಾಡುತ್ತಿದ್ದರು ಕ್ರಮೇಣ ತುಮಕೂರಿನಿಂದ ವ್ಯಾಪಾರದ ಸಲುವಾಗಿ ಬೆಂಗಳೂರಿಗೆ ಬಂತು ಬೆಂಗಳೂರಿನಲ್ಲಿ ಸಂಪಂಗಿರಾಮನಗರದಲ್ಲಿ ತಮ್ಮ ಕುಟುಂಬ ವನ್ನು ಸ್ಥಳಾಂತರ ಮಾಡುತ್ತಾರೆ ಹಾಗೆ ನಟ ಶೋಭರಾಜ್ ಅವರು ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಸಂಪಂಗಿ ರಾಮ ನಗರದ ಖಾಸಗಿ ಶಾಲೆಯೊಂದರಲ್ಲಿ ಮುಗಿಸಿದ್ದು, ಮುಂದೆ ಪ್ರೌಢಶಾಲೆಯನ್ನು ಕೂಡ ಅಲ್ಲಿನ ಸೇಂಟ್ ಪ್ಯಾಟ್ರಿಕ್ ಶಾಲೆಗೆ ಸೇರಿಕೊಂಡಿದ್ದು ನಟ ಶೋಭರಾಜ್ ಹಾಗೂ ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದ ಸುಪ್ರಸಿದ್ಧ ನಾಯಕರಾದಂತಹ ದಿವಂಗತ ರಘುವೀರ್ ರವರ ಬಾಲ್ಯದ ಆತ್ಮೀಯ ಸ್ನೇಹಿತರಾಗಿದ್ದರು.

ನಟ ಶೋಭರಾಜ್ ಅವರು ತಮ್ಮ ಪ್ರೌಢ ಶಾಲೆಯಲ್ಲಿ ಇರುವಾಗಲೇ ಮೊದಲ ಬಾರಿಗೆ ರಘುವೀರ್ ಅವರ ಪರಿಚಯವಾಗುತ್ತದೆ. ಶೋಭರಾಜ್ ಅವರು ಶಾಲೆಯಲ್ಲಿ ಹೇಳಿಕೊಳ್ಳುವಂತಹ ವಿದ್ಯಾರ್ಥಿ ಏನು ಆಗಿರಲಿಲ್ಲ. ಸದಾ ತಮ್ಮ ಸ್ನೇಹಿತರ ಜೊತೆ ಸೇರಿ ಕ್ರಿಕೆಟ್ ಸಿನಿಮಾವನ್ನು ನೋಡಿ ಕಾಲಕಳೆಯುತ್ತಿರುತ್ತಾರೆ. ಇನ್ನು ಖಳ ನಟ ಶೋಭರಾಜ್ ಅವರ ವೃತ್ತಿ ಜೀವನದ ಕುರಿತು ಹೇಳಬೇಕೆಂದರೆ ಇವರಿಗೆ ಸಿನಿಮಾ ಬಗ್ಗೆ ಆಸಕ್ತಿ ಇದ್ದರೂ ಸಹ ಸಿನಿಮಾದಲ್ಲಿ ನಟಿಸಬಲ್ಲೆ ನಟಿಸಬೇಕು ಎಂಬ ಹಂಬಲ ಆಕಾಂಕ್ಷೆ ಮಾತ್ರ ಅವರಿಗೆ ಇರಲಿಲ್ಲವಂತೆ ಮತ್ತು ಹೇಳುವುದಾದರೆ ಅವರಿಗೆ ನೋಡಲು ವರ ಸ್ವಭಾವವುಳ್ಳವರು ಒರಟು ರೂಪ ಹೊಂದಿದ್ದರೂ ಆರಡಿ ಎತ್ತರದ ಮೈಕಟ್ಟು ಹೊಂದಿದ್ದರೂ ಆರಂಭದಲ್ಲಿ ಸಿನಿಮಾ ಜಗತ್ತಿಗೆ ಪರೀಕ್ಷೆ ಮಾಡಿದೆ.

