ಪಾಪ ನಾಯಿ ಮರೀನಾ ಕಾಪಾಡೋಕೆ ಈ ಕೋತಿ ಮಾಡಿದ್ದೂ ಏನು ಗೊತ್ತ .. ಇದನ್ನ ತಿಳಿದ ನೆಟ್ಟಿಗರು ಕಂಗಾಲು

78

ಕೋತಿ ಮಾಡಿದ ಈ ಕೆಲಸ ಇದೀಗ ದೇಶದೆಲ್ಲೆಡೆ ವೈರಲ್ ಆಗುತ್ತಿದೆ ಹೌದು ಆಂಧ್ರಪ್ರದೇಶದಲ್ಲಿ ಈ ಒಂದು ಘಟನೆ ನಡೆದಿದ್ದು ಇದೊಂದು ದೃಶ್ಯವನ್ನು ನೋಡಲು ಜನರು ಬರುತ್ತಿದ್ದಾರೆ ಹಾಗೆ ಅಲ್ಲಿ ನಡೆಯುತ್ತಿರುವುದಾದರೂ ಏನು ಅಂದರೆ ಕೋತಿ ಒಂದು ನಾಯಿ ಮರಿಯನ್ನು ರಕ್ಷಿಸುತ್ತಾ ತನ್ನ ಮಗುವೇ ಎಂಬ ಭಾವನೆಯಿಂದ ಅದನ್ನು ನೋಡಿಕೊಳ್ಳುತ್ತಿದೆ ಹೌದು ಸಾಮಾನ್ಯವಾಗಿ ನಾಯಿಗಳಿಗೂ ಕೋತಿಗಳಿಗೂ ಆಗುವುದಿಲ್ಲ ಆದರೆ ಇಲ್ಲಿ ನಡೆಯುತ್ತಿರುವ ಈ ಒಂದು ಘಟನೆ ನಿಜಕ್ಕೂ ಅಚ್ಚರಿಯಾಗುವಂತೆ ಆಗಿದೆ.

ಈ ಕೋತಿ ತನ್ನ ಮರಿಯನ್ನು ಹೇಗೆ ನೋಡಿಕೊಳ್ಳುತ್ತದೆ ಅದೇ ರೀತಿಯಲ್ಲಿ ನಾಯಿಮರಿಯನ್ನು ನೋಡಿಕೊಳ್ಳುತ್ತಿದೆ ನಾಯಿಗೆ ಆಹಾರವನ್ನು ತಂದುಕೊಡುತ್ತದೆ ತಾನು ತಿನ್ನುವ ಮೊದಲು ನಾಯಿಗೆ ಉಳಿಸುತ್ತದೆ ಈ ರೀತಿ ಅಮ್ಮನು ಹೇಗೆ ಮಗುವನ್ನು ನೋಡಿಕೊಳ್ಳುತ್ತದೆ .ಹಾಗೆ ನೋಡಿಕೊಳ್ಳುತ್ತಿರುವ ಈ ಕೋತಿ ಮರಿಯ ಇದೊಂದು ನೋಡುವುದಕ್ಕೆ ನಿಜಕ್ಕೂ ಅಚ್ಚರಿಯನ್ನು ಉಂಟು ಮಾಡುವ ಸಂಗತಿಯಾಗಿದೆ ಹಾಗಾದರೆ ಮಾಹಿತಿಯನ್ನು ಕುರಿತು ಇನ್ನು ಹೆಚ್ಚಿನ ವಿಚಾರಗಳನ್ನು ತಿಳಿಯೋಣ ಇಂದಿನ ಮಾಹಿತಿಯನ್ನು ತಪ್ಪದೇ ಸಂಪೂರ್ಣವಾಗಿ ತಿಳಿಯಿರಿ.

ಅಷ್ಟಕ್ಕೂ ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವಂತಹ ಒಂದು ಕೋತಿ ಮತ್ತು ನಾಯಿ ಮರಿಯ ಮಮತೆಯ ಘಟನೆ ನೋಡಿದರೆ ಕೋತಿ ಆ ನಾಯಿ ಮರಿಯನ್ನು ದತ್ತು ಪಡೆದಿದೆ ಏನೋ ಅನ್ನೋ ಅಷ್ಟು ಆಳವಾಗಿದೆ ಈ ಎರಡು ಜೀವಿಗಳ ನಡುವಿನ ಪ್ರೀತಿ. ಹಾಗಾದರೆ ಅಲ್ಲಿಯ ಜನರು ಈ ಒಂದು ಕೋತಿ ಮತ್ತು ನಾಯಿ ,ಮರಿಯ ಮಮತೆಗೆ ಹೇಳುವ ಕಾರಣವೇನು ಅಂತ ಹೇಳುವುದಾದರೆ ಒಮ್ಮೆ ನಾಯಿಯ ಒಂದು ಕಾರಿನ ಚಕ್ರಕ್ಕೆ ಸಿಲುಕಿ ಹಾಕಿಕೊಂಡು ಸತ್ತು ಹೋಗಿತ್ತು ಇದನ್ನು ಕಂಡ ಆ ನಾಯಿಯ ಮರಿ ಆಕ್ರಂದನದಿಂದ ಕಿರುಚಾಡಿದ್ದು ಈ ಎಲ್ಲಾ ಘಟನೆಯನ್ನು ವೀಕ್ಷಿಸುತ್ತಾ ಕುಳಿತಿತ್ತು ಒಂದು ಮಂಗ.

