ನೀವೇನಾದ್ರು ನಿಮ್ಮ ಮನೆಯಲ್ಲಿ ಹೀಗೆ ಮಾಡಿದ್ರೆ ಪಾಸಿಟಿವ್ ಶಕ್ತಿ ಹೆಚ್ಚಾಗಿ ಐಶ್ವರ್ಯ ಲಕ್ಷ್ಮೀ ಬಂದು ನೆಲೆಸ್ತಾಳೆ..|

90

ನಮಸ್ಕಾರ ಪ್ರಿಯ ವೀಕ್ಷಕರೇ ನಿಮಗೆ ಈ ದಿನದ ಮಾಹಿತಿಯಲ್ಲಿ ವಾಸ್ತುವಿನ ಬಗೆಗಿನ ಒಂದಿಷ್ಟು ವಿಚಾರಗಳನ್ನು ತಿಳಿಸಿಕೊಡುತ್ತೇನೆ. ಹೌದು ಮನೆಯಲ್ಲಿ ಇಂತಹ ಕೋಣೆ ಇಂತಹದ್ದೆ ಒಂದು ದಿಕ್ಕಿನಲ್ಲಿ ಇರಿಸುವುದರಿಂದ ಮನೆಯಲ್ಲಿ ಒಂದಿಷ್ಟು ಬದಲಾವಣೆಗಳು ಆಗುತ್ತದೆ. ಇದರ ಜೊತೆಗೆ ಮನೆಯಲ್ಲಿ ಧನಾತ್ಮಕ ಚಿಂತನೆಗಳು ಹೆಚ್ಚಬೇಕಾದರೆ ಧನಾತ್ಮಕ ವಾತಾವರಣವೂ ಇರಬೇಕಾದರೆ, ಮನೆಯಲ್ಲಿ ಕೆಲವೊಂದು ಕೋಣೆಗಳು ಇರ ಬೇಕಾಗಿರುವಂತಹ ಮೂಲೆಗಳಲ್ಲಿ ಇರಿಸುವುದರಿಂದ ಆ ಒಂದು ವಾತಾವರಣ ಮನೆಯಲ್ಲಿ ಸೃಷ್ಟಿಯಾಗುತ್ತದೆ.

ಹೌದು ಹೇಗೆ ನಾವು ಮಲಗುವ ದಿಕ್ಕು ಪೂರ್ವ ದಿಕ್ಕಿನಡೆಗೆ ಇರಬೇಕು ಅನ್ನುವುದು ಶಾಸ್ತ್ರ ಇದೆ. ಅದೆ ರೀತಿಯಲ್ಲಿ ನಮ್ಮ ಪೂರ್ವಿಕರು ಮನೆಯ ಕೆಲವೊಂದು ಕೋಣೆಗಳು ಇಂತಹ ಪ್ರತ್ಯೇಕ ದಿಕ್ಕಿನಡೆಗೆ ಇರಬೇಕು ಅಂತ ಹೇಳಿದ್ದಾರೆ. ಅದೇ ರೀತಿಯಲ್ಲಿ ಮನೆಯಲ್ಲಿ ದೇವರು ಇರ ಬೇಕಾಗಿರುವಂತಹ ದಿಕ್ಕು ಯಾವುದು ಎಂದರೆ ಈಶಾನ್ಯ ಮೂಲೆ ಹೌದು ಮನೆಯಲ್ಲಿ ದೇವರ ಮನೆಯನ್ನು ಈಶಾನ್ಯ ದಿಕ್ಕಿನಲ್ಲಿ ಇರಿಸಬೇಕು.

ಈ ರೀತಿ ಮನೆಯಲ್ಲಿ ದೇವರ ಕೋಣೆ ಈಶಾನ್ಯ ಮೂಲೆಯಲ್ಲಿ ಇರುವುದರಿಂದ ದೇವರ ಮನೆಯಲ್ಲಿ ಪೂರ್ವಾಭಿಮುಖವಾಗಿ ಪ್ರಾರ್ಥನೆಯನ್ನು ಮಾಡಬಹುದು ಈ ರೀತಿ ಪೂರ್ವಾಭಿಮುಖವಾಗಿ ನಾವು ಪ್ರಾರ್ಥನೆಯನ್ನು ಮಾಡುತ್ತಾ ಬರುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಮೆದುಳು ವಿಕಾಸಗೊಳ್ಳುತ್ತದೆ ಅಷ್ಟೇ ಅಲ್ಲದೆ ಪೂರ್ವ ದಿಕ್ಕು ಸೂರ್ಯ ಉದಯಿಸುವ ದಿಕ್ಕು ಈ ದಿಕ್ಕಿನೆಡೆಗೆ ಮುಖಮಾಡಿ ನಿಂತು ಪ್ರಾರ್ಥನೆಯನ್ನು ಮಾಡುವುದರಿಂದ ನಮ್ಮ ಮನಸ್ಸಿನ ಏಕಾಗ್ರತೆ ಕೂಡ ಹೆಚ್ಚುತ್ತದೆ.

ಅಡುಗೆ ಮನೆಯ ಸಮೃದ್ಧಿಯ ಸಂಕೇತ ಅಡುಗೆ ಮನೆಯನ್ನು ಮನೆಯ ಆಗ್ನೇಯ ಮೂಲೆಯಲ್ಲಿ ಇರಿಸಬೇಕು ಈ ಆಗ್ನೇಯ ಮೂಲೆಯಲ್ಲಿ ಯಾವತ್ತಿಗೂ ನೀರನ್ನು ಚೆಲ್ಲಬೇಡಿ ಯಾವಾಗಲೂ ಈ ಆಗ್ನೇಯ ಮೂಲೆಯಲ್ಲಿ ಅಡುಗೆ ಮನೆಯನ್ನು ಇರಿಸಿ ಈ ಆಗ್ನೇಯ ಮೂಲೆಯಲ್ಲಿ ಸ್ಟೌವನ್ನು ಉರಿಸುವುದರಿಂದ ಇದು ಮನೆಯ ಹೇಳಿಕೆಯನ್ನು ವೃದ್ಧಿಸುತ್ತದೆ ಅಷ್ಟಿದೆ ಸಿರಿಧಾನ್ಯಗಳ ಕೊರತೆ ಇಲ್ಲದ ಹಾಗೆ ಕಾಪಾಡುತ್ತದೆ.

ನೈರುತ್ಯ ದಿಕ್ಕು, ಮನುಷ್ಯನ ಸ್ಥಿರತೆಯನ್ನು ಕಾಪಾಡುವಂತಹ ಮಲಗುವ ಕೋಣೆಯನ್ನು ನೈರುತ್ಯ ದಿಕ್ಕಿನಲ್ಲಿ ಇರಿಸಬೇಕು. ಇನ್ನು ಪ್ರತಿಯೊಬ್ಬರಿಗೂ ತಿಳಿದೇ ಇದೆ ನಾವು ಹಣಕಾಸು ಇಡುವಂತಹ ಪೆಟ್ಟಿಗೆಯನ್ನು ಮನೆಯ ಕುಬೇರ ಮೂಲೆಯಲ್ಲಿ ಇರಿಸಬೇಕು ಇದರಿಂದ ಮನೆಯ ಸಂಪತ್ತು ಹೆಚ್ಚುತ್ತದೆ.

ಈ ರೀತಿಯಾಗಿ ಮನೆಯಲ್ಲಿ ಕೆಲವೊಂದು ಪ್ರತ್ಯೇಕ ದಿಕ್ಕುಗಳಲ್ಲಿ ಪ್ರತ್ಯೇಕ ಕೋಣೆಯನ್ನು ಇರಿಸುವುದರಿಂದ ಅದು ಮನೆಗೆ ಧನಾತ್ಮಕ ಶಕ್ತಿಯನ್ನು ತಂದುಕೊಡುತ್ತದೆ ಅಷ್ಟೇ ಅಲ್ಲದೆ ಮನೆಗೆ ಕಷ್ಟವನ್ನು ತಂದೊಡ್ಡುವ ಒಂದು ಕೋಣೆ ಅಂದರೆ, ಅದು ಸ್ನಾನದ ಕೋಣೆ ಈ ಸ್ನಾನದ ಕೋಣೆಯನ್ನು ಮನೆಯ ವಾಯುವ್ಯ ದಿಕ್ಕಿನಲ್ಲಿ ಇರಿಸುವುದು ಒಳ್ಳೆಯದು, ಅಥವಾ ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿ ಇರಿಸುವುದು ಉತ್ತಮ.

ಮನೆಯ ಕೇಂದ್ರ ಸ್ಥಳ ಉಸಿರಾಟಕ್ಕೆ ಸಂಕೇತ ಅಂದರೆ ನಮ್ಮ ದೇಹಕ್ಕೆ ಹೋಲಿಸಿ ಹೇಳುವುದಾದರೆ ಮೂಗು ಇದ್ದಂತೆ, ಮನೆಯ ಗೋಡೆಗಳನ್ನು ಮನುಷ್ಯನ ದೇಹಕ್ಕೆ ಹೋಲಿಸುವುದಾದರೆ ಮನುಷ್ಯನ ದೇಹದಲ್ಲಿ ಹೊಟ್ಟೆಯ ಸಮಾನ ಅಂತ ಹೇಳ್ತಾರೆ ಈ ಗೋಡೆಗಳನ್ನು. ಮನೆಯ ಯಾವುದಾದರೂ ಒಂದು ಮೂಲೆಯಲ್ಲಿ ಝೀರೋ ವ್ಯಾಟ್ ನೀಲಿ ಬಲ್ಬ್ ಅನ್ನು ಉರಿಸುವುದರಿಂದ ಅದರಲ್ಲಿಯೂ ಮನೆಯ ಕೇಂದ್ರೀಯ ಸ್ಥಳದಲ್ಲಿ ಉರಿಸುವುದರಿಂದ ಅದು ಮನೆಗೆ ಒಳ್ಳೆಯದು ಅಂತ ಹೇಳ್ತಾರೆ.

ಈ ರೀತಿಯಾಗಿ ಕೆಲವೊಂದು ವಿಚಾರಗಳನ್ನು ನಾವೇ ತಿಳಿದುಕೊಂಡಿದ್ದರೆ ನಮಗೆ ಒಳ್ಳೆಯದು ಮತ್ತು ನೀವು ವಾಸ್ತುಶಾಸ್ತ್ರವನ್ನು ನಂಬುವುದಾದರೆ ತಪ್ಪದ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.

WhatsApp Channel Join Now
Telegram Channel Join Now