ಡಾಕ್ಟರ್ ರಾಜಕುಮಾರ್ ಅವರು ಹೇಗೆ ಸಾಮಾಜಿಕ ಪಾತ್ರಗಳಲ್ಲಿ ಹೆಚ್ಚಿನದಾಗಿ ಜನರಿಗೆ ಹತ್ತಿರವಾದರು ಅದಕ್ಕಿಂತ ಹೆಚ್ಚಿನದಾಗಿ ಭಕ್ತಿ ಮತ್ತು ಪೌರಾಣಿಕ ಪಾತ್ರಗಳಲ್ಲಿ ಅವರನ್ನು ನೋಡುವುದಕ್ಕೆ ಇಷ್ಟ ಪಡುತ್ತಿದ್ದರು ಕಾರಣವಿಷ್ಟೇ ಅವರು ಯಾವುದೇ ಒಂದು ಪಾತ್ರವನ್ನೇ ಆದರೂ ತಲ್ಲೀನತೆಯಿಂದ ಅಭಿನಯಿಸುತ್ತಿದ್ದರು ಅವರ ಹಾಡುಗಳು ಅಷ್ಟೇ ಸಾಹಿತ್ಯಕ್ಕೆ ಮಾತ್ರ ಯಾವ ಒಂದು ಗೀತೆಗಳು ಸೀಮಿತವಾಗಿದ್ದಿಲ್ಲ ಅಥವಾ ಜನರನ್ನ ಆಕರ್ಷಿಸಬೇಕು ಅನ್ನುವ ಒಂದೇ ಕಾರಣಕ್ಕೆ ಯಾವ ಗೀತೆಗಳು ಕೂಡ ರಾಜಕುಮಾರ ಸಿನಿಮಾಗಳಲ್ಲಿ ಸೂಚಿಸಲಾಗಿಲ್ಲ ಹಾಗ್ ನೋಡಿದ್ರೆ ಚಿ ಉದಯ್ ಶಂಕರ್ ಅವರು ಪ್ರತಿಯೊಂದು ಬಾರಿಯೂ ಹಾಡುಗಳನ್ನ ಬರೆಯಬೇಕಾದರೆ ಸಾಹಿತ್ಯದ ಅರ್ಥವನ್ನ ಅರ್ಥಗರ್ಭಿತವಾಗಿ ಕಟ್ಟಿಕೊಡಬೇಕಾದ್ರೆ ಬಹಳಷ್ಟು ಬಾರಿ ಯೋಚಿಸಿದ್ದಿದೆ .
ಯಾಕಂದ್ರೆ ಯಾವ್ ಒಂದು ಅಂಶವು ಕೂಡ ಅಲ್ಲಿ ಯಾವುದೇ ರೀತಿಯ ಅನಪೇಕ್ಷಿತವಾದಂತಹ ಅರ್ಥವನ್ನ ಹುಟ್ಟುಹಾಕಬಾರದು ಎನ್ನುವುದು ಅವರ ನಿಲುವಾಗಿತ್ತು ಇಲ್ಲಿ ಇನ್ನೊಂದು ವಿಚಾರ್ ಏನಂದ್ರೆ ಡಾಕ್ಟರ್ ರಾಜಕುಮಾರ್ ಅವರಿಗೆ ಸಿನಿಮಾಗಳ ಹಾಡುಗಳೆಂದರೆ ಎಷ್ಟು ಇಷ್ಟ ಅದಕ್ಕಿಂತ ಹೆಚ್ಚಿನದಾಗಿ ಭಕ್ತಿಗೀತೆಗಳು ಅಂದ್ರೆ ತುಂಬಾನೇ ಇಷ್ಟ ಅದರಲ್ಲೂ ದೇವರ ಸ್ತುತಿ ದೇವರ ನಾಮಸ್ಮರಣೆ ಮಾಡುವ ಹಾಡುಗಳೆಂದರೆ ಅವರು ಮುತುವರ್ಜಿ ವಹಿಸಿ ಅತ್ಯಂತ ಕಾಳಜಿಯಿಂದ ಮತ್ತು ಅಷ್ಟೇ ಭಕ್ತಿಯಿಂದ ಮನ ತುಂಬಿ ಆ ಹಾಡುಗಳನ್ನ ಹಾಡ್ತಾ ಇದ್ರೂ ಅಂತಹ ಹಾಡುಗಳನ್ನ ತುಂಬಾನೇ ಇಷ್ಟ ಪಡ್ತಿದ್ದ ದೊಡ್ಡ ವರ್ಗವೇ ಇತ್ತು .
ಅದರಲ್ಲೂ ಪುನೀತ್ ರಾಜಕುಮಾರ್ ಅವರಿಗೆ ಡಾಕ್ಟರ್ ರಾಜಕುಮಾರ್ ಅವರ ಸಿನಿಮಾ ಗೀತೆಗಳಲ್ಲಿ ಹೆಚ್ಚಿನದಾಗಿ ಇಷ್ಟವಾಗ್ತಾ ಇದ್ದದ್ದು ಹಲವು ಗೀತೆಗಳು ಆದರೆ ಸಿನಿಮಾದೊಳಗೆ ಬಳಸಿರುವಂತಹ ಭಕ್ತಿಗೀತೆಗಳಲ್ಲಿ ಅವರು ಸದಾ ಕೇಳುತ್ತಿದ್ದಿದ್ದು ಸಿನಿಮಾಗಳಲ್ಲಿ ಒಂದು ಬಡವರ ಬಂಧು ಸಿನಿಮಾದ ನಿನ್ನ ಕಣ್ಣುಗಳ ಬಿಸಿಯ ಹನಿಗಳು ತುಂಬಾನೇ ಇಷ್ಟವಾದ ಗೀತೆಯಾದರೆ ಅದೇ ರೀತಿಯಾಗಿ ಮತ್ತೊಂದು ಭಕ್ತಿ ಪೂರ್ವಕ ಗೀತೆಯು ನಾನು ತುಂಬಾ ಅಂದರೆ ನಾನು ತುಂಬಾನೇ ಇಷ್ಟ ಪಡುತ್ತಿದೆ ದಿನಕ್ಕೆ ಅದೆಷ್ಟು ಬಾರಿ ಕೇಳುತ್ತ ಇದ್ದನೋ ಗೊತ್ತಿಲ್ಲ ನನಗೆ ಈಗಲೂ ಕೂಡ ಆ ಹಾಡು ಅಂದರೆ ತುಂಬಾನೇ ಇಷ್ಟ ಅಂತ ಹಲವಾರು ಸಂದರ್ಶನಗಳಲ್ಲಿ ಪುನೀತ್ ರಾಜಕುಮಾರ್ ಅವರು ಹೇಳಿಕೊಂಡಿದ್ದರು .
ಹಾಗಾದರೆ ನಿನ್ನ ಕಂಗಳ ಹನಿಗಳ ನಂತರ ಅವರು ತುಂಬಾನೇ ಇಷ್ಟ ಪಟ್ಟಂತಹ ಈ ಮತ್ತೊಂದು ಗೀತೆ ಯಾವುದು ಗೊತ್ತ ಅದುವೇ ದೇವತಾ ಮನುಷ್ಯ ಚಿತ್ರದ್ದು ಡಾಕ್ಟರ್ ರಾಜಕುಮಾರ್ ಅವರ ಇನ್ನೂರನೇ ಸಿನಿಮಾ ದೇವತಾ ಮನುಷ್ಯ ಚಿ ಉದಯ್ ಶಂಕರ್ ಅವರ ಚಿತ್ರಕಥೆ ಸಂಭಾಷಣೆ ಇದ್ದಂತಹ ಈ ಸಿನಿಮಾಗೆ ಸಂಗೀತಂ ಶ್ರೀನಿವಾಸ್ ಅವರ ನಿರ್ದೇಶನವಿತ್ತು ಈ ಒಂದು ಸಿನಿಮಾದಲ್ಲಿ ಎಲ್ಲ ಹಾಡುಗಳು ತುಂಬಾನೇ ಮಧುರವಾಗಿದ್ದವು ಅದರಲ್ಲೂ ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ ಗೀತೆ ಎಲ್ಲರ ಮನಮೆಚ್ಚಿನ ಗೀತೆಯಾಗಿತ್ತು .
