WhatsApp Logo

ವಿಮಾನಂದದಿಂದ ಹೊರಗೆ ಹಾರಿದ ಪೈಲೆಟ್ .. ವಿಮಾನದಲ್ಲಿ ಏನಾಯಿತು ಗೊತ್ತ ನೈಜ ಘಟನೆ … ಮೈ ಜುಮ್ಮ್ ಅನ್ಸುತ್ತೆ ಕಣ್ರೀ

By Sanjay Kumar

Updated on:

ನಾವೆಂದೂ ಹೇಳಲು ಹೊರಟಿರುವ ಮಾಹಿತಿ ಸತ್ಯ ಘಟನೆಯಾಗಿ ತೋಟಿ ಒಂದು ಘಟನೆಯ ಸಂಪೂರ್ಣ ಮಾಹಿತಿಯನ್ನು ನಾವೆಂದೂ ತಿಳಿದುಕೊಳ್ಳೋಣ ಮತ್ತು ಇದನ್ನು ಕೇಳಿದ ನಂತರ ನಿಮಗೂ ಕೂಡ ಮೈನವಿರೇಳುವುದು ಖಂಡಿತ .ಜೂನ್ ೧೯೯೦ ೧೫ನೇ ತಾರೀಖಿನಂದು ಬ್ರಿಟಿಷ್ ಏರ್ ಲೈನ್ಸ್ ಪ್ಲೇನ್ ಇಂಗ್ಲೆಂಡಿನಿಂದ ಸ್ಪೇನ್ ಗೆ ಹಾರಾಟ ಮಾಡ ಬೇಕಾದಂತಹ ಸಮಯ ಅದು , ಆ ಪ್ಲೇನ್ ನಲ್ಲಿ ನಾಲ್ಕು ಕ್ಯಾಬಿನ್ ಸಿಬ್ಬಂದಿ ಎರಡು ಪೈಲೆಟ್ ಮತ್ತು ಎಂಬತ್ತೊಂದು ಪ್ಯಾಸೆಂಜರ್ ಹೊಂದಿದ್ದಂತಹ ಪ್ಲೇನ್ ಆಗಿತ್ತು .

ಪ್ಲೇನ್ ಟೇಕಾಫ್ ಆದ ನಂತರ ಕೊಪೈಲಟ್ ಕ್ಯಾಪ್ಟನ್ ಗೆ ವಿಮಾನದ ಕಂಟ್ರೋಲ್ ಅನ್ನು ನೀಡಿ ಬೇರೆ ಕೆಲಸಕ್ಕೆಂದು ಹೋದರು , ಕ್ಯಾಪ್ಟನ್ ಗೆ ನಲವತ್ತು ಏಳು ವರ್ಷವಾಗಿದ್ದು ಅವರಿಗೆ ಹನ್ನೊಂದು ಸಾವಿರ ಗಂಟೆಗಳ ಪೈಲಟ್ ಕಂಟ್ರೋಲ್ ಎಕ್ಸ್ಪೀರಿಯನ್ಸ್ ಇರುತ್ತದೆ .ಪೈಲಟ್ ಆಕಾಶಕ್ಕೆ ಹಾರಿ ಹದಿಮೂರು ನಿಮಿಷಗಳು ಆಗಿತ್ತು ಅಂದರೆ ಪ್ಲೇನ್ ಆಗಲೇ ೧೩,೦೦೦ ಫೀಟ್ ಎತ್ತರಕ್ಕೆ ಹಾರಿತ್ತು , ಕ್ಯಾಪ್ಟನ್ ಮತ್ತು ಕೋಪೈಯ್ಲೆಟ್ ಶೋಲ್ಡರ್ ಹಾರ್ನೆಸ್ ಅನ್ನು ಬಿಚ್ಚಿಟ್ಟು ಆರಾಮವಾಗಿ ರಿಲಾಕ್ಸ್ ಹೊಂದಿದ್ದರು ಮತ್ತು ಕ್ಯಾಪ್ಟನ್ ಅಂತೂ ಲೇಟ್ ಬೆಲ್ಟನ್ನು ಕೂಡ ಬಿಚ್ಚಿಟ್ಟು ರಿಲಾಕ್ಸ್ ಮಾಡಿದರು .

