ನಿಮ್ಮ ದೇಹದಲ್ಲಿ ರಕ್ತದ ಸಮಸ್ಸೆ ಇದ್ದರೆ ಹೀಗೆ ಮಾಡಿದರೆ ಸಾಕು ..! ಲೀಟರ್ ಲೀಟರ್ ಗಟ್ಲೆ ರಕ್ತ ಬರುತ್ತೆ ..

116

ಹೆಲ್ಲೊ ಫ್ರೆಂಡ್ಸ್ ಇಂದಿನ ಮಾಹಿತಿಯಲ್ಲಿ ರಕ್ತಹೀನತೆ ಸಮಸ್ಯೆಗೆ ಕಾರಣಗಳು ಪರಿಹಾರಗಳು ಮತ್ತು ರಕ್ತ ಹೀನತೆ ಸಮಸ್ಯೆಯ ಲಕ್ಷಣಗಳು ಇವುಗಳನ್ನು ತಿಳಿಯೋಣ. ಮಾಹಿತಿ ಪ್ರತಿಯೊಬ್ಬರಿಗೂ ಉಪಯುಕ್ತವಾಗುತ್ತದೆ. ಆದಕಾರಣ ಸಂಪೂರ್ಣವಾಗಿ ಲೇಖನವನ್ನು ತಿಳಿದು ಈ ರಕ್ತಹೀನತೆ ಸಮಸ್ಯೆಯ ಲಕ್ಷಣಗಳು ನಿಮಗೂ ಕೂಡ ಇದ್ದಲ್ಲಿ ಅಥವಾ ನಿಮ್ಮ ಸ್ನೇಹಿತರಿಗೆ ಆಗಲಿ ಬಂಧು ಬಳಗದವರಿಗೆ ಆಗಲಿ ಈ ಸಮಸ್ಯೆ ಕಾಡುತ್ತಾ ಇದ್ದಲ್ಲಿ, ಅದರ ಲಕ್ಷಣಗಳನ್ನು ಅಂತಹವರಿಗೆ ತಿಳಿಸಿಕೊಟ್ಟು ಕೂಡಲೇ ಸಣ್ಣ ಪರೀಕ್ಷೆಯೊಂದನ್ನು ಮಾಡಿಸಿಕೊಳ್ಳಲು ಸೂಚನೆಯನ್ನು ನೀಡಿ. ರಕ್ತಹೀನತೆ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಿದರೆ ಈ ಸಮಸ್ಯೆ ಇನ್ನೂ ಹೆಚ್ಚಾಗಿ ಮುಂದಿನ ದಿನಗಳಲ್ಲಿ ಯಾವುದಾದರೂ ದೊಡ್ಡ ಅನಾರೋಗ್ಯ ಸಮಸ್ಯೆಯನ್ನು ಉಂಟು ಮಾಡಬಹುದು.

ರಕ್ತಹೀನತೆ :  ಈ ರಕ್ತ ಹೀನತೆ ಬಗ್ಗೆ ತಿಳಿದುಕೊಳ್ಳುವುದಕ್ಕಿಂತ ಮೊದಲು ರಕ್ತದ ಬಗ್ಗೆ ತಿಳಿಯೋಣ ರಕ್ತದಲ್ಲಿ ಡಬ್ಲ್ಯುಬಿಸಿ ಆರ್ ಬಿಸಿ ಏರುತ್ತದೆ ಮತ್ತು ಪ್ಲೇಟ್ ಲೆಟ್ಸ್ ಗಳು ಕೂಡ ಇರುತ್ತದೆ ಈ ಆರ್ಬಿಸಿ ಅಂತ ಏನು ಹೇಳ್ತೇವೆ, ಈ ಕೆಂಪು ರಕ್ತಕಣ ಕೆಂಪಗೆ ಇರುವುದಕ್ಕೆ ಹೀಮೋಗ್ಲೋಬಿನ್ ಕಾರಣವಾಗಿರುತ್ತದೆ ಹೀಮೋಗ್ಲೋಬಿನ್ ಅಂಶ ಕಬ್ಬಿಣದ ಅಂಶದಿಂದ ಕೂಡಿರುತ್ತದೆ ನಾವು ಆಹಾರದ ಮುಖಾಂತರ ಕಬ್ಬಿಣಾಂಶವನ್ನು ನಮ್ಮ ದೇಹಕ್ಕೆ ನೀಡಿದರೆ ನಮ್ಮ ದೇಹದ ರಕ್ತವನ್ನು ಉತ್ಪತ್ತಿ ಮಾಡುತ್ತದೆ ಈ ಕೆಂಪು ರಕ್ತಕಣಗಳು ಕೂಡ ಸಮ ಪ್ರಮಾಣದಲ್ಲಿ ಇರುತ್ತದೆ.