ನಟ ಶೋಭರಾಜ್ ಅವರು ತಮ್ಮ ಯೌವನದ ದಿನಗಳಲ್ಲಿ ಸದಾ ಕುರುಚಲು ಗಡ್ಡದೊಂದಿಗೆ ಇರುತ್ತಿದ್ದರಂತೆ. ಅವರನ್ನು ಒಮ್ಮೆ ನೋಡಿದ ರಘು ಎಂಬ ಕನ್ನಡದ ಖ್ಯಾತ ನಿರ್ದೇಶಕರು ಶೋಭರಾಜ್ ಅವರ ಬಾಹ್ಯರೂಪವನ್ನು ನೋಡಿ ಸಿನಿಮಾಗಳಲ್ಲಿ ಖಳನಾಯಕನ ಪಾತ್ರ ಮಾಡುಚುದಕ್ಕೆ ಹೇಳಿಮಾಡಿಸಿದ ವ್ಯಕ್ತಿ ಇವರೇ ಎಂದು ಇವರಿಗೆ ಹೇಳಿದ್ದರಂತೆ ಹಾಗೂ ಶೋಭರಾಜ್ ಅವರ ಮೊದಲ ಚಿತ್ರ ಕಲಾ ಸಾಮ್ರಾಟ್ ಎಸ್ ನಾರಾಯಣ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಸೂಪರ್ ಹಿಟ್ ಚಿತ್ರವಾಗಿತ್ತು. ನಂತರ ಚೈತ್ರದ ಪ್ರೇಮಾಂಜಲಿ ಸಿನಿಮಾದಲ್ಲಿ ನಟ ರಘುವೀರ್ ಅವರ ನಾಯಕತ್ವದಲ್ಲಿ ತೆರೆಕಂಡ ಕಡಿಮೆ ಬಜೆಟ್ ನ ಸಿನಿಮಾ ಇದಾಗಿತ್ತು. ಇನ್ನು ಈ ಸಿನಿಮಾ ಅಂದಿನ ಕಾಲಕ್ಕೆ ಸಾರ್ವಕಾಲಿಕ ದಾಖಲೆ ನಿರ್ಮಿಸಿ ಶತ ದಿನೀತ್ಸವ ಆಚರಿಸಿದ ಚಿತ್ರವಾಗಿತ್ತು.

ಇನ್ನು ಎಸ್. ನಾರಾಯಣ್ ಅವರು ಈ ಚಿತ್ರಕ್ಕೆ ಬೇರೆ ಕಲಾವಿದನಾದ ಜನಕರಾಜ್ ಎಂಬುವರನ್ನು ಆಯ್ಕೆ ಮಾಡಿದ್ದರು. ಆದರೆ ಕಾರಣಾಂತರಗಳಿಂದ ಅವರಿಗೆ ಬರಲು ಸಾಧ್ಯವಾಗದಿದ್ದಾಗ ಆ ಪಾತ್ರವನ್ನು ಶೋಭರಾಜ್ ಅವರು ನಟಿಸಿದಂತೆ. ಇನ್ನು ಶೋಭರಾಜ್ ಅವರು ಮೊದಲ ಬಾರಿಗೆ ಬಣ್ಣ ಹಚ್ಚಿದ್ದು ಎಟಿ. ರವಿ ಅವರ ನಿರ್ದೇಶನದ ಜೈಲರ್ ಜಗನಾಥ ಚಿತ್ರದ ಮೂಲಕ .ಈ ಚಿತ್ರದಲ್ಲಿ ಟೈಗರ್ ಪ್ರಭಾಕರ್ ಅವರು ನಾಯಕ ನಟರಾಗಿದ್ದು ಅತ್ಯಂತ ಸಣ್ಣ ಪಾತ್ರಕ್ಕೆ ನಟಿಸುವುದಕ್ಕೆ ಶೋಭರಾಜ್ ಆಯ್ಕೆಯಾಗಿದ್ದರು.ಆದರೆ ಕಾರಣಾಂತರಗಳಿಂದ ಕೆಲ ದಿನಗಳ ಬಳಿಕ ಈ ಚಿತ್ರ ಸ್ಥಗಿತಗೊಳ್ಳುತ್ತದೆ.

