WhatsApp Logo

ವಾರದಲ್ಲಿ ಒಂದು ಬಾರಿಯಾದರೂ ಈ ರೀತಿಯಾಗಿ ಜಪಮಾಲೆಯನ್ನ ಹಿಡಿದು ದೇವರ ಪ್ರಾರ್ಥನೆ ಮಾಡಿದರೆ ಜೀವನದಲ್ಲಿ ಯಾವುದೇ ಕಷ್ಟಗಳು ಅವಘಡಗಳು ಉಂಟಾಗುವುದಿಲ್ಲ… ಅಷ್ಟಕ್ಕೂ ಅದನ್ನ ಮಾಡೋದು ಹೇಗೆ ನೋಡಿ…

By Sanjay Kumar

Updated on:

ನಮಸ್ಕಾರಗಳು ಓದುಗರೇ ನೀವು ಜಪಮಣಿಯನ್ನು ಬಳಸಿ ಮಂತ್ರ ಪಠನೆ ಮಾಡುತ್ತಿದ್ದೀರಾ ಇದೊಂದು ಉತ್ತಮ ಅಭ್ಯಾಸವಾಗಿದೆ. ಮಾನಸಿಕವಾಗಿ ದೈಹಿಕವಾಗಿಯು ಸಹ ಉತ್ತಮ ಪ್ರಯೋಜನವನ್ನು ಪಡೆದುಕೊಳ್ಳಲು ಜಪಮಣಿ ಹಿಡಿದು ಮಂತ್ರ ಪಠನೆ ಮಾಡುವುದು ಉತ್ತಮವಾಗಿದೆ ಎಂದು ಹೇಳುತ್ತಾರೆ ತಜ್ಞರು ಗಳು ಸಹ. ಹೀಗಿರುವಾಗ ಜಪಮಣಿ ಹಿಡಿದು ನೀವು ಇಂತಹ ತಪ್ಪುಗಳನ್ನು ಮಾಡುತ್ತಿದ್ದಲ್ಲಿ ಇದರ ದೋಷವನ್ನು ನೀವು ಮುಂದೆ ಎದುರಿಸಲೇ ಬೇಕಾಗುತ್ತದೆ ಹಾಗಾಗಿ ಜಪಮಣಿ ಹಿಡಿದು ಮಂತ್ರ ಪಠಣೆ ಮಾಡುವಾಗ ನೀವು ಪಾಲಿಸಲೇಬೇಕಾದ ಕೆಲವೊಂದು ನಿಯಮಗಳಿವೆ ಇದನ್ನ ನೀವು ತಿಳಿದು ಪಾಲಿಸುತ್ತ ಬಂದದ್ದೇ ಆದಲ್ಲಿ ನಿಮಗೆ ಇನ್ನಷ್ಟು ಉತ್ತಮ ಪ್ರಯೋಜನ ಲಭಿಸಿ ಜೀವನದಲ್ಲಿ ಉತ್ತಮ ಹಾಗೆ ಇನ್ನಷ್ಟು ಉತ್ತಮ ಪ್ರಯೋಜನಗಳನ್ನು ಕೂಡ ಈ ಅಭ್ಯಾಸದಿಂದ ನೀವು ಪಡೆದುಕೊಳ್ಳಬಹುದು.