ಆದರೆ ಯಾವಾಗ ನಾವು ಕಬ್ಬಿಣದ ಅಂಶ ಕಡಿಮೆ ಇರುವ ಆಹಾರ ಸೇವನೆ ಮಾಡಿದ ಬರ್ತೆವೆ ದೇಹದಲ್ಲಿ ಕಬ್ಬಿಣದಂಶದ ಕೊರತೆ ಉಂಟಾಗುತ್ತದೆ ಆಗ ಕೆಂಪು ರಕ್ತ ಕಣಗಳ ಕೊರತೆ ಕೂಡ ಉಂಟಾಗುತ್ತದೆ ಅಂದರೆ ಹಿಮೋಗ್ಲೋಬಿನ್ ಕಡಿಮೆಯಾಗುತ್ತದೆ ಸುಮಾರು 12 ಅಥವಾ 13 ಸಂಖ್ಯೆಯಲ್ಲಿ ಈ ಹಿಮೋಗ್ಲೋಬಿನ್ ಇದ್ದರೆ ಅಂತಹ ವ್ಯಕ್ತಿ ಆರೋಗ್ಯವಂತ ಅಂತ ಹೇಳ್ತಾರೆ ಇದಕ್ಕಿಂತ ಕಡಿಮೆ ಇದ್ದರೆ ಅವನು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಾ ಇದ್ದಾನೆ ಎಂದು ಪರಿಗಣಿಸಲಾಗುತ್ತದೆ.

ರಕ್ತಹೀನತೆಯ ಲಕ್ಷಣಗಳು : ಸಾಮಾನ್ಯವಾಗಿ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ಈ ರಕ್ತಹೀನತೆ ಸಮಸ್ಯೆ ಹೆಣ್ಣುಮಕ್ಕಳಿಗೆ ಋತುಚಕ್ರದಿಂದಾಗಿ ಮತ್ತು ಡೆಲಿವರಿ ನಂತರ ಈ ರಕ್ತಹೀನತೆ ಉಂಟಾಗುತ್ತದೆ, ಗಂಡು ಮಕ್ಕಳಲ್ಲಿ ಆದರೆ ಅವರ ದುಶ್ಚಟಗಳಿಂದ ಕೂಡ ಈ ರಕ್ತ ಎಂಥ ಸಮಸ್ಯೆ ಉಂಟಾಗಬಹುದು ಅಥವಾ ಕೆಲವೊಂದು ಅನಾರೋಗ್ಯ ಸಮಸ್ಯೆಗಳಿಂದ ಕೂಡ ರಕ್ತಹೀನತೆ ಸಮಸ್ಯೆ ಕೆಲವರಲ್ಲಿ ಉಂಟಾಗುತ್ತದೆ. ತಲೆಸುತ್ತು ಬರುವುದು ಪದೇಪದೆ ಆಕಳಿಕೆ ಬರುವುದು ಮತ್ತು ಹೆಣ್ಣುಮಕ್ಕಳಿಗೆ ಆದರೆ ಇರೆಗ್ಯುಲರ್ ಪೀರಿಯಡ್ಸ್ ಆಗುವುದು ಮತ್ತು ಸುಸ್ತು ಆಯಾಸ ಇಂತಹ ಎಲ್ಲ ಲಕ್ಷಣಗಳು ರಕ್ತಹೀನತೆ ಇದೆ ಎಂಬುದರ ಸೂಚನೆ ನೀಡುತ್ತಿರುತ್ತದೆ.

ರಕ್ತಹೀನತೆಗೆ ಪರಿಹಾರ : ತುಂಬ ಸುಲಭವಾಗಿ ರಕ್ತಹೀನತೆ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು ಆದರೆ ಕಟ್ಟುನಿಟ್ಟಿನ ಆಹಾರ ಪದ್ದತಿಯನ್ನು ಪಾಲಿಸಬೇಕಾಗುತ್ತದೆ ಹೆಚ್ಚು ಹಣ್ಣುಗಳನ್ನು ತರಕಾರಿಗಳನ್ನು ಸೇವಿಸುವುದು ಮತ್ತು ಬೆಳಗ್ಗೆ ಎದ್ದ ಕೂಡಲೇ ಉಷಾ ಪಾನದ ನಂತರ ತಪ್ಪದೆ ಒಂದು ಲೋಟ ಬೀಟ್ರೂಟ್ ಜ್ಯೂಸ್ ಅನ್ನು ಸೇವಿಸುವುದು ಹಾಗೆ ಹೆಚ್ಚು ಹಸಿರು ತರಕಾರಿಗಳನ್ನು ಮೊಳಕೆ ಕಟ್ಟಿದ ಕಾಳುಗಳು ಸೇವಿಸುವುದು ಸೊಪ್ಪನ್ನು ಸೇವಿಸುವುದು.ಕಬ್ಬಿಣದ ಅಂಶ ಹೆಚ್ಚಾಗಿರುವ ಪಾಲಕ್ ಸೊಪ್ಪನ್ನು ತಿನ್ನುವುದರಿಂದ ಅಥವಾ ಇದರ ಜ್ಯೂಸ್ ಮಾಡಿ ಸೇವಿಸುವುದರಿಂದ ಬೇಗ ರಕ್ತಹೀನತೆ ಸಮಸ್ಯೆ ಪರಿಹಾರ ಆಗುತ್ತದೆ.

ರಕ್ತಹೀನತೆ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡದಿರಿ ಯಾಕೆಂದರೆ ಯಾವಾಗ ರಕ್ತಹೀನತೆ ಸಮಸ್ಯೆ ಉಂಟಾಗುತ್ತದೆ ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ನಮ್ಮ ಮೆದುಳಿಗೆ ಯಾವಾಗ ಸರಿಯಾಗಿ ರಕ್ತ ಪರಿಚಲನೆ ಆಗುವುದಿಲ್ಲ ಅಂದರೆ ಸರಿಯಾಗಿ ಆಮ್ಲಜನಕದ ಪೂರೈಕೆಯಾಗುವುದಿಲ್ಲ ಮೆದುಳಿನ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ರಕ್ತಹೀನತೆಯಿಂದ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆ ಕೂಡ ಉಂಟಾಗಬಹುದು ಯಾಕೆಂದರೆ ಈ ರಕ್ತವೇ ನಮ್ಮ ದೇಹದ ಪ್ರತಿಯೊಂದು ಅಂಗಕ್ಕೂ ಆಮ್ಲಜನಕದ ಪೂರೈಕೆ ಮಾಡುವುದು. ಹೃದಯಕ್ಕೆ ಆಮ್ಲಜನಕದ ಪೂರೈಕೆ ಸರಿಯಾಗಿ ಆಗಿಲ್ಲವಾದರೆ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ಉಂಟಾಗಬಹುದು.

WhatsApp Channel Join Now
Telegram Channel Join Now