ಇನ್ನು ಚೈತ್ರದ ಪ್ರೇಮಾಂಜಲಿ ಸಿನಿಮಾದ ಯಶಸ್ಸು ಶೋಭರಾಜ್ ಅವರಿಗೆ ನಿರ್ದೇಶಕರಿಂದ ಹೆಚ್ಚು ಅವಕಾಶ ಬರುವಂತೆ ಮಾಡುತ್ತದೆ ಹಾಗೂ ಮುಂದೆ ಮುಂದೆ 1993 ರಲ್ಲಿ ದೇವರಾಜ್ ಅಭಿನಯದ ಗೋಲಿಬಾರ್ ಚಿತ್ರದಲ್ಲಿ ನಟಿಸಿ ನಂತರ ಲಾಕಪ್ ಡೆ ಡಾಕ್ಟರ್ ವಿಷ್ಣುವರ್ಧನ್ ಅವರ ಜೊತೆ ಬಂಗಾರದ ಕಳಶ ಸಾಯಿಕುಮಾರ್ ಅವರ ಪೊಲೀಸ್ ಸ್ಟೋರಿ ಸಿನಿಮಾದಲ್ಲಿ ಪರಿಪೂರ್ಣ ಖಳನಾಯಕರಾಗಿ ಅಭಿನಯಿಸುತ್ತಾರೆ. ನಂತರ ಹಟ ಶೋಭರಾಜ್ ಅವರು ಧೈರ್ಯ ಹಾಗೂ ಓಂ ನಮ ಶಿವಾಯ ಗಲಾಟೆ ಅಳಿಯಂದಿರು ಮತ್ತು ಶಬ್ಧವೇದಿ ಚಲನಚಿತ್ರಗಳಲ್ಲಿಯೂ ಸಹ ಅಭಿನಯ ಮಾಡಿದರು ಭಾವ ಭಾಮೈದ ಸಿಂಹಾದ್ರಿಯ ಸಿಂಹ ಯಜಮಾನ ಜಮೀನ್ದಾರ್ರು ಹೃದಯವಂತ ಸೋಮ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಬಹಳ ಫೇಮಸ್ ಆದರು ನಟ ಶೋಭರಾಜ್ .

30 ವರ್ಷ ಸಿನಿ ಪಯಣದಲ್ಲಿ ಕನ್ನಡ ಸೇರಿದಂತೆ ತೆಲುಗು ತಮಿಳು ಭಾಷೆಗಳಲ್ಲಿ ನಟಿಸಿದ್ದಾರೆ ಶೋಭರಾಜ್ ಅವರ ನಂತರ ಖಳನಾಯಕ ಹಾಸ್ಯ ಪೌರಾಣಿಕ ಮುಂತಾದ ಪಾತ್ರಗಳಲ್ಲಿ ಅಭಿನಯ ಮಾಡಿರುವ ಇವರು ಕನ್ನಡಕ್ಕೆ ಸಿಕ್ಕ ಅಪರೂಪದ ವಿಶಿಷ್ಟ ಬಗೆಯ ನಟ ಎಂದರೆ ತಪ್ಪಾಗುವುದಿಲ್ಲ ಇತ್ತೀಚಿನ ದಿನಗಳಲ್ಲಿ ಹೊಸ ಪ್ರತಿಭೆಗಳಿಗೆ ಹೆಚ್ಚು ಅವಕಾಶ ನೀಡುವ ಕಾರಣ ಶೋಭರಾಜ್ ಅಂತಹ ನಟರಿಗೆ ಅವಕಾಶಗಳು ಸಿಗುತ್ತಿಲ್ಲ ಶೋಭರಾಜ್ ಅವರ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ ಧನ್ಯವಾದ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment