ಈ ಒಂದು ಮನೆಮದ್ದು ಬಳಕೆ ಮಾಡಿದ್ದೆ ಆದಲ್ಲಿ ನಿಮ್ಮ ದೇಹದಲ್ಲಿ ಬೇಡವಾದ ಕೊಬ್ಬನ್ನ ಕರಗಿಸುತ್ತದೆ … ನೋಡಿ ಚಮತ್ಕಾರ ಕೆಲವೇ ದಿನಗಳಲ್ಲಿ ಎಲ್ಲ ನಿವಾರಣೆ ಆಗುತ್ತೆ…

Sanjay Kumar
2 Min Read

ಬೊಜ್ಜು ಕರಗಿಸುವುದಕ್ಕೆ ಮನೆಯಲ್ಲೇ ಮಾಡುವ ಈ ಉಪಾಯ ತುಂಬ ಪ್ರಭಾವವಾಗಿದೆ ಈ ಮನೆಮದ್ದು ಮಾಡಿ ಬೊಜ್ಜನ್ನೂ ಕರಗಿಸಿಕೊಳ್ಳಿ ತೂಕ ಇಳಿಸಿಕೊಳ್ಳಿ ಅರೋಗ್ಯಕರ ಜೀವನ ನಿಮ್ಮದಾಗಿಸಿಕೊಳ್ಳಿ! ನಮಸ್ತೆ ಇವತ್ತಿನ ದಿನದಲ್ಲಿ ಹಲವರಿಗೆ ಕಾಡುತ್ತಿರುವ ಬೊಜ್ಜಿನ ಸಮಸ್ಯೆ ಆರೋಗ್ಯವನ್ನು ಹಾಳು ಮಾಡುತ್ತಿದೆ ಕೇವಲ ಬೊಜ್ಜು ಅಲ್ಲ ಬೊಜ್ಜಿನ ಜೊತೆಗೆ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿ ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಬ್ಲಡ್ ಪ್ರಶರ್ ಸಮಸ್ಯೆಯು ಇಂತಹ ಎಲ್ಲ ಸಮಸ್ಯೆಗಳು ಉಂಟಾಗುತ್ತಿದೆ.

ಹಾಗಾಗಿ ಇಂತಹ ತೊಂದರೆಗಳು ಪರಿಹಾರ ಆಗಬೇಕೆಂದರೆ ಮತ್ತು ಬೊಜ್ಜು ಕರಗಬೇಕೆಂದರೆ ತೂಕ ಇಳಿಕೆ ಆಗಬೇಕು ಅಂದರೆ ಮನೆಯಲ್ಲಿ ಸಿಗುವ ಈ ಪದಾರ್ಥಗಳನ್ನು ಬಳಸಿಕೊಳ್ಳಿ ಮತ್ತು ಬೊಜ್ಜು ಕರಗಿಸಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಿ. ಹೌದು ಇಂದಿನ ದಿನಗಳಲ್ಲಿ ಹಣಕ್ಕಿಂತ ಆರೋಗ್ಯವೇ ಹೆಚ್ಚಾಗಿದೆ ಯಾಕೆಂದರೆ ಇವತ್ತಿನ ದಿನ ಹಣವನ್ನ ಸಂಪಾದನೆ ಮಾಡಬಹುದು,

ಆದರೆ ಆರೋಗ್ಯ ಸಂಪಾದನೆ ತುಂಬಾನೇ ಕಷ್ಟಕರವಾಗಿದೆ. ಹಾಗಾಗಿ ಆರೋಗ್ಯಕರ ಜೀವನವನ್ನು ನಮ್ಮದಾಗಿಸಿಕೊಳ್ಳಬೇಕು ಎಂದರೆ ನಾವು ಆರೋಗ್ಯಕರ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಅತ್ಯವಶ್ಯಕವಾಗಿದೆ. ಹಾಗಾಗಿ ಆರೋಗ್ಯ ವೃದ್ಧಿಸಿಕೊಳ್ಳಲು ಮತ್ತು ತೂಕ ಇಳಿಸಿಕೊಳ್ಳಲು ಕೊಲೆಸ್ಟ್ರಾಲ್ ತಗ್ಗಿಸಲು ಮಾಡಬಹುದಾದ ಸರಳ ಪರಿಹಾರಗಳ ಬಗ್ಗೆ ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಹೌದು ಬೊಜ್ಜು ಕರಗಿಸಿಕೊಂಡು ತೂಕವನ್ನು ಇಳಿಸಿಕೊಂಡು ಆರೋಗ್ಯವನ್ನು ವೃದ್ಧಿಸಿ ಕೊಳ್ಳಬಹುದಾದ ಸರಳ ಮನೆಮದ್ದಿನ ಬಗ್ಗೆ ಮಾತನಾಡುತ್ತಿದ್ದು ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಯಾವುದು ಎಂಬುದನ್ನು ತಿಳಿಸುವುದಾದರೆ

ಈ ಪರಿಹಾರ ಮಾಡಲು ಬೇಕಾಗಿರುವಂತಹ ಪದಾರ್ಥಗಳು ಶುಂಠಿ ಚಕ್ಕೆ ಮೆಣಸು ಅರಿಶಿಣ ಪುದೀನಾ ಎಲೆಗಳು ಹೌದು ಶುಂಠಿ ಚಕ್ಕೆ ಯನ್ನ ಮೆಣಸಿನೊಂದಿಗೆ ಸೇರಿಸಿ ಕುಟ್ಟಿ ಪುಡಿ ಮಾಡಿಕೊಳ್ಳಿ ಬಳಿಕ ನೀರನ್ನು ಕುದಿಯಲು ಇಟ್ಟು ಕುಟ್ಟಿ ಪುಡಿ ಮಾಡಿ ಕೊಂಡಂತಹ ಮಿಶ್ರಣವನ್ನ ನೀರಿಗೆ ಹಾಕಿ ಒಮ್ಮೆಲೆ ಕುದಿಸಿಕೊಳ್ಳಬೇಕು, ಈ ನೀರು ಕುದಿಯುವಾಗ ಇದಕ್ಕೆ ಪುದೀನಾ ಎಲೆಗಳನ್ನು ಹಾಕಿ ಮತ್ತೊಮ್ಮೆ ನೀರನ್ನು ಕುದಿಸಿ ಕೊಳ್ಳಬೇಕು.

ಈ ಡ್ರಿಂಕ್ ಆರೋಗ್ಯಕ್ಕೆ ತುಂಬ ಒಳ್ಳೆಯದು ಮತ್ತು ಈ ಡ್ರಿಂಕ್ ಸೇವನೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಈ ಡ್ರಿಂಕ್ ಕುಡಿಯುವುದರಿಂದ ತೂಕ ಇಳಿಕೆಯಾಗುತ್ತದೆ. ಯಾಕೆಂದರೆ ಈ ಪದಾರ್ಥಗಳು ದೇಹದಲ್ಲಿ ಶೇಖರಣೆಯಾಗಿರುವ ಕೊಬ್ಬನ್ನು ಕರಗಿಸಲು ಸಹಕಾರಿ ಆಗಿರುತ್ತದೆ ಇದರಲ್ಲಿ ಬಳಸಿರುವಂತಹ ಪುದೀನಾ ಎಲೆಗಳು ಆರೋಗ್ಯಕ್ಕೆ ತುಂಬಾನೇ ಉಪಯುಕ್ತ ಕರವಾಗಿರುತ್ತದೆ ಮತ್ತು ಪುದೀನಾ ಎಲೆಗಳನ್ನು ತಿನ್ನುವುದರಿಂದ ಉದರ ಸಂಬಂಧಿ ತೊಂದರೆಗಳು ನಿವಾರಣೆಯಾಗುತ್ತದೆ ಮತ್ತು ಈ ಮೆಣಸು ಅರಿಶಿಣ ಇವೆಲ್ಲವೂ ಆರೋಗ್ಯಕ್ಕೆ ತುಂಬಾನೇ ಒಳ್ಳೆಯ ಪ್ರಯೋಜನಗಳನ್ನು ನೀಡುತ್ತದೆ.

ಈ ನೀರನ್ನು ಕುದಿಸಿ ಬಳಿಕ ಇದನ್ನು ಸ್ವಲ್ಪ ತಣ್ಣಗಾಗಲು ಬಿಡಬೇಕು ನಂತರ ಇದಕ್ಕೆ ಸ್ವಲ್ಪ ಅರಿಶಿಣ ಹಾಗೂ ನಿಂಬೆರಸ ಜೊತೆಗೆ ಜೇನುತುಪ್ಪವನ್ನು ಮಿಶ್ರ ಮಾಡಿ ಈ ಡ್ರಿಂಕ್ ಅನ್ನೂ ಕುಡಿಯುತ್ತ ಬರಬೇಕು ಇದರಿಂದ ಆರೋಗ್ಯ ತುಂಬಾನೇ ಚೆನ್ನಾಗಿರುತ್ತದೆ ಹಾಗೂ ಬೊಜ್ಜು ಕರಗಿಸಲು ಸಹಕಾರಿ ಆಗಿದ್ದು, ಬೊಜ್ಜನ್ನು ಕರಗಿಸುವ ಮೂಲಕ ಬ್ಲಡ್ ಪ್ರೆಶರ್ ಸಮಸ್ಯೆ ಹೃದಯ ಸಂಬಂಧಿ ತೊಂದರೆಗಳು ನಿವಾರಣೆ ಮಾಡಲು ಸಹಕಾರಿ ಆಗಿರುತ್ತದೆ ಈ ಸೂಪರ್ ಫಾಸ್ಟ್ ಡ್ರಿಂಕ್ ತಯಾರಿಸುವುದು ಕೂಡ ತುಂಬ ಸುಲಭ ಜೊತೆಗೆ ಇದರ ಆರೋಗ್ಯಕರ ಲಾಭಗಳು ಕೂಡ ಅಪಾರ. ಹಾಗಾಗಿ ಈ ಮನೆ ಮದ್ದನ್ನು ಪಾಲಿಸಿ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಮತ್ತು ತೂಕವನ್ನು ಇಳಿಸಿಕೊಳ್ಳಿ ಧನ್ಯವಾದ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.