ನೀವು ಬೆಳೆದು ದೊಡ್ಡವಳಾದ ಮೇಲೆ ಯಾವ ಕೆಲಸ ಮಾಡ್ತಿಯಾ ಅಂತ ಕೇಳಿದಕ್ಕೆ ಪುನೀತ್ ರಾಜಕುಮಾರ್ ಮಗಳ ಉತ್ತರವೇ ಬೇರೆ…ನೋಡಿ

226

ಹೌದು ಅಪ್ಪು ಮಾರ್ಚ್ 1975 17ರಂದು ತಮ್ಮ 6ತಿಂಗಳಿಗೆ ಬಾಲಕಲಾವಿದರಾಗಿ ಸಿನಿಮಾರಂಗಕ್ಕೆ ಬಂದ ಇವರು ಪ್ರೇಮದ ಕಾಣಿಕೆ ಎಂಬ ಸಿನೆಮಾದಲ್ಲಿ ಬಾಲನಟರಾಗಿ ಅಭಿನಯಿಸುತ್ತಾರೋ ಹಾಗೇ ಬಳಿಕ ಸನಾದಿ ಅಪ್ಪಣ್ಣ ಭಾಗ್ಯವಂತರು ಬೆಟ್ಟದ ಹೂವು ಎರಡು ನಕ್ಷತ್ರ ವಸಂತ ಕಾಲ ಹೀಗೆ ಬಾಲನಟರಾಗಿ ಸುಮಾರು 14 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಅಪ್ಪು ಆನಂತರ ಇವರು ಅಪ್ಪು ಸಿನಿಮಾದ ಮೂಲಕ ಪೂರ್ಣ ನಟನಾಗಿ ತೆರೆ ಮೇಲೆ ಕಾಣಿಸಿಕೊಳ್ತಾರಾ ಇವರು ನಟನೆ ಮಾಡಿದಂತಹ ಎಲ್ಲ ಸಿನೆಮಾಗಳು ಕೂಡ ಹಿಟ್ ಮೇಲೆ ಹಿಟ್ ಬಾರಿಸಿದ,

ಹೌದು ನಮ್ಮ ಕರುನಾಡ ರಾಜಕುಮಾರ ಅಪ್ಪು ಅಪ್ಪು ಅಭಿ ವೀರ ಕನ್ನಡಿಗ ಆಕಾಶ್ ಬಿಂದಾಸ್ ರಾಜಕುಮಾರ ಯುವರತ್ನ ಜೇಮ್ಸ್ ನಮ್ಮ ಬಸವ ಹೀಗೆ ಹಲವು ಸಿನೆಮಾಗಳಲ್ಲಿ ಒಟ್ಟಾರೆಯಾಗಿ ಸುಮಾರು 25 ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ ನಮ್ಮ ಅಪ್ಪು ನಟರಾಗಿ ಪೂರ್ಣ ಯಶಸ್ಸು ಪಡೆದುಕೊಂಡಿರುವ ಅಪ್ಪು ಅವರು ಉತ್ತಮ ವ್ಯಕ್ತಿಯಾಗಿ ಕೂಡ ಅಪಾರ ಯಶಸ್ಸು ಪಡೆದುಕೊಂಡಿದ್ದಾರೆ ಸಮಾಜಕ್ಕೆ ಆದರ್ಶ ವ್ಯಕ್ತಿಯಾಗಿದ್ದಾರೆ ಹೌದು ಹಿಂದೆಂದೂ ಕಾಣದ ಮುಂದೆಯೂ ಕೂಡ ಇವರಂತಹ ಆದರ್ಶ ವ್ಯಕ್ತಿಗಳು ನಮಗೆ ಸಿಗೋದಿಲ್ಲ ಅನಿಸತ್ತೆ.

ಹೌದು ಅಪ್ಪು ಬರೀ ರೀಲ್ ಹೀರೋ ಅಲ್ಲ ರಿಯಲ್ ಹೀರೋ ಅನ್ನೋದಕ್ಕೆ ಸಾಕಷ್ಟು ನಿದರ್ಶನಗಳೇ ಇವೆ ಹೀಗಿರುವಾಗ ಅಪ್ಪು ಅವರು ನಮ್ಮನ್ನು ಅಗಲಿದಾಗ ಅವರನ್ನು ನೋಡುವುದಕ್ಕೆ ಸುಮಾರು ಎಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಅಂತಿಮ ದರ್ಶನಕ್ಕಾಗಿ ಬಂದಿದ್ದರು. ಅಷ್ಟೇ ಅಲ್ಲ ಅಪ್ಪು ಅವರನ್ನು ಕಳೆದುಕೊಂಡ ದಿನ ಇಡೀ ವಿಶ್ವವೇ ಅವರ ವಿದಾಯಕ್ಕೆ ಸಂತಾಪ ಸೂಚಿಸಿತ್ತು ಇಂಥದ್ದೊಂದು ದಿನ ಇಷ್ಟು ಬೇಗ ಬರುತ್ತದೆ ಅಂತ ಯಾರೂ ಕೂಡ ಊಹೆ ಮಾಡಿರಲಿಲ್ಲ ಬಹಳಷ್ಟು ಮಂದಿ ಅಪ್ಪು ಇಲ್ಲ ಅನ್ನುವ ನೋವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದೇ ತಮ್ಮ ಪ್ರಾಣ ಕಳೆದುಕೊಂಡಿರುವುದು ಕೂಡ ಉಂಟು ಅಂತಹ ವ್ಯಕ್ತಿ ಅಪ್ಪು ಅವರು ಹೌದು ಅವರಿಲ್ಲ ಅನ್ನುವ ನೋವು ಇವತ್ತಿಗೂ ಕಾಡುತ್ತಿದೆ.

ಇಂತಹ ಸಮಯದಲ್ಲಿ ಅಪ್ಪು ಅವರ ಮಗಳು ತಮ್ಮ ಹತ್ತನೇ ತರಗತಿ ಪರೀಕ್ಷೆ ಬರೆದಿದ್ದು ಇದೇ ವೇಳೆ ಫಲಿತಾಂಶ ಕೂಡ ಹೊರಬಂದಿದೆ ಹಾಗೆ ಅಪ್ಪು ಎರಡನೆಯ ಮಗಳು ವಂದಿತ, ತನ್ನ ಹತ್ತನೇ ತರಗತಿಯ ಪರೀಕ್ಷೆಯ ಫಲಿತಾಂಶ ಬಂದಮೇಲೆ ಮೀಡಿಯಾಗಳ ಮುಂದೆ ಹೇಳಿಕೊಂಡಿರುವ ಸುದ್ದಿ ವೈರಲ್ ಆಗುತ್ತಿದೆ ಹೌದು ಅಪ್ಪು ಅವರ ಮಕ್ಕಳು ಅಂದರೆ ಸುಮ್ನೇನಾ ತಮ್ಮ ಮಕ್ಕಳನ್ನು ಸರಳರಲ್ಲಿ ಸರಳ ರಾಗಿ ಬೆಳೆಸಿರುವ ದೊಡ್ಡ ಸ್ಟಾರ್ ಪುನೀತ್ ಸರ್ ಅವರು ತಮ್ಮ ಮಕ್ಕಳಿಗೆ ಜೀವನದ ಮೌಲ್ಯವನ್ನು ತಿಳಿಸಿದ್ದಾರ ಹಾಗೆ ಕಷ್ಟ ಎಂದು ಬಂದವರಿಗೆ ತಮ್ಮ ಕೈಲಾದ ಸಹಾಯ ಮಾಡುವ ಗುಣವನ್ನು ಆ ಕಾರಣಕ್ಕಾಗಿಯೇ ಅಲ್ವಾ ಅಪ್ಪು ಅವರ ಮಕ್ಕಳ ಬಾಯಲ್ಲೂ ಇಂತಹ ಮಾತು ಬರಲು ಸಾಧ್ಯ ಹೌದು ಅಶ್ವಿನಿ ಅವರು ಕೂಡ ಕಡಿಮೆಯಿಲ್ಲ ತಮ್ಮ ಮನೆಗೆ ಯಾರೇ ಬಂದರೂ ದೊಡ್ಮನೆ ಸೊಸೆಯಾಗಿ ಅವರಿಗೆ ಉತ್ತಮ ಆತಿಥ್ಯ ನೀಡುತ್ತಾರೆ ಹಾಗೆ ಈಗ ಅದೇ ದಾರಿಯಲ್ಲಿ ಅದೇ ಹಾದಿಯಲ್ಲಿ ಮಕ್ಕಳು ಕೂಡ ಇದ್ದಾರೆ ನೋಡಿ.

ಮೀಡಿಯಾದವರು ಇಷ್ಟು ಒಳ್ಳೆಯ ಅಂಕ ಪಡೆದುಕೊಂಡಿದ್ದೀರಾ ಮುಂದೆ ಜೀವನದಲ್ಲಿ ಏನಾಗಲು ಬಯಸುತ್ತೀರಿ ಎಂದು ಕೇಳಿದಾಗ, ವಂದಿತ ನನ್ನ ತಂದೆಯಂತೆ ಉತ್ತಮ ಸಮಾಜಮುಖಿ ಕೆಲಸವನ್ನು ಮಾಡಲು ಇಷ್ಟಪಡುತ್ತೇನೆ ಮತ್ತು ನನ್ನ ತಂದೆ ಇರುವಾಗಲೇ ಹೇಳಿದ್ದೆ ನಮ್ಮ ಟ್ರಸ್ಟ್ ನಲ್ಲಿಯೇ ನಾನು ಓದು ಮುಗಿದ ಮೇಲೆ ಕೆಲಸ ಮಾಡುತ್ತೇನೆ ಎಂದು ನಾನು ಹಾಗೆಯೇ ಮಾಡುತ್ತೇನೆ ಎಂದು ವಂದಿತ ತನ್ನ ತಂದೆಯ ಬಳಿ ಕೊಟ್ಟ ಮಾತನ್ನು ಉಳಿಸಿಕೊಂಡು, ಅದನ್ನು ಮೀಡಿಯಾ ಮುಂದೆ ಕೂಡ ಹೇಳಿಕೊಂಡಿದ್ದಾರೆ ಎಂತಹ ಮನಸ್ಸು ಅಲ್ವಾ ಇವರಿಗೆ ಒಳ್ಳೆಯದಾಗಲಿ ಎಂದು ನಾವು ಕೂಡ ಆಶಿಸೋಣ.

WhatsApp Channel Join Now
Telegram Channel Join Now