ಪೂಜೆಗೆ ಬಳಕೆ ಮಾಡುವ ತೆಂಗಿನಕಾಯಿ ಸೃಷ್ಠಿ ಆಗಿದ್ದು ಹೇಗೆ ಗೊತ್ತ …ಭೂಮಿಗೆ ತೆಂಗಿನಕಾಯಿ ಬಂದಿದ್ದು ಎಲ್ಲಿಂದ ಗೊತ್ತಾ…

316

ನಮಸ್ತೆ ಸ್ನೇಹಿತರ ಪೂಜೆ ಅಲ್ಲಿ ಅಡುಗೆಯಲ್ಲಿ ಪ್ರತಿಯೊಂದು ಕಾರ್ಯದಲ್ಲಿಯೂ ಕೂಡಾ ಬಳಕೆ ಆಗುವಂತಹ ಈ ತೆಂಗಿನ ಕಾಯಿ ಸೃಷ್ಟಿಯ ಅತ್ಯದ್ಭುತ ವಸ್ತುವಾಗಿದೆ. ಹಾಗಾದರೆ ಈ ತೆಂಗಿನಕಾಯಿ ಸೃಷ್ಠಿ ಆಗಿದ್ದು ಹೇಗೆ? ತೆಂಗಿನಕೆಯಿಯನ್ನು ಹೇಚ್ಚಾಗಿ ದೇವರಿಗೆ ಒಡೆಯೋದು ಯಾಕೆ? ತೆಂಗಿನಮರ ಉದ್ದವಾಗಿ ಬೆಳೆಯಲು ಕಾರಣವೇನು? ಹೌದು ಇದಕ್ಕೆಲ್ಲಾ ಉತ್ತರ ಪುರಾಣದಲ್ಲಿ ಇರುವ ಈ ಕತೆ ನಮಗೆ ತಿಳಿಸುತ್ತದೆ. ತೆಂಗಿನಕಾಯಿ ಇಲ್ಲದೆ ಯಾವುದೇ ಧಾರ್ಮಿಕ ಕಾರ್ಯ ನಡೆಯೋದಿಲ್ಲಾ. ಯಾವುದೇ ಪೂಜೆಯಾಗಲಿ ಯಾವುದೇ ಹೋಮ ಆಗಲಿ ಅಲ್ಲಿ ತೆಂಗಿನಕಾಯಿ ಬಳಕೆ ಮಾಡಲಾಗುತ್ತದೆ ಇಂತಹ ತೆಂಗಿನಕಾಯಿ ಭೂಲೋಕಕ್ಕೆ ಬಂದದ್ದು ಹೇಗೆ ಎಂಬುದರ ಹಿಂದೆ ಇದೇ ಕತೆ. ಪುರಾಣದ ಪ್ರಕಾರ ವಿಶ್ವಾಮಿತ್ರ ಋಷಿ ಮುನಿಗಳು ತೆಂಗಿನಕಾಯಿ ಅನ್ನು ಸೃಷ್ಟಿ ಮಾಡಿದ್ದರು ಹಾಗೂ ಹಿಂದೆ ಸತ್ಯವ್ರತ ಎಂಬ ಧರ್ಮ ರಾಜ ಇದ್ದರು ಅಪ್ರತಿಮ ಶಿವಭಕ್ತನಾಗಿದ್ದ ಇವರ ಬಳಿ ಎಲ್ಲವೂ ಇತ್ತು. ಆದರೆ ಆತನ ಮನಸ್ಸಿನಲ್ಲಿ ಒಂದು ಕೊರಗು ಇತ್ತು. ಅದೇನೆಂದರೆ ಒಮ್ಮೆ ಭೂಮಿ ಇಂದ ಸ್ವರ್ಗಲೋಕಕ್ಕೆ ಹೋಗಿ ಬರಬೇಕೆಂಬುವ ಸ್ವರ್ಗಲೋಕದ ಬಗೆಗಿನ ವರ್ಣನೆಗಳು ಆತನನ್ನು ಸ್ವರ್ಗದ ಕಡೆಗೆ ಆಕರ್ಷಿಸಿತ್ತು ಹಾಗೆ ಅಲ್ಲಿಗೆ ಹೋಗೋದು ಹೇಗೆ ಅನ್ನುವ ಸತ್ಯ ಭರತನಿಗೆ ಗೊತ್ತಿರಲಿಲ್ಲಾ.

ಒಮ್ಮೆ ವಿಶ್ವಾಮಿತ್ರ ತಮ್ಮ ಕುಟುಂಭವನ್ನು ಬಿಟ್ಟು ತಪಸ್ಸಿಗೆ ಹೊರಟರು. ಹೀಗೆ ಹೋದವರು ತುಂಬಾ ಸಮಯದವರೆಗೂ ವಾಪಸ್ಸು ಬರುವುದಿಲ್ಲ ಹಾಗೂ ಅವರ ಅನುಪಸ್ಥಿತಿಯಲ್ಲಿ ಊರಲ್ಲಿ ಬರಗಾಲ ಬಂದು ಭೂಮಿ ಬರಡಾಗಿತ್ತು. ಜನರಿಗೆ ಹೊಟ್ಟೆಗೆ ಆಹಾರ ಇರಲಿಲ್ಲ ಮತ್ತು ವಿಶ್ವಾಮಿತ್ರರ ಕುಟುಂಬ ನರಳುವಂತಾಯಿತು. ಆದರೆ ಇಂತಹ ಸಮಯದಲ್ಲಿ ಬಂದ ಸತ್ಯವ್ರತ ವಿಶ್ವಾಮಿತ್ರನ ಕುಟುಂಭಕ್ಕೆ ಆಸರೆಯಾದ. ಆದರೆ ಅವರಿಗೆ ಅಗ್ಯತವಾದ ಎಲವ್ವನ್ನು ನೀಡಿದ್ದಲ್ಲದೆ ಪರಿಪೂರ್ಣ ಕುಟುಂಭದ ಜವಾಬ್ದಾರಿಯನ್ನು ತಾನೆ ಹೊತ್ತುಕೊಂಡ. ನಂತರ ಋಷಿ ವಿಶ್ವಾಮಿತ್ರ ಮನೆಗೆ ಬಂದಾಗ ಸತ್ಯವ್ರತ ಮಾಡಿದ ಸಹಾಯದ ಬಗ್ಗೆ ಗೊತ್ತಾಗುತ್ತೆ. ಇದರಿಂದ ತುಂಬಾ ಸಂತೋಷ ಗೊಂಡ ವಿಶ್ವಾಮಿತ್ರರು, ರಾಜನ ಭೇಟಿಗೆ ಅವರ ಅರಮನೆಗೆ ಹೋಗಿ ಅವರನ್ನು ಭೇಟಿ ಮಾಡಿ ಧನ್ಯವಾದಗಳನ್ನು ತಿಳಿಸುತ್ತಾ ನೀನು ರಾಜ ಸತ್ಯವ್ರತ ವಿಶ್ವಮಿತ್ರನ ಬಳೆ ವರವೊಂದನ್ನು ಬೇಡಿಕೊಳ್ಳುತ್ತಾನೆ ಆವರ ನೀಡಲು ವಿಶ್ವಾಮಿತ್ರರು ಕೂಡ ಒಪ್ಪಿಕೊಂಡರು. ಇನ್ನು ರಾಜನ ಬೇಡಿಕೆ ಏನಾಗಿತ್ತು ಅಂದರೆ, ಸತ್ಯವ್ರತ ನಾನು ತುಂಬಾ ದಿನಗಳಿಂದ ಸ್ವರ್ಗ ಲೋಕಕ್ಕೇ ಹೋಗಬೇಕೆಂದು ಕನಸನ್ನು ಕಂಡಿದ್ದೇನೆ, ನೀವು ನನ್ನನ್ನ ಸ್ವರ್ಗಕ್ಕೆ ಕಳುಹಿಸುತ್ತೀರಾ ಎಂದು ಕೇಳುತ್ತಾನೇ. ತನ್ನ ಕುಟುಂಭದವರನ್ನ ರಕ್ಷಣೆ ಮಾಡಿದನ್ನು ನೆನೆದು ವಿಶ್ವಾಮಿತ್ರರು ಸ್ವರ್ಗ ಲೋಕಕ್ಕೆ ಒಂದು ಅದೃಶ್ಯ ಮಾರ್ಗವನ್ನ ನಿರ್ಮಿಸಿ ಸತ್ಯವ್ರತನನ್ನ ಕಳುಹಿಸಿಕೊಟ್ಟರು.

ಹೇಗೆ ಸತ್ಯವ್ರತ ಸ್ವರ್ಗ ಲೋಕಕ್ಕ ಬಂದಿದ್ದನ್ನು ಗಮನಿಸಿದ ಇಂದ್ರ ಸ್ವರ್ಗದ ಬಾಗಿಲಿನಲ್ಲಿ ತಡೆದು ಕೆಳಗೆ ತಳ್ಳಿಬಿಟ್ಟ. ಆಗ ಭೂಮಿ ಮೇಲೆ ಬಂದು ಬಿದ್ದ ಸತ್ಯವ್ರತ ಸೀದಾ ವಿಶ್ವಾಮಿತ್ರನ ಬಳಿ ಹೋಗಿ ನಡೆದು ಘಟನೆಯನ್ನು ಹೇಳುತ್ತಾನೆ. ಇದರಿಂದ ವಿಶ್ವಾಮಿತ್ರರು ಕೋಪಗೊಳುತ್ತಾರೆ ಬಳಿಕ ಸ್ವರ್ಗದ ದೇವತೆಗಳೊಂದಿಗೆ ಮಾತುಕಥೆ ನಡೆಸಿ ಒಂದು ಪರಿಹಾರವನ್ನ ಕಂಡು ಹಿಡಿಯುತ್ತಾರೆ. ಅದರಂತೆ ಸತ್ಯವ್ರತನಿಗಾಗಿಯೇ ಸ್ವರ್ಗಕ್ಕಿಂತ ಸ್ವಲ್ಪ ಕೆಳಗೆ ಮತ್ತು ಭೂಮಿಗಿಂತ ಸಲ್ಪ ಮೇಲೆ ಎರಡರ ಮಧ್ಯೆ ಒಂದು ಸ್ವರ್ಗವನ್ನು ರಚಿಸಲು ನಿರ್ಧಾರ ಮಾಡುತ್ತಾರೆ.

ಇದರಂತೆ ಸತ್ಯವ್ರತನ ಇಚ್ಛೆಯೂ ಕೂಡ ಈಡೇರುತ್ತದೆ ಹಾಗೂ ದೇವಾನುದೇವತೆಗಳು ಕೂಡ ಯಾವುದೇ ತೊಂದರೆ ಆಗುವುದಿಲ್ಲ ಎಂದು ಲೆಕ್ಕಾಚಾರವನ್ನು ಸಹ ಹಾಕುತ್ತಾರೆ. ದೇವತೆಗಳಿಂದ ನಿರ್ಮಾಣವಾದ ಈ ಹೊಸ ಸ್ವರ್ಗದಲ್ಲಿ ಸತ್ಯವ್ರತ ಸಂತೋಷದಿಂದ ವಾಸ ಮಾಡೊದಕ್ಕೆ ಶುರು ಮಾಡಿದ. ಆದರೆ ಭೂಮಿ ಮತ್ತು ಸ್ವರ್ಗದ ನಡುವೆ ನಿರ್ಮಿಸಲ್ಪಟ್ಟ ಈ ಸ್ವರ್ಗ ಲೋಕ ಗಾಳಿಗೆ ಎಲ್ಲಿ ಬಿದ್ದುಬಿಡುತ್ತೊ ಎಂದು ವಿಶ್ವಾಮಿತ್ರನಿಗೆ ಇದು ಕಾಡುತಿತ್ತು. ಹೀಗಾಗಿ ತಮ್ಮ ಮಾಯಾಶಕ್ತಿಯಿಂದ ಆ ಸ್ವರ್ಗಕ್ಕೆ ಒಂದು ಕಂಬ ಕೊಟ್ಟು ನಿಲ್ಲಿಸಿದ್ರು. ಸ್ನೇಹಿತರೆ ಇದೆ ಕಂಬ ನಂತರ ಮರ ರೂಪ ಪಡೆದಕೊಂಡಿತ್ತು, ಇದನ್ನೆ ನಂತರದಲ್ಲಿ ತೆಂಗಿನ ಮರ ಎಂದು ಕರೆಯಲಾಯಿತು.

ಅದರಂತೆ ಸತ್ಯವ್ರತ ಸಾವನಪ್ಪಿದ ಬಳಿಕ ಆತನ ತಲೆಯು ತೆಂಗಿನಕಾಯಿಯಾಗಿ ರೂಪುಗೊಂಡಿತ್ತು ಎಂದು ಪುರಾಣಗಳು ತಿಳಿಸುತ್ತವೆ ಹಾಗೂ ನೀವು ಕೂಡ ನೋಡಬಹುದು ತೆಂಗಿನಕಾಯಿ ಮನುಷ್ಯನ ತಲೆ ಬುರುಡೆ ಅನ್ನೋ ಹೋಲುತ್ತದೆ ಮತ್ತು ಅದರಲ್ಲಿ ಜುಟ್ಟು ಮನುಷ್ಯನ ತಲೆ ಕೂದಲಿಗೆ ಹೋಲಿಸಿದರೆ ಇದರ ಚಿಪ್ಪನ್ನು ಮನುಷ್ಯನ ತಲೆ ಚಿಪ್ಪಿಗೆ ಹೋಲಿಸಬಹುದು, ಇದರ ಚಿಪ್ಪನ್ನ ಮನುಷ್ಯನ ತಲೆ ಬುರುಡೆಯ ಚಿಪ್ಪಿಗೆ ಹೋಲಿಸಬಹುದು. ಅದೇ ರೀತಿ ಅದರಲ್ಲಿರುವ ನೀರು ಮನುಷ್ಯನ ರಕ್ತ, ಅದರ ಬಿಳಿ ಭಾಗದ ಕಾಯಿಯನ್ನ ಮನುಷ್ಯನ ಮೆದುಳಿಗೆ ಹೋಲಿಸಿದರೆ, ತೆಂಗಿನಕಾಯಿಯನ್ನು ಶಿವನಿಗೆ ಇರುವಂತಹ ಮೂರೂ ಕಣ್ಣುಗಳನ್ನು ಸಹ ಕಾಣಬಹುದು. ಇದು ತೆಂಗಿನಕಾಯಿಯ ಬಗ್ಗೆ ಇರುವ ಪುರಾಣದ ಕಥೆ.