ಎಲ್ಲವೂ ಕೂಡ ನಾರ್ಮಲ್ ಇದೆ ಎಂದು ಅಂದುಕೊಂಡ ಕೂಡಲೇ ಕಾರ್ಪೆಟ್ ನಲ್ಲಿ ಬಂದು ಸ್ಫೋಟದ ಶಬ್ದ ಕೇಳಿಸಿತು ಆಗ ಕ್ಯಾಪ್ಟನ್ ಏನಾಯಿತು ಎಂದು ನೋಡಲೆಂದು ಹೋದಾಗ ಕ್ಯಾಪ್ಟನ್ ಎಡಭಾಗದ ಅಂದರೆ ವಿಮಾನದ ಎಡಭಾಗದ ವಿಂಡ್ಸ್ಕ್ರೀನ್ ಸ್ಪೊಟಗೊಂಡಿತ್ತು .ಈ ರೀತಿ ವಿಮಾನದ ವಿಂಡ್ಸ್ಕ್ರೀನ್ ಬ್ಲಾಸ್ಟ್ ಆದ ಕಾರಣದಿಂದಾಗಿ ವಿಮಾನದ ಒಳಗೆ ಹೆಚ್ಚು ಗಾಳಿ ಹೋಗಿ ಪ್ರೆಶರ್ ನಿಂದ ಎಲ್ಲ ವಸ್ತುಗಳು ಹಾರಾಡತೊಡಗಿದವು ಅದರಲ್ಲೇನಿದೆ ಕ್ಯಾಪ್ಟನ್ ದೇಹವೇ ವಿಮಾನದಿಂದ ಅರ್ಧ ದೇಹ ಆಚೆ ಹೋಗಿತ್ತು ಇನ್ನರ್ಧ ದೇಹದ ಭಾಗ ವಿಮಾನದ ಒಳಗೆ ಸಿಲುಕಿ ಹಾಕಿಕೊಂಡಿತ್ತು .

ಈ ಸಂದರ್ಭದಲ್ಲಿ ಕ್ಯಾಪ್ಟನ್ ಅರ್ಧ ದೇಹ ಹೊರಗೆ ಬಿದ್ದಿದ್ದ ಕಾರಣದಿಂದಾಗಿ ಶೀತ ವಾತಾವರಣದಿಂದ ಕ್ಯಾಪ್ಟನ್ನ ದೇಹ ಮರುಗಟ್ಟಲು ಶುರುವಾಯಿತು ಇತ್ತ ಪ್ಲೇನ್ ನ ಸಿಬ್ಬಂದಿಗಳು ಕ್ಯಾಪ್ಟನ್ ನ ಮೇಲೆ ಎಳೆಯಲು ಪ್ರಯತ್ನ ಮಾಡಿ ಆಗಲೇ ಕ್ಯಾಪ್ಟನ್ನ ಕೈಯಲ್ಲಿ ರಕ್ತ ಬಂದಿತ್ತು .ಈ ಸಮಯದಲ್ಲಿ ಸಿಮೊ ಎಂಬ ಫ್ಲೈಟ್ ಅಟೆಂಡೆಂಟ್ ಕ್ಯಾಪ್ಟನ್ ಜಾಗಕ್ಕೆ ಬಂದು ಲೇಟ್ ಬೆಲ್ಟ್ ಗಳನ್ನು ಹಾಕಿಕೊಂಡು ಕ್ಯಾಪ್ಟನ್ ನ ಎರಡು ಕಾಲುಗಳನ್ನು ಗಟ್ಟಿಯಾಗಿ ಹಿಡಿದು ಇಟ್ಟುಕೊಂಡರು .

ಇತ್ತ ಒಳಗೆ ಪ್ಯಾಸೆಂಜರ್ ಗಳನ್ನು ಸಿಬ್ಬಂದಿಗಳು ನಿಭಾಯಿಸುವುದರಲ್ಲಿ ತೊಡಗಿದ್ದರು ಮತ್ತು ಎಲ್ಲಾ ಆಕ್ಸಿಜನ್ ಸೋರಿ ಹೋದ ಕಾರಣದಿಂದಾಗಿ ಪ್ಯಾಸೆಂಜರ್ಸ್ ಗಳಿಗೆ ಆಕ್ಸಿಜನ್ ಸೌಲಭ್ಯವೂ ಕೂಡಾ ಇರಲಿಲ್ಲ ನಂತರ ಪೈಲೆಟ್ ಇದೀಗ ಆಕ್ಸಿಜನ್ ಸಿಗುವಂತಹ ಅಂದರೆ ಉಸಿರಾಟಕ್ಕೆ ಬೇಕಾದಂತಹ ಆಕ್ಸಿಜನ್ ಸಿಗುವಂತಹ ಜಾಗಕ್ಕೆ ಫ್ಲೈಟ್ ಅನ್ನು ತೆಗೆದುಕೊಂಡು ಹೋಗಬೇಕಾಗಿತ್ತು ಮತ್ತು ಎಮರ್ಜೆನ್ಸಿ ಲ್ಯಾಂಡಿಂಗ್ ಗೆ ಪೈಲೆಟ್ ತಯಾರಾದರು .

ಇಷ್ಟೆಲ್ಲಾ ನಡೆಯುವಂತಹ ಬೆಲೆಯಲ್ಲಿಯೂ ಕೂಡ ಕ್ಯಾಪ್ಟನ್ನ ದೇಹ ಗಾಳಿಯಲ್ಲಿಯೇ ಇತ್ತು , ಆ ನಂತರ ಪ್ಪ್ಲೈಟ್ ನಲ್ಲಿ ಇದ್ದಂತಹ ಸಿಬ್ಬಂದಿಗಳು ಕ್ಯಾಪ್ಟನ್ ದೇಹ ಈಗಾಗಲೇ ಮೃತಪಟ್ಟಿರಬಹುದು ಆದ ಕಾರಣದಿಂದಾಗಿ ಕ್ಯಾಪ್ಟನ್ ದೇಹವನ್ನು ಗಾಳಿಗೆ ಬಿಡುವುದು ಉತ್ತಮ ಎಂದು ಯೋಚಿಸಿದರು ಆದರೆ ಇದಕ್ಕೆ ಪೈಲೆಟ್ ಬಿಡುವುದಿಲ್ಲ ,

ಕ್ಯಾಪ್ಟನ್ ದೇಹವನ್ನು ಗಾಳಿಗೆ ಬಿಟ್ಟರೆ ಅದು ಲೆಫ್ಟ್ ಇಂಜಿನ್ ಗೆ ತಗುಲಿ ವಿಮಾನವೇ ಸ್ಫೋಟಗೊಳ್ಳುವ ಚಾನ್ಸಸ್ ಹೆಚ್ಚಾಗಿರುತ್ತದೆ ಅನ್ನು ಕಾರಣದಿಂದಾಗಿ ಕ್ಯಾಪ್ಟನ್ ದೇಹವನ್ನು ಗಾಳಿಗೆ ಬಿಡಲು ಒಪ್ಪಲಿಲ್ಲ .ಇಪ್ಪತ್ತು ನಿಮಿಷದ ಬಳಿಕ ಹರಸಾಹಸ ಮಾಡಿ ಕ್ಯಾಪ್ಟನ್ ದೇಹವನ್ನು ಒಳಗಡೆ ಎಳೆದು ಕೊಲ್ಲಲಾಯಿತು.ನಂತರ ಪೈಲೆಟ್ ಎಮರ್ಜೆನ್ಸಿ ಲ್ಯಾಂಡಿಂಗ್ ಗಾಗಿ ಇನ್ಫಾರ್ಮೇಷನ್ ಪಡೆದುಕೊಳ್ಳುವುದಕ್ಕೆ ಏರ್ ಟ್ರಾಫಿಕ್ ನ ಬಳಿ ಪರ್ಮಿಷನ್ ಕೇಳಿದರು ನಂತರ ಅವರಿಂದ ಬಂದಂತಹ ರಿಪ್ಲೆ ಯನ್ನು ಕೇಳಿಸಿಕೊಳ್ಳಲಾಗದ ಷ್ಟು ಗಾಳಿ ವಿಮಾನದೊಳಗೆ ಇತ್ತು ನಂತರ ಪೈಲೆಟ್ ಎಮರ್ಜೆನ್ಸಿ ಲ್ಯಾಂಡಿಂಗ್ ರಿಪ್ಲೆ ಯನ್ನು ಪಡೆದುಕೊಂಡು ಎಮರ್ಜೆನ್ಸಿ ಲ್ಯಾಂಡಿಂಗ್ ಅನ್ನು ಮಾಡಲಾಗಿತ್ತು .

ಸದರ್ನಮ್ಪಟನ್ ಎಂಬ ಏರ್ ಪೋರ್ಟ್ ನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಅನ್ನು ಮಾಡಲಾಗಿತ್ತು ನಂತರ ಈ ಘಟನೆಯಲ್ಲಿ ಫ್ಲೈಟ್ ನಲ್ಲಿ ಕೋ ಪೈಲಟ್ ಗೆ ಮತ್ತು ಕ್ಯಾಪ್ಟನ್ ಗೆ ಮಾತ್ರ ತುಂಬಾನೇ ಪೆಟ್ಟಾಗಿತ್ತು ಅದನ್ನು ಬಿಟ್ಟು ಇನ್ನು ಯಾರಿಗೂ ಕೂಡ ಯಾವ ತೊಂದರೆಯೂ ಕೂಡ ಆಗಿರಲಿಲ್ಲ .ಸ’ತ್ತೇ ಹೋಗಿದ್ದರು ಅಂದುಕೊಂಡಿದ್ದ ಕ್ಯಾಪ್ಟನ್ ಅನ್ನು ಹಾಸ್ಪಿಟಲ್ಗೆ ದಾಖಲೆ ಮಾಡಿದಾಗ ಸಾಕಷ್ಟು ಪರೀಕ್ಷೆಗಳ ನಂತರ ಪೈಲೆಟ್ನನ್ನು ಉಳಿಸಿಕೊಳ್ಳಲಾಗಿತ್ತು ನಂತರ ಐದು ತಿಂಗಳ ವೈದ್ಯಕೀಯ ಚಿಕಿತ್ಸೆಯೊಂದಿಗೆ ಕ್ಯಾಪ್ಟನ್ ಮತ್ತೆ ತಮ್ಮ ಸೇವೆಗೆ ಹಿಂತಿರುಗಿದ್ದರು .ಇಪ್ಪತ್ತು ನಿಮಿಷಗಳ ಅವಧಿಯಲ್ಲಿ ಏನೆಲ್ಲ ನಡೆದು ಹೋಯಿತು.

ಅನ್ನೋ ಒಂದು ಯೋಚನೆ ಮಾಡಿದಲ್ಲಿ ತಪ್ಪು ನಡೆದಿದ್ದು ಯಾವ ಜಾಗದಲ್ಲಿ ಅಂತ ಹೇಳೋದಾದರೆ ವಿಂಡ್ಸ್ಕ್ರೀನ್ ರಿಪೇರಿ ಮಾಡುವಾಗ ಬೋಲ್ಟ್ ಸೈಜ್ ವ್ಯತ್ಯಾಸ ಆದ ಕಾರಣದಿಂದಾಗಿ ಇಷ್ಟೆಲ್ಲ ಆಘಾತ ನಡೆಯಬೇಕಾಯಿತು ಮತ್ತು ಎತ್ತರಕ್ಕೆ ಎರುವಂತಹ ಫ್ಲೈಟ್ ನ ವಿಷಯದಲ್ಲಿ ಯಾವುದೇ ಒಂದು ಚಿಕ್ಕ ವಿಚಾರದಲ್ಲಿ ಕೂಡ ನೆಗ್ಲೆಟ್ ಮಾಡಿದ್ದರೆ ಇಂತಹ ಆಘಾತ ಸಂಭವಿಸಬಹುದು ಮತ್ತು ಫ್ಲೈಟ್ ಟೇಕ್ ಆಫ್ ಆಗುವ ಮೊದಲು ವಿಂಡ್ ಸ್ಕ್ರೀನ್ ರಿಪೇರಿಯಾದ ಕಾರಣದಿಂದಾಗಿ ಇಷ್ಟೆಲ್ಲ ನಡೆಯಿತು ಅಂತ ಹೇಳಬಹುದು .

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment