Ad
Home Kannada Cinema News ಯಾರಿಗೂ ತಿಳಿಯದ ಪುನೀತ್ ರಾಜಕುಮಾರ್ ಜೀವನದ ಕಣ್ಣೀರಿನ ಕಥೆ.! ನಿಜಕ್ಕೂ ಬೇಜಾರ ಆಗುತ್ತೆ ಕಣ್ರೀ

ಯಾರಿಗೂ ತಿಳಿಯದ ಪುನೀತ್ ರಾಜಕುಮಾರ್ ಜೀವನದ ಕಣ್ಣೀರಿನ ಕಥೆ.! ನಿಜಕ್ಕೂ ಬೇಜಾರ ಆಗುತ್ತೆ ಕಣ್ರೀ

ಸ್ವಾಗತ ಇಂದು ನಾವು ನಿಮಗೆ ಯಾರ ಬಗ್ಗೆ ಹೇಳಲು ಹೊರಟಿದ್ದೆವೋ ಅವರು ನಿಮಗೆ ಚಿರಪರಿಚಿತರು ಇವರು ಚಿಕ್ಕ ವಯಸ್ಸಿನಲ್ಲೇ ತಮ್ಮ ಮನೋಜ್ನ ಅಭಿನಯದ ಮೂಲಕ ರಾಷ್ಟ್ರ ಚಲನಚಿತ್ರ ಪ್ರಶಸ್ತಿಯನ್ನ ತಮ್ಮ ಮುಡಿಗೇರಿಸಿಕೊಂಡವರು star ಪಟ್ಟವಿದ್ದರೂ ಕೂಡ ಜನಮಾನಸದಲ್ಲಿ ಅಪ್ಪು ಅಂತಾನೆ ಇವರು ಹೆಸರಾಗಿದ್ದಾರೆ ಹೌದು correct ನಿಮ್ಮ ಆಲೋಚನೆ ಸರಿಯಾಗಿಯೇ ಇದೆ ನಾವು ಇಂದು ಹೇಳಲು ಹೊರಟಿರುವಂತದ್ದು ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬಗ್ಗೆ ಕನ್ನಡದ ಮೇರು ನಟ ಡಾಕ್ಟರ್ ರಾಜಕುಮಾರ್ ಅವರ ಮಗನಾಗಿ ಜನಿಸಿದರು ಕೂಡ ಇವರು.

star ಪಟ್ಟಕ್ಕೆರಲು ಹಲವಾರು ರೀತಿಯ ನೋವು ನಲಿವು ಕಷ್ಟಗಳನ್ನ ಅನುಭವಿಸಬೇಕಾಯಿತು ಪುನೀತ್ ರಾಜಕುಮಾರ್ ಅವರು ಇಂದು ಜನಮಾನಸದಲ್ಲಿ ಉತ್ತಮ ಸ್ಥಾನವನ್ನು ಪಡೆಯಲು ಎಷ್ಟು ಕಷ್ಟ ಪಟ್ಟಿದ್ದಾರೆ ಎಂಬುದನ್ನು ಈ ವಿಡಿಯೋದಲ್ಲಿ ತಿಳಿಯೋಣ ಬನ್ನಿ ಪುನೀತ್ ರಾಜಕುಮಾರ್ ಅವರು ಸಾವಿರದ ಒಂಬೈನೂರ ಮಾರ್ಚ್ ಹದಿನೇಳರಂದು ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ ಡಾಕ್ಟರ್ ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಅವರ ಕಿರಿಯ ಮಗನಾಗಿ ಜನಿಸುತ್ತಾರೆ ಇವರ ಸಹೋದರರು ಕನ್ನಡದ ಖ್ಯಾತ ನಾಯಕ ನಟರಾದ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಅವರು ಪುನೀತ್ ರವರು ಕಿರಿಯ ಮಗನಾಗಿದ್ದರಿಂದ ಮನೆಯಲ್ಲಿ ತುಂಟಾಟಗಳನ್ನ ಮಾಡುತ್ತಾ ಬಹು ಅಕ್ಕರೆಯಿಂದ ಬೆಳೆಯುತ್ತಾರೆ ಪುನೀತ್ ರಾಜಕುಮಾರ್ ಅವರು ಐದು ವರ್ಷದ ಇದ್ದಾಗ doctor ರಾಜಕುಮಾರ್ ಅವರು ಚೆನ್ನೈನಿಂದ ಬೆಂಗಳೂರಿಗೆ shift ಆಗುತ್ತಾರೆ.

ಪುನೀತ್ ರವರು ಮತ್ತು ಅವರ ಸಹೋದರಿ ಪೂರ್ಣಿಮಾ ಅವರನ್ನ ಡಾಕ್ಟರ್ ರಾಜಕುಮಾರ್ ಅವರು ಸಿನಿಮಾ shootingಗಳಿಗೆ ಚಿಕ್ಕವರಿದ್ದಾಗಲೇ ಕರೆದುಕೊಂಡು ಹೋಗಲು ಶುರು ಮಾಡುತ್ತಾರೆ. ಹೀಗಾಗಿ ಬಾಲ್ಯದಿಂದಲೇ ಪುನೀತ್ ಅವರಿಗೆ ಕಲೆಯ ನಂಟು, ಬೆಳೆಯಲು ಸಾಧ್ಯವಾಗುತ್ತದೆ. ಪುನೀತ್ ರಾಜಕುಮಾರ್ ಅವರು ಚಿಕ್ಕ ವಯಸ್ಸಿನಲ್ಲೇ ಶಾಲೆಯ ರಜೆ ಸಮಯದಲ್ಲಿ ತಮ್ಮ ಊರು ಗಾಜನೂರಿಗೆ ಹೋಗುತ್ತಾರೆ ಈ ಸಂದರ್ಭದಲ್ಲಿ ಪುನೀತ್ ರವರು ತಮ್ಮ ಸ್ನೇಹಿತರ ಜೊತೆ ಸೇರಿ ದನಕಾಯೋಕ್ಕೆ ಹೋಗ್ತಾ ಇರ್ತಾರೆ ಧನಕಾಯೋಕ್ಕೆ ಹೋದಾಗ ಮರಕೋತಿ ಗೋಲಿ ಆಟಗಳನ್ನ ಆಡುತ್ತಾ ತಮ್ಮ ಬಾಲ್ಯದ ದಿನಗಳನ್ನ ತುಂಬಾ ಸ್ವಾರಸ್ಯಕರವಾಗಿ ಕಳೆಯುತ್ತಾರೆ ಪುನೀತ್ ರಾಜಕುಮಾರ್ ಅವರು ಪುನೀತ್ ರಾಜಕುಮಾರ್ ಅವರು ಕೇವಲ ಆರು ತಿಂಗಳ ಕೂಸು ಇದ್ದಾಗಲೇ ಚಿತ್ರರಂಗಕ್ಕೆ ಪಾದಾರ್ಪಣೆಯನ್ನು ಮಾಡುತ್ತಾರೆ.

ಸಾವಿರದ ಒಂಬೈನೂರ ಎಪ್ಪತೈದರಲ್ಲಿ ಅವರ ತಂದೆ ರಾಜಕುಮಾರ್ ಅವರ ಅಭಿ ಪ್ರೇಮದ ಕಾಣಿಕೆ ನಂತರ ಸಾವಿರದ ಒಂಬೈನೂರ ಎಂಬತ್ತರಲ್ಲಿ ತಮ್ಮ ತಂದೆ ರಾಜಕುಮಾರ್ ಅವರ ಅಭಿನಯದ ವಸಂತ ಗೀತಾ ಸಾವಿರದ ಒಂಬೈನೂರ ಎಂಬತ್ತೊಂದರಲ್ಲಿ ಭಾಗ್ಯದಾತ ಸಾವಿರದ ಒಂಬೈನೂರ ಎಂಬತ್ತೆರಡರಲ್ಲಿ ಚಲಿಸುವ ಮೋಡಗಳು ಹಾಗು ಎರಡು ನಕ್ಷತ್ರಗಳು ಎನ್ನುವ ಸಿನಿಮಾಗಳಲ್ಲಿ ಪುನೀತ್ ರಾಜಕುಮಾರ್ ಅವರು ಬಾಲ ನಟರಾಗಿ ಅಭಿನಯಿಸುತ್ತಾರೆ ನಂತರ ಸಾವಿರದ ಒಂಬೈನೂರ ಎಂಬತ್ತೈದರಲ್ಲಿ ಬೆಟ್ಟದ ಹೂವು ಸಿನಿಮಾದಲ್ಲಿ ರಾಮು ಪಾತ್ರದಲ್ಲಿ ಬಾಲ್ಯ ನಟನಾಗಿ ಅಭಿನಯಿಸುತ್ತಾರೆ ಪುನೀತ್ ಅವರು ಈ ಚಿತ್ರದಲ್ಲಿ ಪುನೀತ್ ರವರ ನಟನೆಗೆ ರಾಜ್ಯದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತದೆ ಈ ಸಿನಿಮಾದ ಅದ್ಭುತ ನಟನೆಗೆ ಪುನೀತ್ ರವರಿಗೆ ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ದೊರೆಯುತ್ತದೆ .

ಇದಾದ ನಂತರ ಸತತ ಹದಿನಾರು ವರ್ಷಗಳನಂತರ ಅಂದರೆ ಎರಡು ಸಾವಿರದ ಎರಡರಲ್ಲಿ ತಮ್ಮ ತಾಯಿ ಅವರ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಾಣ ಗೊಂಡಂತಹ ಅಪ್ಪು ಸಿನಿಮಾದ ಮೂಲಕ ಸ್ಯಾಂಡಲವುಡ್ ಗೆ ನಾಯಕ ನಟರಾಗಿ ಎಂಟ್ರಿ ಕೊಡ್ತಾರೆ ನಮ್ಮ ಪ್ರೀತಿಯ ಪುನೀತ್ ರಾಜಕುಮಾರ್ ಅವರು ನಾಯಕ ನಟನಾಗಿ ಅಭಿನಯಿಸಿದ ಮೊದಲ ಸಿನಿಮಾನೇ ರಾಜ್ಯದಾದ್ಯಂತ ಇನ್ನೂರು ದಿನಗಳ ಕಾಲ ಯಶಸ್ವಿ ಪ್ರದರ್ಶನವನ್ನು ಕಂಡು ದಾಖಲೆಯನ್ನು ಸೃಷ್ಟಿಸುತ್ತೆ ಈ ಸಿನಿಮಾದ ಮೂಲಕ ಪುನೀತ್ ರವರು ತಮ್ಮ ದೊಡ್ಡ ಆಸೆಯೊಂದನ್ನ ಏರಿಸಿಕೊಳ್ತಾರೆ ಅದು ಏನಂತ ಕೇಳಿದ್ರೆ ಪುನೀತ್ ರವರು ಅಭಿನಯಿಸಿದ ಸಿನಿಮಾವನ್ನ ಅವರ ತಂದೆ ಥಿಯೇಟರನಲ್ಲಿ ಕುಳಿತುಕೊಂಡು ನೋಡಬೇಕು ಅನ್ನೋ ಆಸೆ ಪುನೀತ್ ರವರಿಗೆ ಇರುತ್ತೆ .

ಈ ಆಸೆಯನ್ನ ಅಪ್ಪು ಸಿನಿಮಾ ನೂರು ದಿನಗಳನ್ನ ಪೂರೈಸಿ ಮುನ್ನುಗ್ಗುತ್ತಿದ್ದ ಹೆಚ್ಚಿನ ಎಲ್ಲ ಥಿಯೇಟರಗೆ ಹೋಗಿ ಡಾಕ್ಟರ್ ರಾಜಕುಮಾರ್ ಅವರು ನೋಡ್ತಾರೆ ಹೀಗೆ ಅಪ್ಪು ಸಿನಿಮಾ ಸೂಪರ್ ಹಿಟ್ ಪ್ರದರ್ಶನವನ್ನ ಕಾಣುತ್ತೆ ತೆಲುಗು ತಮಿಳು ಬೆಂಗ ಮತ್ತು ಬಾಂಗ್ಲಾದೇಶ ಬಂಗಾಳಿ ಭಾಷೆಗಳಲ್ಲೂ ಈ ಸಿನಿಮಾ ರಿಮೇಕ್ ಆಗುತ್ತೆ ಈ ಸಿನಿಮಾದ ಸೂಪರ್ ಹಿಟ್ ನಿಂದ ಫೇಮಸ್ ಆದಂತಹ ಪುನೀತ್ ರವರು ಅಂದಿನಿಂದ ಜನರ ಮನಸ್ಸಿನಲ್ಲಿ ಅಪ್ಪು ಆಗಿ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ನಂತರ ಅಭಿ ವೀರ ಕನ್ನಡಿಗ ಆಕಾಶ್ ಅರಸು ಮಿಲನ ಬಿಂದಾಸ್ ವಂಶಿ ರಾಜ್ ಜಾಕಿ ಹುಡುಗರು ಪರಮಾತ್ಮ ಸಿನಿಮಾಗಳಲ್ಲಿ ನಾಯಕರು ನಟನಾಗಿ ಅಭಿನಯಿಸುತ್ತ ಪುನೀತ್ ರಾಜಕುಮಾರ್ ಅವರು ನಂತರ ಎರಡು ಸಾವಿರದ ಹನ್ನೆರಡರಲ್ಲಿ ಕಿರುತೆರೆಯಲ್ಲಿ ಕಾಣಿಸಿಕೊಂಡಂತಹ ಪುನೀತ್ ರಾಜಕುಮಾರ್ ಅವರು ಬಾಲಿವುಡ್ನ ಕೌನ್ಬನೆಗಾ, ಕರೋಡ್ಪತಿ show ಅನ್ನ ಕನ್ನಡದಲ್ಲಿ ಕನ್ನಡದ ಕೋಟ್ಯಾಧಿಪತಿ, ಎಂಬ ಹೆಸರಿನಲ್ಲಿ show ಅನ್ನ ನಡೆಸಿಕೊಡುತ್ತಾರೆ.

ಈ showನ ಮೂಲಕ ಪುನೀತ್ ರಾಜಕುಮಾರ್ ಅವರು ಕರ್ನಾಟಕದ ಜನರ ಮನೆ, ಮಾತಾಗಿ ಕೋಟ್ಯಾಂತರ ಜನರ ಮನವನ್ನ ಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆ.ಎರಡು ಸಾವಿರದ ಹದಿನೇಳರಲ್ಲಿ ಫ್ಯಾಮಿಲಿ ಪವರ್ ಎಂಬ ಶೋ ಅನ್ನ ನಡೆಸಿಕೊಟ್ಟಂತಹ ಪುನೀತ್ ರವರು ಎರಡು ಸಾವಿರದ ಹದಿನೆಂಟರಲ್ಲಿ ಕನ್ನಡದ ಕೋಟ್ಯಾಧಿಪತಿ ಸೆಕೆಂಡ್ season ಅನ್ನು ಕೂಡ ನಡೆಸಿಕೊಡುತ್ತಾರೆ ಇದರ ಜೊತೆಗೆ ಪುನೀತ್ ರವರು ನಾಯಕ ನಟನಾಗಿ ಅಭಿನಯಿಸಿದಂತಹ ನಿನ್ನಿಂದಲೇ ದೊಡ್ಡ ಮನೆ ಹುಡುಗ ರಾಜಕುಮಾರ ಅಂಜನೀಪುತ್ರ ನಟಸಾರ್ವಭೌಮ ಸಿನಿಮಾಗಳು ಸೂಪರ್ ಹಿಟ್ ಪ್ರದರ್ಶನವನ್ನು ಕಂಡು ಸ್ಯಾಂಡಲವುಡನಲ್ಲಿ ಪುನೀತ್ ರಾಜ ಕುಮಾರ್ ಅವರು ಟಾಪ್ ನಾಯಕರ ಪಟ್ಟಿಯಲ್ಲೇ ಸ್ಥಾನ ಪಡೆದುಕೊಳ್ಳುತ್ತಾರೆ.

ಪುನೀತ್ ರಾಜಕುಮಾರ್ ಅವರು ತಮ್ಮ ನಟನೆ ಮತ್ತು ಡಾನ್ಸ್ ಮೂಲಕ ತುಂಬಾ ದೊಡ್ಡ ಅಭಿಮಾನಿ ಬಳಗವನ್ನ ಹೊಂದಿದ್ದು ಪವರ್ ಸ್ಟಾರ್ ಎನ್ನುವ ಬಿರುದನ್ನು ಕೂಡ ಹೊಂದಿದ್ದಾರೆ ಈ ಬಿರುದನ್ನ ನಟ ಶಿವರಾಜಕುಮಾರ್ ಅವರು ಪುನೀತ್ ರಾಜಕುಮಾರ್ ಅವರ ಅಪ್ಪು ಸಿನಿಮಾದ ಅಭಿನಯವನ್ನು ಮೆಚ್ಚಿ ನೀಡಿರುತ್ತಾರೆ ಇನ್ನು ಪುನೀತ್ ರಾಜಕುಮಾರ್ ಅವರು ಕರ್ನಾಟಕದ ಜನರ ಹಿಂದೆ ನಾನು ಸದಾ ಇದ್ದೇನೆ ಕರ್ನಾಟಕದ ರಾಜ್ಯದ ಜನತೆ ಸಂಕಷ್ಟದಲ್ಲಿ ಇರುವಾಗ ಪ್ರತಿ ಸಂದರ್ಭದಲ್ಲೂ ಕೂಡ ತಮ್ಮ ಕೈಯಲ್ಲಿ ಆದಷ್ಟು ಸಹಾಯವನ್ನ ಮಾಡುತ್ತಾ ಬಂದಿದ್ದಾರೆ ಎರಡು ಸಾವಿರದ ಹತ್ತೊಂಬತ್ತರಲ್ಲಿ ಬಂದ ನೆರೆಯಿಂದ ಸಾಕಷ್ಟು ಹಾನಿ ರಾಜ್ಯದಲ್ಲಿ ಕಾಣಿಸಿಕೊಂಡಿತ್ತು ಅಂತಹ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರು ಅನೇಕ ಹಳ್ಳಿಗಳಿಗೆ ಹೋಗಿ ಸಂತ್ರಸ್ತರ ಕಷ್ಟಗಳಿಗೆ ತಮ್ಮ ಕೈಯಲ್ಲಾದ ಸಹಾಯವನ್ನು ಮಾಡಿದ್ದರು ಇನ್ನು ಈಗಿನ ಕೋರೋನಾ ವೈರಸ್ ರೋಗಕ್ಕೂ ಸಹ ತಾಯಿ ನಾಡಿನ ಸಹಾಯಕ್ಕೆ ನಿಂತಿರುವ ಪುನೀತ್ ರವರು ಅನೇಕ ಅನಾಥ ಮಕ್ಕಳ ಟ್ರಸ್ಟ್ ಗಳಿಗೆ ವೃದ್ದಾಶ್ರಮಗಳಿಗೆ ಅವಶ್ಯಕ ವಸ್ತುಗಳನ್ನು ಪೂರೈಸುತ್ತಾ ಅನ್ನದಾನ ಮಾಡುತ್ತಾ ದಾನ, ಧರ್ಮಗಳನ್ನ ಮಾಡುತ್ತಿರುವ ಇವರು ತಮ್ಮ ಮನೆಗೆ ಬರುವಂತಹ ಪ್ರತಿಯೊಬ್ಬರೂ ಊಟ ಮಾಡಿ ಕೊಂಡೆ ಹೋಗಬೇಕು.

ಯಾರು ಕೂಡ ಹಸಿದು ನಮ್ಮ ಮನೆಯಿಂದ ಹೋಗಬಾರದು ಎನ್ನುವ ನಿಲುವನ್ನ ಅನುಸರಿಸಿಕೊಂಡು ಬಂದಿದ್ದಾರೆ ಪುನೀತ್ ರಾಜಕುಮಾರ್ ಅವರಿಗೆ ಯಾರೇ ಏನೇ ಅಂದರು ಕೂಡ ಅವರು ಅದನ್ನ ನಗುನಗುತ್ತ ಸ್ವೀಕರಿಸುತ್ತಾರೆ ತುಂಬಾ ಶಾಂತ ಮನೋಭಾವದ ವ್ಯಕ್ತಿಯಾಗಿರುವ ಇವರು ತಮ್ಮ ತಂದೆಗೆ ತಕ್ಕ ಮಗನಾಗಿದ್ದರೆ ತಮ್ಮ ತಂದೆಯವರು ಜನರಿಗೆ ಎಷ್ಟು ಗೌರವವನ್ನು ಕೊಡುತ್ತಿದ್ದರೋ ಇವರು ಕೂಡ ಜನರಿಗೆ ಅಷ್ಟೇ ಗೌರವವನ್ನು ಕೊಡುತ್ತಾರೆ ಜನರು ಇವರ ತಂದೆಯವರಿಗೆ ಎಷ್ಟು ಗೌರವವನ್ನು ಕೊಡುತ್ತಾರೋ ಹಾಗೆಯೇ ಇವರಿಗೂ ಕೂಡ ಗೌರವವನ್ನ ಕೊಡುತ್ತಿದ್ದಾರೆ.ಪುನೀತ್ ರಾಜಕುಮಾರ್ ಅವರು ಸಿನಿಮಾದಲ್ಲಿ ಉತ್ತಮ ನಟನೆ, ಡಾನ್ಸ್ ಮತ್ತು ಗಾಯನದ ಮೂಲಕವೂ ಗುರುತಿಸಿಕೊಂಡಿದ್ದಾರೆ. ಹೀಗೆ ಇಪ್ಪತ್ತೈದಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದವರು ಇಪ್ಪತ್ತಾರಕ್ಕೂ ಹೆಚ್ಚು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಗಾಯಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವಂತಹ ಪುನೀತ್ ರಾಜಕುಮಾರ್ ಅವರು ಸುಮಾರು ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಡಿದ್ದಾರೆ ತಮಗೆ ಗಾಯನದಿಂದ ಬಂದಂತಹ ಸಂಪೂರ್ಣ ಹಣವನ್ನು ಸಮಾಜ ಸೇವೆಗೆ ವಿನಿಯೋಗ ಮಾಡುತ್ತಾರೆ ಪುನೀತ್ ರಾಜಕುಮಾರ್ ಅವರು ಕೇವಲ ನಾಯಕ ನಟರಾಗಿ ಅಥವಾ ಗಾಯಕರಾಗಿ ಮಾತ್ರ ಗುರುತಿಸಿಕೊಳ್ಳದ ಪುನೀತ್ ರಾಜಕುಮಾರ್ ಅವರು ಚಿತ್ರ ನಿರ್ಮಾಪಕರಾಗಿ ಕೂಡ ಗುರುತಿಸಿಕೊಂಡಿದ್ದಾರೆ ಕಾವಲುದಾರಿ ಮತ್ತು ಮಾಯಾ ಬಜಾರ್ ಎಂಬ ಚಿತ್ರಗಳನ್ನು ತಮ್ಮ home banner ನಲ್ಲಿಯೇ ನಿರ್ಮಿಸಿರುವ ಪುನೀತ್ ರಾಜಕುಮಾರ್ ಅವರು ತಮ್ಮ ಪ್ರೊಡಕ್ಷನ್ ಹೌಸ್ ಮೂಲಕ ಕಿರುತಾರೆ ಧಾರಾವಾಹಿ ಒಂದನ್ನು ಕೂಡ ನಿರ್ಮಿಸಿದ್ದಾರೆ ತಮ್ಮ ತಾಯಿಯವರ ನೆನಪಿನಲ್ಲಿ PRKಯ ಆಡಿಯೋ ಕಂಪನಿ ಒಂದನ್ನ ಸ್ಥಾಪಿಸಿದ್ದಾರೆ ಮೈಸೂರಿನ ಶಕ್ತಿಧಾಮ ಆಶ್ರಮದ ಮೂಲಕ ಸಮಾಜ ಸೇವೆಯಲ್ಲಿ ಕೂಡ ಪುನೀತ್ ರಾಜಕುಮಾರ್ ಅವರು ತೊಡಗಿಕೊಂಡಿದ್ದಾರೆ ಸಾವಿರದ ಒಂಬೈನೂರ ಎಂಬತ್ತೈದರಲ್ಲಿ ಬೆಟ್ಟದ ಹೂವು ಸಿನಿಮಾದಲ್ಲಿ ಬಾಲ ನಟನಾಗಿ ಅಭಿನಯಿಸಿದ್ದ ಪುನೀತ್ ರವರಿಗೆ ನ್ಯಾಷನಲ್ ಸಿಲ್ ಅವಾರ್ಡ್ ಪ್ರಶಸ್ತಿ ದೊರೆಯುತ್ತದೆ.

ಸಾವಿರದ ಒಂಬೈನೂರ ಎಂಬತ್ತೆರಡು ಮತ್ತು ಎಂಬತ್ತಮೂರರಲ್ಲಿ ಚಲಿಸುವ ಮೋಡಗಳು ಹಾಗೂ ಎರಡು ನಕ್ಷತ್ರಗಳು ಸಿನಿಮಾಗಳಿಗೆ ಬೆಸ್ಟ್ child actor ಪ್ರಶಸ್ತಿ ಕೂಡ ದೊರೆಯುತ್ತದೆ ಮಿಲನ ಜಾಕಿ ಸಿನಿಮಾಗಳಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮೂರು ಸುವರ್ಣ ಫಿಲ್ಮ ಫೇರ್ ಅವಾರ್ಡ್ ಗಳು ಕೂಡ ದೊರೆಯುತ್ತದೆ ಅರಸು ಹುಡುಗರು ರಣವಿಕ್ರಮ ದೊಡ್ಡ ಮನೆ ಹುಡುಗ ರಾಜಕುಮಾರ ಸಿನಿಮಾಗಳಿಗೆ ಫಿಲ್ಮ ಫೇರ್ ಅವಾರ್ಡ್ ಗಳು ಕೂಡ ದೊರಕಿದೆ ಇದಲ್ಲದೆ ನಾಲ್ಕು ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ ಗಳನ್ನು ಸಹ ಗಳಿಸಿಕೊಂಡಿದ್ದಾರೆ ನಮ್ಮ ಪ್ರೀತಿಯ ಪುನೀತ್ ರಾಜಕುಮಾರ್ ಪುನೀತ್ ರಾಜಕುಮಾರ್ ಅವರು ಅಶ್ವಿನಿ ಎಂಬುವವರನ್ನು ಪ್ರೀತಿಸಿ ಮನೆಯಲ್ಲಿ ಒಪ್ಪಿಸಿ ಸಾವಿರದ ಒಂಬೈನೂರ ತೊಂಬತ್ತೊಂಬತ್ತರಲ್ಲಿ ವಿವಾಹವಾಗುತ್ತಾರೆ ಇವರಿಗೆ ದೃತಿ ಮತ್ತು ವಂದಿತ ಎನ್ನುವ ಮಕ್ಕಳು ಸಹ ಇದ್ದಾರೆ ಕರ್ನಾಟಕದ ಮೇರು ನಟ ಡಾಕ್ಟರ್ ರಾಜಕುಮಾರ್ ಅವರ ಮಗನಾಗಿದ್ದರೂ ಸಹ ಈಗ ಕರ್ನಾಟಕದ ಸ್ಟಾರ್ ನಟರಲ್ಲಿ ಒಬ್ಬರಾಗಿದ್ದರೂ ಸಹ ಇವರು .

ಯಾವುದೇ ಹಮ್ಮು ಬೆಮ್ಮು ಇಲ್ಲದೆ ಸಾರ್ವಜನಿಕರ ಜೊತೆ ಅಭಿಮಾನಿಗಳ ಜೊತೆ ತಾವು ಒಂದಾಗಿ ಬೆರೆಯುತ್ತಾರೆ ಕೇವಲ ಒಂದು ಚಿಕ್ಕ ಯಶಸ್ಸು ದೊರೆತರು ಸಹ ಗತ್ತನ್ನು ತೋರಿಸುವ ಜನರಿಗೆ ಪುನೀತ್ ರವರು ಆದರ್ಶ ಪ್ರಾಯರಾಗಿದ್ದಾರೆ ಪುನೀತ್ ಅವರ ಈ ಜೀವನದ ಕಥೆ ನಿಮಗೆ ಇಷ್ಟವಾಗಿದ್ದಲ್ಲಿ ತಪ್ಪದೆ ಲೈಕ್ ಮಾಡಿ ಇವರ ಪರಿಶ್ರಮದ ಬಗ್ಗೆ ನಮ್ಮ ಕಮೆಂಟ್ ಬಾಕ್ಸನಲ್ಲಿ ಕಾಮೆಂಟ್ ಮಾಡಿ ನೀವು ಸಹ ಪುನೀತ್ ರಾಜಕುಮಾರ್ ಅವರ ಅಭಿಮಾನಿಯಾಗಿದ್ದರೆ ತಪ್ಪದೆ ಎಲ್ಲರಿಗೂ ಈ ವಿಡಿಯೋವನ್ನ ಶೇರ್ ಮಾಡಿ ಇದೆ ರೀತಿಯ inspirational stories ಗಳಿಗಾಗಿ ನಮ್ಮ million dreams ಕನ್ನಡ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತ ಕನಸನ್ನ ಕಾಣುತ್ತಿರುವ ಕನಸುಗಾರರಿಗೆ ಈ ಸ್ಫೂರ್ತಿಯಾಗಲಿ ಎನ್ನುವುದೇ ನಮ್ಮ ಆಶಯ ಧನ್ಯವಾದಗಳು

Exit mobile version