ದೇವರ ಸ್ತುತಿಯನ್ನ ಅಂತಹ ಹಾಡಿನಿಂದಲೇ ಮಾಡ್ತಾ ಇದ್ದಂತಹ ವಾಡಿಕೆಯು ಕೂಡ ಬಂದು ಬಿಡ್ತು ಹಾಗಾದ್ರೆ ಆ ಒಂದು ಗೀತೆ ಹೇಗೆ ರಚನೆ ಆಯಿತು ದೇವತಾ ಮನುಷ್ಯ ಸಿನಿಮಾದಲ್ಲಿ ಇಂತದೊಂದು ಸನ್ನಿವೇಶ ಬರುತ್ತೆ ಆ ಒಂದು ಗೀತೆ ಹೀಗಿರಬೇಕು ಅನ್ನೋದು ವರದಪ್ಪನವರ ಮಾತಾಗಿತ್ತು ಹೀಗಾಗಿ ಅದನ್ನ ಚಿ ಉದಯ ಶಂಕರ್ ಅವರು ವಿಸ್ತರಿಸಿ ತಮ್ಮದೇ ಧಾಟಿಯಲ್ಲಿ ಬರೆದು ಕೊಟ್ಟಿದ್ರು ಆ ಒಂದು ಗೀತೆಯಲ್ಲಿ ಇದ್ದಂತಹ ಭಾವ ಮತ್ತು ಭಕ್ತಿ ಪುನೀತ್ ರಾಜಕುಮಾರ್ ಅವರಿಗೆ ತುಂಬಾನೇ ಇಷ್ಟವಾಗಿತ್ತು ಹೀಗಾಗಿ ಎಲ್ಲೇ ಹೋದರು ಅದೆಷ್ಟೋ ಸಂದರ್ಭ ಮತ್ತು ಸಮಾರಂಭಗಳಲ್ಲಿ ಪುನೀತ್ ರಾಜಕುಮಾರ್ ಅವರು ಈ ಒಂದು ಗೀತೆಯನ್ನು ಹಾಡಿದ್ದು ಇದೆ ಬಹುಶಃ ಅಣ್ಣಾವ್ರ ಸಕಲ ಗುಣಗಳನ್ನು ಪಡೆದಿದ್ದಂತಹ ಪುನೀತ್ ರಾಜಕುಮಾರ್ ಅವರು ಅಣ್ಣಾವ್ರ ಹಾದಿಯನ್ನೇ ಹಿಡಿದು ನಮ್ಮಿಂದ ಬೇಗ ದೂರವಾಗಿದ್ದು .
ಮಾತ್ರ ವಿಪರ್ಯಾಸ ಮತ್ತು ಆ ದೇವರು ಕನ್ನಡಿಗರಿಗೆ ಮಾಡಿದಂತಹ ಅನ್ಯಾಯ ಅಂದರೆ ಅದು ತಪ್ಪಿಲ್ಲ ಸ್ನೇಹಿತರೆ ನಮ್ಮ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ತಕ್ಷಣವೇ ನಮ್ಮ ಚಾನೆಲಗೆ ಸಬ್ಸ್ಕ್ರೈಬ್ ಮಾಡಿ ಹಾಗೇನೇ ನಮ್ಮ ಮತ್ತೊಂದು ವಾಹಿನಿ little case ಈ ಒಂದು ವಾಹಿನಿಯನ್ನು ನೋಡಿ ಪ್ರೋತ್ಸಾಹಿಸಿ ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ ಗೀತೆ ನಿಮಗೆ ಎಷ್ಟು ಇಷ್ಟ ಆ ಒಂದು ಗೀತೆಯನ್ನ ನೀವು ಕೇಳಿದಾಗ ನಿಮಗೆ ಉಂಟಾಗುವಂತಹ ಅನುಭವ ಎಂತದ್ದು ಈ ಒಂದು ಅಭಿಪ್ರಾಯವನ್ನ ಕೂಡ ನೀವು ನಮಗೆ ತಿಳಿಸಬಹುದು