ಆ ನಾಯಿ ಮರಿಯ ವೇದನೆಯನ್ನು ನೋಡುವುದಕ್ಕೆ ಆಗದೆ ನಾಯಿ ಮರಿಯನ್ನು ಎತ್ತುಕೊಂಡು ಹೋಯಿತು ಅಂತ ಮಂಗ ನಂತರದಿಂದ ತಾನು ಏನನ್ನೇ ತಿನ್ನುವ ಮೊದಲು ಅಥವಾ ಅದಕ್ಕೆ ಏನೇ ತಿನ್ನಲು ಸಿಕ್ಕರೂ ಮೊದಲು ನಾಯಿ ಮರಿಗೆ ತಿನ್ನಿಸಿ ನಂತರ ಮಂಗ ತಿನ್ನುತ್ತ ಇತ್ತಂತೆ ಈ ರೀತಿಯಾಗಿ ಅಂದಿನಿಂದಲೂ ತನ್ನ ಮಗುವೆಂದು ಜೋಪಾನ ಮಾಡಿಕೊಂಡು ಬಂದಿದೆ ಆ ಕೋತಿ ನಾಯಿ ಮರಿಯನ್ನು.

ಭಾವನೆಗಳು ಪ್ರೀತಿ ವಿಶ್ವಾಸ ಎಂಬುದೆಲ್ಲ ಕೇವಲ ಮನುಷ್ಯರಲ್ಲಿ ಮಾತ್ರವಲ್ಲ ಮನುಷ್ಯರಿಗಿಂತ ಹೆಚ್ಚಾಗಿ ನಾವು ಪ್ರಾಣಿಗಳಲ್ಲಿಯೇ ನೋಡಬಹುದು ಅನ್ನುವುದಕ್ಕೆ ಹೀಗೊಂದು ಘಟನೆ ನಿದರ್ಶನವಾಗಿದೆ ಎಂದರೆ ತಪ್ಪಾಗಲ್ಲ ಏನಂತೀರಾ ಫ್ರೆಂಡ್ಸ್. ಸಾಮಾನ್ಯವಾಗಿ ನಾವು ಬೀದಿಯಲ್ಲಿ ಕೋತಿಗಳನ್ನು ನಾಯಿಗಳನ್ನು ಕಂಡರೆ ಇಬ್ಬರು ಕಾಡುತ್ತಿರುತ್ತಾರೆ ಆದರೆ ಈ ಒಂದು ಘಟನೆಯಿಂದ ಮಾತ್ರ ನಾವು ತಿಳಿದುಕೊಳ್ಳಬಹುದು ಕಷ್ಟದಲ್ಲಿದ್ದಾಗ ಪ್ರಾಣಿಗಳು ಕೂಡ ಬೇರೆ ಪ್ರಾಣಿಗಳಿಗೆ ಸಹಾಯ ಮಾಡುತ್ತದೆ ಎಂಬುದನ್ನು.

ಇನ್ನು ಈ ಪ್ರಾಣಿಗಳಿಂದ ಮನುಷ್ಯ ಪ್ರಾಣಿ ಕೂಡ ಒಂದು ನೀತಿ ಪಾಠವನ್ನು ಕಲಿತುಕೊಳ್ಳಬಹುದು ಅದೇನೆಂದರೆ ಸ್ವಾರ್ಥ ಬದುಕು ಯಾವತ್ತಿಗೂ ಶಾಶ್ವತವಲ್ಲ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಇದ್ದರೆ ಸಹಬಾಳ್ವೆಯಿಂದ ಇದ್ದರೆ ಅದೇ ನಿಜವಾದ ಜೀವನ ನಡೆಸುವ ಶೈಲಿ ಎಂಬುದನ್ನು ಈ ಎರಡು ಜೀವಿಗಳು ಸಮಾಜಕ್ಕೆ ತಿಳಿಸಿ ಹೇಳುತ್ತಿದೆ.ಹಾಗಾದರೆ ಈ ಮಾಹಿತಿಯನ್ನು ತಿಳಿದ ನಂತರ ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ, ಈ ಮಾಹಿತಿಯನ್ನು ಬೇರೆಯವರಿಗೂ ಕೂಡ ತಪ್ಪದೇ ಶೇರ್ ಮಾಡಿ ಶುಭ ದಿನ ಧನ್ಯವಾದ.

WhatsApp Channel Join Now
Telegram Channel Join Now