Ad
Home ಅರೋಗ್ಯ ನಿಮ್ಮ ದೇಹದಲ್ಲಿ ರೋಗ ನಿರೋಧ ಹಾಗು ಹೀಮೋಗ್ಲೋಬಿನ್ ಹೆಚ್ಚಾಗಲು ಈ ಒಂದು ಪುಡಿಯನ್ನ ಮನೆಯಲ್ಲೇ ಮಾಡಿ...

ನಿಮ್ಮ ದೇಹದಲ್ಲಿ ರೋಗ ನಿರೋಧ ಹಾಗು ಹೀಮೋಗ್ಲೋಬಿನ್ ಹೆಚ್ಚಾಗಲು ಈ ಒಂದು ಪುಡಿಯನ್ನ ಮನೆಯಲ್ಲೇ ಮಾಡಿ ಸೇವಿಸಿ ಸಾಕು ..

ರೋಗ ನಿರೋಧಕ ಶಕ್ತಿಯನ್ನು ಸುಲಭವಾಗಿ ಹೆಚ್ಚಿಸುವಂತಹ ಈ ಮನೆ ಮದ್ದು, ಮಕ್ಕಳಿಗೂ ಕೂಡ ನೀಡಬಹುದು ದೊಡ್ಡವರು ಕೂಡ ತಿನ್ನಬಹುದು. ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವ ಮಹಾನ್ ಮನೆ ಮದ್ದು ಇದು.ಹೌದು ಕಳೆದ ವರುಷ ನಮ್ಮ ದೇಶದ ಪರಿಸ್ಥಿತಿ, ನಮ್ಮ ದೇಶದ ಪರಿಸ್ಥಿತಿ ಮಾತ್ರವಲ್ಲ ಇಡೀ ವಿಶ್ವದ ಪರಿಸ್ಥಿತಿ ಏನಾಗಿತ್ತು ಅಂತ ನಾವು ನೀವೆಲ್ಲರೂ ನೋಡಿದ್ದೀವಿ ಮತ್ತು ಅನುಭವಿಸಿದ್ದೇವೆ ಕೂಡ. ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಜನರು ಮಾತ್ರೆಗಳನ್ನು ತೆಗೆದುಕೊಳ್ಳುವ ಮೂಲಕ ಸಾಹಸ ಮಾಡಿದ್ದರು ಆದರೆ ಮುಂಚಿನಿಂದಲೂ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಇದ್ದಿದ್ದರೆ ಮಾತ್ರೆ ತೆಗೆದುಕೊಳ್ಳುವ ಪ್ರಮೇಯವೇ ಬರುತ್ತಾ ಇರಲಿಲ್ಲಾ.

ಅಂದಿನಿಂದ ಜನರಿಗೆ ರೋಗ ನಿರೋಧಕ ಶಕ್ತಿಯ ಮಹತ್ವವೇನು ಮತ್ತು ರೋಗನಿರೋಧಕ ಶಕ್ತಿ ಯಾಕೆ ಬೇಕು ಹಾಗೆ ನಮ್ಮ ದೇಹದಲ್ಲಿ ಯಾವ ಬದಲಾವಣೆ ಆದರೆ ಅದಕ್ಕೆ ರೋಗನಿರೋಧಕ ಶಕ್ತಿ ಅತ್ಯವಶ್ಯಕವಾಗಿ ಬೇಕಾಗಿರುತ್ತದೆ ಎಲ್ಲದನ್ನ ನಾವು ತಿಳಿದುಕೊಂಡಿದ್ದೇವೆ.ಈಗ ನಾವು ರೋಗನಿರೋಧಕ ಶಕ್ತಿಯ ಬಗ್ಗೆ ಮಾತನಾಡುವುದಾದರೆ ಇದೊಂತರ ನಮ್ಮ ದೇಹವನ್ನು ರಕ್ಷಣೆ ಮಾಡುವ ಸೈನಿಕರು ಇದ್ದ ಹಾಗೆ ಈ ರೋಗ ನಿರೋಧಕ ಶಕ್ತಿ ನಮ್ಮ ದೇಹದಲ್ಲಿ ಇದ್ದರೆ ಮಾತ್ರ ಯಾವುದೇ ಅನಾರೋಗ್ಯ ಸಮಸ್ಯೆ ಬಂದರೂ ನಾವು ಅದರ ವಿರುದ್ಧ ಹೋರಾಡಿ ಆರೋಗ್ಯವಂತರಾಗಲು ಸಾಧ್ಯ ಆಗಿರುತ್ತದೆ.

ಆದರೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಈ ರೋಗ ನಿರೋಧಕ ಶಕ್ತಿ ಬೇಕಿರುತ್ತದೆ ಇದನ್ನು ಕೇವಲ ಮಾತ್ರೆ ತೆಗೆದುಕೊಳ್ಳುವ ಮೂಲಕ ಮಾತ್ರ ನಮ್ಮ ಜಗದಲ್ಲಿ ವೃದ್ದಿ ಮಾಡಿಕೊಳ್ಳುವುದಲ್ಲ ಮಾತ್ರೆ ಬದಲು ನೈಸರ್ಗಿಕವಾಗಿ ನಾವು ತಿನ್ನುವ ಆಹಾರದಲ್ಲಿ ಕೆಲವೊಂದು ಪದಾರ್ಥಗಳನ್ನು ಸೇರಿಸಿಕೊಳ್ಳುತ್ತಾ ಮತ್ತು ಕೆಲವೊಂದು ಪದಾರ್ಥಗಳನ್ನು ಬಿಡುತ್ತಾ ಈ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಬಹುದು.

ಈಗ ರೋಗ ನಿರೋಧಕ ಶಕ್ತಿ ವೃದ್ದಿ ಮಾಡಿಕೊಳ್ಳುವಂತಹ ಪರಿಹಾರದ ಬಗ್ಗೆ ಮಾತನಾಡೋಣ ಹಾಗೂ ಈ ರೋಗ ನಿರೋಧಕ ಶಕ್ತಿ ವೃದ್ಧಿಗೆ ಮಾಡಬೇಕಾದ ಮನೆಮದ್ದಿಗೆ ಬೇಕಾಗಿರು ಪದಾರ್ಥಗಳು ಬೀಟ್ರೂಟ್ ಬಾದಾಮಿ ಗೋಡಂಬಿ.

ಮೊದಲಿಗೆ ಬಿಸಿನೀರಿನಲ್ಲಿ ಬಾದಾಮಿಯನ್ನು ಸ್ವಲ್ಪ ಸಮಯ ನೆನೆಸಿಡಬೇಕು ಬಳಿಕ ಬಾದಾಮಿಯ ಮೇಲಿನ ಸಿಪ್ಪೆ ತೆಗೆದು ಅದನ್ನು ಹುರಿದು ಪುಡಿ ಮಾಡಿಕೊಳ್ಳಬೇಕು ಅದರಂತೆ ಗೋಡಂಬಿಯನ್ನು ಹುರಿದು ಪುಡಿ ಮಾಡಿಕೊಂಡು ಬೀಟ್ರೂಟನ್ನು ತುರಿದು, ಬಳಿಕ ಅದನ್ನು ಕೂಡ ಹುರಿದುಕೊಂಡು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳ ಬೇಕು.

ಇದೀಗ ಈ ಮೂರೂ ಮಿಶ್ರಣವನ್ನು ಒಮ್ಮೆಲೆ ಬ್ಲೆಂಡ್ ಮಾಡಿ ಏರ್ ಟೈಟ್ ಕಂಟೈನರ್ ನಲ್ಲಿ ಈ ತಯಾರಿ ಮಾಡಿಕೊಂಡಂಥ ಪೌಡರನ್ನು ಶೇಖರಣೆ ಮಾಡಿ ಇಟ್ಟುಕೊಳ್ಳಬೇಕು.ಈಗ ನಮಗೆ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುವಂತಹ ಒಂದೊಳ್ಳೆ ಮಿಶ್ರಣ ಮನೆಯಲ್ಲಿಯೇ ತಯಾರಾಯ್ತು ನಿಮಗೆ ಇಂತಹ ಮನೆಯಲ್ಲಿಯ ಮಾಡಿದಂತಹ ಪುಡಿಗಳು ಇದ್ದರೆ ಸಾಕು, ನಿಮ್ಮ ಮನೆಗೆ ಆಚೆ ಇಂದ ಯಾವುದೇ ಪ್ರೊಟೀನ್ ಪೌಡರ್ ತರುವಾ ಅಗತ್ಯೆ ಬರುವುದಿಲ್ಲ.

ಪ್ರತಿದಿನ ಬೆಳಿಗ್ಗೆ ಅಥವಾ ರಾತ್ರಿ ಸಮಯದಲ್ಲಿ 1ಲೋಟ ಹಾಲಿಗೆ ಈ ಪುಡಿಯನ್ನು ಮಿಶ್ರಮಾಡಿ ಇದನ್ನು ಪ್ರತಿದಿನ ಕುಡಿಯುತ್ತ ಬರಬೇಕು. ಇದರಿಂದ ನಿಮ್ಮ ಆರೋಗ್ಯದಲ್ಲಾಗುವ ಬದಲಾವಣೆ ಅನ್ನೂ ಕಾಣಬಹುದು ರೋಗನಿರೋಧಕ ಶಕ್ತಿ ಹೆಚ್ಚುತ್ತೆ ಅಷ್ಟೇ ಅಲ್ಲ ಸ್ಕಿನ್ ಅಲ್ಲಿ ಗ್ಲೋ ಬರುವುದರ ಜೊತೆಗೆ ನಿಮ್ಮ ಆರೋಗ್ಯದಲ್ಲಿ ತುಂಬಾನೇ ಬದಲಾವಣೆ ಕಾಣಬಹುದು ಮತ್ತು ಜೀರ್ಣಶಕ್ತಿ ವೃದ್ಧಿಸುತ್ತದೆ ಈ ವಿಧಾನದಲ್ಲಿ ನಿಮ್ಮ ಸಂಪೂರ್ಣ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಧನ್ಯವಾದ.

Exit mobile version