ನೇಹಾ ಗೌಡ ಅವರ ಪೇಂಟಿಂಗ್ ಅನ್ನು ತುಂಬಾ ಅಭಿಮಾನದಿಂದ ತನ್ನ ಕೈಯಿಂದ ಮಾಡಿದ ಅಭಿಮಾನಿ .. ನೆಟ್ಟಿಗರಿಂದ ಬಾರಿ ಮೆಚ್ಚುಗೆ

72

ಕನ್ನಡ ಕಿರುತೆರೆಯಲ್ಲಿ ಹಲವಾರು ನಟ ನಟಿಯರಿದ್ದಾರೆ ಅದರಲ್ಲಿಯೂ ಸೌಂದರ್ಯಕ್ಕೆ ಹೆಸರುವಾಸಿ ಯಾಗಿರುವ ಹಲವು ನಟಿಯರಿದ್ದಾರೆ ಅದೇ ರೀತಿ ಕನ್ನಡ ಕಿರುತೆರೆಯಲ್ಲಿ ಅಂದು ನೇಹ ಗೌಡ ಅಂದರೆ ಯಾರಿಗೂ ಕೂಡ ತಿಳಿದಿರಲಿಲ್ಲ ಆದರೆ ಇವತ್ತಿನ ದಿವಸಗಳಲ್ಲಿ ನೇಹ ಗೌಡ ಅವರು ಪ್ರತಿಯೊಬ್ಬರಿಗೂ ಕೂಡ ಪರಿಚಯ ಹೌದೋ ಗೊಂಬೆ ಎಂದೇ ಪ್ರಸಿದ್ಧವಾಗಿರುವ ನೇಹಾ ಗೌಡ,

ಅವರು ಕನ್ನಡ ಕಿರುತೆರೆಯಲ್ಲಿ ಪ್ರಸಿದ್ಧ ಧಾರಾವಾಹಿಯಾಗಿರುವ ಲಕ್ಷ್ಮಿ ಬಾರಮ್ಮ ಎಂಬ ಧಾರಾವಾಹಿಯಲ್ಲಿ ಮುಗ್ಧ ಪಾತ್ರವನ್ನು ನಿರ್ವಹಿಸಿ ಬಹಳ ಹೆಸರು ಪಡೆದುಕೊಂಡಿದ್ದರು ಹಾಗೂ ಹಲವು ಅಭಿಮಾನಿಗಳನ್ನು ಕೂಡ ಸಂಪಾದಿಸಿಕೊಂಡಿದ್ದರು ನಟಿ ನೇಹಾ ಗೌಡ ಅವರು ಹೆಚ್ಚಿನ ಜನರು ಇವರನ್ನು ಗುರುತು ಹಿಡಿಯುವುದು ಗೊಂಬೆ ಅಂದಾಗಲೇ ಅಷ್ಟು ಫೇಮಸ್ ಇವರು ಮಾಡಿದ ಪಾತ್ರ.

ಒಬ್ಬ ನಟನಿಗೆ ಆಗಲಿ ಒಬ್ಬ ನಟಿಗೆ ಆಗಲಿ, ಅವರ ನಿಜವಾದ ಹೆಸರಿನಿಂದ ಅವರನ್ನು ಗುರುತಿಸುವುದಕ್ಕಿಂತ ಅವರು ನಟಿಸುವ ಪಾತ್ರದಿಂದ ಅವರನ್ನು ಗುರುತಿಸಿದರೆ ಅವರಿಗೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ ಅದು ನಟಿ ನೇಹಾ ಗೌಡ ಅವರು ಕೂಡ ತಾವು ಕನ್ನಡ ಕಿರುತೆರೆಯಲ್ಲಿ ಮಾಡಿದ ಮೊದಲ ಧಾರಾವಾಹಿ ಎಂದಾಗ ಬಹಳ ಫೇಮಸ್ ಆಗಿರುವ ಈ ನಟಿ ಇದೀಗ ಗೊಂಬೆ ಎಂದೇ ಪ್ರಸಿದ್ಧ ಗೊಂಡಿದ್ದಾರೆ ಅಷ್ಟೇ ಅಲ್ಲ ಈ ಮೊದಲು ನಟಿ ನೇಹಾ ಗೌಡ ಅವರು ತಮಿಳು ತೆಲುಗು ಭಾಷೆಗಳಲ್ಲಿಯೂ ಕೂಡ ಕಿರುತೆರೆಯಲ್ಲಿ ಅಭಿನಯ ಮಾಡಿದ್ದಾರೆ.