ಸಾಮಾನ್ಯವಾಗಿ ಜಪಮಣಿ ಅಂದಾಗ 108 ಮಣಿಗಳು ಇರಲೇಬೇಕು ಜಪಮಣಿ ಅಲ್ಲಿ ಇಷ್ಟು ಮಣಿ ಇರುವುದು ಕಡ್ಡಾಯ… ಇದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ ಆದರೆ ಇಲ್ಲಿ ನೀವು ತಿಳಿಯಬೇಕಾದ ಮುಖ್ಯ ಮಾಹಿತಿ ಏನೆಂದರೆ ಜಪಮಣಿ ತರುವಾಗ ಅದರಲ್ಲಿ 108ಮನೆಗಳ ಜೊತೆಗೆ 108ಗಂಟುಗಳು ಕೂಡ ಇರಬೇಕು ಆಗ ನಿಮಗೆ ಜಪ ಮಾಡುವಾಗ ಯಾವ ಗೊಂದಲಗಳು ಸಹ ಎದುರಾಗುವುದಿಲ್ಲ ಇದರಿಂದ ನೀವು ಪ್ರತೀ ಬಾರಿ ಜಪಿಸಿದಾಗಲು ನೂರ ಎಂಟು ಮಂತ್ರಗಳನ್ನ ಸರಿಯಾಗಿ ಜಪಿಸುತ್ತೀರಾ, ಇಲ್ಲವಾದಲ್ಲಿ ಮಂತ್ರ ಪಠಣೆಯಲ್ಲಿ ದೋಷ ಉಂಟಾಗುತ್ತದೆ ಇದರ ಪ್ರಭಾವವನ್ನು ನೀವೇ ಮುಂದೆ ಎದುರಿಸಬೇಕಾಗುತ್ತೆ.

ಪ್ರಿಯ ಓದುಗರೇ ಇನ್ನು ಜಪ ಮಾಡಬೇಕು ಅಂದಾಗ ಅದು ಆ ಪ್ರದೇಶ ಪ್ರಶಾಂತವಾಗಿರಬೇಕು ಶಾಂತ ವಾತಾವರಣದಲ್ಲಿ ಇರುವ ಪ್ರದೇಶದಲ್ಲಿ ಜಪ ಮಾಡುವುದು ಉತ್ತಮ ಅಲ್ಲಿ ನಿಮಗೆ ಯಾವ ಅಡೆತಡೆಗಳೂ ಉಂಟಾಗುವುದಿಲ್ಲ ಹೌದು ನಾವು ಉಚ್ಚರಿಸುವ ಮಂತ್ರದಿಂದ ನಾವು ಕುಳಿತಿರುವ ಪ್ರದೇಶ ಸಕಾರಾತ್ಮಕವಾಗಿ ಇರುತ್ತದೆ ಧನಾತ್ಮಕವಾಗಿ ಕೂಡಿರುತ್ತದೆ ಆದ್ದರಿಂದ ಪ್ರಶಾಂತ ಜಾಗದಲ್ಲಿ ಕುಳಿತು ಜಪ ಮಾಡಿ ಖಾತೆ ನೀವು ಪ್ರತಿದಿನ ಒಂದೇ ಸ್ಥಳದಲ್ಲಿ ಕುಳಿತು ಜಪ ಮಾಡುವುದು ಜಪಮಣಿ ಎಣಿಸುವುದು ಮಂತ್ರ ಪಠಣೆ ಮಾಡುವುದು ಉತ್ತಮ.

ಹೌದು ಜಪ ಭಜನೆ ಮಾಡುವಾಗ ನೀವು ಯಾವ ದೇವರ ಕುರಿತು ಮಂತ್ರಪಠಣೆ ಮಾಡುತ್ತೆ ಇದ್ದೀರಾ ಎಂಬುದನ್ನು ಮೊದಲು ತಿಳಿದು ಆ ದೇವರಿಗೆ ಇಷ್ಟವಾದ ಪುಷ್ಪವನ್ನು ಸಮರ್ಪಣೆ ಮಾಡಿ ಬಳಿಕ ದೇವರ ಜಪವನ್ನು ಶುರು ಮಾಡಬೇಕೋ ಹಾಗೆ ಮತ್ತೊಂದು ವಿಚಾರವನ್ನು ತಿಳಿದಿರಬೇಕು ಬೆಳಿಗ್ಗೆ ಎದ್ದ ಕೂಡಲೆ ಹಾಕಿ ಕುಳಿತು ಜಪ ಮಾಡುವುದು ಉತ್ತಮವಲ್ಲ. ಜಪ ಮಾಡುವ ಮುನ್ನ ಮನುಷ್ಯತನ ನಿತ್ಯ ಕರ್ಮಗಳನ್ನ ಮುಗಿಸಿ ಸ್ನಾನಾದಿಗಳನ್ನು ಮುಗಿಸಿ ಬಳಿಕ ಮಂತ್ರ ಪಠಣೆಗೆ ಕೂರುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಹೌದು ಸಾಮಾನ್ಯವಾಗಿ ಎಲ್ಲರೂ ಸ್ನಾನಾದಿಗಳನ್ನು ಮುಗಿಸಿ ಮಂತ್ರ ಪಠಣೆ ಮಾಡಲು ಕೂರುತ್ತಾರೆ ಆದರೆ ಕೆಲವರು ಕೇವಲ ಕೈಕಾಲು ಮುಖವನ್ನು ತೊಳೆದು ಮಂತ್ರ ಪಠಣೆಗೆ ಕೂರುತ್ತಾರೆ.

ಸ್ನಾನಾದಿಗಳನ್ನು ಮುಗಿಸಿ ಯೇ ಮಂತ್ರ ಪಠಣೆಗೆ ಕೂರಬೇಕು ಎಂಬುವ ನಿಯಮ ಯಾಕಿದೆ ಅಂದರೆ, ಸ್ನಾನ ಮಾಡಿದಾಗ ನಮ್ಮಲ್ಲಿರುವ ಕೆಟ್ಟ ಕೊಳೆ ಹೇಗೆ ನಮ್ಮನ ಬಿಟ್ಟು ಹೋಗುತ್ತದೆ ಹಾಗೆ ನಮ್ಮಲ್ಲಿ ಸಕಾರಾತ್ಮಕ ಚಿಂತನೆಗಳು ಮೂಡುತ್ತವೆ ಸ್ನಾನ ಮಾಡಿದ ಸಮಯದಲ್ಲಿ. ಆದ್ದರಿಂದ ನಾವು ಸಕಾರಾತ್ಮಕವಾಗಿ ಮಂತ್ರ ಪಠಣೆ ಗೆ ಎಂದು ಕುಳಿತಾಗ ನಮ್ಮಲ್ಲಿ ಧನಾತ್ಮಕ ಚಿಂತನೆಗಳ ಜೊತೆಗೆ ಸಕಾರಾತ್ಮಕ ಚಿಂತನೆಗಳು ಹೆಚ್ಚುತ್ತದೆ. ಆದ್ದರಿಂದ ಯಾವ ಒಳ್ಳೆಯ ಕೆಲಸ ಮಾಡುವ ಮುನ್ನ ಸಕಾರಾತ್ಮಕರಾಗಿ ಇರಿ ಅದಕ್ಕಾಗಿ ಸ್ನಾನಾದಿಗಳನ್ನು ಮುಗಿಸಿ ನಿಮ್ಮ ದಿನವನ್ನು ಶುರು ಮಾಡಿ ಎಲ್ಲವೂ ಒಳ್ಳೆಯದಾಗಿಯೇ ಇರುತ್ತದೆ. ಮಂತ್ರ ಪಠಣೆ ಮಾಡುವ ಅಭ್ಯಾಸ ನಿಮಗಿಲ್ಲ ಅಂದ ಕೂಡಲೆ ಜಪಮಣಿಯಿಂದ ಮಂತ್ರಪಠಣ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ ಇದು ನಿಮ್ಮ ಜೀವನಕ್ಕೆ ಉತ್ತಮ ನಿಮ್ಮ ಮನಶ್ಶಾಂತಿ ಗೂ ಉತ್ತಮವಾಗಿರುತ್ತದೆ ಸ್ಟ್ರೆಸ್ ನಿಂದ ಬಳಲುವವರಿಗೆ ಇದೊಂದು ಉತ್ತಮ ಪರಿಹಾರವಾಗಿದೆ ಮನಸ್ಸನ್ನ ಶಾಂತರೂಪದಲ್ಲಿ ಇರಿಸಿಕೊಳ್ಳಲಿಕ್ಕೆ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment