ಪಾಪ ರೋಡಿನಲ್ಲಿ ಹೋಗುತ್ತಿರೋ ಮಹಿಳೆಯ ಮಾಂಗಲ್ಯವನ್ನ ಎಗರಿಸಿದ ಕಳ್ರು , ಆದ್ರೆ ಆ ಹೆಂಗಸು ಸ್ಪೀಡಾಗಿ ಹೋಗಿ ಏನು ಮಾಡಿದ್ದಾಳೆ ನೋಡಿ… ಇಡೀ ದೇಶಾನೇ ಎದ್ದು ಚಪ್ಪಾಳೆ ಹೊಡಿಬೇಕು

74

ಸೌಮ್ಯ ಎಂಬ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಾ ಇದ್ದ ಈ ಮಹಿಳೆಯ ಜೀವನದಲ್ಲಿ ನಡೆದ ಘಟನೆ ನೋಡಿ ಈ ಘಟನೆ ನಡೆದಿರುವುದು ಕೇರಳದ ಕೊಲ್ಲಂ ಜಿಲ್ಲೆಯಲ್ಲಿ. ಹೌದು ಹೆಣ್ಣು ಮಕ್ಕಳು ಸಾಮಾನ್ಯವಾಗಿ ಸಮಾಜದಲ್ಲಿ ತಲೆಎತ್ತಿ ನಡೆಯಬೇಕೆಂದರೆ ಅವರಿಗೆ ಧೈರ್ಯ ಹೊಂದಿದ್ದರೆ ಸಾಲದು ಚಾತುರ್ಯತೆ ಕೂಡ ಇರಬೇಕು ಈ ಸಮಾಜದಲ್ಲಿ ಹೆಣ್ಣು ಮಕ್ಕಳ ಕಾಲೆಳೆಯಲು ಅನೇಕ ಜನರು ಕಾಯುತ್ತಾ ಇರುತ್ತಾರೆ ಯಾವ ವಿಚಾರ ಸಿಗುತ್ತದೆ ಅಥವಾ ಅವರಿಗೆ ಹೇಗೆ ಮೋಸ ಮಾಡುವುದು ಎಂದು ಆಲೋಚನೆ ಮಾಡುವ ಮಂದಿ ಅವರ ಅಕ್ಕಪಕ್ಕದಲ್ಲಿಯೇ ಇರುತ್ತಾರೆ. ಇನ್ನು ಕೆಲಸಕ್ಕೆ ಹೋಗುವ ಮಹಿಳೆಯರನ್ನು ಕಂಡರೆ ಈ ಸಮಾಜ ಬೇರೆ ರೀತಿಯಲ್ಲಿ ಕಾಣುತ್ತದೆ. ಆದರೆ ಅದೆಲ್ಲವನ್ನು ಮೆಟ್ಟಿನಿಂತು ಹೆಣ್ಣುಮಕ್ಕಳು ಇವತ್ತಿನ ದಿವಸ ಪ್ರತಿ ಕ್ಷೇತ್ರದಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.

ಇನ್ನೂ ಸೌಮ್ಯ ಅವರು ಕೂಡ ಪ್ರತಿದಿವಸ ಕೆಲಸಕ್ಕೆ ಹೋಗುತ್ತಾ ಇದ್ದರು ಹೌದು 28ನೇ ವರ್ಷದ ಸೌಮ್ಯಾ ಅವರಿಗೆ ಮದುವೆಯಾಗಿತ್ತು ಗಂಡ ಟೈಲರಿಂಗ್ ಕೆಲಸ ಮಾಡುತ್ತಾ ಇದ್ದ ಕಾರಣ ಸಂಸಾರ ನಡೆಸಲು ಈ ಹಣ ಸಾಕಾಗುವುದಿಲ್ಲ ಎಂದು ಸೇಲ್ಸ್ ಎಕ್ಸಿಕ್ಯುಟಿವ್ ಆಗಿ ಕೆಲಸಕ್ಕೆ ಹೋಗ್ತಾ ಇದ್ದ ಸೌಮ್ಯ ಅವರಿಗೆ ಇಬ್ಬರು ಮಕ್ಕಳು ಕೂಡ ಇದ್ದರು. ಕೆಲಸಕ್ಕೆ ದೂರದ ಸ್ಥಳಕ್ಕೆ ಹೋಗಬೇಕೆಂದು ಪ್ರತಿದಿವಸ ಸ್ಕೂಟಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಸೌಮ್ಯ ಅವರಿಗೆ ಒಮ್ಮೆ ಕೆಲಸ ಮುಗಿಸಿಕೊಂಡು ಬರುವಾಗ ಶಾಕ್ ಕಾದಿತ್ತು ಹೌದು ಈ ಮೊದಲೇ ಹೇಳಿದಂತೆ ಹೆಣ್ಣುಮಕ್ಕಳಿಗೆ ಬೇಗ ಮೋಸ ಮಾಡಿ ಬಿಡಬಹುದು ಅಂತ ಕೆಲವರು ಅಂದುಕೊಂಡಿರುತ್ತಾರೆ ಆದರೆ ಕೆಲ ಹೆಣ್ಣುಮಕ್ಕಳು ನಮಗೆ ಮೋಸ ಮಾಡಲು ಬಂದರೆ ಅವರಿಗೆ ಯಾವ ಕಥೆ ಮುಂದೆ ಆಗುತ್ತದೆ ಎಂದು ತೋರಿಸಿಕೊಟ್ಟಿದ್ದಾರೆ ನೋಡಿ ಸೌಮ್ಯ.

ಹೌದು ಕೆಲಸದಿಂದ ಸೌಮ್ಯ ಅವರು ಬರುವಾಗ ತಮಗೆ ವಿರುದ್ಧವಾಗಿ ಬಂದ ಒಬ್ಬ ಬೈಕ್ ಸವಾರ ಹಾಗೂ ಅವನ ಹಿಂದೆಯೇ ಕುಳಿತವ ಸೌಮ್ಯ ಅವರಿಗೆ ಏನು ಮಾಡಿದರು ಗೊತ್ತಾ ಸೌಮ್ಯಾ ಅವರ ಕತ್ತಿನಲ್ಲಿರುವ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗುತ್ತಾರೆ ಆ ಬೈಕ್ ಸವಾರರು. ತಕ್ಷಣವೇ ಸೌಮ್ಯ ಅವರಿಗೆ ಈ ವಿಚಾರ ಶಾಕ್ ನೀಡುತ್ತದೆ ಆದರೆ ಅವರು ಅಲ್ಲಿಯೇ ಕುಳಿತು ಗಾಬರಿಯಾಗದೆ ಕಳ್ಳ ಕಳ್ಳ ಅಂತ ಕೂಗುತ್ತಾ ಆ ಬೈಕ್ ಸವಾರನನ್ನು ಚೇಸ್ ಮಾಡುತ್ತಾರೆ ಮತ್ತು ಹೋಗುವಾಗಲೇ ಕಳ್ಳ ಕಳ್ಳ ಎಂದು ಕಿರುಚುತ್ತಲೇ ಹೋದ ಅವರು ಬೈಕ್ ಸವಾರರನ್ನು ಸುಮಾರು 4ಕಿಲೋ ಮೀಟರ್ ದೂರದವರೆಗೂ ಚೇಸ್ ಮಾಡಿ ಅವರನ್ನ ಹಿಡಿಯುತ್ತಾರೆ.

ಹೌದು ಸೌಮ್ಯ ಅವರು ಕಳ್ಳ ಕಳ್ಳ ಎಂದು ಬೈಕ್ ಚೇಸ್ ಮಾಡುವಾಗ ಅಲ್ಲಿಯ ಜನರು ಆ ಬೈಕ್ ಅನ್ನು ತಡೆಯಲು ಪ್ರಯತ್ನಿಸುತ್ತಾರೆ ಅದರಂತೆ ಕೆಲ ಜನರು ಆ ಬೈಕನ್ನು ಅಡ್ಡ ಹಾಕುತ್ತಾರೆ. ನಂತರ ಆ ಬೈಕ್ ಸವಾರರನ್ನು ಚೆನ್ನಾಗಿ ಹೊಡೆದ ಜನರು ಅವರ ಬಳಿ ಇದ್ದ ಸರವನ್ನು ಕಿತ್ತುಕೊಂಡು ಸೌಮ್ಯಾಗೆ ನೀಡುತ್ತಾರೆ. ಆ ಕಳ್ಳರಿಗೆ ಸರಿಯಾದ ಶಾಸ್ತಿ ಮಾಡಿದ ಜನರು ಸೌಮ್ಯ ಅವರಿಗೆ ಈ ಧೈರ್ಯ ಎಲ್ಲಿಂದ ಬಂತು ಎಂದು ಕೇಳುತ್ತಾರೆ ನಿಜಕ್ಕೂ ನೀವು ಈ ರೀತಿ ಮಾಡಿದ್ದು ಒಳ್ಳೆಯದಾಯಿತು ಇಲ್ಲವಾದಲ್ಲಿ ನಿಮ್ಮ ಮಾಗಲ್ಯಸರ ನಿಮಗೆ ಸಿಗುತ್ತಾ ಇರಲಿಲ್ಲ.

ಹಾಗೆ ಇಂತಹ ಕಳ್ಳರನ್ನ ಹಾಗೇ ಬಿಟ್ಟಿದ್ದರೆ ಮುಂದಿನ ದಿವಸಗಳಲ್ಲಿ ಇಲ್ಲಿಯ ಜನರಿಗೆ ಇದೇ ರೀತಿ ಮೋಸ ಮಾಡುತ್ತಾ ಚೈನ್ ಕಳ್ಳತನ ಮಾಡುತ್ತಾ ಇದ್ದರು ನಿಮಗೆಲ್ಲಿಂದ ಬಂತು ಎಂದಾಗ, ಆ ಜನರ ಪ್ರಶ್ನೆಗೆ ಸೌಮ್ಯ ಅವರು ಇರಿದು ಉತ್ತರಿಸುತ್ತಾ ಹೌದು ಸಾಮಾನ್ಯವಾಗಿ ಭಾರತ ದೇಶದ ಹೆಣ್ಣುಮಕ್ಕಳಿಗೆ ತಾಳಿ ಮೇಲೆ ಬಹಳ ಗೌರವವಿರುತ್ತದೆ ಆ ತಾಳಿಯನ್ನು ಯಾರದರು ಕಸಿದುಕೊಂಡಾಗ ಸುಮ್ಮನಿರಲು ಸಾಧ್ಯಾನಾ ಹೇಳಿ ಎಂದು ಉತ್ತರಿಸುತ್ತಾಳೆ ಏನೋ ಇದೇ ರೀತಿ ಸೌಮ್ಯ ಅವರು ಮಾಡಿದ ಹಾಗೆ ಪ್ರತಿಯೊಬ್ಬ ಹೆಣ್ಣುಮಕ್ಕಳು ಕೂಡ ಸಮಾಜದಲ್ಲಿ ಧೈರ್ಯವಾಗಿದ್ದರೆ ಇಂತಹ ಕಳ್ಳತನಗಳು ಸುಲಿಗೆ ಮೋಸ ಆಗುವುದು ಇವೆಲ್ಲವೂ ಕೂಡ ಸಮಾಜದಿಂದ ದೂರವಾಗುತ್ತದೆ ಏನಂತೀರ ಧನ್ಯವಾದ.

WhatsApp Channel Join Now
Telegram Channel Join Now