ಹೌದು ತೆಲುಗು ಭಾಷೆಯಲ್ಲಿ ನಟಿ ನೇಹಾ ಗೌಡ ಅವರು ಸ್ವಾತಿ ಚಿನುಕುಲು ಎಂಬ ಧಾರಾವಾಹಿಯಲ್ಲಿ ಅಭಿನಯ ಮಾಡಿದ್ದಾರೆ ಹಾಗೂ ತಮಿಳು ಭಾಷೆಯಲ್ಲಿ ಕಿರುತೆರೆಯಲ್ಲಿ ಪಾಪಂ ಗಣೇಶನ್ ಕಲ್ಯಾಣ ಪರಿಸು ಕಲ್ಯಾಣ ಪರಿಸು 2 ಎಂಬ ಧಾರಾವಾಹಿಗಳಲ್ಲಿ ಅಭಿನಯ ಮಾಡಿ ಬಹಳ ಫೇಮಸ್ ಆಗಿದ್ದಾರೆ ನಟಿ ನೇಹಾ ಗೌಡ. ಕನ್ನಡ ಕಿರುತೆರೆಯಲ್ಲಿ ನಟಿ ನೇಹಾ ಗೌಡ ಅವರು ಲಕ್ಷ್ಮಿ ಬಾರಮ್ಮ ಧಾರಾವಾಹಿಯ ನಂತರ ಡಾನ್ಸ್ ಶೋ ವೊಂದರಲ್ಲಿ ಕಾಣಿಸಿಕೊಂಡು ಇನ್ನಷ್ಟು ಫೇಮಸ್ ಆಗಿದ್ದರು ಹಾಗೂ ಬಿಗ್ ಬಾಸ್ ಸೀಸನ್ 3ರಲ್ಲಿ ಕೂಡ ಭಾಗವಹಿಸಿ ಇನ್ನಷ್ಟು ಪ್ರಸಿದ್ಧ ಗೊಂಡಿದ್ದರೂ ನಟಿ ನೇಹಾ ಗೌಡ ಅವರು.

ನಟಿ ನೇಹಾ ಗೌಡ ಅವರು ಕಾರ್ಮೆಲ್ ಹೈಸ್ಕೂಲ್ ಅಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿದ ನೇಹ ನಂತರ ತಮ್ಮ ಪದವಿ ಅನ್ನೂ ಸೂರಣ ಕಾಲೇಜ್ ನಲ್ಲಿ ಮುಗಿಸಿದ್ದರು ತಮ್ಮ ಬಾಲ್ಯ ಸ್ನೇಹಿತನಾಗಿರುವ ಚಂದನ್ ಗೌಡ ಅವರನ್ನ ಪ್ರೀತಿಸಿ ಮದುವೆಯಾಗಿರುವ ನಟಿ ನೇಹಾ ಗೌಡ ಅವರು ಇದೀಗ ಕಲರ್ಸ್ ಸೂಪರ್ ನಲ್ಲಿ ಮೂಡಿ ಬರುತ್ತ ಇರುವ ರಾಜ ರಾಣಿ ಶೋ ಅಲ್ಲಿ ಭಾಗವಹಿಸಿದ್ದಾರೆ.

ತಮ್ಮ ಗಂಡನೊಂದಿಗೆ ಮೊದಲ ಬಾರಿಗೆ ಶೋನಲ್ಲಿ ಕಾಣಿಸಿಕೊಂಡಿರುವ ನಟಿ ನೇಹಾ ಗೌಡ ಅವರು ಉತ್ತಮವಾಗಿ ಆಟವಾಡುತ್ತಾ ಮಸ್ತಿ ಅನ್ನೋ ಕೂಡ ಮಾಡುತ್ತಾ ಇದ್ದಾರೆ ಇವರಿಗೆ ಮುಂದಿನ ದಿವಸಗಳಲ್ಲಿ ಒಳ್ಳೆ ಅವಕಾಶಗಳು ಒದಗಿ ಬರಲಿ ಎಂದು ಕೇಳಿಕೊಳ್ಳೋಣ, ಹಾಗೂ ನಟಿ ನೇಹಾ ಗೌಡ ಅವರ ಸಹೋದರಿಯಾಗಿರುವ ಸೋನು ಗೌಡ ಅವರು ಸಿನಿಮಾ ರಂಗದಲ್ಲಿ ಬಹಳ ಫೇಮಸ್ ನಟಿಯಾಗಿದ್ದಾರೆ.

ಕಿರುತೆರೆಯಲ್ಲಿ ಫೇಮಸ್ ನಟಿ ಆಗಿರುವ ನಟಿ ನೇಹಾ ಗೌಡ ಅವರ ಅಭಿನಯಕ್ಕೆ ಫಿದಾ ಆಗಿರುವ ಅಭಿಮಾನಿಗಳು ಒಬ್ಬರು ನಟಿ ನೇಹಾ ಗೌಡ ಅವರ ಚಿತ್ರವನ್ನು ಬಿಡಿಸಿ ಆ ಪೇಂಟಿಂಗ್ ಅನ್ನು ನೇಹ ಗೌಡ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

WhatsApp Channel Join Now
Telegram Channel Join Now